logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Asia Cup 2023: ನೇಪಾಳದ ವಿರುದ್ಧ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಭಾರತ; ಫೋಟೋಸ್

Asia cup 2023: ನೇಪಾಳದ ವಿರುದ್ಧ ಗೆಲುವಿನೊಂದಿಗೆ ನಾಲ್ಕರ ಘಟ್ಟಕ್ಕೆ ಭಾರತ; ಫೋಟೋಸ್

Sep 05, 2023 09:37 AM IST

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಲು ಮಳೆ ಅವಕಾಶ ನೀಡಿತ್ತು. ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 230 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಇನ್ನಿಂಗ್ಸ್‌ಗೆ ಮಳೆ ಅಡ್ಡಿಯ ನಡುವೆ ಡಿಎಲ್‌ಎಸ್ ನಿಯಮದಡಿ 10 ವಿಕೆಟ್‌ಗಳ ಗೆಲುವು ಪಡೆದು ಸೂಪರ್-4 ಸುತ್ತಿಗೆ ಪ್ರವೇಶಿಸಿದೆ.

ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾ ಗೆಲುವಿನ ಶುಭಾರಂಭ ಮಾಡಲು ಮಳೆ ಅವಕಾಶ ನೀಡಿತ್ತು. ನೇಪಾಳ ವಿರುದ್ಧದ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ 230 ರನ್‌ಗಳಿಗೆ ಆಲೌಟ್‌ ಆಗಿತ್ತು. ಭಾರತ ಇನ್ನಿಂಗ್ಸ್‌ಗೆ ಮಳೆ ಅಡ್ಡಿಯ ನಡುವೆ ಡಿಎಲ್‌ಎಸ್ ನಿಯಮದಡಿ 10 ವಿಕೆಟ್‌ಗಳ ಗೆಲುವು ಪಡೆದು ಸೂಪರ್-4 ಸುತ್ತಿಗೆ ಪ್ರವೇಶಿಸಿದೆ.
ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧದ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಂಡಿದ್ದು ಹೀಗೆ.
(1 / 6)
ಏಷ್ಯಾಕಪ್‌ನಲ್ಲಿ ನೇಪಾಳ ವಿರುದ್ಧದ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಂಡಿದ್ದು ಹೀಗೆ.(AFP)
ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ-ನೇಪಾಳ ನಡುವಿನ ಪಂದ್ಯ ನಡೆಯಿತು. ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ನಾಯಕ ರೋಹಿತ್ ಶರ್ಮಾ ಮಳೆ ಬೀಳುತ್ತಿರುವುದನ್ನು ಅಂಪೈರ್‌ಗಳ ಗಮನಕ್ಕೆ ತಂದರು.
(2 / 6)
ಶ್ರೀಲಂಕಾದ ಕ್ಯಾಂಡಿಯಲ್ಲಿರುವ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಭಾರತ-ನೇಪಾಳ ನಡುವಿನ ಪಂದ್ಯ ನಡೆಯಿತು. ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿತು. ನಾಯಕ ರೋಹಿತ್ ಶರ್ಮಾ ಮಳೆ ಬೀಳುತ್ತಿರುವುದನ್ನು ಅಂಪೈರ್‌ಗಳ ಗಮನಕ್ಕೆ ತಂದರು.(AFP)
ಮಳೆಯಿಂದಾಗಿ ಪಂದ್ಯ ಕೆಲ ನಿಮಿಷಗಳ ಕಾಲ ಸ್ಥಗಿತವಾಗಿತ್ತು. ಪಂದ್ಯ ಆರಂಭವಾಗುತ್ತೆ ಅಂತ ಅಭಿಮಾನಿಗಳು ಪಲ್ಲೆಕೆಲೆ ಮೈದಾನದಲ್ಲಿ ಕಾದು ಕುಳಿತಿದ್ದರು.
(3 / 6)
ಮಳೆಯಿಂದಾಗಿ ಪಂದ್ಯ ಕೆಲ ನಿಮಿಷಗಳ ಕಾಲ ಸ್ಥಗಿತವಾಗಿತ್ತು. ಪಂದ್ಯ ಆರಂಭವಾಗುತ್ತೆ ಅಂತ ಅಭಿಮಾನಿಗಳು ಪಲ್ಲೆಕೆಲೆ ಮೈದಾನದಲ್ಲಿ ಕಾದು ಕುಳಿತಿದ್ದರು.(AP)
ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಲಾ ಅರ್ಧ ಶತಕಗಳ ಸಿಡಿಸಿ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟರು. ರೋಹಿತ್ ಶರ್ಮಾ 59 ಎಸೆತಗಳಿಂದ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಸೇರಿ 74 ರನ್ ಗಳಿಸಿದರು. ಗಿಲ್ 62 ಎಸೆತಗಳಿಂದ 8 ಬೌಂಡರಿ ಹಾಗೂ 1 ಸಿಕ್ಸ್ ಸೇರಿ 67 ರನ್ ಸಿಡಿಸಿದರು.
(4 / 6)
ಆರಂಭಿಕ ಬ್ಯಾಟರ್‌ಗಳಾಗಿ ಕಣಕ್ಕಿಳಿದಿದ್ದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ತಲಾ ಅರ್ಧ ಶತಕಗಳ ಸಿಡಿಸಿ ಟೀಂ ಇಂಡಿಯಾಗೆ ಗೆಲುವು ತಂದು ಕೊಟ್ಟರು. ರೋಹಿತ್ ಶರ್ಮಾ 59 ಎಸೆತಗಳಿಂದ 6 ಬೌಂಡರಿ ಹಾಗೂ 5 ಸಿಕ್ಸರ್‌ಗಳು ಸೇರಿ 74 ರನ್ ಗಳಿಸಿದರು. ಗಿಲ್ 62 ಎಸೆತಗಳಿಂದ 8 ಬೌಂಡರಿ ಹಾಗೂ 1 ಸಿಕ್ಸ್ ಸೇರಿ 67 ರನ್ ಸಿಡಿಸಿದರು.(BCCI Twitter)
ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದಾಗ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಶಮಿ ಮೈದಾನದಿಂತ ಡ್ರೆಸ್ಸಿಂಗ್ ರೂಂನತ್ತ ತೆರಳುತ್ತಿರುವುದು. 
(5 / 6)
ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದಾಗ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಶಮಿ ಮೈದಾನದಿಂತ ಡ್ರೆಸ್ಸಿಂಗ್ ರೂಂನತ್ತ ತೆರಳುತ್ತಿರುವುದು. (Cricket Association of Nepal (CA)
ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್. 
(6 / 6)
ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ನೇಪಾಳ ತಂಡದ ನಾಯಕ ರೋಹಿತ್ ಪೌಡೆಲ್. (PTI)

    ಹಂಚಿಕೊಳ್ಳಲು ಲೇಖನಗಳು