Realme C53: ಭಾರತದಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್‌ಮಿ, ದರ ಕೇವಲ 9,999 ರೂಪಾಯಿ
Jan 09, 2024 07:49 PM IST
Realme C53: ಭಾರತದಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ರಿಯಲ್‌ಮಿ, ದರ ಕೇವಲ 9,999 ರೂಪಾಯಿ
Realme C53 Details: ರಿಯಲ್‌ಮಿ ಕಂಪನಿಯು ಇಂದು ಭಾರತಕ್ಕೆ ರಿಯಲ್‌ಮಿ ಸಿ53 ಎಂಬ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಇದರ ಆರಂಭಿಕ ದರ 9,999 ರೂಪಾಯಿ. ಇದು 6.74 ಇಂಚಿನ ಡಿಸ್‌ಪ್ಲೇ ಹೊಂದಿದೆ. 108 ಮೆಗಾಫಿಕ್ಸೆಲ್ ಕ್ಯಾಮೆರಾ ಇದರಲ್ಲಿದೆ. 5,000mAh ಬ್ಯಾಟರಿ ಇದರ ಇನ್ನೊಂದು ವಿಶೇಷ. ಈ ಸ್ಮಾರ್ಟ್‌ಫೋನ್ ಜುಲೈ 26ರ ಬಳಿಕ ಖರೀದಿಗೆ ಲಭ್ಯವಿದೆ.
ಬೆಂಗಳೂರು: 10 ಸಾವಿರ ರೂಪಾಯಿಗಿಂತ ಕಡಿಮೆ ದರದ ಸ್ಮಾರ್ಟ್‌ಫೋನ್‌ನಲ್ಲಿ ನೂರೆಂಟು ಮೆಗಾಫಿಕ್ಸೆಲ್ ಕ್ಯಾಮೆರಾ ದೊರಕುತ್ತದೆಯೇ? ಖಂಡಿತಾ, ಇಂದು ಭಾರತಕ್ಕೆ ರಿಯಲ್‌ಮಿ ಕಂಪನಿ ಪರಿಚಯಿಸಿದ ರಿಯಲ್‌ಮಿ ಸಿ53 ಎಂಬ ಸ್ಮಾರ್ಟ್‌ಫೋನ್‌ನಲ್ಲಿ 108 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ. ಇದರ ಆರಂಭಿಕ ದರ 9,999 ರೂಪಾಯಿ. ಇದು 6.74 ಇಂಚಿನ ಡಿಸ್‌ಪ್ಲೇ ಹೊಂದಿದೆ. 5,000mAh ಬ್ಯಾಟರಿ ಇದರ ಇನ್ನೊಂದು ವಿಶೇಷ. ಈ ಸ್ಮಾರ್ಟ್‌ಫೋನ್ ಜುಲೈ 26ರ ಬಳಿಕ ಖರೀದಿಗೆ ಲಭ್ಯವಿದೆ.
Realme C53 ದರ ಮತ್ತು ಲಭ್ಯತೆ
ರಿಯಲ್‌ಮಿ ಸಿ53 ಎರಡು ವರ್ಷನ್‌ಗಳಲ್ಲಿ ಲಭ್ಯ. ಇದನ್ನು 4GB+128GB ಮತ್ತು 6GB+64GB ಆಯ್ಕೆಗಳಲ್ಲಿ ಖರೀದಿಸಬಹುದು. 4GB+128GB ಆವೃತ್ತಿಗೆ 9,999 ರೂಪಾಯಿ ಇದೆ. 6GB+64GB ಆವೃತ್ತಿಗೆ 10,000. ರೂಪಾಯಿ ಇದೆ. ಏನಿದು ಒಂದು ರೂಪಾಯಿ ವ್ಯತ್ಯಾಸ ಎಂದುಕೊಳ್ಳುವಿರಾ. ಈ ಕುರಿತು ಹೆಚ್ಚಿನ ವಿವರ ಲಭ್ಯವಿಲ್ಲ. ಒಂದು ರೂಪಾಯಿ ಹೆಚ್ಚು ನೀಡಿದರೆ ರಾಮ್ ಹೆಚ್ಚಿಸಿಕೊಳ್ಳಬಹುದು, ಸ್ಟೋರೇಜ್ ಕಡಿಮೆ ಮಾಡಿಕೊಳ್ಳಬೇಕು. ಒಂದು ರೂಪಾಯಿ ಕಡಿಮೆ ನೀಡಿದರೆ ರಾಮ್ ಕಡಿಮೆ ಇರುತ್ತದೆ, ಸ್ಟೋರೇಜ್ ಹೆಚ್ಚಿರುತ್ತದೆ.
ನೂತನ ರಿಯಲ್‌ಮಿ ಸ್ಮಾರ್ಟ್‌ಫೋನ್ ರಿಯಲ್‌ಮಿ ಇಂಡಿಯಾ ವೆಬ್‌ಸೈಟ್‌ನಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಮಳಿಗೆಗಳಲ್ಲಿಯೂ ಖರೀದಿಗೆ ಲಭ್ಯವಿರಲಿದೆ. ಜುಲೈ 26ರಂದು ರಾತ್ರಿ 12 ಗಂಟೆ ಬಳಿಕ ಖರೀದಿಸಬಹುದು. ಆರಂಭಿಕ ಆಫರ್ ಆಗಿ ಬಳಕೆದಾರರಿಗೆ 1000 ರೂಪಾಯಿ ದರ ಕಡಿತವೂ ದೊರಕಲಿದೆ.
ರಿಯಲ್‌ಮಿ ಸಿ53 ಫೀಚರ್‌ಗಳು
ಇದು 6.74 ಇಂಚಿನ 90hz ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 180H ಟಚ್ ಸ್ಯಾಂಪ್ಲಿಂಗ್ ದರ ಹೊಂದಿದೆ. ದಿರಲ್ಲಿ ಒಕ್ಟಾ ಕೋರ್ ಚಿಪ್‌ಸೆಟ್ (ARM Mali-G57 GPU ) ಇದ್ದು, 1.82GHzವರೆಗೆ ಸಿಪಿಯು ಸಾಮರ್ಥ್ಯವಿರುತ್ತದೆ.
ಈ ಫೋನ್‌ನ ಹಿಂಭಾಗದಲ್ಲಿ ಮೂರು ಕ್ಯಾಮೆರಾವಿದೆ. 108 ಮೆಗಾಫಿಕ್ಸೆಲ್‌ನ ಅಲ್ಟ್ರಾ ಕ್ಲಿಯರ್ ಕ್ಯಾಮೆರಾವಿದೆ. ಇದು ವಿಡಿಯೋ ರೆಕಾರ್ಡಿಂಗ್ ಬೆಂಬಲವನ್ನೂ ಹೊಂದಿದೆ. 1080P/30fps, 720P/30fps ಮತ್ತು 480P/30fps ರೆಕಾರ್ಡಿಂಗ್‌ಗೆ ಬೆಂಬಲ ನೀಡುತ್ತದೆ.
ಸೆಲ್ಫಿ, ವಿಡಿಯೋ ಕಾಲ್ ಇತ್ಯಾದಿ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಈ ಸ್ಮಾರ್ಟ್‌ಫೋನ್‌ನ ಮುಂಭಾಗದಲ್ಲಿ 8 ಮೆಗಾಫಿಕ್ಸೆಲ್ ಕ್ಯಾಮೆರಾವಿದೆ. ಇದರಲ್ಲಿ 720P/30fps ವಿಡಿಯೋ ರೆಕಾರ್ಡಿಂಗ್ ಮಾಡಬಹುದು. ಪೋಟ್ರಾಯೆಟ್ ಮೋಡ್, ಬ್ಯೂಟಿ ಮೋಡ್, ಎಚ್‌ಡಿಆರ್, ಫೇಸ್ ರೆಕಾಗ್ನಿಷನ್, ಫಿಲ್ಟರ್, ಬೊಕೆಶ್ ಎಫೆಕ್ಟ್ ಕಂಟ್ರೋಲ್ ಇತ್ಯಾದಿ ಕ್ಯಾಮೆರಾ ಫೀಚರ್ಗಳು ಇದರಲ್ಲಿವೆ.
ಈ ಸ್ಮಾರ್ಟ್‌ಫೋನ್‌ನಲ್ಲಿ 5,000mAh ಬ್ಯಾಟರಿಯಿದೆ. 18 ವ್ಯಾಟ್ ಕ್ವಿಕ್‌ಚಾರ್ಜ್ ಫೀಚರ್ ಕೂಡ ಇದೆ. ಎರಡು ನ್ಯಾನೊ ಕಾರ್ಡ್‌ಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಸಬಹುದು. ಒಂದು ಮೈಕ್ರೊಎಸ್‌ಡಿ ಕಾರ್ಡ್ ಹಾಕಬಹುದು. ಇದು ಯುಎಸ್‌ಬಿ ಟೈಪ್ ಸಿ ಚಾರ್ಜರ್‌ಗೆ ಬೆಂಬಲ ನೀಡುರತ್ತದೆ. ಚಾಂಪಿಯನ್ ಗೋಲ್ಡ್ ಮತ್ತು ಚಾಂಪಿಯನ್ ಬ್ಲ್ಯಾಕ್ ಎಂಬ ಎರಡು ಬಣ್ಣಗಳ ಆಯ್ಕೆಗಳಲ್ಲಿ ನೂತನ ಸ್ಮಾರ್ಟ್‌ಫೋನ್ ದೊರಕುತ್ತದೆ.