logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವಿಶ್ವಕಪ್​ಗೆ ಮುತ್ತಿಕ್ಕಿದ ಕಮಿನ್ಸ್​ಗೆ ಮತ್ತೊಂದು ಗರಿ; ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ

ವಿಶ್ವಕಪ್​ಗೆ ಮುತ್ತಿಕ್ಕಿದ ಕಮಿನ್ಸ್​ಗೆ ಮತ್ತೊಂದು ಗರಿ; ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿ ಗೆದ್ದ ದೀಪ್ತಿ ಶರ್ಮಾ

Jan 17, 2024 03:01 PM IST

Pat Cummins, Deepti Sharma wins ICC Player of Month award: 2023ರಲ್ಲಿ ಏಕದಿನ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ದೀಪ್ತಿ ಶರ್ಮಾ ಅವರು ಡಿಸೆಂಬರ್ ತಿಂಗಳ​ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

  • Pat Cummins, Deepti Sharma wins ICC Player of Month award: 2023ರಲ್ಲಿ ಏಕದಿನ ವಿಶ್ವಕಪ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಪ್ಯಾಟ್ ಕಮಿನ್ಸ್ ಮತ್ತು ದೀಪ್ತಿ ಶರ್ಮಾ ಅವರು ಡಿಸೆಂಬರ್ ತಿಂಗಳ​ ಐಸಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
ಆಸ್ಟ್ರೇಲಿಯಾ ತಂಡಕ್ಕೆ 2023ರ ಏಕದಿನ ವಿಶ್ವಕಪ್ ಕಿರೀಟ ಗೆದ್ದುಕೊಟ್ಟ ನಾಯಕ ಪ್ಯಾಟ್ ಕಮಿನ್ಸ್​​ಗೆ ಮತ್ತೊಂದು ಗರಿ ಸಿಕ್ಕಿದೆ. ಡಿಸೆಂಬರ್​​ನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ನಾಯಕನಾಗಿ ಮತ್ತು ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಮಿನ್ಸ್​ಗೆ ಡಿಸೆಂಬರ್​ ತಿಂಗಳ ಐಸಿಸಿ ಪುರುಷರ ಪ್ರಶಸ್ತಿ ಒಲಿದು ಬಂದಿದೆ.
(1 / 7)
ಆಸ್ಟ್ರೇಲಿಯಾ ತಂಡಕ್ಕೆ 2023ರ ಏಕದಿನ ವಿಶ್ವಕಪ್ ಕಿರೀಟ ಗೆದ್ದುಕೊಟ್ಟ ನಾಯಕ ಪ್ಯಾಟ್ ಕಮಿನ್ಸ್​​ಗೆ ಮತ್ತೊಂದು ಗರಿ ಸಿಕ್ಕಿದೆ. ಡಿಸೆಂಬರ್​​ನಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ನಾಯಕನಾಗಿ ಮತ್ತು ಬೌಲಿಂಗ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಮಿನ್ಸ್​ಗೆ ಡಿಸೆಂಬರ್​ ತಿಂಗಳ ಐಸಿಸಿ ಪುರುಷರ ಪ್ರಶಸ್ತಿ ಒಲಿದು ಬಂದಿದೆ.(AP)
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್, ಏಕದಿನ, ಟಿ20 ಸರಣಿಗಳಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಭಾರತದ ಆಲ್​ರೌಂಡರ್​ ದೀಪ್ತಿ ಶರ್ಮಾ ಅವರು ಐಸಿಸಿ ತಿಂಗಳ ಮೊದಲ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ. ಶಾರ್ಟ್​ ಲೀಸ್ಟ್ ಮಾಡಲಾಗಿದ್ದ ಆಟಗಾರರ ಪೈಕಿ ವಿಜೇತರನ್ನು ಐಸಿಸಿ ಘೋಷಿಸಿದೆ.
(2 / 7)
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್, ಏಕದಿನ, ಟಿ20 ಸರಣಿಗಳಲ್ಲಿ ನೀಡಿದ ಅದ್ಭುತ ಪ್ರದರ್ಶನಕ್ಕೆ ಭಾರತದ ಆಲ್​ರೌಂಡರ್​ ದೀಪ್ತಿ ಶರ್ಮಾ ಅವರು ಐಸಿಸಿ ತಿಂಗಳ ಮೊದಲ ಮಹಿಳಾ ಆಟಗಾರ್ತಿ ಪ್ರಶಸ್ತಿ ಗೆದ್ದಿದ್ದಾರೆ. ಶಾರ್ಟ್​ ಲೀಸ್ಟ್ ಮಾಡಲಾಗಿದ್ದ ಆಟಗಾರರ ಪೈಕಿ ವಿಜೇತರನ್ನು ಐಸಿಸಿ ಘೋಷಿಸಿದೆ.(PTI)
ಡಿಸೆಂಬರ್​​​ನಲ್ಲಿ ಪಾಕಿಸ್ತಾನದ ವಿರುದ್ಧ ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಮಿನ್ಸ್ ಚೆಂಡಿನೊಂದಿಗೆ ಮ್ಯಾಜಿಕ್ ನಡೆಸಿದರು. ಈ ಎರಡೂ ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ್ದರು. ನಾಯಕನಾಗಿ 2 ಟೆಸ್ಟ್​ಗಳಲ್ಲೂ ಐತಿಹಾಸಿಕ ಜಯ ಸಾಧಿಸಿ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದ್ದರು. (ಗಮನಕ್ಕೆ- 3ನೇ ಟೆಸ್ಟ್​ ಜನವರಿಯಲ್ಲಿ ನಡೆದಿದೆ)
(3 / 7)
ಡಿಸೆಂಬರ್​​​ನಲ್ಲಿ ಪಾಕಿಸ್ತಾನದ ವಿರುದ್ಧ ತವರಿನಲ್ಲಿ ನಡೆದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಕಮಿನ್ಸ್ ಚೆಂಡಿನೊಂದಿಗೆ ಮ್ಯಾಜಿಕ್ ನಡೆಸಿದರು. ಈ ಎರಡೂ ಪಂದ್ಯಗಳಲ್ಲಿ 13 ವಿಕೆಟ್ ಉರುಳಿಸಿದ್ದರು. ನಾಯಕನಾಗಿ 2 ಟೆಸ್ಟ್​ಗಳಲ್ಲೂ ಐತಿಹಾಸಿಕ ಜಯ ಸಾಧಿಸಿ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿದ್ದರು. (ಗಮನಕ್ಕೆ- 3ನೇ ಟೆಸ್ಟ್​ ಜನವರಿಯಲ್ಲಿ ನಡೆದಿದೆ)(AFP)
ಅಭೂತಪೂರ್ವ ಗೆಲುವಿನೊಂದಿಗೆ ಟೆಸ್ಟ್ ಸರಣಿ ವಶಪಡಿಸಿಕೊಂಡಿದ್ದು ಮಾತ್ರವಲ್ಲ, ಟೆಸ್ಟ್​ ಶ್ರೇಯಾಂಕದಲ್ಲೂ ಅಗ್ರಸ್ಥಾನಕ್ಕೇರಿತು. ಅಗ್ರಸ್ಥಾನದಲ್ಲಿದ್ದ ಭಾರತ 2ನೇ ಸ್ಥಾನಕ್ಕೆ ಕುಸಿತ ಕಂಡಿತು. ಮೊದಲ ಟೆಸ್ಟ್​ನಲ್ಲಿ 360 ರನ್​​ಗಳ ದೊಡ್ಡ ಗೆಲುವು, ಎರಡನೇ ಟೆಸ್ಟ್​ನಲ್ಲಿ 79 ರನ್​ಗಳಿಂದ ಗೆದ್ದು ಅಮೋಘ ಸಾಧನೆ ಮಾಡಿತ್ತು.
(4 / 7)
ಅಭೂತಪೂರ್ವ ಗೆಲುವಿನೊಂದಿಗೆ ಟೆಸ್ಟ್ ಸರಣಿ ವಶಪಡಿಸಿಕೊಂಡಿದ್ದು ಮಾತ್ರವಲ್ಲ, ಟೆಸ್ಟ್​ ಶ್ರೇಯಾಂಕದಲ್ಲೂ ಅಗ್ರಸ್ಥಾನಕ್ಕೇರಿತು. ಅಗ್ರಸ್ಥಾನದಲ್ಲಿದ್ದ ಭಾರತ 2ನೇ ಸ್ಥಾನಕ್ಕೆ ಕುಸಿತ ಕಂಡಿತು. ಮೊದಲ ಟೆಸ್ಟ್​ನಲ್ಲಿ 360 ರನ್​​ಗಳ ದೊಡ್ಡ ಗೆಲುವು, ಎರಡನೇ ಟೆಸ್ಟ್​ನಲ್ಲಿ 79 ರನ್​ಗಳಿಂದ ಗೆದ್ದು ಅಮೋಘ ಸಾಧನೆ ಮಾಡಿತ್ತು.(AFP)
2023ರ ನವೆಂಬರ್​ 19ರಂದು ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ​ ಟ್ರೋಫಿಗೆ ಮುತ್ತಿಕ್ಕಿತು. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಆಸೀಸ್​ 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಭಾರತ 240 ರನ್ ಗಳಿಸಿದರೆ, ಆಸೀಸ್ 43 ಓವರ್​​ಗಳಲ್ಲಿ ಗೆಲುವಿನ ಗೆರೆ ದಾಟಿತು.
(5 / 7)
2023ರ ನವೆಂಬರ್​ 19ರಂದು ನಡೆದ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಆರನೇ ಬಾರಿಗೆ​ ಟ್ರೋಫಿಗೆ ಮುತ್ತಿಕ್ಕಿತು. ಅಹ್ಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನೇತೃತ್ವದಲ್ಲಿ ಆಸೀಸ್​ 6 ವಿಕೆಟ್​​ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಭಾರತ 240 ರನ್ ಗಳಿಸಿದರೆ, ಆಸೀಸ್ 43 ಓವರ್​​ಗಳಲ್ಲಿ ಗೆಲುವಿನ ಗೆರೆ ದಾಟಿತು.(AFP)
2023ರಲ್ಲೇ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸೀಸ್​ ಮತ್ತೊಂದು ಐಸಿಸಿ ಕಿರೀಟಕ್ಕೆ ಮುತ್ತಿಕ್ಕಿತು. ಜೂನ್​ನಲ್ಲಿ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಭಾರತವನ್ನು ಸೋಲಿಸಿತ್ತು. ಆ ಮೂಲಕ ಮೂರು ಫಾರ್ಮೆಟ್​ನಲ್ಲು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ಮತ್ತು ಮೊದಲ ತಂಡದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
(6 / 7)
2023ರಲ್ಲೇ ಪ್ಯಾಟ್ ಕಮಿನ್ಸ್ ಸಾರಥ್ಯದ ಆಸೀಸ್​ ಮತ್ತೊಂದು ಐಸಿಸಿ ಕಿರೀಟಕ್ಕೆ ಮುತ್ತಿಕ್ಕಿತು. ಜೂನ್​ನಲ್ಲಿ ನಡೆದ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ನಲ್ಲೂ ಭಾರತವನ್ನು ಸೋಲಿಸಿತ್ತು. ಆ ಮೂಲಕ ಮೂರು ಫಾರ್ಮೆಟ್​ನಲ್ಲು ಐಸಿಸಿ ಟ್ರೋಫಿ ಗೆದ್ದ ವಿಶ್ವದ ಏಕೈಕ ಮತ್ತು ಮೊದಲ ತಂಡದ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.(AFP)
ತಿಂಗಳ ಅವಧಿಯಲ್ಲಿ ಆಡಿದ ಎರಡು ಟೆಸ್ಟ್‌ಗಳಲ್ಲಿ ದೀಪ್ತಿ ಶರ್ಮಾ 55 ಸರಾಸರಿಯಲ್ಲಿ 165 ರನ್‌ ಕಲೆ ಹಾಕಿದರೆ, ಬೌಲಿಂಗ್​​ನಲ್ಲಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 67 ರನ್ ಗಳಿಸಿದರು. ಅವರ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ಅವರು 7 ರನ್‌ಗಳಿಗೆ 5 ವಿಕೆಟ್ ಮತ್ತು 32ಕ್ಕೆ 4 ವಿಕೆಟ್‌ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.
(7 / 7)
ತಿಂಗಳ ಅವಧಿಯಲ್ಲಿ ಆಡಿದ ಎರಡು ಟೆಸ್ಟ್‌ಗಳಲ್ಲಿ ದೀಪ್ತಿ ಶರ್ಮಾ 55 ಸರಾಸರಿಯಲ್ಲಿ 165 ರನ್‌ ಕಲೆ ಹಾಕಿದರೆ, ಬೌಲಿಂಗ್​​ನಲ್ಲಿ 10.81ರ ಸರಾಸರಿಯಲ್ಲಿ 11 ವಿಕೆಟ್‌ಗಳನ್ನು ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ 67 ರನ್ ಗಳಿಸಿದರು. ಅವರ ಬೌಲಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಅಂಶವಾಗಿದೆ. ಅವರು 7 ರನ್‌ಗಳಿಗೆ 5 ವಿಕೆಟ್ ಮತ್ತು 32ಕ್ಕೆ 4 ವಿಕೆಟ್‌ ಪಡೆದರು. ಪಂದ್ಯದಲ್ಲಿ ಒಟ್ಟು 9 ವಿಕೆಟ್‌ ಉರುಳಿಸಿದರು.

    ಹಂಚಿಕೊಳ್ಳಲು ಲೇಖನಗಳು