logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi: ಇದು ಮಹಾತ್ಮಾ ಗಾಂಧಿ ಪಕ್ಷವೇ ಹೊರತು...ಮತ್ತೆ ಸಾವರ್ಕರ್‌ ಹೆಸರು ಪ್ರಸ್ತಾಪಿಸಿದ ರಾಹುಲ್!‌

Rahul Gandhi: ಇದು ಮಹಾತ್ಮಾ ಗಾಂಧಿ ಪಕ್ಷವೇ ಹೊರತು...ಮತ್ತೆ ಸಾವರ್ಕರ್‌ ಹೆಸರು ಪ್ರಸ್ತಾಪಿಸಿದ ರಾಹುಲ್!‌

HT Kannada Desk HT Kannada

Dec 04, 2022 08:42 PM IST

ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)

    • ಮಹಾರಾಷ್ಟ್ರದಲ್ಲಿ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ, ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್‌ ಹೆಸರನ್ನು ಪ್ರಸ್ತಾಪಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇದೀಗ ರಾಜಸ್ಥಾನದಲ್ಲೂ ಸಾವರ್ಕರ್‌ ಹೆಸರನ್ನು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್‌ ಮಹಾತ್ಮಾ ಗಾಂಧಿ ಅವರ ಪಕ್ಷವೇ ಹೊರತು ಸಾವರ್ಕರ್‌ ಅಥವಾ ಗೋಡ್ಸೆ ಅವರ ಪಕ್ಷವಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್‌ ಗಾಂಧಿ (ಸಂಗ್ರಹ ಚಿತ್ರ) (Congress Twitter)

ಜೈಪುರ್:‌ ಮಹಾರಾಷ್ಟ್ರದಲ್ಲಿ ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ, ಸ್ವಾತಂತ್ರ್ಯವೀರ ವಿ.ಡಿ. ಸಾವರ್ಕರ್‌ ಹೆಸರನ್ನು ಪ್ರಸ್ತಾಪಿಸಿ ವಿವಾದ ಸೃಷ್ಟಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಇದೀಗ ರಾಜಸ್ಥಾನದಲ್ಲೂ ಸಾವರ್ಕರ್‌ ಹೆಸರನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ತಾವು ಯಾರ ವಿರೋಧವನ್ನೂ ಲೆಕ್ಕಿಸುವುದಿಲ್ಲ ಎಂಬ ಸಂದೇಶವನ್ನು ರಾಹುಲ್‌ ಗಾಂಧಿ ರವಾನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಪ್ರಧಾನಿ ಮೋದಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿದರೆ, ಯಾವ ವಲಯದ ಷೇರುಗಳು ಲಾಭದಾಯಕವಾಗಲಿವೆ, ಇಲ್ಲಿದೆ ಪರಿಣತರ ಅಭಿಪ್ರಾಯದ ನೋಟ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ರಾಜಸ್ಥಾನದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಮಹಾತ್ಮಾ ಗಾಂಧಿ ಅವರ ಪಕ್ಷವೇ ಹೊರತು, ಸಾವರ್ಕರ್‌ ಅವರ ಪಕ್ಷವಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿ ಮತ್ತು ಶಿವಸೇನೆ(ಏಕನಾಥ್‌ ಶಿಂಧೆ, ಉದ್ಧವ್‌ ಠಾಕ್ರೆ ಬಣ)ಗೆ ಮತ್ತೊಂದು ಸುತ್ತಿನ ರಣವೀಳ್ಯವನ್ನು ರಾಹುಲ್‌ ಗಾಂಧಿ ನೀಡಿದ್ದಾರೆ.

ಕಾಂಗ್ರೆಸ್ ಇದು ಮಹಾತ್ಮಾ ಗಾಂಧಿಯವರ ಪಕ್ಷವೇ ಹೊರತು ಸಾವರ್ಕರ್ ಅಥವಾ ಗೋಡ್ಸೆಯವರದ್ದಲ್ಲ.‌ ಕಷ್ಟಪಟ್ಟು ಹೇಗೆ ಕೆಲಸ ಮಾಡಬೇಕು ಎಂಬುದು ಪ್ರತಿಯೊಬ್ಬ ಕಾಂಗ್ರೆಸ್‌ ಕಾರ್ಯಕರ್ತನಿಗೂ ಗೊತ್ತಿದೆ. ನಾವು ಮಹಾತ್ಮಾ ಗಾಂಧಿ ಅವರ ಅಹಿಂಸಾ ಮಾರ್ಗದಲ್ಲಿ ಮುನ್ನಡೆಯುವವರು ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ.

ದೇಶದಲ್ಲಿ ಕಾಂಗ್ರೆಸ್‌ ಪಕ್ಷ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಹೇಳುವವರಿದ್ದಾರೆ. ನಾನು ಅವರೆಲ್ಲರಿಗೂ ಹೇಳುವುದಿಷ್ಟೇ, ಕಾಂಗ್ರೆಸ್‌ ಮಹಾತ್ಮಾ ಗಾಂಧಿ ಅವರ ಪಕ್ಷವಾಗಿದ್ದು, ಮಹಾತ್ಮಾ ಗಾಂಧಿ ಅವರ ಅಸ್ತಿತ್ವ ಈ ದೇಶದ ಮಣ್ಣಿನಲ್ಲಿ ಬೆರೆತಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ರಾಹುಲ್‌ ಗಾಂಧಿ ಗುಡುಗಿದರು.

ಕಾಂಗ್ರೆಸ್‌ ಪಕ್ಷ ಈ ದೇಶದ ಜನರ ಪಕ್ಷ. ಹಿಂಸೆ, ದ್ವೇಷವನ್ನು ನಂಬುವ ಪಕ್ಷಗಳು ಅಳಿಯಬಹುದೇ ಹೊರತು, ಅಹಿಂಸೆ ಮತ್ತು ಪ್ರೀತಿಯನ್ನು ನಂಬುವ ಪಕ್ಷ ಈ ದೇಶದಿಂದ ಎಂದಿಗೂ ಅಳಿಯದು ಎಂದು ರಾಹುಲ್‌ ಗಾಂಧಿ ಹೇಳಿದರು.

ಮಹಾತ್ಮಾ ಗಾಂಧಿ ಮತ್ತು ಹಲವು ಮಹಾನ್‌ ನಾಯಕರು ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸಲು ತಪಸ್ಸು ಮಾಡಿದ್ದರು. ನಾವು ಕೂಡ ಕಾಂಗ್ರೆಸ್‌ ಪಕ್ಷವನ್ನು ಜನರ ಬಳಿ ಕೊಂಡೊಯ್ಯಲು ತಪಸ್ಸು ಮಾಡುತ್ತೇವೆ. ಎಷ್ಟೇ ಕಷ್ಟ ಬಂದರೂ ನಾವು ನಮ್ಮ ಪಥದಿಂದ ವಿಮುಖರಾಗುವುದಿಲ್ಲ ಎಂದು ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದರು.

ಮಹಾರಾಷ್ಟ್ರದಲ್ಲಿ ಭಾರತ್‌ ಜೋಡೋ ಯಾತ್ರೆಯ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್‌ ಗಾಂಧಿ, ಸಾವರ್ಕರ್‌ ಅವರು ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಬರೆಯುವ ಮೂಲಕ ತಮ್ಮ ಹೇಡಿತನವನ್ನು ಪ್ರದರ್ಶಿಸಿದ್ದರು. ಹೀಗಾಗಿ ಸಾವರ್ಕರ್‌ ಅವರನ್ನು ಮಹಾತ್ಮಾ ಗಾಂಧಿ, ಸರ್ದಾರ್‌ ಪಟೇಲ್‌ ಅವರಿಗೆ ಹೋಲಿಸುವುದು ಸರಿಯಲ್ಲ ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ರಾಹುಲ್‌ ಗಾಂಧಿ ಅವರ ಈ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದ್ದ ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ನಾಯಕರು, ಸಾವರ್ಕರ್‌ ವಿರುದ್ಧದ ಹೇಳಿಕೆಯನ್ನು ನಾವು ಸಹಿಸುವುದಿಲ್ಲ ಎಂದು ಗುಡುಗಿದ್ದರು. ಅಲ್ಲದೇ ಸಾವರ್ಕರ್‌ ಕುರಿತು ರಾಜಿಯ ಪ್ರಶ್ನೆಯೇ ಇಲ್ಲ ಎಂದಿದ್ದ ಸಂಜಯ್‌ ರಾವತ್‌, ಇದಕ್ಕಾಗಿ ನಾವು ಕಾಂಗ್ರೆಸ್‌ನೊಂದಿಗೆ ಮೈತ್ರಿಯನ್ನೂ ಕಡಿದುಕೊಳ್ಳಲು ಸಿದ್ಧ ಎಂದು ಹರಿಹಾಯ್ದಿದ್ದರು.

ಇಂದಿನ ಪ್ರಮುಖ ಸುದ್ದಿ

Indian Navy 2022: ಭಾರತೀಯ ನೌಕಾಪಡೆ ದಿನ: ವಿಶಾಖಪಟ್ಟಣಂ ಸಾಗರದಲ್ಲಿ ಬೆಳಗಿದ ಯುದ್ಧ ಹಡಗುಗಳು

ದೇಶಾದ್ಯಂತ ಇಂದು(ಡಿ.04-ಭಾನುವಾರ) ಭಾರತೀಯ ನೌಕಾಸೇನೆ ದಿನ ಆಚರಣೆ ನಡೆಯುತ್ತಿದ್ದು, ದೇಶದ ಸಮುದ್ರ ಗಡಿಗಳ ರಕ್ಷಣೆಯಲ್ಲಿ ನಿರತವಾಗಿರುವ ನೌಕಾ ವೀರರಿಗೆ ದೇಶ ನಮಿಸುತ್ತಿದೆ. ಅದರಂತೆ ಆಂಧ್ರದ ವಿಶಾಖಪಟ್ಟಂ ಸಮುದ್ರದಲ್ಲಿ, ಭಾರತೀಯ ನೌಕಾಸೇನೆಯ ಯುದ್ಧ ಹಡಗುಗಳು ದೀಪಾಲಂಕಾರದಿಂದ ಕಂಗೋಳಿಸಿದವು. ಈ ಕುರಿತು ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ