logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Nasa Photo: ಆಶ್ಚರ್ಯ, ಈ ಕ್ಷುದ್ರಗ್ರಹದ ಜತೆ ಚಂದ್ರನಿದ್ದಾನೆ, ದಿನದ ಅದ್ಭುತ ಖಗೋಳ ಫೋಟೊ ಹಂಚಿಕೊಂಡ ನಾಸಾ

NASA Photo: ಆಶ್ಚರ್ಯ, ಈ ಕ್ಷುದ್ರಗ್ರಹದ ಜತೆ ಚಂದ್ರನಿದ್ದಾನೆ, ದಿನದ ಅದ್ಭುತ ಖಗೋಳ ಫೋಟೊ ಹಂಚಿಕೊಂಡ ನಾಸಾ

Praveen Chandra B HT Kannada

May 28, 2023 03:41 PM IST

ದಿನದ ಅದ್ಭುತ ಖಗೋಳ ಫೋಟೊ ಹಂಚಿಕೊಂಡ ನಾಸಾ

  • NASA Astronomy Picture of the Day: ನಾಸಾವು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪ್ರತಿದಿನ ವಿಶೇಷವೆನಿಸುವ ಖಗೋಳ ಫೋಟೊವನ್ನು ಹಂಚಿಕೊಳ್ಳುತ್ತದೆ. ಇಂದು ನಾಸಾವು ಸಣ್ಣ ಚಂದ್ರ ಇರುವ ಕ್ಷುದ್ರಗ್ರಹವೊಂದರ ಚಿತ್ರವನ್ನು ಹಂಚಿಕೊಂಡಿದೆ. ರೊಬೊಟಿಕ್‌ ಸ್ಪೇಸ್‌ಕ್ರಾಪ್ಟ್‌ ಗೆಲಿಲಿಯೊದ ಕಣ್ಣಿಗೆ ಬಿದ್ದ ಕ್ಷುದ್ರಗ್ರಹದ ಜತೆಗೆ ಸಣ್ಣ ಚಂದ್ರ ಇದೆ.

ದಿನದ ಅದ್ಭುತ ಖಗೋಳ ಫೋಟೊ ಹಂಚಿಕೊಂಡ ನಾಸಾ
ದಿನದ ಅದ್ಭುತ ಖಗೋಳ ಫೋಟೊ ಹಂಚಿಕೊಂಡ ನಾಸಾ (NASA)

ಆಕಾಶದಲ್ಲಿ ಕಲ್ಲು ಬಂಡೆಗಳಂತೆ ಸುತ್ತಾಡುತ್ತಿರುವ ಕ್ಷುದ್ರಗ್ರಹಗಳಿಗೂ ಭೂಮಿಗೆ ಇರುವಂತೆ ಚಂದ್ರನಂತಹ ಉಪಗ್ರಹಗಳಿರುವುದೇ? ಕ್ಷುದ್ರಗ್ರಹಗಳು ಹೊಂದಿರುವ ಚಂದ್ರರು ನಮ್ಮ ಸೌರ ಮಂಡಲದಲ್ಲಿರುವಂತಹ ಬೃಹತ್‌ ಉಪಗ್ರಹಗಳನ್ನು ಹೊಂದಿಲ್ಲ. ಆದರೆ, ಇದೇ ರೀತಿಯ ಸಹ ಕಾಯಗಳನ್ನು ಕೆಲವು ಕ್ಷುದ್ರಗ್ರಹಗಳು ತಮ್ಮ ಜತೆಗೆ ಹೊಂದಿವೆ. ನಾಸಾದ ಪ್ರಕಾರ 150ಕ್ಕೂ ಹೆಚ್ಚು ಕ್ಷುದ್ರಗ್ರಹಗಳು ತಮ್ಮ ಜತೆಗೆ ಸಣ್ಣ ಸಹವರ್ತಿ ಮೂನ್‌ಗಳನ್ನು ಹೊಂದಿವೆ. ಕೆಲವೊಂದು ಉಪಗ್ರಹಗಳಿಗೆ ಇಂತಹ ಇಬ್ಬರು ಚಂದ್ರರಿದ್ದಾರೆ. ಕಳೆದ ವರ್ಷ ಕ್ಷುದ್ರಗ್ರಹ 130 ಎಲೆಕ್ಟ್ರಾದಲ್ಲಿ ಮೂರು ಚಂದ್ರರಿರುವುದನ್ನು ಪತ್ತೆಹಚ್ಚಲಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ನಾಸಾವು ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಪ್ರತಿದಿನ ವಿಶೇಷವೆನಿಸುವ ಖಗೋಳ ಫೋಟೊವನ್ನು ಹಂಚಿಕೊಳ್ಳುತ್ತದೆ. ಇಂದು ನಾಸಾವು ಸಣ್ಣ ಚಂದ್ರ ಇರುವ ಕ್ಷುದ್ರಗ್ರಹವೊಂದರ ಚಿತ್ರವನ್ನು ಹಂಚಿಕೊಂಡಿದೆ. ರೊಬೊಟಿಕ್‌ ಸ್ಪೇಸ್‌ಕ್ರಾಪ್ಟ್‌ ಗೆಲಿಲಿಯೊದ ಕಣ್ಣಿಗೆ ಬಿದ್ದ ಕ್ಷುದ್ರಗ್ರಹದ ಜತೆಗೆ ಸಣ್ಣ ಚಂದ್ರ ಇದೆ.

ಸೋಷಿಯಲ್‌ ಮೀಡಿಯಾದಲ್ಲಿ ಈ ಫೋಟೊವನ್ನು ಹಂಚಿಕೊಂಡಿರುವ ನಾಸಾವು ಈ ಪುಟಾಣಿ ಚಂದ್ರನ ಕುರಿತು ವಿವರಣೆ ನೀಡಿದೆ. ಈ ಪುಟ್ಟ ಚಂದ್ರನಿಗೆ ಡಕ್ಟೈಲ್‌ ಎಂದು ಹೆಸರಿಡಲಾಗಿದೆ. ಚಿತ್ರದಲ್ಲಿ ಇದು ಸಣ್ಣ ಚುಕ್ಕಿಯಂತೆ ಕಾಣಿಸುತ್ತದೆ. ಈ ಚಂದ್ರನ ಗಾತ್ರ 1.6 ಕಿ.ಮೀ.ಯಷ್ಟಿದೆ. ಮುಖ್ಯ ಕ್ಷುದ್ರಗ್ರಹದ ಹೆಸರು ಇಡಾ. ಇದರ ಗಾತ್ರ ಸುಮಾರು 60 ಕಿ.ಮೀ.ಯಷ್ಟಿದೆ.

ಇಡಾ ಮತ್ತು ಡಕ್ಟೈಲ್‌ ಹೆಸರು

ವಿನ್ನಿಸ್‌ನ ಪ್ರಖ್ಯಾತ ಖಗೋಳತಜ್ಞರಾದ ಮೊರಿಝ್‌ ವಾನ್‌ ಕುಫ್ನೆರ್‌ ಅವರು ಈ ಕ್ಷುದ್ರಗ್ರಹಕ್ಕೆ ಇಡಾ ಎಂಬ ನಾಮಕರಣ ಮಾಡಿದ್ದಾರೆ. ಗ್ರೀಕ್‌ ಪುರಾಣಕತೆಯ ಪಾತ್ರದ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಕ್ಷುದ್ರಗ್ರಹದ ಚಂದ್ರ Dactylಗೆ ಇಂಟರ್‌ನ್ಯಾಷನಲ್‌ ಆಸ್ಟ್ರೋನಮಿಕಲ್‌ ಯೂನಿಯನ್‌ ಹೆಸರಿಟ್ಟಿದೆ.

ಕ್ಷುದ್ರಗ್ರಹಗಳ ಜತೆ ಚಂದ್ರರಿರುವುದು ಹೇಗೆ?

ಈ ಕುರಿತು ವಿವಿಧ ಸಿದ್ಧಾಂತಗಳು ವಿವರಣೆಗಳು ಇವೆ. ಒಂದು ಸಿದ್ಧಾಂತದ ಪ್ರಕಾರ ಎರಡು ಕ್ಷುದ್ರಗ್ರಹಗಳು ಪರಸ್ಪರ ಡಿಕ್ಕಿ ಹೊಡೆದಾಗ ಅವುಗಳಲ್ಲಿ ಒಂದು ಕ್ಷುದ್ರಗ್ರಹವು ದೂರಕ್ಕೆ ತಳ್ಳಿ ಅದರ ನಿರ್ದಿಷ್ಟ ದಾರಿ ತಪ್ಪಿ ಮತ್ತೊಂದು ಕ್ಷುದ್ರಗ್ರಹದ ಜತೆಗೆ ಸಾಗುತ್ತದೆ. ಇನ್ನೊಂದು ಸಿದ್ಧಾಂತದ ಪ್ರಕಾರ, ದೊಡ್ಡ ಕ್ಷುದ್ರಗ್ರಹದ ಗುರುತ್ವಕ್ಕೆ ಸಿಲುಕಿ ಸಣ್ಣ ಕ್ಷುದ್ರಗ್ರಹವು ಚಂದ್ರನಾಗಿ ಜತೆಗಿರುತ್ತದೆ.

ಭೂಮಿಗೆ ಕ್ಷುದ್ರಗ್ರಹ ಅಪ್ಪಳಿಸಿದರೆ...

ಗಾತ್ರದಲ್ಲಿ ಪುಟ್ಟದಾಗಿದ್ದರೂ ಭೂಮಿಗೆ ಎಲ್ಲಾದರೂ ಕ್ಷುದ್ರಗ್ರಹ ಅಪ್ಪಳಿಸಿದರೆ ಸರ್ವನಾಶವಾಗಬಹುದು. ಒಂದು ದೊಡ್ಡ ಮನೆಯ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಗಂಟೆಗೆ 30 ಸಾವಿರ ಕಿ.ಮೀ. ವೇಗದಲ್ಲಿ ಅಪ್ಪಳಿಸಿದರೆ ಅದು 20 ಕಿಲೋ ಟನ್‌ ಬಾಂಬ್‌ನಷ್ಟು ಶಕ್ತಿಶಾಲಿಯಾಗಿರಲಿದೆ. ಅಂದರೆ, ಹಿರೋಶಿಮಾದ ಮೇಲೆ ಅಂದು ಹಾಕಿದ ಬಾಂಬ್‌ನಷ್ಟು ಪ್ರಬಲವಾಗಿರಲಿದೆ. ಎಲ್ಲಾದರೂ ಬೃಹತ್‌ ಗಾತ್ರದ ಕ್ಷುದ್ರಗ್ರಹ ಅಪ್ಪಳಿಸಿದರೆ ಏನಾಗಬಹುದು ಎಂದು ಯೋಚಿಸಿ!.

ಎಲ್ಲಾದರೂ 200 ಅಡಿ ಗಾತ್ರದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಬೃಹತ್‌ ನ್ಯೂಕ್ಲಿಯರ್‌ ಬಾಂಬ್‌ ಬಿಡುಗಡೆ ಮಾಡುವ ಶಕ್ತಿಗೆ ಸಮವಾಗಿರಲಿದೆ. ಕ್ಷುದ್ರಗ್ರಹಗಳೆಂದರೆ ಸಣ್ಣ (ಕೆಲವೊಂದು ಮಧ್ಯಮ) ಗಾತ್ರದ ಶಿಲಾ ಚೂರುಗಳು. ಇವು ಸೂರ್ಯನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಮೊದಲ ಬಾರಿಗೆ ಪತ್ತೆಹಚ್ಚಿದ ಕ್ಷುದ್ರಗ್ರಹದ ಹೆಸರು ಸೆರೆಸ್‌. 1801ರಲ್ಲಿ ಗಿಯುಸ್ಪೆ ಪಿಯಾಝಿ ಅನ್ವೇಷಣೆ ಮಾಡಿದರು. ನಮ್ಮ ಸೌರಮಂಡಲದಲ್ಲಿ 6 ಲಕ್ಷಕ್ಕೂ ಹೆಚ್ಚು ಕ್ಷುದ್ರಗ್ರಹಗಳು ಇವೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ