logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ayodhya Ram Mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಸೀತೆಯ ತವರು ನೇಪಾಳದಿಂದ 10 ನದಿಗಳ ನೀರು, 1100 ಬುಟ್ಟಿ ಹಣ್ಣು ಹಂಪಲು

Ayodhya Ram Mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಸೀತೆಯ ತವರು ನೇಪಾಳದಿಂದ 10 ನದಿಗಳ ನೀರು, 1100 ಬುಟ್ಟಿ ಹಣ್ಣು ಹಂಪಲು

Umesh Kumar S HT Kannada

Jan 22, 2024 12:11 PM IST

ಅಯೋಧ್ಯೆಯಲ್ಲಿ ನೇಪಾಳದ ಭಕ್ತರ ಭಕ್ತಿ ಭಾವ ಸಂಭ್ರಮ.

  • Ayodhya Ram Mandir: ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ಸೀತಾ ಮಾತೆಯ ತವರು ನೇಪಾಳದಿಂದ 10 ನದಿಗಳ ನೀರು, 1100 ಬುಟ್ಟಿ ಹಣ್ಣು ಹಂಪಲುಗಳನ್ನು ಭಾನುವಾರ ಕಳುಹಿಸಲಾಗಿದೆ. ಇದು ಅಯೋಧ್ಯೆಗೆ ತಲುಪಿದ್ದು, ರಾಮನ ಅಭಿಷೇಕಕ್ಕೆ ಬಳಕೆಯಾಗಲಿದೆ.

ಅಯೋಧ್ಯೆಯಲ್ಲಿ ನೇಪಾಳದ ಭಕ್ತರ ಭಕ್ತಿ ಭಾವ ಸಂಭ್ರಮ.
ಅಯೋಧ್ಯೆಯಲ್ಲಿ ನೇಪಾಳದ ಭಕ್ತರ ಭಕ್ತಿ ಭಾವ ಸಂಭ್ರಮ. (ANI Photo/ Rahul Singh)

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ, ಬಾಲರಾಮನ ಪ್ರಾಣ ಪ್ರತಿಷ್ಠೆಯ ಅಭಿಷೇಕಕ್ಕಾಗಿ ಐತಿಹಾಸಿಕ ಕ್ಷಣಕ್ಕಾಗಿ ಸೀತಾ ಮಾತೆಯ ತವರು ನೇಪಾಳದಿಂದ 10 ನದಿಗಳ ನೀರು ಮತ್ತು 1100 ಬುಟ್ಟಿ ಹಣ್ಣುಹಂಪಲುಗಳು ಅಯೋಧ್ಯೆಯ ರಾಮಜನ್ಮಭೂಮಿಗೆ ತಲುಪಿದೆ.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಬಾಲರಾಮನ ಪ್ರಾಣ ಪ್ರತಿಷ್ಠೆ ಮಹೋತ್ಸವ ಮಧ್ಯಾಹ್ನ 12.20ಕ್ಕೆ ಶುರುವಾಗಲಿದೆ. ಬಾಲರಾಮನಿಗೆ ಅಭಿಷೇಕ ಮಾಡಲಿರುವ 114 ಕಲಶಗಳ ಪೈಕಿ ನೇಪಾಳದ ಜಲ ಕಲಶಗಳೂ ಸೇರಿವೆ. ಗಣೇಪಾಲದ ಪವಿತ್ರ ನದಿಗಳಾದ ಬಾಗ್ಮತಿ, ನಾರಾಯಣಿ, ದೂಧಮತಿ, ಕಾಲಿಗಂಡಕಿ, ಕೋಶಿ, ಕಮಲಾ, ದೇವಘಾಟ್, ಮಹಾಕಾಳಿ (ಶಾರದಾ) ಮೊದಲಾದ 10 ನದಿಗಳ ನೀರನ್ನು ಶ್ರೀರಾಮನ ಜಲಾಭಿಷೇಕಕ್ಕೆ ತೆಗೆದುಕೊಂಡು ಹೋಗಲಾಗಿದೆ.

ರಾಮಮಂದಿರದ ಪ್ರಾಣ ಪ್ರತಿಷ್ಟಾ ಮಹೋತ್ಸವದ ಅಭಿಷೇಕಕ್ಕಾಗಿ ಸೀತೆಯ ತಾಯ್ನಾಡಾದ ಜನಕಪುರಧಾಮದಿಂದ 1100 ಹಣ್ಣಿನ ಬುಟ್ಟಿಗಳನ್ನು ಅಯೋಧ್ಯೆಗೆ ಕಳುಹಿಸಲಾಗಿದೆ. ಹಣ್ಣಿನ ಬುಟ್ಟಿಗಳು ಗೋರಖ್‌ಪುರದ ಮೂಲಕ ಅಯೋಧ್ಯೆಗೆ ತಲುಪಿವೆ ಎಂದು ನೇಪಾಳದ ಜನಕಪುರಿ ಜಾನಕಿ ದೇವಸ್ಥಾನದ ಸಹ-ಮಹಾಂತ್ ರಾಮರೋಷನ್ ದಾಸ್ ವೈಷ್ಣವ್ ಹೇಳಿದರು.

ಜನಕಪುರಧಾಮದಿಂದ ಜಲೇಶ್ವರ ನಾಥ್, ಮಲಂಗ್ವಾ, ಸಿಮ್ರೌನ್‌ಗಢ, ಗಧಿಮಾಯಿ, ಬಿರ್‌ಗುಂಜ್, ಬೆಟ್ಟಿಯಾ, ಕುಶಿನಗರ, ಸಿದ್ಧಾರ್ಥನಗರ, ಗೋರಖ್‌ಪುರ ಮಾರ್ಗವಾಗಿ ಅಯೋಧ್ಯೆಗೆ ತಲುಪುವ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿತ್ತು. ಅದರಂತೆ ಎಲ್ಲವೂ ಆಗಿದೆ. ಎಂದು ಅವರು ಹೇಳಿದರು.

ಜನಕಪುರದ ಜಾನಕಿ ದೇವಾಲಯದ ಇಬ್ಬರು ಮಹಂತರು ಅಯೋಧ್ಯೆಗೆ ಹೋಗಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮ ಪ್ರಾಣ ಪ್ರತಿಷ್ಠೆಯ ಈ ಕಾರ್ಯಕ್ರಮಕ್ಕೆ ನೇಪಾಳದ 15 ಪ್ರಮುಖ ಧಾರ್ಮಿಕ ಮುಖಂಡರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಭಾರತದಂತೆಯೇ ನೆರೆಯ ನೇಪಾಳದಲ್ಲಿ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಸಡಗರವನ್ನು ಉಂಟುಮಾಡಿದೆ ಎಂದು ಅವರು ವಿವರಿಸಿದರು.

ನೇಪಾಳದಲ್ಲಿ ಸಂಭ್ರಮ ಸಡಗರ

ನೇಪಾಳದ ವಿಶ್ವ ಹಿಂದೂ ಮಹಾಸಂಘ ಮತ್ತು ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಹೊರತಾಗಿ ವಿವಿಧ ಹಿಂದೂ ಸಂಘಟನೆಗಳ ಜನ ಭಾನುವಾರ ಅಯೋಧ್ಯೆಯತ್ತ ಹೊರಟಿದ್ದಾರೆ ಎಂದು ಕಾಂಚನಪುರದ ರಮೇಶ್ ಪ್ರಸಾದ್ ಭಟ್ ಮತ್ತು ದಿಲ್ಲಿ ರಾಜ್ ಪಂತ್ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಸೀತಾಮಾತೆಯ ಜನ್ಮಸ್ಥಳ ನೇಪಾಳದ ಜನಕಪುರಿ ಎಂಬ ಅಂಶವೇ ನಮ್ಮನ್ನು ಈ ಸಂಭ್ರಮ ಸಡಗರದಲ್ಲಿ ಪಾಲ್ಗೊಳ್ಳುವಂತೆ ಮಾಡಿದೆ. ಜನವರಿ 22 ರಂದು ಕಠ್ಮಂಡು, ನೇಪಾಳ, ಪೋಖರಾ ಮತ್ತು ಕಾಂಚನ್‌ಪುರ ಜಿಲ್ಲೆಗಳ ಜನರು ಸಹ ಕಾರ್ಯಕ್ರಮಕ್ಕೆ ಹೋಗುತ್ತಿದ್ದಾರೆ ಎಂದು ವಿಶ್ವ ಹಿಂದೂ ಮಹಾಸಂಘದ ಮುಖ್ಯಸ್ಥ ಸಾಮ್ರಾಟ್ ಸಿಂಗ್ ತಿಳಿಸಿದ್ದಾರೆ.

ಹಿಂದೂಗಳು ಇಲ್ಲಿ ರ್ಯಾಲಿ ನಡೆಸಿ ದೀಪಾವಳಿಯಂತೆ ಜನವರಿ 22ರಂದು ಉತ್ಸವವನ್ನು ಆಚರಿಸಲಿದ್ದಾರೆ ಎಂದು ಕಾಂಚನಪುರ ಸಂಸದ ಜೋಶಿ ಹೇಳಿದರು.

-------------------------

ಅಯೋಧ್ಯೆ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಲೈವ್ ಅಪ್ಡೇಟ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ…

Ayodhya Ramamandir Opening Live : ಅಯೋಧ್ಯೆ ರಾಮಮಂದಿರ ಉದ್ಘಾಟನೆಯ ನೇರಪ್ರಸಾರ – Prana Pratishtapane Live

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ