logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tvs X Electric Scooter: ಬೆಂಗಳೂರಿಗೂ ಬಂದಿದೆ ಹೊಸ ಇಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಎಕ್ಸ್; ದರ ಎಷ್ಟು, ವಿಶೇಷ ಫೀಚರ್ಸ್ ಏನೇನು

TVS X electric scooter: ಬೆಂಗಳೂರಿಗೂ ಬಂದಿದೆ ಹೊಸ ಇಲೆಕ್ಟ್ರಿಕ್ ಸ್ಕೂಟರ್ ಟಿವಿಎಸ್ ಎಕ್ಸ್; ದರ ಎಷ್ಟು, ವಿಶೇಷ ಫೀಚರ್ಸ್ ಏನೇನು

Aug 26, 2023 05:00 PM IST

TVS X electric scooter: ಟಿವಿಎಸ್ ಮೋಟಾರ್ ಕಂಪನಿ ಇತ್ತೀಚೆಗೆ ದುಬೈನಲ್ಲಿ ತನ್ನ ಹೊಸ ಇಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಅನ್ನು ಬಿಡುಗಡೆ ಮಾಡಿತು. ಕಂಪನಿ ಈ ಸ್ಕೂಟರ್ ಅನ್ನು ಪ್ರೀಮಿಯಂ ಇಲೆಕ್ಟ್ರಿಕ್‌ ಕ್ರಾಸ್‌ಓವರ್ ಎಂದು ಬಣ್ಣಿಸಿದೆ. ಇದು ಬೆಂಗಳೂರಿನ ಮಾರುಕಟ್ಟೆಯಲ್ಲೂ ಲಭ್ಯವಿದೆ. ಇದರ ದರ, ಡಿಸೈನ್ ಮತ್ತು ಇತರೆ ವಿವರ ಹೀಗಿದೆ. 

TVS X electric scooter: ಟಿವಿಎಸ್ ಮೋಟಾರ್ ಕಂಪನಿ ಇತ್ತೀಚೆಗೆ ದುಬೈನಲ್ಲಿ ತನ್ನ ಹೊಸ ಇಲೆಕ್ಟ್ರಿಕ್ ಸ್ಕೂಟರ್ ಎಕ್ಸ್ ಅನ್ನು ಬಿಡುಗಡೆ ಮಾಡಿತು. ಕಂಪನಿ ಈ ಸ್ಕೂಟರ್ ಅನ್ನು ಪ್ರೀಮಿಯಂ ಇಲೆಕ್ಟ್ರಿಕ್‌ ಕ್ರಾಸ್‌ಓವರ್ ಎಂದು ಬಣ್ಣಿಸಿದೆ. ಇದು ಬೆಂಗಳೂರಿನ ಮಾರುಕಟ್ಟೆಯಲ್ಲೂ ಲಭ್ಯವಿದೆ. ಇದರ ದರ, ಡಿಸೈನ್ ಮತ್ತು ಇತರೆ ವಿವರ ಹೀಗಿದೆ. 
ಭಾರತದ ಮಾರುಕಟ್ಟೆಗೆ ಸಂಬಂಧಿಸಿ ಟಿವಿಎಸ್ ಎಕ್ಸ್ (TVS X) ಮೊದಲ ಇಲೆಕ್ಟ್ರಿಕ್ ಮ್ಯಾಕ್ಸಿ-ಸ್ಕೂಟರ್ ಆಗಿದೆ. ತಂತ್ರಜ್ಞಾನ ಮತ್ತು ಫೀಚರ್ಸ್‌ಗಳೊಂದಿಗೆ ಲೋಡ್ ಆಗಿರುವ ಟಿವಿಎಸ್ ಎಕ್ಸ್ ಕುರಿತು ಈ ಐದು ವಿಷಯಗಳು ನೀವು ತಿಳಿದಿರಿ.
(1 / 5)
ಭಾರತದ ಮಾರುಕಟ್ಟೆಗೆ ಸಂಬಂಧಿಸಿ ಟಿವಿಎಸ್ ಎಕ್ಸ್ (TVS X) ಮೊದಲ ಇಲೆಕ್ಟ್ರಿಕ್ ಮ್ಯಾಕ್ಸಿ-ಸ್ಕೂಟರ್ ಆಗಿದೆ. ತಂತ್ರಜ್ಞಾನ ಮತ್ತು ಫೀಚರ್ಸ್‌ಗಳೊಂದಿಗೆ ಲೋಡ್ ಆಗಿರುವ ಟಿವಿಎಸ್ ಎಕ್ಸ್ ಕುರಿತು ಈ ಐದು ವಿಷಯಗಳು ನೀವು ತಿಳಿದಿರಿ.(TVS)
ಟಿವಿಎಸ್ ಎಕ್ಸ್ ಇಲೆಕ್ಟ್ರಿಕ್ ಸ್ಕೂಟರ್ 2018ರ ಆಟೋ ಎಕ್ಸ್‌ಪೋನಲ್ಲಿ ಅನಾವರಣಗೊಳಿಸಿದ್ದ ಕ್ರೆಯೋನ್‌ ಸ್ಕೂಟರ್‍‌ನ ಉತ್ಪಾದನಾ ಮಾದರಿಯಾಗಿದೆ. ಸ್ಪೋರ್‍ಟಿ ಮ್ಯಾಕ್ಸಿ ಸ್ಕೂಟರ್‍‌ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರದ್ದು ಒಂದು ರೀತಿ ಆಕ್ರಮಣಕಾರಿ ಸ್ಟೈಲ್‌. ಈ ಸ್ಕೂಟರ್‍‌ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳ ಮಿಶ್ರಣದೊಂದಿಗೆ ಥಟ್ಟಂತ ಆಕರ್ಷಿಸುವ ನೋಟ ಹೊಂದಿದೆ. 
(2 / 5)
ಟಿವಿಎಸ್ ಎಕ್ಸ್ ಇಲೆಕ್ಟ್ರಿಕ್ ಸ್ಕೂಟರ್ 2018ರ ಆಟೋ ಎಕ್ಸ್‌ಪೋನಲ್ಲಿ ಅನಾವರಣಗೊಳಿಸಿದ್ದ ಕ್ರೆಯೋನ್‌ ಸ್ಕೂಟರ್‍‌ನ ಉತ್ಪಾದನಾ ಮಾದರಿಯಾಗಿದೆ. ಸ್ಪೋರ್‍ಟಿ ಮ್ಯಾಕ್ಸಿ ಸ್ಕೂಟರ್‍‌ ಮಾದರಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರದ್ದು ಒಂದು ರೀತಿ ಆಕ್ರಮಣಕಾರಿ ಸ್ಟೈಲ್‌. ಈ ಸ್ಕೂಟರ್‍‌ ಕೆಂಪು, ಕಪ್ಪು ಮತ್ತು ನೀಲಿ ಬಣ್ಣಗಳ ಮಿಶ್ರಣದೊಂದಿಗೆ ಥಟ್ಟಂತ ಆಕರ್ಷಿಸುವ ನೋಟ ಹೊಂದಿದೆ. (TVS)
ಟಿವಿಎಸ್ ಎಕ್ಸ್‌ನ ಫೀಚರ್ಸ್‌ ಬಗ್ಗೆ ಹೇಳುವುದಾದರೆ, ಎಲ್ಲ ಅತ್ಯಾಧುನಿಕ ಫೀಚರ್ಸ್ ಇವೆ ಎಂದು ಹೇಳಲು ಅಡ್ಡಿ ಇಲ್ಲ. ಟಿಲ್ಟ್ ಅಡ್ಜೆಸ್ಟೆಬಲ್‌ 10.25 ಇಂಚಿನ ಸಮತಲ ಟಚ್‌ಸ್ಕ್ರೀನ್ ಹೊಂದಿದೆ. ಅದರಲ್ಲಿ ವಾಲ್‌ ಪೇಪರ್‍‌, ಥೀಮ್‌, ಪ್ರೊಫೈಲ್‌ಗಳನ್ನು ಹೊಂದಿಸುವುದಕ್ಕೆ ಅವಕಾಶವಿದೆ. ಇವಿ ರೂಟಿಂಗ್‌ ಜತೆಗೆ ನ್ಯಾವಿಗೇಶನ್ ಸಿಸ್ಟಮ್ ಕೂಡ ಇದೆ. ಇದರಲ್ಲಿ, ರೂಟ್ ಮ್ಯಾಪ್‌, ಜಿಪಿಎಸ್‌, ಹವಾಮಾನ, ರೈಡರ್‍‌ನ ಸಹ ಸವಾರಿ ಸ್ಥಿತಿಯನ್ನೂ ಶೇರ್ ಮಾಡಬಹುದಾಗಿದೆ. ಅಲೆಕ್ಸಾವನ್ನೂ ಇದರೊಂದಿಗೆ ಸಂಯೋಜಿಸಲಾಗಿದೆ. ಕಳವು ನಿರೋಧಕ ಅಲರ್ಟ್, ಫಾಲ್ ಅಲರ್ಟ್, ಆಟೋ ಲಾಕ್, ಎಸ್‌ಒಎಸ್‌ನಂತಹ ಸುರಕ್ಷತಾ ಫೀಚರ್ಸ್ ಅನ್ನೂ ಹೊಂದಿದೆ. ಇದಲ್ಲದೆ, ಬ್ಲೂಟೂತ್ ಸಂಪರ್ಕವೂ ಇದೆ. ಈ ಸ್ಕ್ರೀನ್‌ನಲ್ಲಿ ಸವಾರನು ಆಟ ಆಡಬಹುದು ಮತ್ತು ವಿಡಿಯೋಗಳನ್ನೂ ವೀಕ್ಷಿಸಬಹುದು.
(3 / 5)
ಟಿವಿಎಸ್ ಎಕ್ಸ್‌ನ ಫೀಚರ್ಸ್‌ ಬಗ್ಗೆ ಹೇಳುವುದಾದರೆ, ಎಲ್ಲ ಅತ್ಯಾಧುನಿಕ ಫೀಚರ್ಸ್ ಇವೆ ಎಂದು ಹೇಳಲು ಅಡ್ಡಿ ಇಲ್ಲ. ಟಿಲ್ಟ್ ಅಡ್ಜೆಸ್ಟೆಬಲ್‌ 10.25 ಇಂಚಿನ ಸಮತಲ ಟಚ್‌ಸ್ಕ್ರೀನ್ ಹೊಂದಿದೆ. ಅದರಲ್ಲಿ ವಾಲ್‌ ಪೇಪರ್‍‌, ಥೀಮ್‌, ಪ್ರೊಫೈಲ್‌ಗಳನ್ನು ಹೊಂದಿಸುವುದಕ್ಕೆ ಅವಕಾಶವಿದೆ. ಇವಿ ರೂಟಿಂಗ್‌ ಜತೆಗೆ ನ್ಯಾವಿಗೇಶನ್ ಸಿಸ್ಟಮ್ ಕೂಡ ಇದೆ. ಇದರಲ್ಲಿ, ರೂಟ್ ಮ್ಯಾಪ್‌, ಜಿಪಿಎಸ್‌, ಹವಾಮಾನ, ರೈಡರ್‍‌ನ ಸಹ ಸವಾರಿ ಸ್ಥಿತಿಯನ್ನೂ ಶೇರ್ ಮಾಡಬಹುದಾಗಿದೆ. ಅಲೆಕ್ಸಾವನ್ನೂ ಇದರೊಂದಿಗೆ ಸಂಯೋಜಿಸಲಾಗಿದೆ. ಕಳವು ನಿರೋಧಕ ಅಲರ್ಟ್, ಫಾಲ್ ಅಲರ್ಟ್, ಆಟೋ ಲಾಕ್, ಎಸ್‌ಒಎಸ್‌ನಂತಹ ಸುರಕ್ಷತಾ ಫೀಚರ್ಸ್ ಅನ್ನೂ ಹೊಂದಿದೆ. ಇದಲ್ಲದೆ, ಬ್ಲೂಟೂತ್ ಸಂಪರ್ಕವೂ ಇದೆ. ಈ ಸ್ಕ್ರೀನ್‌ನಲ್ಲಿ ಸವಾರನು ಆಟ ಆಡಬಹುದು ಮತ್ತು ವಿಡಿಯೋಗಳನ್ನೂ ವೀಕ್ಷಿಸಬಹುದು.(TVS)
ಈ ಸ್ಕೂಟರ್‍‌ನಲ್ಲಿ ಮೂರು ರೈಡಿಂಗ್ ಮೋಡ್‌ಗಳಿವೆ. ರೇಗನ್‌ ಸೆಲೆಕ್ಷನ್‌, ಕ್ರೂಸ್ ಕಂಟ್ರೋಲ್‌, ರಿವರ್ಸ್ ಅಸಿಸ್ಟೆಂಟ್‌, ಸಿಂಗಲ್‌ ಚಾನೆಲ್ ಎಬಿಎಸ್‌, ಸ್ಟಾರ್ಟ್ ಮಾಡುವುದಕ್ಕೆ ಕೀ ಬೇಡ ಮುಂತಾಗಿ ಹಲವು ಫೀಚರ್ಸ್ ಅನ್ನು ಹೊಂದಿದೆ. ಟಿವಿಎಸ್ ಎಕ್ಸ್ ಚಾರ್ಜಿಂಗ್ ಸರಳಗೊಳಿಸಿದ್ದು, 950 W  ಚಾರ್ಜರ್ ಅನ್ನು ಒದಗಿಸಿದೆ. ಇದು 3 ಗಂಟೆ 40 ನಿಮಿಷದಲ್ಲಿ ಶೂನ್ಯದಿಂದ ಶೇಕಡ 80ರ ತನಕ ಚಾರ್ಜಿಂಗ್ ಪೂರ್ಣಗೊಳಿಸುತ್ತದೆ ಎಂದು ಕಂಪನಿಯ ವೆಬ್ ಸೈಟ್ ಮಾಹಿತಿ ನೀಡಿದೆ. 
(4 / 5)
ಈ ಸ್ಕೂಟರ್‍‌ನಲ್ಲಿ ಮೂರು ರೈಡಿಂಗ್ ಮೋಡ್‌ಗಳಿವೆ. ರೇಗನ್‌ ಸೆಲೆಕ್ಷನ್‌, ಕ್ರೂಸ್ ಕಂಟ್ರೋಲ್‌, ರಿವರ್ಸ್ ಅಸಿಸ್ಟೆಂಟ್‌, ಸಿಂಗಲ್‌ ಚಾನೆಲ್ ಎಬಿಎಸ್‌, ಸ್ಟಾರ್ಟ್ ಮಾಡುವುದಕ್ಕೆ ಕೀ ಬೇಡ ಮುಂತಾಗಿ ಹಲವು ಫೀಚರ್ಸ್ ಅನ್ನು ಹೊಂದಿದೆ. ಟಿವಿಎಸ್ ಎಕ್ಸ್ ಚಾರ್ಜಿಂಗ್ ಸರಳಗೊಳಿಸಿದ್ದು, 950 W  ಚಾರ್ಜರ್ ಅನ್ನು ಒದಗಿಸಿದೆ. ಇದು 3 ಗಂಟೆ 40 ನಿಮಿಷದಲ್ಲಿ ಶೂನ್ಯದಿಂದ ಶೇಕಡ 80ರ ತನಕ ಚಾರ್ಜಿಂಗ್ ಪೂರ್ಣಗೊಳಿಸುತ್ತದೆ ಎಂದು ಕಂಪನಿಯ ವೆಬ್ ಸೈಟ್ ಮಾಹಿತಿ ನೀಡಿದೆ. (TVS)
ಮ್ಯಾಕ್ಸಿ ಸ್ಕೂಟರ್‍‌ ಬೆಂಗಳೂರಿನಲ್ಲೂ ಲಭ್ಯ ಇದೆ. ಇದರ ಎಕ್ಸ್ ಶೋರೂಂ ದರ 2,49,990 ರೂಪಾಯಿ. ಮಾಧ್ಯಮ ವರದಿ ಪ್ರಕಾರ, ಈ ಸ್ಕೂಟರ್‍‌ಗೆ ಸರಕಾರದ ಯಾವುದೇ ಸಬ್ಸಿಡಿ ಸಿಗುವುದಿಲ್ಲ
(5 / 5)
ಮ್ಯಾಕ್ಸಿ ಸ್ಕೂಟರ್‍‌ ಬೆಂಗಳೂರಿನಲ್ಲೂ ಲಭ್ಯ ಇದೆ. ಇದರ ಎಕ್ಸ್ ಶೋರೂಂ ದರ 2,49,990 ರೂಪಾಯಿ. ಮಾಧ್ಯಮ ವರದಿ ಪ್ರಕಾರ, ಈ ಸ್ಕೂಟರ್‍‌ಗೆ ಸರಕಾರದ ಯಾವುದೇ ಸಬ್ಸಿಡಿ ಸಿಗುವುದಿಲ್ಲ(TVS)

    ಹಂಚಿಕೊಳ್ಳಲು ಲೇಖನಗಳು