logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಂಗ್; ಶಾಹಿದ್ ಅಫ್ರಿದಿ ದಾಖಲೆ ಮುರಿದ ಹಿಟ್​ಮ್ಯಾನ್

ಏಷ್ಯಾಕಪ್​ನಲ್ಲಿ ರೋಹಿತ್ ಶರ್ಮಾ ಸಿಕ್ಸರ್ ಸಿಂಗ್; ಶಾಹಿದ್ ಅಫ್ರಿದಿ ದಾಖಲೆ ಮುರಿದ ಹಿಟ್​ಮ್ಯಾನ್

Sep 14, 2023 01:28 PM IST

Rohit Sharma: ಶ್ರೀಲಂಕಾ ಎದುರಿನ ಪಂದ್ಯದಲ್ಲಿ 2 ಸಿಕ್ಸರ್​​ ಸಿಡಿಸಿ  ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಶಾಹಿದ್ ಅಫ್ರಿದಿ ದಾಖಲೆಯನ್ನೂ ಮುರಿದಿದ್ದಾರೆ.

  • Rohit Sharma: ಶ್ರೀಲಂಕಾ ಎದುರಿನ ಪಂದ್ಯದಲ್ಲಿ 2 ಸಿಕ್ಸರ್​​ ಸಿಡಿಸಿ  ನಾಯಕ ರೋಹಿತ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ. ಇದರೊಂದಿಗೆ ಶಾಹಿದ್ ಅಫ್ರಿದಿ ದಾಖಲೆಯನ್ನೂ ಮುರಿದಿದ್ದಾರೆ.
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಿದೆ. 16 ಆವೃತ್ತಿಗಳ ಪೈಕಿ 11ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.
(1 / 10)
ಏಷ್ಯಾಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್​ಗೇರಿದೆ. 16 ಆವೃತ್ತಿಗಳ ಪೈಕಿ 11ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದೆ.(Getty)
ಸೆಪ್ಟೆಂಬರ್ 12ರಂದು ನಡೆದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು 41 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಈ ಸಾಧನೆ ಮಾಡಿತು.
(2 / 10)
ಸೆಪ್ಟೆಂಬರ್ 12ರಂದು ನಡೆದ ಶ್ರೀಲಂಕಾ ಎದುರಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡವು 41 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿ ಈ ಸಾಧನೆ ಮಾಡಿತು.(Getty)
ಟೀಮ್ ಇಂಡಿಯಾ 49.1 ಓವರ್​​​ಗಳಲ್ಲಿ 213 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ, 41.3 ಓವರ್​​​ಗಳಲ್ಲಿ 172 ರನ್​ಗಳಿಗೆ ಆಲೌಟ್​​ ಆಗಿತ್ತು.
(3 / 10)
ಟೀಮ್ ಇಂಡಿಯಾ 49.1 ಓವರ್​​​ಗಳಲ್ಲಿ 213 ರನ್​ಗಳಿಗೆ ಆಲೌಟ್ ಆಗಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ, 41.3 ಓವರ್​​​ಗಳಲ್ಲಿ 172 ರನ್​ಗಳಿಗೆ ಆಲೌಟ್​​ ಆಗಿತ್ತು.(Getty)
ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 
(4 / 10)
ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ, ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. (Getty)
ಕೊಲಂಬೊದಲ್ಲಿ ನಡೆದ ಏಷ್ಯಾಕಪ್​ನ ಸೂಪರ್​-4 ಹಂತದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಅರ್ಧಶತಕ ಬಾರಿಸಿದರು. 48 ಎಸೆತಗಳಲ್ಲಿ 7 ಬೌಂಡರಿ,  2 ಭರ್ಜರಿ ಸಿಕ್ಸರ್​​ಗಳ ಸಹಾಯದಿಂದ 53 ರನ್ ಬಾರಿಸಿದ್ದರು.
(5 / 10)
ಕೊಲಂಬೊದಲ್ಲಿ ನಡೆದ ಏಷ್ಯಾಕಪ್​ನ ಸೂಪರ್​-4 ಹಂತದಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಅರ್ಧಶತಕ ಬಾರಿಸಿದರು. 48 ಎಸೆತಗಳಲ್ಲಿ 7 ಬೌಂಡರಿ,  2 ಭರ್ಜರಿ ಸಿಕ್ಸರ್​​ಗಳ ಸಹಾಯದಿಂದ 53 ರನ್ ಬಾರಿಸಿದ್ದರು.
ಈ ಎರಡು ಸಿಕ್ಸರ್​​ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ ರೋಹಿತ್ ಶರ್ಮಾ.
(6 / 10)
ಈ ಎರಡು ಸಿಕ್ಸರ್​​ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದಾರೆ ರೋಹಿತ್ ಶರ್ಮಾ.
ಪಾಕಿಸ್ತಾನದ ಶಾಹಿದ್ ಅಫ್ರಿದಿ ಏಷ್ಯಾಕಪ್​ನಲ್ಲಿ ಆಡಿದ 21 ಇನಿಂಗ್ಸ್​ಗಳಲ್ಲಿ ಒಟ್ಟು 26 ಸಿಕ್ಸರ್ ಬಾರಿಸಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರ ಎಂಬ ದಾಖಲೆ ಬರೆದಿದ್ದರು. ಈಗ ರೋಹಿತ್ 25 ಏಕದಿನ ಇನಿಂಗ್ಸ್​ಗಳಲ್ಲಿ 28 ಸಿಕ್ಸರ್​​ ಸಿಡಿಸಿದ್ದಾರೆ. ಆ ಮೂಲಕ ಏಷ್ಯಾಕಪ್ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್​​ ಸಿಡಿಸಿ ಅಫ್ರಿದಿ ದಾಖಲೆ ಮುರಿದಿದ್ದಾರೆ.
(7 / 10)

ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ಏಕದಿನದಲ್ಲಿ 10 ಸಾವಿರ ರನ್ ಪೂರೈಸಿದ ದಾಖಲೆ ಕೂಡ ಮಾಡಿದರು. ಈ ಮೂಲಕ ವೇಗವಾಗಿ 10 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಆಟಗಾರ ಎನಿಸಿದರು..
(8 / 10)
ಈ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ರೋಹಿತ್ ಏಕದಿನದಲ್ಲಿ 10 ಸಾವಿರ ರನ್ ಪೂರೈಸಿದ ದಾಖಲೆ ಕೂಡ ಮಾಡಿದರು. ಈ ಮೂಲಕ ವೇಗವಾಗಿ 10 ಸಾವಿರ ರನ್ ಪೂರೈಸಿದ ವಿಶ್ವದ 2ನೇ ಆಟಗಾರ ಎನಿಸಿದರು..(ANI )
ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಉರುಳಿಸಿ ದಾಖಲೆ ಬರೆದರು. ಏಕದಿನ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳ ಸಾಧನೆ ಮಾಡಿದರು, ಆ ಮೂಲಕ 9.3 ಓವರ್​ಗಳಲ್ಲಿ 43 ರನ್ ನೀಡಿ 4 ವಿಕೆಟ್ ಉರುಳಿಸಿದರು.
(9 / 10)
ಈ ಪಂದ್ಯದಲ್ಲಿ ಕುಲ್ದೀಪ್ ಯಾದವ್ 4 ವಿಕೆಟ್ ಉರುಳಿಸಿ ದಾಖಲೆ ಬರೆದರು. ಏಕದಿನ ಕ್ರಿಕೆಟ್​ನಲ್ಲಿ 150 ವಿಕೆಟ್​ಗಳ ಸಾಧನೆ ಮಾಡಿದರು, ಆ ಮೂಲಕ 9.3 ಓವರ್​ಗಳಲ್ಲಿ 43 ರನ್ ನೀಡಿ 4 ವಿಕೆಟ್ ಉರುಳಿಸಿದರು.(Getty)
ಇನ್ನು ಶ್ರೀಲಂಕಾ ಪರ ದುನಿತ್ ವೆಲ್ಲಾಲಗೆ ಅವರು ಭಾರತದ ಬ್ಯಾಟ್ಸ್​​ಮನ್​ಗಳಿಗೆ ಕಾಡಿದರು. 10 ಓವರ್​​ಗೆ 40 ರನ್ ನೀಡಿ 5 ವಿಕೆಟ್ ಉರುಳಿಸಿದರು. ಬ್ಯಾಟಿಂಗ್​​ನಲ್ಲೂ ಅಜೇಯ 42 ರನ್​ಗಳ ಕಾಣಿಕೆ ನೀಡಿದರು. ಇವರ ಹೋರಾಟದ ನಡುವೆಯೂ ಶ್ರೀಲಂಕಾ ಶರಣಾಯಿತು…………………
(10 / 10)
ಇನ್ನು ಶ್ರೀಲಂಕಾ ಪರ ದುನಿತ್ ವೆಲ್ಲಾಲಗೆ ಅವರು ಭಾರತದ ಬ್ಯಾಟ್ಸ್​​ಮನ್​ಗಳಿಗೆ ಕಾಡಿದರು. 10 ಓವರ್​​ಗೆ 40 ರನ್ ನೀಡಿ 5 ವಿಕೆಟ್ ಉರುಳಿಸಿದರು. ಬ್ಯಾಟಿಂಗ್​​ನಲ್ಲೂ ಅಜೇಯ 42 ರನ್​ಗಳ ಕಾಣಿಕೆ ನೀಡಿದರು. ಇವರ ಹೋರಾಟದ ನಡುವೆಯೂ ಶ್ರೀಲಂಕಾ ಶರಣಾಯಿತು…………………(Getty)

    ಹಂಚಿಕೊಳ್ಳಲು ಲೇಖನಗಳು