logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ; ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9ರ ಚಿತ್ರನೋಟ

ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ; ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9ರ ಚಿತ್ರನೋಟ

Feb 27, 2024 12:49 PM IST

ಬಿವೈಡಿ ಯಾಂಗ್ವಾಂಗ್ ಯು 9 ಸಂಪೂರ್ಣ ಎಲೆಕ್ಟ್ರಿಕ್ ಸೂಪರ್ ಕಾರ್ ಆಗಿದ್ದು, ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗುವ ಲಕ್ಷಣ ಗೋಚರಿಸಿದೆ. ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ. ಅದನ್ನು ಅದು ಈಡೇರಿಸೋದು ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9 ರ ಚಿತ್ರನೋಟ.

ಬಿವೈಡಿ ಯಾಂಗ್ವಾಂಗ್ ಯು 9 ಸಂಪೂರ್ಣ ಎಲೆಕ್ಟ್ರಿಕ್ ಸೂಪರ್ ಕಾರ್ ಆಗಿದ್ದು, ಜಾಗತಿಕ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರಬಲ ಪ್ರತಿಸ್ಪರ್ಧಿಯಾಗುವ ಲಕ್ಷಣ ಗೋಚರಿಸಿದೆ. ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿದೆ ಚೀನಾದ ಬಿವೈಡಿ. ಅದನ್ನು ಅದು ಈಡೇರಿಸೋದು ಹೇಗಂತೀರಾ, ಇಲ್ನೋಡಿ ಬಿವೈಡಿ ಯಾಂಗ್ವಾಂಗ್ ಯು 9 ರ ಚಿತ್ರನೋಟ.
ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಚೀನಾದ ಬಿವೈಡಿ ಮುಂದಾಗಿದೆ. ಅಮೆರಿಕದ ಟೆಸ್ಲಾಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಈಗ ಫೆರಾರಿ ಮತ್ತು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರ್ ತಯಾರಕರಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಯಾಂಗ್ವಾಂಗ್ ಯು9 ಎಂಬ ತನ್ನದೇ ಆದ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ಈಗ ಮಾರುಕಟ್ಟೆ ಮುಂದಿಟ್ಟಿದೆ. 
(1 / 12)
ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಚೀನಾದ ಬಿವೈಡಿ ಮುಂದಾಗಿದೆ. ಅಮೆರಿಕದ ಟೆಸ್ಲಾಗೆ ಅತಿದೊಡ್ಡ ಪ್ರತಿಸ್ಪರ್ಧಿಯಾಗಿರುವ ಬಿವೈಡಿ ಈಗ ಫೆರಾರಿ ಮತ್ತು ಲ್ಯಾಂಬೊರ್ಗಿನಿಯಂತಹ ಸೂಪರ್ ಕಾರ್ ತಯಾರಕರಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಯಾಂಗ್ವಾಂಗ್ ಯು9 ಎಂಬ ತನ್ನದೇ ಆದ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ಈಗ ಮಾರುಕಟ್ಟೆ ಮುಂದಿಟ್ಟಿದೆ. (Bloomberg)
ಯಾಂಗ್ವಾಂಗ್‌ ಯು9 ಬೆಲೆ 1.68 ಮಿಲಿಯನ್ ಯುವಾನ್. ಭಾರತದ ಕರೆನ್ಸಿಯಲ್ಲಿ 2 ಕೋಟಿ ರೂಪಾಯಿ. ಬಿವೈಡಿ ಕಂಪನಿಯ ಇದುವರೆಗಿನ ಅತ್ಯಂತ ದುಬಾರಿ ಕಾರು ಇದು. ಆದರೆ ಇದಕ್ಕೆ ಸರಿಸಾಟಿ ಇನ್ನೊಂದಿಲ್ಲ.ವಿಶ್ವದ ಕೆಲವೇ ಕೆಲವು ಸೂಪರ್ ಕಾರುಗಳಿಗೆ ಸರಿಹೊಂದುವಂತಹ ಸಾಮರ್ಥ್ಯಗಳಿರುವುದು ವಿಶೇಷ.
(2 / 12)
ಯಾಂಗ್ವಾಂಗ್‌ ಯು9 ಬೆಲೆ 1.68 ಮಿಲಿಯನ್ ಯುವಾನ್. ಭಾರತದ ಕರೆನ್ಸಿಯಲ್ಲಿ 2 ಕೋಟಿ ರೂಪಾಯಿ. ಬಿವೈಡಿ ಕಂಪನಿಯ ಇದುವರೆಗಿನ ಅತ್ಯಂತ ದುಬಾರಿ ಕಾರು ಇದು. ಆದರೆ ಇದಕ್ಕೆ ಸರಿಸಾಟಿ ಇನ್ನೊಂದಿಲ್ಲ.ವಿಶ್ವದ ಕೆಲವೇ ಕೆಲವು ಸೂಪರ್ ಕಾರುಗಳಿಗೆ ಸರಿಹೊಂದುವಂತಹ ಸಾಮರ್ಥ್ಯಗಳಿರುವುದು ವಿಶೇಷ.(Bloomberg)
ಯಾಂಗ್ವಾಂಗ್ ಯು 9 ಸೂಪರ್ ಕಾರಿನ ಟಾಪ್ ಸ್ಪೀಡ್ ಎಷ್ಟು ಎಂದು ಕೇಳಿದರೆ, 309.19 ಕಿ.ಮೀ ಎಂಬ ಉತ್ತರ ಸಿಗುತ್ತದೆ. ಕೇವಲ 2.36 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗ ವರ್ಧನೆ ಇದರ ಸಾಮರ್ಥ್ಯಗಳಲ್ಲಿ ಪೈಕಿ ಒಂದು ಎನ್ನುತ್ತದೆ ಬಿವೈಡಿ. 
(3 / 12)
ಯಾಂಗ್ವಾಂಗ್ ಯು 9 ಸೂಪರ್ ಕಾರಿನ ಟಾಪ್ ಸ್ಪೀಡ್ ಎಷ್ಟು ಎಂದು ಕೇಳಿದರೆ, 309.19 ಕಿ.ಮೀ ಎಂಬ ಉತ್ತರ ಸಿಗುತ್ತದೆ. ಕೇವಲ 2.36 ಸೆಕೆಂಡುಗಳಲ್ಲಿ ಶೂನ್ಯದಿಂದ 100 ಕಿ.ಮೀ ವೇಗ ವರ್ಧನೆ ಇದರ ಸಾಮರ್ಥ್ಯಗಳಲ್ಲಿ ಪೈಕಿ ಒಂದು ಎನ್ನುತ್ತದೆ ಬಿವೈಡಿ. (Bloomberg)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(4 / 12)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 240 ಕಿಲೋವ್ಯಾಟ್ ಗರಿಷ್ಠ ಶಕ್ತಿಯನ್ನು ನೀಡುತ್ತದೆ, ಯಾಂಗ್ವಾಂಗ್ ಯು 9 ಒಟ್ಟು 960 ಕಿಲೋವ್ಯಾಟ್ ಗರಿಷ್ಠ ಶಕ್ತಿ ಒದಗಿಸುತ್ತದೆ.
(5 / 12)
ನಾಲ್ಕು ಎಲೆಕ್ಟ್ರಿಕ್ ಮೋಟಾರ್‌ಗಳನ್ನು ಹೊಂದಿದ್ದು, ಪ್ರತಿಯೊಂದೂ 240 ಕಿಲೋವ್ಯಾಟ್ ಗರಿಷ್ಠ ಶಕ್ತಿಯನ್ನು ನೀಡುತ್ತದೆ, ಯಾಂಗ್ವಾಂಗ್ ಯು 9 ಒಟ್ಟು 960 ಕಿಲೋವ್ಯಾಟ್ ಗರಿಷ್ಠ ಶಕ್ತಿ ಒದಗಿಸುತ್ತದೆ.(Bloomberg)
ಥರ್ಮಲ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನಲ್ಲಿ ಈ ಸೂಪರ್ ಕಾರ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ, ಇದು ಹೆಚ್ಚಿನ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಬಿವೈಡಿ ಹೇಳಿದೆ
(6 / 12)
ಥರ್ಮಲ್ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ನಲ್ಲಿ ಈ ಸೂಪರ್ ಕಾರ್ ಅನ್ನು ಸಂಪೂರ್ಣವಾಗಿ ಪರೀಕ್ಷಿಸಲಾಗಿದೆ, ಇದು ಹೆಚ್ಚಿನ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸುತ್ತದೆ ಎಂದು ಬಿವೈಡಿ ಹೇಳಿದೆ(Bloomberg)
ಬಿವೈಡಿಯ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿರುವ ಸೂಪರ್ ಕಾರ್‌, ಬೇಗ ಕೂಲ್ ಆಗುವುದಲ್ಲದೆ, 500 ಕಿಲೋವ್ಯಾಟ್ ವರೆಗೆ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
(7 / 12)
ಬಿವೈಡಿಯ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಹೊಂದಿರುವ ಸೂಪರ್ ಕಾರ್‌, ಬೇಗ ಕೂಲ್ ಆಗುವುದಲ್ಲದೆ, 500 ಕಿಲೋವ್ಯಾಟ್ ವರೆಗೆ ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.(Bloomberg)
ಎಲ್ಲಾ ನಾಲ್ಕು ಚಕ್ರಗಳನ್ನು ಸ್ವತಂತ್ರವಾಗಿ ನಿಯಂತ್ರಿಸುವ ತಂತ್ರಜ್ಞಾನ ಈ ಸೂಪರ್‌ಕಾರಿನಲ್ಲಿದ್ದು, ಇದು ಕಾರನ್ನು ಸ್ಥಿರತೆ ಮತ್ತು ಸುರಕ್ಷತೆಯೊಂದಿಗೆ ನಿಯಂತ್ರಿಸಲು ಸಹಾಯ ಮಾಡುತ್ತದೆ.
(8 / 12)
ಎಲ್ಲಾ ನಾಲ್ಕು ಚಕ್ರಗಳನ್ನು ಸ್ವತಂತ್ರವಾಗಿ ನಿಯಂತ್ರಿಸುವ ತಂತ್ರಜ್ಞಾನ ಈ ಸೂಪರ್‌ಕಾರಿನಲ್ಲಿದ್ದು, ಇದು ಕಾರನ್ನು ಸ್ಥಿರತೆ ಮತ್ತು ಸುರಕ್ಷತೆಯೊಂದಿಗೆ ನಿಯಂತ್ರಿಸಲು ಸಹಾಯ ಮಾಡುತ್ತದೆ.(Bloomberg)
ಬಿವೈಡಿ ಯಾಂಗ್ವಾಂಗ್ ಯು 9 ಪ್ರತಿ ಚಾರ್ಜ್‌ನಲ್ಲಿ 450 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ ನಿಜವಾದ ವ್ಯಾಪ್ತಿಯು ಅದನ್ನು ಹೇಗೆ ಚಲಾಯಿಸಲಾಗುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
(9 / 12)
ಬಿವೈಡಿ ಯಾಂಗ್ವಾಂಗ್ ಯು 9 ಪ್ರತಿ ಚಾರ್ಜ್‌ನಲ್ಲಿ 450 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುವ ಶಕ್ತಿಯನ್ನು ಹೊಂದಿದೆ. ಆದರೆ ಅದರ ನಿಜವಾದ ವ್ಯಾಪ್ತಿಯು ಅದನ್ನು ಹೇಗೆ ಚಲಾಯಿಸಲಾಗುತ್ತಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.(Bloomberg)
ವಿನ್ಯಾಸದ ವಿಷಯದಲ್ಲಿ, ಯಾಂಗ್ವಾಂಗ್ ಯು 9 ಭವಿಷ್ಯದ ಸೂಪರ್ ಕಾರ್ ಆಗಿ ಕಾಣುತ್ತದೆ. ಈ ಕಾರು 4,966 ಎಂಎಂ ಉದ್ದ, 2,029 ಎಂಎಂ ಅಗಲ ಮತ್ತು 1,295 ಎಂಎಂ ಎತ್ತರವನ್ನು ಹೊಂದಿದೆ.
(10 / 12)
ವಿನ್ಯಾಸದ ವಿಷಯದಲ್ಲಿ, ಯಾಂಗ್ವಾಂಗ್ ಯು 9 ಭವಿಷ್ಯದ ಸೂಪರ್ ಕಾರ್ ಆಗಿ ಕಾಣುತ್ತದೆ. ಈ ಕಾರು 4,966 ಎಂಎಂ ಉದ್ದ, 2,029 ಎಂಎಂ ಅಗಲ ಮತ್ತು 1,295 ಎಂಎಂ ಎತ್ತರವನ್ನು ಹೊಂದಿದೆ.(Bloomberg)
ಚೂಪು ಮುಖದಲ್ಲಿ ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ದೊಡ್ಡ  ಗ್ರಿಲ್ ಅನ್ನು ಒಳಗೊಂಡಿದೆ. ಅಲಾಯ್ ಚಕ್ರಗಳು 20 ಇಂಚುಗಳದ್ದಾಗಿ ಗಮನಸೆಳೆಯುತ್ತವೆ.
(11 / 12)
ಚೂಪು ಮುಖದಲ್ಲಿ ಸ್ಲಿಮ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಮುಂಭಾಗದ ದೊಡ್ಡ  ಗ್ರಿಲ್ ಅನ್ನು ಒಳಗೊಂಡಿದೆ. ಅಲಾಯ್ ಚಕ್ರಗಳು 20 ಇಂಚುಗಳದ್ದಾಗಿ ಗಮನಸೆಳೆಯುತ್ತವೆ.(Bloomberg)
ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿರುವ ಚೀನಾದ ಬಿವೈಡಿ ಮಾರುಕಟ್ಟೆಗೆ ಪರಿಚಯಿಸಿರುವ ಯಾಂಗ್ವಾಂಗ್ ಯು 9 ಸೂಪರ್ ಕಾರಿನ ಒಂದು ನೋಟ.
(12 / 12)
ಫೆರಾರಿ, ಲ್ಯಾಂಬೊರ್ಗಿನಿಗೆ ಸವಾಲು ಹಾಕೋಕೆ ಬಯಸಿರುವ ಚೀನಾದ ಬಿವೈಡಿ ಮಾರುಕಟ್ಟೆಗೆ ಪರಿಚಯಿಸಿರುವ ಯಾಂಗ್ವಾಂಗ್ ಯು 9 ಸೂಪರ್ ಕಾರಿನ ಒಂದು ನೋಟ.(Bloomberg)

    ಹಂಚಿಕೊಳ್ಳಲು ಲೇಖನಗಳು