logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Assembly Election 2023: ತೆಲಂಗಾಣದಲ್ಲಿ ಕೈಗೆ ಜೈ, ಮಧ್ಯಪ್ರದೇಶ ಛತ್ತೀಸ್‌ಗಢ ರಾಜಸ್ಥಾನದಲ್ಲಿ ಕಮಲಕ್ಕೆ ವಿಜಯ, ಇಲ್ಲಿದೆ ಬಲಾಬಲ ಲೆಕ್ಕಾಚಾರ

Dec 03, 2023 09:17 PM IST

ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯವಾಗಿ, ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ. ಉತ್ತರದ ಮೂರು ರಾಜ್ಯಗಳಲ್ಲಿ ಕಮಲ ಜಯಭೇರಿ ಬಾರಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಸಾಧಿಸಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಲಾಬಲ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ.

  • ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯವಾಗಿ, ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಪ್ರಕಟವಾಗಿದೆ. ಉತ್ತರದ ಮೂರು ರಾಜ್ಯಗಳಲ್ಲಿ ಕಮಲ ಜಯಭೇರಿ ಬಾರಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್‌ ತನ್ನ ಅಸ್ತಿತ್ವ ಸಾಧಿಸಿದೆ. ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶದ ಬಲಾಬಲ ಲೆಕ್ಕಾಚಾರದ ಸಚಿತ್ರ ವರದಿ ಇಲ್ಲಿದೆ.
ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ತೆಲಂಗಾಣ ಹೊರತು ಪಡಿಸಿ ಬೇರೆಲ್ಲಾ ರಾಜ್ಯಗಳಲ್ಲಿ ಕಮಲ ಅರಳಿದೆ. ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದು ಬೀಗಿದೆ. ಹಾಗಾದರೆ ಈ ನಾಲ್ಕು ರಾಜ್ಯಗಳಲ್ಲಿ ಯಾವ ಯಾವ ಪಕ್ಷಗಳು ಎಷ್ಟು ಸ್ಥಾನ ಗಳಿಸಿವೆ ಎಂಬುದರ ವಿವರ ಇಲ್ಲಿದೆ. 
(1 / 5)

ತೆಲಂಗಾಣದಲ್ಲಿ ಪ್ರಬಲ ಪಕ್ಷವಾಗಿದ್ದ ಬಿಎಸ್‌ಆರ್‌ ಅನ್ನು ಹಿಂದಿಕ್ಕಿ ಕಾಂಗ್ರೆಸ್‌ ಬಹುಮತ ಸಾಧಿಸುವ ಮೂಲಕ ಅಭೂತಪೂರ್ವ ಗೆಲುವು ಪಡೆದಿದೆ. ಮುಖ್ಯಮಂತ್ರಿ ಕೆಸಿಆರ್‌ ನೇತೃತ್ವದ ಬಿಎಸ್‌ಆರ್‌ ಪಕ್ಷವು 39 ಸ್ಥಾನ ಗಳಿಸಿದರೆ ಕಾಂಗ್ರೆಸ್‌ 65 ಸ್ಥಾನಗಳನ್ನು ಗಳಿಸಿದೆ. ಬಿಜೆಪಿ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರೆ, ಇತರೆ ಪಕ್ಷಗಳು 7 ಸ್ಥಾನ ಗಳಿಸಿವೆ. 
(2 / 5)

ಹಿಂದಿ ಭಾಗದಲ್ಲಿ ಪ್ರಮುಖ ರಾಜ್ಯ ಎನ್ನಿಸಿಕೊಂಡಿರುವ ಮಧ್ಯಪ್ರದೇಶದಲ್ಲಿ ಕಳೆದ 20 ವರ್ಷಗಳಿಂದ ಬಿಜೆಪಿ ಆಡಳಿತವಿದ್ದು, ಇದೀಗ ಪುನಃ ಇಲ್ಲಿ ಕಮಲ ಗೆಲುವಿನ ನಗೆ ಬೀರಿದೆ. ಬಿಜೆಪಿಯು ಅತ್ಯಧಿಕ ಸ್ಥಾನಗಳಿಸುವ ಮೂಲಕ ಕಾಂಗ್ರೆಸ್‌ ಅನ್ನು ಧೂಳಿಪಟ ಮಾಡಿದೆ. ಈ ರಾಜ್ಯದಲ್ಲಿ ಬಿಜೆಪಿ 163 ಸ್ಥಾನ ಗಳಿಸಿದರೆ, ಕಾಂಗ್ರೆಸ್‌ 66 ಸ್ಥಾನ ಗಳಿಸಿದೆ. ಇತರೆ ಪಕ್ಷಗಳು 1 ಸ್ಥಾನಗಳಿಸಿವೆ, 
(3 / 5)

ರಾಜಸ್ಥಾನದಲ್ಲಿ ಕಾಂಗ್ರೆಸ್‌ ಆಡಳಿತವಿದ್ದರೂ ಕೂಡ ಜನರು ಬಿಜೆಪಿಗೆ ಜೈ ಎಂದಿದ್ದಾರೆ. ಮರಳುಗಾಡಿನ ನಾಡಿನಲ್ಲೂ ಬಿಜೆಪಿಗೆ ಬಹುಮತ ದೊರಕಿದೆ. ಸ್ವತಃ ಪ್ರಧಾನಿ ಮೋದಿ ರಾಜಸ್ಥಾನದಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದು, ಇದು ರಾಜ್ಯದಲ್ಲಿ ಬಿಜೆಪಿ ಪಕ್ಷ ನೆಲೆಯೂರಲು ಕಾರಣವಾಗಿದೆ ಎನ್ನಲಾಗುತ್ತಿದೆ. ರಾಜಸ್ಥಾನದಲ್ಲಿ ಒಟ್ಟು 199 ಕ್ಷೇತ್ರಗಳಲ್ಲಿ 115 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ 70 ಸ್ಥಾನ ಪಡೆದರೆ, ಇತರೆ ಪಕ್ಷಗಳು 14 ಸ್ಥಾನಗಳಿಸಿವೆ.  
(4 / 5)

ನಕ್ಸಲ್‌ ನಾಡು ಎಂಬ ಕುಖ್ಯಾತಿ ಇರುವ ಛತ್ತೀಸ್‌ಗಢ ರಾಜ್ಯದ ಜನರು ಈ ಬಾರಿ ಬಿಜೆಪಿಗೆ ಮಣೆ ಹಾಕಿದ್ದಾರೆ. ಬಿಜೆಪಿಯು ಸ್ಪಷ್ಟ ಬಹುಮತ ಪಡೆಯುವ ಮೂಲಕ ಸರ್ಕಾರ ಸ್ಥಾಪನೆಗೆ ಸಿದ್ಧವಾಗಿದೆ. ಇಲ್ಲಿ ಬಿಜೆಪಿ 56 ಸ್ಥಾನಗಳನ್ನು ಗಳಿಸಿದ್ದರೆ, ಕಾಂಗ್ರೆಸ್‌ 33 ಸ್ಥಾನಗಳನ್ನು ಗಳಿಸಿದೆ. ಇತರೆ ಪಕ್ಷ 1 ಸ್ಥಾನ ಗಳಿಸಿದೆ. 
(5 / 5)

    ಹಂಚಿಕೊಳ್ಳಲು ಲೇಖನಗಳು