logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Xi Jinping: 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಸಿ ಜಿನ್‌ಪಿಂಗ್:‌ ಸರ್ವಶಕ್ತ ನಾಯಕನ ಮುಂದಿರುವ ಸವಾಲುಗಳೇನು?

Xi Jinping: 3ನೇ ಅವಧಿಗೆ ಚೀನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಸಿ ಜಿನ್‌ಪಿಂಗ್:‌ ಸರ್ವಶಕ್ತ ನಾಯಕನ ಮುಂದಿರುವ ಸವಾಲುಗಳೇನು?

HT Kannada Desk HT Kannada

Mar 10, 2023 04:18 PM IST

ಕ್ಸಿ ಜಿನ್‌ಪಿಂಗ್

    • ಕ್ಸಿ ಜಿನ್‌ಪಿಂಗ್ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಕ್ಸಿ ಜಿನ್‌ಪಿಂಗ್‌ ಡ್ರ್ಯಾಗನ್‌ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ. ಸತತ ಮೂರು ಅವಧಿಗೆ ಚೀನಾದ ಅಧ್ಯಕ್ಷರಾಗುವ ಮೂಲಕ, ಕ್ಸಿ ಜಿನ್‌ಪಿಂಗ್‌ ಕಮ್ಯೂನಿಸ್ಟ್‌ ಚೀನಾದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕ್ಸಿ ಜಿನ್‌ಪಿಂಗ್
ಕ್ಸಿ ಜಿನ್‌ಪಿಂಗ್ (AFP)

ಬೀಜಿಂಗ್: ಕ್ಸಿ ಜಿನ್‌ಪಿಂಗ್ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮುಂದಿನ ಐದು ವರ್ಷಗಳ ಕಾಲ ಕ್ಸಿ ಜಿನ್‌ಪಿಂಗ್‌ ಡ್ರ್ಯಾಗನ್‌ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ. ಸತತ ಮೂರು ಅವಧಿಗೆ ಚೀನಾದ ಅಧ್ಯಕ್ಷರಾಗುವ ಮೂಲಕ, ಕ್ಸಿ ಜಿನ್‌ಪಿಂಗ್‌ ಕಮ್ಯೂನಿಸ್ಟ್‌ ಚೀನಾದ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಿರುಮಲ ತಿರುಪತಿ ಶ್ರೀವಾರಿ ಆರ್ಜಿತ ಸೇವಾ ದರ್ಶನ ಟಿಕೆಟ್ ಬಿಡುಗಡೆ, ಆಗಸ್ಟ್‌ ತಿಂಗಳ ಕೋಟಾ ಹಂಚಿಕೆಗೆ ಅರ್ಜಿ ಸಲ್ಲಿಕೆ ಶುರು

Gold Rate Today: ತುಸು ಇಳಿಕೆಯ ಬೆನ್ನಲ್ಲೇ ಭಾನುವಾರ ದುಪ್ಪಟ್ಟು ಏರಿಕೆಯಾಯ್ತು ಬಂಗಾರದ ಬೆಲೆ; ಇಂದು ಬೆಳ್ಳಿ ದರವೂ ಹೆಚ್ಚಳ

ಫೋರ್ಬ್ಸ್‌ 30 ಅಂಡರ್ 30 ಏಷ್ಯಾ ಲಿಸ್ಟ್‌ನಲ್ಲಿ ಐವರು ಬೆಂಗಳೂರಿಗರು, ಯುವ ಸಾಧಕರ ವಿವರ ಹೀಗಿದೆ

ಸಾಯಿ ಬಾಬಾ ಮತ್ತೆ ಹುಟ್ಟಿದ್ರಾ, ಈ ಬಾಲಕ ಅವರ ಪುನರವತಾರವೇ, ಏನಿದು ವಿದೇಶೀಯರ ವರ್ತನೆ! - ವೈರಲ್ ವಿಡಿಯೋ

ಕಳೆದ ಅಕ್ಟೋಬರ್‌ನಲ್ಲಿ ಚೀನಾದ ಕಮ್ಯೂನಿಸ್ಟ್ ಪಕ್ಷ (CCP)ದ ಮುಖ್ಯಸ್ಥರಾಗಿ ಕ್ಸಿ ಜಿನ್‌ಪಿಂಗ್‌ ಮರುಆಯ್ಕೆಗೊಂಡಿದ್ದರು. ಅದೇ ರೀತಿ ಸಿಸಿಪಿಯು 69 ವರ್ಷದ ಕ್ಸಿ ಜಿನ್‌ಪಿಂಗ್ ಅವರ ಅಧ್ಯಕ್ಷ ಅವಧಿಯನ್ನೂ ವಿಸ್ತರಿಸುವ ಒಕ್ಕೊರಲಿನ ನಿರ್ಣಯ ಕೈಗೊಂಡಿತ್ತು. ಈ ನಿರ್ಣಯಕ್ಕೆ ಇಂದು ಅಂತಿಮ ಮುದ್ರೆ ಒತ್ತಲಾಗಿದ್ದು, ಕ್ಸಿ ಜಿನ್‌ಪಿಂಗ್‌ ಸತತ ಮೂರನೇ ಬಾರಿಗೆ ಚೀನಾದ ಅಧ್ಯಕ್ಷರಾಗಿ ದೇಶವನ್ನು ಮುನ್ನಡೆಸಲಿದ್ದಾರೆ.

ಕ್ಸಿ ಜಿನ್‌ಲಿಂಗ್‌ ಸಿಸಿಪಿ, ಚೀನಾದ ಅಧ್ಯಕ್ಷ ಗಾದಿಯ ಜೊತೆಗೆ ದೇಶದ ಕೇಂದ್ರ ಮಿಲಿಟರಿ ಆಯೋಗದ ಮುಖ್ಯಸ್ಥರಾಗಿಯೂ ಮರು ನೇಮಕಗೊಂಡಿದ್ದಾರೆ. ಅಂದರೆ ಪಿಎಲ್‌ಎ ಮುಖ್ಯಸ್ಥರಾಗಿಯೂ ಕ್ಸಿ ಜಿನ್‌ಪಿಂಗ್‌ ಅಧಿಕಾರ ಚಲಾಯಿಸಲಿದ್ದಾರೆ. ಪಿಎಲ್‌ಎ ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನಾ ಪಡೆಗಳ ಪೈಕಿ ಇಂದು ಎಂಬುದು ಇಲ್ಲಿ ಉಲ್ಲೇಖನೀಯ.

ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ, ಸಿಸಿಪಿ ಸದಸ್ಯರ ಎಲ್ಲಾ 2,952 ಮತಗಳು ಕ್ಸಿ ಜಿನ್‌ಪಿಂಗ್‌ ಅವರಿಗೆ ಮತ್ತೊಂದು ಅವಧಿಗೆ ಚೀನಾದ ನೇತೃತ್ವ ನೀಡುವ ನಿರ್ಣಯದ ಪರ ಚಲಾಯಿಸಲ್ಪಟ್ಟವು. ಈ ಸರ್ವಾನುಮತದ ಪ್ರದರ್ಶನದಲ್ಲಿ ಚೀನಿ ಸಂವಿಧಾನದ ಪ್ರತಿನಿಧಿಗಳು, ನಿಷ್ಠೆಯ ಉತ್ಕಟ ಘೋಷಣೆಗಳನ್ನು ಮೊಳಗಿಸಿ ಕ್ಸಿ ಜಿನ್‌ಪಿಂಗ್‌ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

"ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಸಂವಿಧಾನಕ್ಕೆ ನಿಷ್ಠವಾಗಿರಲು, ಸಂವಿಧಾನದ ಅಧಿಕಾರವನ್ನು ಎತ್ತಿಹಿಡಿಯಲು, ನನ್ನ ಶಾಸನಬದ್ಧ ಜವಾಬ್ದಾರಿಗಳನ್ನು ನಿರ್ವಹಿಸಲು, ಮಾತೃಭೂಮಿಗೆ ನಿಷ್ಠವಾಗಿರಲು, ಜನರಿಗೆ ನಿಷ್ಠವಾಗಿರಲು ನಾನು ಪ್ರತಿಜ್ಞೆ ಮಾಡುತ್ತೇನೆ.." ಎಂದು ಕ್ಸಿ ಜಿನ್‌ಪಿಂಗ್‌ ಇದೇ ವೇಳೆ ಪ್ರತಿಜ್ಞೆ ಸ್ವೀಕರಿಸಿದರು.

ಕ್ಸಿ ಜಿನ್‌ಪಿಂಗ್‌ ಮೂರನೇ ಅವಧಿಗೆ ಚೀನಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಷಣಗಳನ್ನು, ಚೀನಾದ ಸರ್ಕಾರಿ ಸುದ್ದಿವಾಹಿನಿ ನೇರ ಪ್ರಸಾರ ಮಾಡಿತು. "ಸಮೃದ್ಧ, ಬಲವಾದ, ಪ್ರಜಾಪ್ರಭುತ್ವ, ಸುಸಂಸ್ಕೃತ, ಸಾಮರಸ್ಯ ಮತ್ತು ಶ್ರೇಷ್ಠ ಆಧುನಿಕ ಸಮಾಜವಾದಿ ದೇಶವನ್ನು ನಿರ್ಮಿಸಲು ನಾನು ಬದ್ಧ.." ಎಂದು ಕ್ಸಿ ಜಿನ್‌ಪಿಂಗ್‌ ಇದೇ ವೇಳೆ ಘೋಷಣೆ ಮಾಡಿದರು.

2018ರಲ್ಲಿ ಚೀನಾ ಅಧ್ಯಕ್ಷ ಅವಧಿಯ ಮಿತಿಯನ್ನು ರದ್ದುಗೊಳಿಸಿದ ಕ್ಸಿ ಜಿನ್‌ಪಿಂಗ್‌, ಸಿಸಿಪಿಯಲ್ಲಿ ವ್ಯಕ್ತಿ ಆರಾಧನೆಯ ಮನೋಭಾವನೆ ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂಬ ಸಾಮಾನ್ಯ ಆರೋಪ ಕೇಳಿಬರುತ್ತದೆ.

ಆದರೆ ಕ್ಸಿ ಜಿನ್‌ಪಿಂಗ್‌ ಅವರ ಅಭೂತಪೂರ್ವ ಮೂರನೇ ಅವಧಿಯ ಆರಂಭವು, ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯು ನಿಧಾನಗತಿಯ ಬೆಳವಣಿಗೆಯ ಸವಾಲನ್ನು ಎದುರಿಸಲಿದೆ. ಅಲ್ಲದೇ ದೇಶದಲ್ಲಿ ಜನನ ದರ ಇಳಿಕೆಯಂತಹ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಸವಾಲು ಕೂಡ ಕ್ಸಿ ಜಿನ್‌ಪಿಂಗ್‌ ಅವರ ಮುಂದಿದೆ.

ಇಷ್ಟೇ ಅಲ್ಲದೇ ಅಮೆರಿಕದೊಂದಿಗಿನ ಚೀನಾದ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದು, ಸಂಬಂಧ ಸುಧಾರಣೆಗೆ ಕ್ಸಿ ಜಿನ್‌ಪಿಂಗ್‌ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲಿ ಮೂಡಿದೆ. ಜಾಗತಿಕ ವೇದಿಕೆಯಲ್ಲಿ ಚೀನಾವನ್ನು ಹೆಚ್ಚು ದೃಢವಾಗಿ ನೋಡುವ ಮತ್ತು ಅದರ ನಿರೂಪಣೆಯನ್ನು ಒಪ್ಪಿಕೊಳ್ಳಬೇಕೆಂಬ ಕ್ಸಿ ಜಿನ್‌ಪಿಂಗ್‌ ಅವರ ಹಠ, ಅಮೆರಿಕ ಹಾಗೂ ಚೀನಾದ ಸಂಬಂಧ ಹದಗೆಡಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇಷ್ಟೇ ಅಲ್ಲದೇ ನೆರೆಯ ಭಾರತದೊಂದಿಗೂ ಚೀನಾದ ಸಂಬಧಂ ಹಳಸಿದ್ದು, ಪ್ರಮುಖವಾಗಿ ಗಡಿ ಸಮಸ್ಯೆಯನ್ನು ಶಾಂತಿಯುತ ರಾಜತಾಂತ್ರಿಕ ಮಾತುಕತೆಗಳಿಂದ ಬಗೆಹರಿಸುವ ಇಚ್ಛಾಶಕ್ತಿಯನ್ನು ಕ್ಸಿ ಜಿನ್‌ಪಿಂಗ್‌ ಪ್ರದರ್ಶಿಸಬೇಕಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ