logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -Tdp Janasena Alliance

ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -TDP Janasena Alliance

Feb 24, 2024 06:08 PM IST

ಟಿಡಿಪಿ, ಜನಸೇನಾ ಮೈತ್ರಿ ಆಂಧ್ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿವೆ. 94 ಕ್ಷೇತ್ರಗಳಲ್ಲಿ ಟಿಡಿಪಿ, 24 ಕ್ಷೇತ್ರಗಳಲ್ಲಿ ಜನಸೇನಾ ಸ್ಪರ್ಧಿಸಲಿದೆ. ನಾಯ್ಡು ಅವರ ಈ ಪ್ಲಾನ್ ವರ್ಕೌಟ್ ಆಗುತ್ತಾ ಕಾದುನೋಡಬೇಕು.

  • ಟಿಡಿಪಿ, ಜನಸೇನಾ ಮೈತ್ರಿ ಆಂಧ್ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿವೆ. 94 ಕ್ಷೇತ್ರಗಳಲ್ಲಿ ಟಿಡಿಪಿ, 24 ಕ್ಷೇತ್ರಗಳಲ್ಲಿ ಜನಸೇನಾ ಸ್ಪರ್ಧಿಸಲಿದೆ. ನಾಯ್ಡು ಅವರ ಈ ಪ್ಲಾನ್ ವರ್ಕೌಟ್ ಆಗುತ್ತಾ ಕಾದುನೋಡಬೇಕು.
ಆಂಧ್ರ ಪ್ರದೇಶದ ವಿಧಾನಸಭೆ ಚುನವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು (ಫೆಬ್ರವರಿ 24, ಶನಿವಾರ) ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 
(1 / 7)

ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರ ಮೈತ್ರಿ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಶತಪ್ರಯತ್ನ ನಡೆಸುತ್ತಿದ್ದಾರೆ. ಈಗಾಲೇ 118 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ. 
(2 / 7)

118 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎರಡೂ ಪಕ್ಷಗಳಿಗೆ ಆದ್ಯತೆ ನೀಡಲಾಗಿದೆ, ಹೆಚ್ಚಾಗಿ ಹೊಸ ಅಭ್ಯರ್ಥಿಗಳು, ಯುವಕರು, ಹಿಂದುಳಿದ ವರ್ಗ, ಎಸ್ಸಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.
(3 / 7)

ಮೊದಲ ಪಟ್ಟಿಯಲ್ಲಿ 94 ಅಭ್ಯರ್ಥಿಗಳು ತೆಲುಗು ದೇಶಂ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ 24 ಸ್ಥಾನಗಳಲ್ಲಿ ಜನಸೇನಾ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಪೈಕಿ 5 ಕ್ಷೇತ್ರಗಳಿಗೆ ಹೆಸರುಗಳನ್ನು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 28 ಅಭ್ಯರ್ಥಿಗಳು, ಪದವಿ ಪಡೆದ 50 ಅಭ್ಯರ್ಥಿಗಳು, ಮೂವರು ವೈದ್ಯರು, ಇಬ್ಬರು ಪಿಎಚ್‌ಡಿ ಹಾಗೂ ಓರ್ವ ಐಎಎಸ್ ಅಧಿಕಾರಿ ಇದ್ದಾರೆ.
(4 / 7)

ಅಭ್ಯರ್ಥಿಗಳ ಆಯ್ಕೆಯಲ್ಲಿ ಮೈತ್ರಿ ಪಕ್ಷಗಳು  ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚಂದ್ರಬಾಬು ಮತ್ತು ಪವನ್ ಹೇಳಿದ್ದಾರೆ. ರಾಜ್ಯಾದ್ಯಂತ 1 ಕೋಟಿ 3 ಲಕ್ಷ 33 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಧಾನಸಭೆಯಲ್ಲಿ ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳು ಮತ್ತು ಧ್ವನಿಗಳನ್ನು ಎತ್ತುವವರಿಗೆ ಈ ಪಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
(5 / 7)

ಚಂದ್ರಬಾಬು ನಾಯ್ಡು ಅವರು ಟಿಡಿಪಿಯಿಂದ 94 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ತೆಕ್ಕಲಿಯಿಂದ ಕಿಂಜರಾಪು ಅಚ್ಚನಾಯ್ಡು, ಮಂಗಳಗಿರಿಯಿಂದ ನಾರಾ ಲೋಕೇಶ್, ಹಿಂದೂಪುರದಿಂದ ನಟ ಹಾಗೂ ಹಾಲಿ ಶಾಸಕ ನಂದಮೂರಿ ಬಾಲಕೃಷ್ಣ ಮತ್ತು ಕುಪ್ಪಂನಿಂದ ನಾರಾ ಚಂದ್ರಬಾಬು ನಾಯ್ಡು ಸ್ಪರ್ಧಿಸಲಿದ್ದಾರೆ.
(6 / 7)

ಟಾಲಿವುಡ್‌ನ ಜನಪ್ರಿಯ ನಟರಾದ ಪವನ್ ಕಲ್ಯಾಣ್ 2014ರ ಮಾರ್ಚ್ 14 ರಂದು ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಅಂದಿನಿಂದ ಈವರೆಗೆ ಸುಮಾರು 1 ದಶಕದಿಂದ ರಾಜಕೀಯದಲ್ಲಿದ್ದರೂ ಗಳಿಸಿದ್ದಕ್ಕಿಂತ ಹೆಚ್ಚು ನಷ್ಟವನ್ನೇ ಕಂಡಿದ್ದಾರೆ. ಇವರ ಪಕ್ಷದಿಂದ ಇದುವರೆಗೆ ಒಬ್ಬ ಶಾಸನನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಟಿಡಿಪಿ 2024ರ ವಿಧಾನಸಭೆ ಚುನಾವಣೆಗೆ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, 24 ವಿಧಾನಸಭೆ ಹಾಗೂ 3 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ. 
(7 / 7)

    ಹಂಚಿಕೊಳ್ಳಲು ಲೇಖನಗಳು