logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯಾನ್‌ಗೆ ಪದಕ; ಏಷ್ಯನ್‌ ಗೇಮ್ಸ್‌ 6ನೇ ದಿನ ಭಾರತದ ಪದಕ ಬೇಟೆ ಹೀಗಿತ್ತು

ಶಾಟ್‌ಪುಟ್‌ನಲ್ಲಿ ಕಿರಣ್ ಬಲಿಯಾನ್‌ಗೆ ಪದಕ; ಏಷ್ಯನ್‌ ಗೇಮ್ಸ್‌ 6ನೇ ದಿನ ಭಾರತದ ಪದಕ ಬೇಟೆ ಹೀಗಿತ್ತು

Sep 29, 2023 09:50 PM IST

Asian Games 2023 Day 6: ಏಷ್ಯನ್ ಗೇಮ್ಸ್‌ನ 6ನೇ ದಿನವಾದ ಶುಕ್ರವಾರ ಭಾರತವು ಮತ್ತಷ್ಟು ಪದಕಗಳನ್ನು ಗೆದ್ದಿದೆ. ಶನಿವಾರ ಕೂಡಾ ಹಲವು ಪದಕ ಸುತ್ತಿನ ಆಟಗಳಲ್ಲಿ ಭಾರತ ಪದಕ ಗೆಲ್ಲುವುದನ್ನು ಖಚಿತಪಡಿಸಿದೆ.

  • Asian Games 2023 Day 6: ಏಷ್ಯನ್ ಗೇಮ್ಸ್‌ನ 6ನೇ ದಿನವಾದ ಶುಕ್ರವಾರ ಭಾರತವು ಮತ್ತಷ್ಟು ಪದಕಗಳನ್ನು ಗೆದ್ದಿದೆ. ಶನಿವಾರ ಕೂಡಾ ಹಲವು ಪದಕ ಸುತ್ತಿನ ಆಟಗಳಲ್ಲಿ ಭಾರತ ಪದಕ ಗೆಲ್ಲುವುದನ್ನು ಖಚಿತಪಡಿಸಿದೆ.
ಶುಕ್ರವಾರ ನಡೆದ ಏಷ್ಯನ್‌ ಗೇಮ್ಸ್‌ನ ದಿನದಾಟದ ಅಂತ್ಯದ ವೇಳೆಗೆ ಭಾರತ ಒಟ್ಟು 33 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳು.
(1 / 10)
ಶುಕ್ರವಾರ ನಡೆದ ಏಷ್ಯನ್‌ ಗೇಮ್ಸ್‌ನ ದಿನದಾಟದ ಅಂತ್ಯದ ವೇಳೆಗೆ ಭಾರತ ಒಟ್ಟು 33 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಇದರಲ್ಲಿ 8 ಚಿನ್ನ, 12 ಬೆಳ್ಳಿ ಹಾಗೂ 13 ಕಂಚಿನ ಪದಕಗಳು.
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪಾಲಕ್ ಗುಲಿಯಾ ಮತ್ತು ಇಶಾ ಸಿಂಗ್ ಚಿನ್ನ ಮತ್ತು ಬೆಳ್ಳಿ ಗೆದ್ದರು.
(2 / 10)
ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಪಾಲಕ್ ಗುಲಿಯಾ ಮತ್ತು ಇಶಾ ಸಿಂಗ್ ಚಿನ್ನ ಮತ್ತು ಬೆಳ್ಳಿ ಗೆದ್ದರು.(ANI)
ಏಷ್ಯನ್ ಗೇಮ್ಸ್‌ನ 6ನೇ ದಿನ ಭಾರತದ ಶೂಟರ್‌ಗಳು ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್ ಸುರೇಶ್ ಕುಸಾಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆರಾನ್ ಚಿನ್ನ ಗೆದ್ದಿದ್ದಾರೆ.
(3 / 10)
ಏಷ್ಯನ್ ಗೇಮ್ಸ್‌ನ 6ನೇ ದಿನ ಭಾರತದ ಶೂಟರ್‌ಗಳು ಎರಡು ಚಿನ್ನದ ಪದಕ ಗೆದ್ದಿದ್ದಾರೆ. ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್‌ನಲ್ಲಿ ಸ್ವಪ್ನಿಲ್ ಸುರೇಶ್ ಕುಸಾಲೆ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅಖಿಲ್ ಶೆರಾನ್ ಚಿನ್ನ ಗೆದ್ದಿದ್ದಾರೆ.(AP)
ಈ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಪದಕವನ್ನು ಕಿರಣ್ ಬಲಿಯಾನ್ ಗೆದ್ದರು. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚು ಗೆದ್ದಿದ್ದಾರೆ.
(4 / 10)
ಈ ವರ್ಷ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಅಥ್ಲೆಟಿಕ್ಸ್ ಪದಕವನ್ನು ಕಿರಣ್ ಬಲಿಯಾನ್ ಗೆದ್ದರು. ಮಹಿಳೆಯರ ಶಾಟ್‌ಪುಟ್‌ನಲ್ಲಿ ಕಿರಣ್ ಕಂಚು ಗೆದ್ದಿದ್ದಾರೆ.(PTI)
ಭಾರತೀಯ ವನಿತೆಯರ ಸ್ಕ್ವಾಷ್ ತಂಡವು ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಇದೇ ವೇಳೆ ಭಾರತ ಪುರುಷರ ತಂಡವು ಸೆಮಿಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ.
(5 / 10)
ಭಾರತೀಯ ವನಿತೆಯರ ಸ್ಕ್ವಾಷ್ ತಂಡವು ಕಂಚಿನ ಪದಕಕ್ಕೆ ಮುತ್ತಿಟ್ಟಿದೆ. ಇದೇ ವೇಳೆ ಭಾರತ ಪುರುಷರ ತಂಡವು ಸೆಮಿಫೈನಲ್‌ನಲ್ಲಿ ಮಲೇಷ್ಯಾವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿದೆ. ಶನಿವಾರ ನಡೆಯಲಿರುವ ಚಿನ್ನದ ಪದಕದ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸುತ್ತಿದೆ.(PTI)
ಟೆನಿಸ್ ಮಿಶ್ರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಕೂಡಾ ಫೈನಲ್‌ಗೆ ಪ್ರವೇಶಿಸಿದ್ದಾರೆ. ಹೀಗಾಗಿ ಇವರು ಕೂಡಾ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.
(6 / 10)
ಟೆನಿಸ್ ಮಿಶ್ರ ಡಬಲ್ಸ್ ಜೋಡಿ ರೋಹನ್ ಬೋಪಣ್ಣ ಮತ್ತು ರುತುಜಾ ಭೋಸಲೆ ಕೂಡಾ ಫೈನಲ್‌ಗೆ ಪ್ರವೇಶಿಸಿದ್ದಾರೆ. ಹೀಗಾಗಿ ಇವರು ಕೂಡಾ ಕನಿಷ್ಠ ಬೆಳ್ಳಿ ಪದಕವನ್ನು ಖಚಿತಪಡಿಸಿಕೊಂಡಿದ್ದಾರೆ.(PTI)
ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಕೂಡಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿದೆ.
(7 / 10)
ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಕೂಡಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕವನ್ನು ಖಚಿತಪಡಿಸಿದೆ.(AFP)
ಪುರುಷರ ಡಬಲ್ಸ್ ಟೆನಿಸ್ ಫೈನಲ್‌ನಲ್ಲಿ ಸೋತ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ರಜತ ಪದಕಕ್ಕೆ ತೃಪ್ತಿಪಟ್ಟರು. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಹ್ಸು ಯು-ಹ್ಸಿಯು ಮತ್ತು ಜೇಸನ್ ಜಂಗ್ ಜೋಡಿ ವಿರುದ್ಧ 6-4, 6-4 ಅಂತರದಿಂದ ಸೋಲೊಪ್ಪಿದರು.
(8 / 10)
ಪುರುಷರ ಡಬಲ್ಸ್ ಟೆನಿಸ್ ಫೈನಲ್‌ನಲ್ಲಿ ಸೋತ ರಾಮ್‌ಕುಮಾರ್ ರಾಮನಾಥನ್ ಮತ್ತು ಸಾಕೇತ್ ಮೈನೇನಿ ರಜತ ಪದಕಕ್ಕೆ ತೃಪ್ತಿಪಟ್ಟರು. ಫೈನಲ್‌ ಪಂದ್ಯದಲ್ಲಿ ಚೈನೀಸ್ ತೈಪೆಯ ಹ್ಸು ಯು-ಹ್ಸಿಯು ಮತ್ತು ಜೇಸನ್ ಜಂಗ್ ಜೋಡಿ ವಿರುದ್ಧ 6-4, 6-4 ಅಂತರದಿಂದ ಸೋಲೊಪ್ಪಿದರು.(Sukumaran)
ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧ 6-0 ಅಂತರದ ಸುಲಭ ಜಯ ಸಾಧಿಸಿತು.
(9 / 10)
ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧ 6-0 ಅಂತರದ ಸುಲಭ ಜಯ ಸಾಧಿಸಿತು.(REUTERS)
ಮಹಿಳೆಯರ 50 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್  ಸೆಮಿಫೈನಲ್ ತಲುಪಿದ್ದಾರೆ. ಇವರು ಕೂಡ ಪದಕ ಖಚಿತಪಡಿಸಿದ್ದಾರೆ. ಅಲ್ಲದೆ ಅವರು ಮುಂದಿನ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ.
(10 / 10)
ಮಹಿಳೆಯರ 50 ಕೆಜಿ ವಿಭಾಗದ ಬಾಕ್ಸಿಂಗ್‌ನಲ್ಲಿ ನಿಖತ್ ಜರೀನ್  ಸೆಮಿಫೈನಲ್ ತಲುಪಿದ್ದಾರೆ. ಇವರು ಕೂಡ ಪದಕ ಖಚಿತಪಡಿಸಿದ್ದಾರೆ. ಅಲ್ಲದೆ ಅವರು ಮುಂದಿನ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದುಕೊಂಡಿದ್ದಾರೆ.(PTI)

    ಹಂಚಿಕೊಳ್ಳಲು ಲೇಖನಗಳು