logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Asteroid: ಗಂಟೆಗೆ 27252 ಕಿಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಪಿಎಕ್ಸ್‌ ಕ್ಷುದ್ರಗ್ರಹ, ಭೂಮಿಗೆ ಅಪ್ಪಳಿಸಬಹುದೇ ಅಂತರಿಕ್ಷದ ಬಂಡೆ

Asteroid: ಗಂಟೆಗೆ 27252 ಕಿಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಪಿಎಕ್ಸ್‌ ಕ್ಷುದ್ರಗ್ರಹ, ಭೂಮಿಗೆ ಅಪ್ಪಳಿಸಬಹುದೇ ಅಂತರಿಕ್ಷದ ಬಂಡೆ

HT Kannada Desk HT Kannada

Aug 15, 2023 04:28 PM IST

Asteroid: ಗಂಟೆಗೆ 27252 ಕಿಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಪಿಎಕ್ಸ್‌ ಕ್ಷುದ್ರಗ್ರಹ

  • NASA Asteroid News: ಇಂದು ಭೂಮಿಯತ್ತ ಆಗಮಿಸಲಿರುವ ಕ್ಷುದ್ರಗ್ರಹದ ಹೆಸರು ಆಸ್ಟ್ರಾಯ್ಡ್‌ 2023 ಪಿಎಕ್ಸ್‌ . ಭಾರತದ ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಆಗಸ್ಟ್‌ 15ರಂದೇ ಈ ಕ್ಷುದ್ರಗ್ರಹ ಭೂಮಿಯ ಸಮೀಪ ಬರಲಿದೆ.

Asteroid: ಗಂಟೆಗೆ 27252 ಕಿಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಪಿಎಕ್ಸ್‌ ಕ್ಷುದ್ರಗ್ರಹ
Asteroid: ಗಂಟೆಗೆ 27252 ಕಿಮೀ ವೇಗದಲ್ಲಿ ಭೂಮಿಯತ್ತ ಧಾವಿಸುತ್ತಿದೆ ಪಿಎಕ್ಸ್‌ ಕ್ಷುದ್ರಗ್ರಹ (Pixabay)

ಕ್ಷುದ್ರಗ್ರಹಗಳೆಂದರೆ ಸಾಮಾನ್ಯಾಗಿ ಮಂಗಳ ಮತ್ತು ಗುರು ಗ್ರಹದ ಕಕ್ಷೆಗಳ ನಡುವಿನ ಆಸ್ಟ್ರಾಯ್ಡ್‌ ಬೆಲ್ಟ್‌ನಲ್ಲಿರುವ ಬಾಹ್ಯಾಕಾಶ ಶಿಲೆಗಳು. ಕೆಲವೊಮ್ಮೆ ಈ ಕ್ಷುದ್ರಗ್ರಹಗಳು ತಮ್ಮ ಪಥಗಳಿಂದ ಹೊರಕ್ಕೆ ಬಿದ್ದು ಈ ವಿಶಾಲ ಅಂತರಿಕ್ಷದಲ್ಲಿ ಗೊತ್ತುಗುರಿಯಿಲ್ಲದೆ ಸಂಚರಿಸುತ್ತ ಇರುತ್ತವೆ. ದೊಡ್ಡ ಕಲ್ಲು ಬಂಡೆಯೊಂದು ಅಂತ್ಯವೇ ಇಲ್ಲದ ಆಕಾಶದಲ್ಲಿ ಬೀಳುತ್ತಿರುವಂತೆ ಈ ಕ್ಷುದ್ರಗ್ರಹಗಳು ಶರವೇಗದಲ್ಲಿ ಸಾಗುತ್ತ ಇರುತ್ತವೆ. ಇವು ಕೆಲವೊಂದು ಪುಟ್ಟ ಗಾತ್ರದ್ದು ಆಗಿರುತ್ತವೆ. ಕೆಲವೊಂದು ಕಾರುಗಳ ಗಾತ್ರ ಹೊಂದಿರುತ್ತವೆ. ಇನ್ನು ಕೆಲವು ದೊಡ್ಡ ಫುಟ್ಬಾಲ್‌ ಮೈದಾನಕ್ಕಿಂತಲೂ ವಿಶಾಲವಾಗಿರುತ್ತವೆ. ಒಂದು ಕಾರು ಗಾತ್ರದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೂ ಭೂಮಿಯ ದೊಡ್ಡ ನಗರವೊಂದು ಸರ್ವನಾಶವಾಗಿ ಹೋಗಬಹುದು.

ಟ್ರೆಂಡಿಂಗ್​ ಸುದ್ದಿ

ತರಗತಿ ವೇಳೆ ಸ್ನೇಹಿತನೊಂದಿಗೆ ಮಾತು, ಕಿವಿ ಕೇಳಿಸದ ಹಾಗೆ ಬಾರಿಸಿದ ಶಿಕ್ಷಕನ ವಿರುದ್ದ ಎಫ್‌ಐಆರ್

Crime News: ಪ್ರೀತಿ ನಿರಾಕರಣೆ, ಪ್ರಿಯತಮೆ ಜತೆಗೆ ಇಡೀ ಕುಟುಂಬವನ್ನೇ ಕೊಂದು ಹಾಕಿದ ಯುವಕ ಆತ್ಮಹತ್ಯೆ!

ಪತಂಜಲಿಯ ಸೋನ್ ಪಾಪಡಿ ಗುಣಮಟ್ಟ ಪರೀಕ್ಷೆ ಫೇಲು; ಬಾಬಾ ರಾಮ್‌ದೇವ್ ಕಂಪನಿಯ ಇಬ್ಬರು ಅಧಿಕಾರಿಗಳ ಬಂಧನ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

ಈ ರೀತಿ ತಮ್ಮ ಪಥದಿಂದ ಹೊರಕ್ಕೆ ಬೀಳುವ ಕ್ಷುದ್ರಗ್ರಹಗಳನ್ನು ನಾಸಾದ ದೂರದರ್ಶಕಗಳು ಟ್ರ್ಯಾಕ್‌ ಮಾಡುತ್ತವೆ. ವಿಶೇಷವಾಗಿ ಭೂಮಿಯ ಸಮೀಪದ ಕ್ಷುದ್ರಗ್ರಹಗಳನ್ನು ಮಾನಿಟರ್‌ ಮಾಡಲಾಗುತ್ತದೆ. ಆ ಕ್ಷುದ್ರಗ್ರಹಗಳು ಎಲ್ಲಿದೆ, ಎಷ್ಟು ದೂರದಲ್ಲಿದೆ, ಭೂಮಿಗೆ ಭವಿಷ್ಯದಲ್ಲಿ ಅಪಾಯವಿದೆಯೇ ಇತ್ಯಾದಿಗಳನ್ನು ಅಳೆಯಲಾಗುತ್ತದೆ. ಈ ಮಾಹಿತಿಯನ್ನು ಮೈನರ್‌ ಪ್ಲಾನೆಟ್‌ ಸೆಂಟರ್‌ಗೆ ತಿಳಿಸಲಾಗುತ್ತದೆ. ಭೂಮಿಗೆ ಸಮೀಪದ ಆಕಾಶ ಕಾಯಗಳನ್ನು ಅಧ್ಯಯನ ಮಾಡುವ ಕೇಂದ್ರವಾದ ಸಿಎನ್‌ಇಒಎಸ್‌ ಈ ಡೇಟಾವನ್ನು ಅವಲೋಕಿಸುತ್ತದೆ. ನಾಸಾದ ಖಗೋಳ ವಿಜ್ಞಾನಿಗಳು ಈ ಕ್ಷುದ್ರಗ್ರಹಗಳ ವೇಗ, ದೂರ, ಗಾತ್ರ ಇತ್ಯಾದಿ ಹಲವು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ.

ಆಸ್ಟ್ರಾಯ್ಡ್‌ 2023 ಪಿಎಕ್ಸ್‌ ಕುರಿತು ಮಾಹಿತಿ

ಇಂದು ಭೂಮಿಯತ್ತ ಆಗಮಿಸಲಿರುವ ಕ್ಷುದ್ರಗ್ರಹದ ಹೆಸರು ಆಸ್ಟ್ರಾಯ್ಡ್‌ 2023 ಪಿಎಕ್ಸ್‌ . ಭಾರತದ ಸ್ವಾತಂತ್ರ್ಯ ದಿನಾಚರಣೆಯ ದಿನವಾದ ಆಗಸ್ಟ್‌ 15ರಂದೇ ಈ ಕ್ಷುದ್ರಗ್ರಹ ಭೂಮಿಯ ಸಮೀಪ ಬರಲಿದೆ. ಈ ಕ್ಷುದ್ರಗ್ರಹವನ್ನು ನಾಸಾದ ಡಿಫೆನ್ಸ್‌ ಕೋಆರ್ಡಿನೇಶನ್‌ ಆಫೀಸ್‌ (ಪಿಡಿಸಿಒ) ಗುರುತಿಸಿದೆ. ಈ ಕ್ಷುದ್ರಗ್ರಹವನ್ನು ಖಗೋಳ ವಿಜ್ಞಾನಿಗಳ ಪ್ಲಾನೆಟ್‌ ಕಿಲ್ಲರ್‌ ಎಂದು ಕರೆದಿದ್ದಾರೆ. ಎಲ್ಲಾದರೂ ಈ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿದರೆ ಭೂಮಿಯೇ ಸರ್ವನಾಶವಾಗಬಹುದು. ಅಥವಾ ಭೂಮಿಯ ಪ್ರಮುಖ ಭಾಗವೇ ನಾಶವಾಗಿ ಹೋಗಬಹುದು. ಈ ಕ್ಷುದ್ರಗ್ರಹವು 100 ಅಡಿಯಷ್ಟು ವಿಶಾಲವಾಗಿದೆ. ಅಂದರೆ, ದೊಡ್ಡ ವಿಮಾನದಷ್ಟು ಗಾತ್ರ ಹೊಂದಿದೆ. ವಿಮಾನದ ಗಾತ್ರದ ಈ ಕ್ಷುದ್ರಗ್ರಹದಿಂದ ಇಷ್ಟೊಂದು ಅಪಾಯವೇ ಎಂದು ಕೇಳುವಿರಾ. ಕ್ಷುದ್ರಗ್ರಹಗಳು ಆಗಮಿಸುವ ವೇಗದ ಪರಿಣಾಮವಾಗಿ ಪರಿಣಾಮ ದೊಡ್ಡ ಮಟ್ಟದಲ್ಲಿರುತ್ತದೆ.

ಈ ಕ್ಷುದ್ರಗ್ರಹವು ಗಂಟೆಗೆ 27252 ಕಿ.ಮೀ. ವೇಗದಲ್ಲಿ ಭೂಮಿಯ ಸಮೀಪಕ್ಕೆ ಬರುತ್ತದೆ. ಇದು ಭೂಮಿಯಿಂದ ಸುಮಾರು 49 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗಲಿದೆ. ಇಷ್ಟು ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋಗುವ ಕ್ಷುದ್ರಗ್ರಹವನ್ನು ಭೂಮಿಯ ಹತ್ತಿರದ ಕ್ಷುದ್ರಗ್ರಹ ಎಂದು ಕರೆಯಲಾಗುತ್ತದೆ. ಏಕೆಂದರೆ, ಅಂತರಿಕ್ಷದಲ್ಲಿ ಹಲವು ಲಕ್ಷ ಕಿ.ಮೀ.ಯನ್ನು ಕ್ರಮಿಸಲು ಹೆಚ್ಚು ಸಮಯ ಬೇಕಾಗಿಲ್ಲ.

ಗಾತ್ರದಲ್ಲಿ ಪುಟ್ಟದಾಗಿದ್ದರೂ ಭೂಮಿಗೆ ಎಲ್ಲಾದರೂ ಕ್ಷುದ್ರಗ್ರಹ ಅಪ್ಪಳಿಸಿದರೆ ಸರ್ವನಾಶವಾಗಬಹುದು. ಒಂದು ದೊಡ್ಡ ಮನೆಯ ಗಾತ್ರದ ಕ್ಷುದ್ರಗ್ರಹವೊಂದು ಭೂಮಿಗೆ ಗಂಟೆಗೆ 30 ಸಾವಿರ ಕಿ.ಮೀ. ವೇಗದಲ್ಲಿ ಅಪ್ಪಳಿಸಿದರೆ ಅದು 20 ಕಿಲೋ ಟನ್‌ ಬಾಂಬ್‌ನಷ್ಟು ಶಕ್ತಿಶಾಲಿಯಾಗಿರಲಿದೆ. ಅಂದರೆ, ಹಿರೋಶಿಮಾದ ಮೇಲೆ ಅಂದು ಹಾಕಿದ ಬಾಂಬ್‌ನಷ್ಟು ಪ್ರಬಲವಾಗಿರಲಿದೆ.

ಎಲ್ಲಾದರೂ 200 ಅಡಿ ಗಾತ್ರದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಬೃಹತ್‌ ನ್ಯೂಕ್ಲಿಯರ್‌ ಬಾಂಬ್‌ ಬಿಡುಗಡೆ ಮಾಡುವ ಶಕ್ತಿಗೆ ಸಮವಾಗಿರಲಿದೆ. ಕ್ಷುದ್ರಗ್ರಹಗಳೆಂದರೆ ಸಣ್ಣ (ಕೆಲವೊಂದು ಮಧ್ಯಮ) ಗಾತ್ರದ ಶಿಲಾ ಚೂರುಗಳು. ಇವು ಸೂರ್ಯನ ಕಕ್ಷೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಮೊದಲ ಬಾರಿಗೆ ಪತ್ತೆಹಚ್ಚಿದ ಕ್ಷುದ್ರಗ್ರಹದ ಹೆಸರು ಸೆರೆಸ್‌. 1801ರಲ್ಲಿ ಗಿಯುಸ್ಪೆ ಪಿಯಾಝಿ ಅನ್ವೇಷಣೆ ಮಾಡಿದರು. ನಮ್ಮ ಸೌರಮಂಡಲದಲ್ಲಿ 6 ಲಕ್ಷಕ್ಕೂ ಹೆಚ್ಚು ಕ್ಷುದ್ರಗ್ರಹಗಳು ಇವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ