logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Xiaomi Su7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು

Xiaomi SU7 : ಇಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಗೆ ಷಓಮಿ ಎಸ್‌ಯು7 ಪ್ರವೇಶ, 800 ಕಿಮೀ ರೇಂಜ್‌ನ ಚೊಚ್ಚಲ ಇ-ಕಾರು

Dec 28, 2023 08:37 PM IST

ಬಹಳ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪನಿ ಚೀನಾ ಮೂಲದ ಷಓಮಿ ತನ್ನ ಮೊದಲ ಎಲೆಕ್ಟ್ರಿಕ್ ಕಾರು ಎಸ್‌ಯು7 ಸೆಡಾನ್ ಅನ್ನು ಚೀನಾದ ಮಾರುಕಟ್ಟೆಗೆ ಪರಿಚಯಿಸಿದೆ. ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಹೂಡಿಕೆ ಮಾಡಲು ಷಓಮಿ ಮುಂದಾಗಿದೆ. ಚೊಚ್ಚಲ ಇ-ಕಾರಿನ ಮೊದಲ ನೋಟ ಮತ್ತು ಫೀಚರ್‌ ವಿವರ, ಫೋಟಗಳು ಇಲ್ಲಿವೆ. 

ಸ್ಮಾರ್ಟ್‌ಫೋನ್ ಉತ್ಪಾದಕ ದಿಗ್ಗಜ ಕಂಪನಿ ಷಓಮಿ ಚೀನಾದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಅನಾವರಣಗೊಳಿಸಿದೆ. ಈ ಕಾರಿಗೆ ಎಸ್‌ಯು 7 ಎಂಬ ಹೆಸರನ್ನು ಷಓಮಿ ಇಟ್ಟಿದೆ. ಎಸ್‌ಯು ಎಂದರೆ ಸ್ಪೀಡ್‌ ಅಲ್ಟ್ರಾ ಎಂಬುದರ ಸಂಕ್ಷಿಪ್ತ ರೂಪ. ಎಲೆಕ್ಟ್ರಿಕ್ ಸೆಡಾನ್ ಅನ್ನು ಬೀಜಿಂಗ್‌ನಲ್ಲಿ ಚೀನಾದ ಕಾರು ತಯಾರಕ ಬಿಎಐಸಿ ಗ್ರೂಪ್ ಒಡೆತನದ ಸೌಲಭ್ಯಗಳ ಪೈಕಿ ಒಂದರಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿ ವಾರ್ಷಿಕ 2 ಲಕ್ಷ ವಾಹನಗಳ ಉತ್ಪಾದನೆಯಾಗುತ್ತದೆ.  
(1 / 8)

ಷಓಮಿ ಎಸ್‌ಯು 7 ಕಾರು 4-ಬಾಗಿಲಿನ ಎಲೆಕ್ಟ್ರಿಕ್ ಸೆಡಾನ್ ಆಗಿದ್ದು, ಇದು 4,997 ಎಂಎಂ ಉದ್ದ, 1,963 ಎಂಎಂ ಅಗಲ ಮತ್ತು 1,455 ಎಂಎಂ ಎತ್ತರವನ್ನು ಹೊಂದಿದೆ. ಇದರ ವ್ಹೀಲ್ ಬೇಸ್‌ 3,000 ಎಂಎಂ ಇದೆ. 
(2 / 8)

ಷಓಮಿ ಎಸ್‌ಯು7 ತನ್ನ ಬ್ಯಾಟರಿಯ ಶಕ್ತಿಯ ಶೇಖರಣಾ ಸಾಮರ್ಥ್ಯದಿಂದ ವಿಭಿನ್ನವಾಗಿದೆ. ಈ ಕಾರು ಎರಡು ಕಾನ್ಫಿಗರೇಶನ್‌ಗಳಲ್ಲಿ ಲಭ್ಯವಿದೆ. ಆದರೂ ಶ್ರೇಣಿಯು ಅವುಗಳ ಶಕ್ತಿಯ ಆಧಾರದ ಮೇಲೆ ಹೆಚ್ಚಿನ ಆವೃತ್ತಿಗಳಿವೆ.  
(3 / 8)

ಷಓಮಿ ಎಸ್‌ಯು7 ರ ಪ್ರವೇಶ ಮಟ್ಟದ ಮಾದರಿಯು 73.6 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಲಭ್ಯವಿದೆ. ಟಾಪ್-ಆಫ್-ಲೈನ್ ರೂಪಾಂತರವು ದೊಡ್ಡ 101 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಷಓಮಿ ತನ್ನದೇ ಆದ ಸಿಟಿಬಿ (ಸೆಲ್-ಟು-ಬಾಡಿ) ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ, ಇದು ಬ್ಯಾಟರಿಯನ್ನು ವಾಹನಕ್ಕೆ ಸಂಯೋಜಿಸುತ್ತದೆ, ವಿಶಾಲವಾದ ಕ್ಯಾಬಿನ್‌ ಒದಗಿಸುವುದಕ್ಕಾಗಿ ಬ್ಯಾಟರಿಯ ಎತ್ತರವನ್ನು ಕಡಿಮೆ ಮಾಡುತ್ತದೆ.
(4 / 8)

ಇವಿ ತಯಾರಕರ ಪ್ರಕಾರ, ಎಸ್‌ಯು 7 ಒಂದೇ ಚಾರ್ಜ್‌ನಲ್ಲಿ 800 ಕಿಮೀ ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಷಓಮಿ 2025 ರಲ್ಲಿ 1,200 ಕಿಮೀ ಸಂಚರಿಸುವ ಸಾಮರ್ಥ್ಯ ಒದಗಿಸುವ ದೊಡ್ಡ 150 kWh ಬ್ಯಾಟರಿ ಪ್ಯಾಕ್‌ನೊಂದಿಗೆ ವಿಬಿ ಎಂಬ ಹೊಸ ಮಾದರಿಯನ್ನು ಪರಿಚಯಿಸುವ ಯೋಜನೆ ಹೊಂದಿದೆ.
(5 / 8)

ಹೆಚ್ಚು -ಉತ್ಪಾದಿತ ಎರಡು ಮೋಟಾರ್‌ಗಳನ್ನು ಗುರುತಿಸುವುದಾದರೆ,  V6 ಮತ್ತು V6S ಎನ್ನಬಹುದು. ಇವು ಕ್ರಮವಾಗಿ 299 hp ಮತ್ತು 374 hp ಶಕ್ತಿ ಸಾಮರ್ಥ್ಯ ಹೊಂದಿವೆ  ಕಡಿಮೆ ಸಾಮರ್ಥ್ಯದ ಮಾದರಿಯ ಗರಿಷ್ಠ ವೇಗವು  ಗಂಟೆಗೆ 210 kmp ಮತ್ತು ಹೆಚ್ಚಿನ ಮಾಡೆಲ್‌ನ ವೇಗವು ಗಂಟೆಗೆ 265 kmp ಆಗಿದೆ.
(6 / 8)

ಸ್ವಯಂ-ಪಾರ್ಕಿಂಗ್‌ನಂತಹ ಸ್ವಾಯತ್ತ ಚಾಲನಾ ವೈಶಿಷ್ಟ್ಯಗಳು ಈ ಕಾರಿನ ವಿಶೇಷಗಳ ಪೈಕಿ ಒಂದು. ಷಓಮಿ ಇಂದು (ಡಿ.28) ನಡೆದ ಕಾರ್ಯಕ್ರಮದಲ್ಲಿ ತನ್ನ ಸ್ವಯಂ ಚಾಲನಾ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.  ಇದು ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳು, ಲಿಡಾರ್, ಅಲ್ಟ್ರಾಸಾನಿಕ್ ಮತ್ತು ರೇಡಾರ್ ಅನ್ನು ಬಳಸುತ್ತಿರುವುದು ವಿಶೇಷ.
(7 / 8)

ಟೆಸ್ಲಾ ಮಾಡೆಲ್ S ಮತ್ತು ಪೋರ್ಷೆ ಟೇಯ್‌ಕಾನ್‌ ಕಾರುಗಳು ಷಓಮಿ SU7 ನ ಪ್ರಾಥಮಿಕ ಪ್ರತಿಸ್ಪರ್ಧಿಗಳು. ಆದಾಗ್ಯೂ, ಸದ್ಯದ ಮಟ್ಟಿಗೆ ಎಸ್‌ಯು 7 ಚೀನಾ ಬಿಟ್ಟು ಹೊರಗಿನ ಮಾರುಕಟ್ಟೆ ಪ್ರವೇಶಿಸುವ ಮಾತಿಲ್ಲ.
(8 / 8)

    ಹಂಚಿಕೊಳ್ಳಲು ಲೇಖನಗಳು