logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Anju Prabhakar Photos: ಟೈಗರ್‌ ಪ್ರಭಾಕರ್‌ ಮೂರನೇ ಪತ್ನಿ ಅಂಜು ಹಾಗೂ ಮಗನನ್ನು ನೋಡಿದ್ದೀರಾ... ಇಲ್ಲಿವೆ ನೋಡಿ ಫೋಟೋಗಳು!

Anju Prabhakar Photos: ಟೈಗರ್‌ ಪ್ರಭಾಕರ್‌ ಮೂರನೇ ಪತ್ನಿ ಅಂಜು ಹಾಗೂ ಮಗನನ್ನು ನೋಡಿದ್ದೀರಾ... ಇಲ್ಲಿವೆ ನೋಡಿ ಫೋಟೋಗಳು!

Feb 17, 2023 08:42 PM IST

ಸ್ಯಾಂಡಲ್‌ವುಡ್‌ ನಟ ಟೈಗರ್‌ ಪ್ರಭಾಕರ್‌, ತಮ್ಮ ಖಡಕ್‌ ಧ್ವನಿ, ವಿಬಿನ್ನ ಮ್ಯಾನರಿಸಂ, ನಟನೆ, ಆಕ್ಷನ್‌ನಿಂದಲೇ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದರು. ಸಿನಿಮಾ ರಂಗದಲ್ಲಿ ದೊಡ್ಡ ಸಾಧನೆ ಮಾಡಿ ಯಶಸ್ಸು ಕಂಡರೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರು. 

  • ಸ್ಯಾಂಡಲ್‌ವುಡ್‌ ನಟ ಟೈಗರ್‌ ಪ್ರಭಾಕರ್‌, ತಮ್ಮ ಖಡಕ್‌ ಧ್ವನಿ, ವಿಬಿನ್ನ ಮ್ಯಾನರಿಸಂ, ನಟನೆ, ಆಕ್ಷನ್‌ನಿಂದಲೇ ಲಕ್ಷಾಂತರ ಅಭಿಮಾನಿಗಳ ಪ್ರೀತಿ ಸಂಪಾದಿಸಿದ್ದರು. ಸಿನಿಮಾ ರಂಗದಲ್ಲಿ ದೊಡ್ಡ ಸಾಧನೆ ಮಾಡಿ ಯಶಸ್ಸು ಕಂಡರೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದರು. 
 1974 ರಲ್ಲಿ ಪ್ರಭಾಕರ್‌ ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾದರು. ಅವರೊಂದಿಗೆ ವಿಚ್ಛೇದನದ ನಂತರ 1985ರಲ್ಲಿ ನಟಿ ಜಯಮಾಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಕೆಲವು ದಿನಗಳ ನಂತರ ಈ ಸಂಬಂಧದಲ್ಲಿ ಕೂಡಾ ಬಿರುಕು ಮೂಡುತ್ತದೆ. ಕೊನೆಗೆ ಅವರು ರೇಂಜರ್‌ ಚಿತ್ರದ ಸಹನಟಿ ಅಂಜು ಅವರನ್ನು ಮದುವೆಯಾದರು. 
(1 / 12)
 1974 ರಲ್ಲಿ ಪ್ರಭಾಕರ್‌ ಆಲ್ಫೋನ್ಸೋ ಮೇರಿ ಅವರನ್ನು ಮದುವೆಯಾದರು. ಅವರೊಂದಿಗೆ ವಿಚ್ಛೇದನದ ನಂತರ 1985ರಲ್ಲಿ ನಟಿ ಜಯಮಾಲಾ ಅವರನ್ನು ಪ್ರೀತಿಸಿ ಮದುವೆಯಾದರು. ಆದರೆ ಕೆಲವು ದಿನಗಳ ನಂತರ ಈ ಸಂಬಂಧದಲ್ಲಿ ಕೂಡಾ ಬಿರುಕು ಮೂಡುತ್ತದೆ. ಕೊನೆಗೆ ಅವರು ರೇಂಜರ್‌ ಚಿತ್ರದ ಸಹನಟಿ ಅಂಜು ಅವರನ್ನು ಮದುವೆಯಾದರು. (PC: Anju Prabhakar)
ಮೊದಲ ಎರಡು ಮದುವೆಯಂತೆ ಮೂರನೇ ಮದುವೆ ಕೂಡಾ ಹೆಚ್ಚು ದಿನ ಉಳಿಯಲಿಲ್ಲ. ಒಂದೂವರೆ ವರ್ಷ ಜೊತೆಗಿದ್ದ ನಂತರ ಅಂಜು ಕೂಡಾ ಪ್ರಭಾಕರ್‌ ಅವರಿಂದ ದೂರಾದರು. 
(2 / 12)

ಅಂಜು ಮೂಲತ: ತಮಿಳುನಾಡಿನವರು. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದವರು. 17 ವರ್ಷ ತುಂಬುವಷ್ಟರಲ್ಲಿ ಅವರು ತಮಿಳು, ತೆಲುಗು, ಮಲಯಾಳಂ ಚಿತ್ರರಂದಲ್ಲಿ ಸ್ಟಾರ್‌ ನಟಿಯಾಗಿ ಹೆಸರು ಮಾಡಿದ್ದರು. ಸ್ಟಾರ್‌ ನಟರೊಂದಿಗೆ ನಟಿಸಿದ್ದರು. 
(3 / 12)

ಅಂಜು ಹಾಗೂ ಪ್ರಭಾಕರ್‌ ದಂಪತಿಗೆ ಒಬ್ಬ ಮಗ ಇದ್ಧಾರೆ ಎಂಬುದು ಬಹಳ ಜನರಿಗೆ ಗೊತ್ತಿಲ್ಲ. ಇವರ ಹೆಸರು ಅರ್ಜುನ್‌ ಪ್ರಭಾಕರ್
(4 / 12)

ಅರ್ಜುನ್‌ ಪ್ರಭಾಕರ್‌ ಬಾಲ್ಯದ ಫೋಟೋ. ಅರ್ಜುನ್‌ ಜೊತೆಗಿರುವವರು ಅಂಜು ತಾಯಿ ರತ್ನ. 
(5 / 12)
ಅರ್ಜುನ್‌ ಪ್ರಭಾಕರ್‌ ಬಾಲ್ಯದ ಫೋಟೋ. ಅರ್ಜುನ್‌ ಜೊತೆಗಿರುವವರು ಅಂಜು ತಾಯಿ ರತ್ನ. 
ಮಗ ಅರ್ಜುನ್‌ಗೆ ಮುತ್ತಿಡುತ್ತಿರುವ ಅಂಜು. ಅರ್ಜುನ್‌ ಎರಡು ತಿಂಗಳ ಮಗುವಿದ್ದಾಗ ತೆಗೆದ ಫೋಟೋ ಇದು
(6 / 12)

ಅರ್ಜುನ್‌ ಮೂರು ತಿಂಗಳ ಮಗುವಾಗಿದ್ದಾಗಲೇ ಅಂಜು, ಮಗನನ್ನು ಕರೆದುಕೊಂಡು ಬೆಂಗಳೂರು ಬಿಟ್ಟು ಚೆನ್ನೈಗೆ ಬಂದರು. ನಂತರ ಅಲ್ಲಿಂದ ವೈನಾಡಿಗೆ ತೆರಳಿ 10 ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. 
(7 / 12)

ಮಗನಿಗೆ ತಂದೆಯ ಪ್ರೀತಿ ಸಿಗಲಿಲ್ಲ. ನಾನು ಪ್ರಭಾಕರ್‌ ಅವರನ್ನು ಪ್ರೀತಿಸಿದಾಗ ಎಲ್ಲವೂ ಸರಿ ಇತ್ತು. ಆದರೆ ನಂತರ ನಮ್ಮಿಬ್ಬರ ಸಂಬಂಧ ಹಾಳಾಯ್ತು. ನಾನು ಎಷ್ಟು ಪ್ರೀತಿ ತೋರಿದರೂ, ಎಷ್ಟು ತ್ಯಾಗ ಮಾಡಿದರೂ ಪ್ರಭಾಕರ್‌ ನನ್ನನ್ನು ಅರ್ಥ ಮಾಡಿಕೊಳ್ಳಲಿಲ್ಲ. ಒಂದೂವರೆ ವರ್ಷ ತಾಳ್ಮೆಯಿಂದ ಅವರೊಂದಿಗೆ ಇದ್ದೆ. ಆದರೆ ನಂತರ ಸಾಧ್ಯವಾಗಲಿಲ್ಲ. ಅವರನ್ನು ಬಿಟ್ಟು ಬರಲೇಬೇಕಾಯ್ತು ಎಂದು ಅಂಜು ಅನೇಕ ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ. 
(8 / 12)

ಅರ್ಜುನ್‌ಗಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ಅಂಜು ಈಗ ಮತ್ತೆ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದ್ದಾರೆ. ನಾಯಕಿಯಾಗಿ ಮಿಂಚಿದ್ದ ಈ ಚೆಲುವೆ ಈಗ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾವೊಂದರಲ್ಲಿ ಅಂಜು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಈ ಸಿನಿಮಾ ಕೆಲವೇ ದಿನಗಳಲ್ಲಿ ಸೆಟ್ಟೇರಲಿದೆ. 
(9 / 12)

ಅರ್ಜುನ್‌ ಪ್ರಭಾಕರ್‌ ಫುಟ್‌ಬಾಲ್‌ ಆಟಗಾರ. 6ನೇ ತರಗತಿಯಿಂದ ಫುಟಬಾಲ್‌ನಲ್ಲಿ ತೊಡಗಿಸಿಕೊಂಡಿರುವ ಅರ್ಜುನ್‌, ಕೋಚ್‌ ಆಗಿದ್ದಾರೆ. ಸದ್ಯಕ್ಕೆ ಅಮೆರಿಕದ ಕಂಪನಿಯೊಂದಕ್ಕೆ ತರಬೇತಿ ನೀಡುತ್ತಿದ್ದಾರೆ. 
(10 / 12)

ಅರ್ಜುನ್‌ಗೆ ಅಂಜು ಅವರೇ ಅಪ್ಪ- ಅಮ್ಮ ಎಲ್ಲಾ. ತಂದೆಯನ್ನು ನೋಡದಿದ್ದರೂ ಅರ್ಜುನ್‌ ಪ್ರತಿ ವರ್ಷ ಪ್ರಭಾಕರ್‌ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿಯಂದು ಚರ್ಚ್‌ಗೆ ತೆರಳಿ ಕ್ಯಾಂಡಲ್‌ ಹಚ್ಚಿ, ಬಡವರಿಗೆ ಅನ್ನದಾನ ಮಾಡಿ ಬರುತ್ತಾರಂತೆ. ಬಾಲ್ಯದಲ್ಲಿದ್ದಾಗ ಅಜ್ಜಿ ಹೇಳಿಕೊಟ್ಟಿದ್ದನ್ನು ಅರ್ಜುನ್‌ ಇಂದಿಗೂ ಫಾಲೋ ಮಾಡುತ್ತಿದ್ದಾರೆ. 
(11 / 12)

ಬೆಂಗಳೂರಿನಿಂದ ಬರುವಾಗ ನಾನು ಪ್ರಭಾಕರ್‌ ಅವರಿಂದ ಹಣ, ಆಸ್ತಿ ತೆಗೆದುಕೊಂಡು ಬಂದೆ ಎಂಬ ಆರೋಪ ಇದೆ. ಆದರೆ ನಾನು ನನ್ನ ಮಗನನ್ನು ಹೊರತುಪಡಿಸಿ ಅಲ್ಲಿಂದ ಏನೂ ತರಲಿಲ್ಲ. ಬದಲಿಗೆ ನನ್ನ ಬೆಲೆ ಬಾಳುವ ಅನೇಕ ವಸ್ತುಗಳನ್ನು ಅಲ್ಲಿ ಬಿಟ್ಟುಬಂದೆ. ಅಪ್ಪ-ಅಮ್ಮನ ರಬ್ಬರ್‌, ಕಾಫಿ ಪ್ಲಾಂಟೇಶನ್‌ ನೋಡಿಕೊಂಡಿದ್ದೆ, ಈಗ ಮತ್ತೆ ಸಿನಿಮಾದಲ್ಲಿ, ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ಕನ್ನಡ ಸಿನಿಮಾಗಳಲ್ಲಿ ಅವಕಾಶ ದೊರೆತರೆ ಮತ್ತೆ ನಟಿಸುತ್ತೇನೆ ಎಂದು ಅಂಜು ಮನದಾಸೆಯನ್ನು ಹೇಳಿಕೊಂಡಿದ್ದಾರೆ. 
(12 / 12)

    ಹಂಚಿಕೊಳ್ಳಲು ಲೇಖನಗಳು