logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upsc Epfo Admit Card: ಯುಪಿಎಸ್‌ಸಿ ಇಪಿಎಫ್‌ಒ ಪ್ರವೇಶ ಕಾರ್ಡ್‌ ಪಡೆಯುವುದು ಹೇಗೆ

UPSC EPFO Admit card: ಯುಪಿಎಸ್‌ಸಿ ಇಪಿಎಫ್‌ಒ ಪ್ರವೇಶ ಕಾರ್ಡ್‌ ಪಡೆಯುವುದು ಹೇಗೆ

HT Kannada Desk HT Kannada

Jun 15, 2023 01:16 PM IST

ಯುಪಿಎಸ್ಸಿ ನಡೆಸಲಿರುವ ವಿವಿಧ ಪರೀಕ್ಷೆಗಳಿಗೆ ಪ್ರವೇಶ ಕಾರ್ಡ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

    • ಈಗಾಗಲೇ ಕಾನೂನು ಜಾರಿ ಅಧಿಕಾರಿ( ಇಒ), ಲೆಕ್ಕಾಧಿಕಾರಿ( ಎಂ), ಸಹಾಯಕ ಭವಿಷ್ಯ ನಿಧಿ ಆಯುಕ್ತ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಈ ಪ್ರವೇಶ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದ್ದು ಡೌನ್‌ ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ.
ಯುಪಿಎಸ್ಸಿ ನಡೆಸಲಿರುವ ವಿವಿಧ ಪರೀಕ್ಷೆಗಳಿಗೆ ಪ್ರವೇಶ ಕಾರ್ಡ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
ಯುಪಿಎಸ್ಸಿ ನಡೆಸಲಿರುವ ವಿವಿಧ ಪರೀಕ್ಷೆಗಳಿಗೆ ಪ್ರವೇಶ ಕಾರ್ಡ್‌ ಅನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಹೊಸದಿಲ್ಲಿ: ಭವಿಷ್ಯನಿಧಿ ಇಲಾಖೆಯ ವಿವಿಧ ಹುದ್ದೆಗಳಿಗೆ ಪ್ರವೇಶ ಪರೀಕ್ಷೆ ಬರೆಯುವವರಿಗೆ ಕೇಂದ್ರ ಲೋಕಸೇವಾ ಆಯೋಗವು ಯುಪಿಎಸ್‌ಸಿ ಇಪಿಎಫ್‌ಒ ಪ್ರವೇಶ ಕಾರ್ಡ್‌ ನೀಡಿದೆ. ಇದನ್ನು ಬುಧವಾರ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಡೌನ್‌ ಲೋಡ್‌ ಮಾಡಿಕೊಳ್ಳುವಂತೆ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಈಗಾಗಲೇ ಕಾನೂನು ಜಾರಿ ಅಧಿಕಾರಿ( ಇಒ), ಲೆಕ್ಕಾಧಿಕಾರಿ( ಎಂ), ಸಹಾಯಕ ಭವಿಷ್ಯ ನಿಧಿ ಆಯುಕ್ತ ಹುದ್ದೆಗೆ ಅರ್ಜಿ ಸಲ್ಲಿಸಿರುವವರು ಈ ಪ್ರವೇಶ ಕಾರ್ಡ್‌ ಅನ್ನು ಪಡೆದುಕೊಳ್ಳಬಹುದು. ಇದಕ್ಕಾಗಿ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ವ್ಯವಸ್ಥೆ ಮಾಡಿದ್ದು ಡೌನ್‌ ಲೋಡ್‌ ಮಾಡಿಕೊಳ್ಳಲು ಅವಕಾಶವಿದೆ.

2023ರ ಜುಲೈ 2ರಂದು ಈ ಮೂರು ಹುದ್ದೆಗಳಿಗೆ ಪರೀಕ್ಷೆಗಳು ನಡೆಯಲಿವೆ.

ಪ್ರವೇಶ ಕಾರ್ಡ್‌ ಹೇಗೆ ಪಡೆಯಬಹುದು

  • ಯುಪಿಎಸ್‌ಸಿಯ ಅಧಿಕೃತ ವೆಬ್‌ ಸೈಟ್‌ upsconline.nic.in ಗೆ ಹೋಗಿರಿ.
  • ಹೋಮ್‌ ಪೇಜ್‌ನ ಮೇಲ್ಭಾಗದಲ್ಲಿರುವ ಎನ್ಸ್‌ಫೋರ್ಸ್‌ಮೆಂಟ್‌ ಆಫೀಸರ್‌/ ಅಕೌಂಟ್ಸ್‌ ಆಫೀಸರ್‌/ ಅಸಿಸ್ಟಂಟ್‌ ಪ್ರಾವಿಡಂಟ್‌ ಫಂಡ್‌ ಕಮಿಷನರ್‌ ಇಪಿಎಫ್‌ಒ 2023 ಅನ್ನುವ ಲಿಂಕ್‌ ಕ್ಲಿಕ್‌ ಮಾಡಿ
  • ಕ್ಲಿಕ್‌ ಮಾಡಿದ ನಂತರ ಸಿಗುವ ಲಾಗಿನ್‌ನಲ್ಲಿ ನಿಮ್ಮ ನೊಂದಣಿ ಐಡಿ, ರೋಲ್‌ ನಂಬರ್‌ ವಿವರವನ್ನು ದಾಖಲಿಸಿ
  • ವಿವರ ನೀಡಿದರೆ ನಿಮ್ಮ ಯುಪಿಎಸ್‌ಸಿ ಇಪಿಎಫ್‌ಒ 2023 ಪ್ರವೇಶ ಪರೀಕ್ಷೆಯ ಕಾರ್ಡ್‌ ಕಾಣಲಿದೆ.
  • ಅದನ್ನು ಡೌನ್‌ಲೋಡ್‌ ಮಾಡಿಕೊಂಡರೆ ಆ ಕಾರ್ಡ್‌ ನಿಮ್ಮ ಪ್ರವೇಶ ಪತ್ರವಾಗಿರಲಿದೆ.
  • ಇದನ್ನೇ ಕಡ್ಡಾಯವಾಗಿ ಪರೀಕ್ಷೆ ದಿನ ಎಲ್ಲ ಅಭ್ಯರ್ಥಿಗಳು ತರಬೇಕು. ಇದಲ್ಲದೇ ಪರೀಕ್ಷೆ ದಿನ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರಣೆಗಳನ್ನು ಇದರೊಂದಿಗೆ ನೀಡಲಾಗಿದ್ದು. ಅದನ್ನೂ ಪ್ರಿಂಟ್‌ ತೆಗೆದುಕೊಂಡು ಬರುವುದು ಕಡ್ಡಾಯ.

ಇದನ್ನೂ ಓದಿರಿ

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ