logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  5 Upcoming Cars: ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಕಾರುಗಳು

5 Upcoming Cars: ನವೆಂಬರ್‌ ತಿಂಗಳಲ್ಲಿ ಬಿಡುಗಡೆಗೆ ಸಿದ್ಧವಾಗಿವೆ ಈ 5 ಕಾರುಗಳು

Oct 31, 2023 02:02 PM IST

Cars launch in November: ಇದು ಹಬ್ಬದ ಸೀಸನ್‌. ಹೊಸ ವಾಹನಗಳ ಬಿಡುಗಡೆಯೂ ಬಹುತೇಕ ಇಂತಹ ಸಂದರ್ಭದಲ್ಲೇ ಆಗುವುದು ವಾಡಿಕೆ. ನವೆಂಬರ್‌ ತಿಂಗಳಲ್ಲಿ ವಿವಿಧ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅವುಗಳ ಪೈಕಿ ಗಮನಸೆಳೆದ 5 ಕಾರುಗಳ ವಿವರ ಇಲ್ಲಿದೆ. 

  • Cars launch in November: ಇದು ಹಬ್ಬದ ಸೀಸನ್‌. ಹೊಸ ವಾಹನಗಳ ಬಿಡುಗಡೆಯೂ ಬಹುತೇಕ ಇಂತಹ ಸಂದರ್ಭದಲ್ಲೇ ಆಗುವುದು ವಾಡಿಕೆ. ನವೆಂಬರ್‌ ತಿಂಗಳಲ್ಲಿ ವಿವಿಧ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಅವುಗಳ ಪೈಕಿ ಗಮನಸೆಳೆದ 5 ಕಾರುಗಳ ವಿವರ ಇಲ್ಲಿದೆ. 
ಮರ್ಸಿಡೆಸ್ ಬೆನ್ಝ್ ಜಿಎಲ್‌ಇ (Mercedes-Benz GLE): ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾದ ಐಷಾರಾಮಿ ಕಾರು ಇದು. ಭಾರತದ ಮಾರುಕಟ್ಟೆಗೆ ಇದು ನವೆಂಬರ್ 2ರಂದು ಪ್ರವೇಶಿಸಲಿದೆ. ಇದು 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಪೆಟ್ರೋಲ್ ಎಂಜಿನ್ ಕೂಡ ಬರುವ ಸಾಧ್ಯತೆ ಇದೆ. ಎಕ್ಸ್ ಶೋ ರೂಂ ಬೆಲೆ ಅಂದಾಜು 93 ಲಕ್ಷ ರೂಪಾಯಿ ಇರಬಹುದು
(1 / 5)

ಮರ್ಸಿಡೆಸ್ ಬೆನ್ಝ್ ಜಿಎಲ್‌ಇ (Mercedes-Benz GLE) ಜೊತೆಗೆ ಸಿ43 ಎಎಂಜಿ (C43 AMG) ಸಹ ಭಾರತದಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆ ದಿನಾಂಕದ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ. ಏತನ್ಮಧ್ಯೆ, ಮೂಲ ರೂಪಾಂತರದ ಎಕ್ಸ್ ಶೋ ರೂಂ ಬೆಲೆ 1 ಕೋಟಿ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. 
(2 / 5)

ಟಾಟಾ ಪಂಚ್ EV ಗಾಗಿ ಭಾರತದ ಇವಿ ಕಾರು ಮಾರುಕಟ್ಟೆ ಸೆಪ್ಟೆಂಬರ್ ತಿಂಗಳಿಂದ ಕಾಯುತ್ತಿದೆ. ಈಗ.. ಈ ಮಾದರಿಯು ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎಂಬ ಮಾತು ಕೇಳಿಬರುತ್ತಿದೆ.
(3 / 5)

ಸ್ಕೋಡಾ ಸೂಪರ್ಬ್‌ಗೆ ಸಂಬಂಧಿಸಿದ ಅನೇಕ ಟೀಸರ್‌ಗಳನ್ನು ಸ್ಕೋಡಾ ಕಂಪನಿಯು ಬಿಡುಗಡೆ ಮಾಡಿತು. ಈ ಮಾದರಿಯು ನವೆಂಬರ್ 2 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಭಾರತದಲ್ಲಿ ಈ ಮಾದರಿಯ ಎಕ್ಸ್ ಶೋ ರೂಂ ಬೆಲೆ 40 ಲಕ್ಷ ರೂಪಾಯಿ ಎಂಬ ಮಾಹಿತಿ ಇದೆ. ಮುಂದಿನ ವರ್ಷದ ಆರಂಭದ ದಿನಗಳಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಬಹುದು.
(4 / 5)

ರೆನಾಲ್ಟ್ ಡಸ್ಟರ್ ಮೇಲೆ ಭಾರತೀಯ ಗ್ರಾಹಕಮರಿಗೆ ಒಂದು ಭಾವನಾತ್ಮಕ ಒಲವು. ಭಾರತದಲ್ಲಿ ಬಿಡುಗಡೆಯಾದ ಮೊದಲ ಎಸ್‌ಯುವಿ ಇದು ಎಂಬ ನಂಟು ಅದು. ಕಂಪನಿಯು ರೆನಾಲ್ಟ್ ಡಸ್ಟರ್‌ನ ಮೂರನೇ ತಲೆಮಾರಿನ ಆವೃತ್ತಿಯನ್ನು ನವೆಂಬರ್ 29 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆ ಮಾಡಲಿದೆ. ಭಾರತದಲ್ಲಿ ಬಿಡುಗಡೆಗೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.
(5 / 5)

    ಹಂಚಿಕೊಳ್ಳಲು ಲೇಖನಗಳು