logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Pm Modi France Visit: ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ; ಏನಿದು ಕಾರ್ಯಕ್ರಮ, 5 ಅಂಶಗಳ ವಿವರ

PM Modi France Visit: ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ; ಏನಿದು ಕಾರ್ಯಕ್ರಮ, 5 ಅಂಶಗಳ ವಿವರ

Umesh Kumar S HT Kannada

Jul 13, 2023 07:20 PM IST

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ.

  • PM Modi France Visit: ಫ್ರಾನ್ಸ್‌ನಲ್ಲಿ ಜುಲೈ 14 ರಂದು ನಡೆಯಲಿರುವ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸುವ ಭಾರತದ ಎರಡನೇ ಪ್ರಧಾನಿ ಎಂಬ ಕೀರ್ತಿಗೆ ಮೋದಿ ಭಾಜನರಾಗುತ್ತಿದ್ದಾರೆ.

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ.
ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ. (@EmmanuelMacron)

ಫ್ರಾನ್ಸ್‌ನಲ್ಲಿ ಜುಲೈ 14 ರಂದು ನಡೆಯಲಿರುವ ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ತುಕಡಿಯು ಅವರ ಫ್ರೆಂಚ್ ಸಹವರ್ತಿಗಳೊಂದಿಗೆ ಈ ಪರೇಡ್‌ನಲ್ಲಿ ಭಾಗವಹಿಸಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಟ್ರೆಂಡಿಂಗ್​ ಸುದ್ದಿ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

Gold Rate Today: ವಾರಾಂತ್ಯದಲ್ಲಿ ತುಸು ಇಳಿಕೆಯಾದ ಹಳದಿ ಲೋಹದ ಬೆಲೆ; ಶನಿವಾರ ಬೆಳ್ಳಿ ದರ ತಟಸ್ಥ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಫ್ರೆಂಚ್ ಮತ್ತು ಹಿಂದಿ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದು, ಪ್ಯಾರಿಸ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಮೋದಿಯನ್ನು ಸ್ವಾಗತಿಸಲು ಸಂತೋಷಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.

ಫ್ರಾನ್ಸ್‌ನ ಬಾಸ್ಟಿಲ್ ಡೇ ಪರೇಡ್ ಎಂದರೇನು (What is France's Bastille Day parade)

  1. ಫ್ರಾನ್ಸ್‌ನ ರಾಷ್ಟ್ರೀಯ ದಿನ ಜುಲೈ 14. ಫ್ರೆಂಚರು ತಮ್ಮ ಐಕ್ಯತೆ ಸಾರುವ ದಿನಾಚರಣೆ ಇದು. ವಿಶೇಷವಾಗಿ "ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ" ಮೌಲ್ಯಗಳನ್ನು ಎತ್ತಿಹಿಡಿಯುವ ದಿನಾಚರಣೆ. ಈ ಮೌಲ್ಯಗಳ ವಿವರ ರತದ ಸಂವಿಧಾನದ ಪೀಠಿಕೆಯಲ್ಲಿಯೂ ಇದೆ! ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿ ಹೇಳಿದೆ.
  2. ಪ್ಯಾರಿಸ್‌ನ ಕ್ರಾಂತಿಕಾರಿ ದಿನಗಳ ಪೈಕಿ ಇದೂ ಒಂದಾಗಿದೆ. ಈ ದಿನವನ್ನು ಈಗ ರಾಷ್ಟ್ರೀಯ ರಜಾದಿನ ಎಂದು ಘೋಷಿಸಲಾಗಿದೆ, ಜುಲೈ 14 ("ಬಾಸ್ಟಿಲ್ ಡೇ") ಅನ್ನು ಗಂಭೀರ ಮಿಲಿಟರಿ ಮೆರವಣಿಗೆಗಳು ಮತ್ತು ಸುಲಭ ನೃತ್ಯ ಮತ್ತು ಪಟಾಕಿಗಳ ಮಿಶ್ರಣದೊಂದಿಗೆ ಆಚರಿಸಲಾಗುತ್ತದೆ. 1789ರ ಜುಲೈ 14 ರಂದು ಬಾಸ್ಟಿಲ್‌ನಲ್ಲಿ ಆದ ಕ್ರಾಂತಿಯನ್ನು ಫ್ರಾನ್ಸ್‌ನಲ್ಲಿ ಶತಮಾನದಿಂದಾಚೆಗೂ ಸ್ಮರಿಸಲಾಗುತ್ತಿದೆ.
  3. ನವದೆಹಲಿಯ ಕರ್ತವ್ಯ ಪಥದಲ್ಲಿ ಭಾರತದ ಗಣರಾಜ್ಯೋತ್ಸವದ ಮೆರವಣಿಗೆಯಂತೆಯೇ, ಪ್ರತಿ ಬಾಸ್ಟಿಲ್ ಡೇ ಸಂದರ್ಭದಲ್ಲಿ ಪ್ಯಾರಿಸ್‌ನ ಪ್ರಸಿದ್ಧ ಅವೆನ್ಯೂ ಡೆಸ್ ಚಾಂಪ್ಸ್-ಎಲಿಸೀಸ್ ಮಿಲಿಟರಿ ಪರೇಡ್ ಅನ್ನು ಆಯೋಜಿಸಲಾಗುತ್ತದೆ.
  4. ಭಾರತದಲ್ಲಿ ಫ್ರೆಂಚ್ ರಾಷ್ಟ್ರದ ಮುಖ್ಯಸ್ಥರು 1951 ರಿಂದ ಐದು ಬಾರಿ ಗಣರಾಜ್ಯೋತ್ಸವದ ಗೌರವಾನ್ವಿತ ಅತಿಥಿಗಳಾಗಿದ್ದಾರೆ. 2009 ರಲ್ಲಿ ಮನಮೋಹನ್ ಸಿಂಗ್ ನಂತರ ಬಾಸ್ಟಿಲ್ ಡೇಗೆ ಗೌರವಾನ್ವಿತ ಅತಿಥಿಯಾಗಿರುವ 2 ನೇ ಭಾರತೀಯ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ.
  5. ಫ್ರಾನ್ಸ್ ಮತ್ತು ಭಾರತವು ಈ ವರ್ಷ ತಮ್ಮ ಕಾರ್ಯತಂತ್ರದ ಪಾಲುದಾರಿಕೆಯ 25 ವರ್ಷಗಳನ್ನು ಆಚರಿಸುತ್ತಿರುವ ಕಾರಣ ಪ್ಯಾರಿಸ್‌ನಲ್ಲಿ ಪ್ರಧಾನಿ ಮೋದಿಯವರ ಉಪಸ್ಥಿತಿಯು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಪ್ಯಾರಿಸ್‌ನಲ್ಲಿ ನಡೆಯುವ ಸೇನಾ ಪರೇಡ್‌ನಲ್ಲಿ ಭಾರತ ಮತ್ತು ಫ್ರೆಂಚ್ ಪಡೆಗಳು ಅಕ್ಕಪಕ್ಕದಲ್ಲಿ ಸಾಗಲಿವೆ ಎಂದು ಭಾರತದಲ್ಲಿನ ಫ್ರೆಂಚ್ ರಾಯಭಾರ ಕಚೇರಿ ತಿಳಿಸಿದೆ.

ಪ್ಯಾರಿಸ್‌ ತಲುಪಿದ ನಂತರ ಪ್ರಧಾನಿ ಮೋದಿ ಟ್ವೀಟ್‌

ಪ್ಯಾರಿಸ್‌ನಲ್ಲಿ ಬಂದಿಳಿದರು. ಈ ಭೇಟಿಯ ಸಮಯದಲ್ಲಿ ಭಾರತ-ಫ್ರಾನ್ಸ್ ಸಹಕಾರವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ. ಇಂದು ನನ್ನ ವಿವಿಧ ಕಾರ್ಯಕ್ರಮಗಳು ಸಂಜೆಯ ನಂತರ ಭಾರತೀಯ ಸಮುದಾಯದೊಂದಿಗೆ ಸಂವಾದವನ್ನು ಒಳಗೊಂಡಿವೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ವ್ಯಾಪಕ ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ. ಫ್ರೆಂಚ್ ರಾಷ್ಟ್ರೀಯ ದಿನಾಚರಣೆಗೆ ಗೌರವ ಅತಿಥಿಯಾಗಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ ತಲುಪಿದ ನಂತರ ಅಲ್ಲಿನ ಕೆಲವು ಫೋಟೋಗಳನ್ನು ಟ್ವೀಟ್‌ ಮೂಲಕ ಶೇರ್‌ ಮಾಡಿಕೊಂಡಿದ್ದಾರೆ. ಇಲ್ಲಿದೆ ಅವರಿಗೆ ಸಿಕ ಸ್ವಾಗತದ ಕ್ಷಣಗಳ ಫೋಟೋಸ್..‌

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ