logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  2023 Kia Seltos: ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿ ಹೊಸ ಕಿಯಾ ಸೆಲ್ಟೊಸ್‌ ಆಗಮನ, ಹಲವು ಫೀಚರ್‌ಗಳ ಸಮಾಗಮ, ಇಲ್ಲಿದೆ ಫಸ್ಟ್‌ ಲುಕ್‌ ರಿವ್ಯೂ

2023 Kia Seltos: ಹ್ಯುಂಡೈ ಕ್ರೇಟಾ ಪ್ರತಿಸ್ಪರ್ಧಿ ಹೊಸ ಕಿಯಾ ಸೆಲ್ಟೊಸ್‌ ಆಗಮನ, ಹಲವು ಫೀಚರ್‌ಗಳ ಸಮಾಗಮ, ಇಲ್ಲಿದೆ ಫಸ್ಟ್‌ ಲುಕ್‌ ರಿವ್ಯೂ

Jul 04, 2023 02:45 PM IST

2023 Kia Seltos: ಕಿಯಾ ಕಂಪನಿಯು ಜನಪ್ರಿಯ ಸೆಲ್ಟೊಸ್‌ ಕಾರಿನ ಹೊಸ ಆವೃತ್ತಿ ಆಗಮಿಸಿದೆ. ಹೊಸ ಎಂಜಿನ್‌, ಕಾಸ್ಮೆಟಿಕ್‌ ವಿನ್ಯಾಸದಲ್ಲಿ ಬದಲಾವಣೆ ಸೇರಿದಂತೆ ಹೊಸ ಆವೃತ್ತಿಯಲ್ಲಿ ಸಾಕಷ್ಟು ಹೊಸತುಗಳಿವೆ. ಈ ಕುರಿತು ಮಾಹಿತಿ ಪಡೆಯೋಣ ಬನ್ನಿ.

  • 2023 Kia Seltos: ಕಿಯಾ ಕಂಪನಿಯು ಜನಪ್ರಿಯ ಸೆಲ್ಟೊಸ್‌ ಕಾರಿನ ಹೊಸ ಆವೃತ್ತಿ ಆಗಮಿಸಿದೆ. ಹೊಸ ಎಂಜಿನ್‌, ಕಾಸ್ಮೆಟಿಕ್‌ ವಿನ್ಯಾಸದಲ್ಲಿ ಬದಲಾವಣೆ ಸೇರಿದಂತೆ ಹೊಸ ಆವೃತ್ತಿಯಲ್ಲಿ ಸಾಕಷ್ಟು ಹೊಸತುಗಳಿವೆ. ಈ ಕುರಿತು ಮಾಹಿತಿ ಪಡೆಯೋಣ ಬನ್ನಿ.
ಕಿಯಾ ಕಂಪನಿಯು 2023ರ ಸೆಲ್ಟೊಸ್‌ ಆವೃತ್ತಿಯನ್ನು ಭಾರತದ ರಸ್ತೆಗೆ ಪರಿಚಯಿಸಿದೆ. ಪರಿಷ್ಕೃತ ಎಕ್ಸ್‌ಟೀರಿಯರ್‌, ಹೊಸ ಫೀಚರ್‌ಗಳ ಜತೆ ಹೊಸ ಪೆಟ್ರೋಲ್‌ ಎಂಜಿನ್‌ ಆಯ್ಕೆಯೂ ಲಭ್ಯ. ಈ ಕಾರಿನ ಬುಕ್ಕಿಂಗ್‌ ಜುಲೈ 14ರಿಂದ ಆರಂಭಗೊಳ್ಳಲಿದೆ.
(1 / 11)

ನೂತನ ಸೆಲ್ಟೊಸ್‌ನ ಒಂದು ಪ್ರಮುಖ ಆಕರ್ಷಣೆಯೆಂದರೆ 1.5 ಲೀಟರ್‌ನ ಟರ್ಬೊ ಪೆಟ್ರೋಲ್‌ ಎಂಜಿನ್‌. ಈ ಹಿಂದಿನ 1.4 ಲೀಟರ್‌ನ ಟರ್ಬೊ ಪೆಟ್ರೋಲ್‌ ಎಂಜಿನ್‌ ಬದಲಾಗಿ ಈ ಎಂಜಿನ್‌ ಪರಿಚಯಿಸಲಾಗಿದೆ. ನೂತನ ಎಂಜಿನ್‌ 160 ಪಿಎಸ್‌ ಗರಿಷ್ಠ ಶಕ್ತಿ ಮತ್ತು 250 ಎನ್‌ಎಂ ಟಾರ್ಕ್‌ ಒದಗಿಸುತ್ತದೆ. 
(2 / 11)

ಕಿಯಾ ಕಂಪನಿಯು ಪೆವ್‌ಟರ್‌ ಒಲಿವ್‌ ಹೆಸರಿನ ಹೊಸ ಕಲರ್‌ ಸ್ಕೀಮ್‌ ಪರಿಚಯಿಸಿದೆ. ಇದರಲ್ಲಿ ಹೊಸ ಸೆಟ್‌ ಹೆಡ್‌ಲ್ಯಾಂಪ್‌ಗಳೂ ಇವೆ. ಟೇಲ್‌ ಲ್ಯಾಂಪ್‌ ಕೂಡ ಹೊಸತು. ಬಂಪರ್‌ಗಳನ್ನೂ ಮರುವಿನ್ಯಾಸ ಮಾಡಲಾಗಿದೆ. ಒಟ್ಟಾರೆ, ಹಳೆಯ ಸೆಲ್ಟೊಸ್‌ಗಿಂತ ಹೊಸ ಸೆಲ್ಟೊಸ್‌ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತದೆ.  
(3 / 11)

ಎಸ್‌ಯುವಿಯು ಲೆವೆಲ್‌ 2 ಎಡಿಎಎಸ್‌ ಅಥವಾ ಅಡ್ವಾನ್ಸಡ್‌ ಡ್ರೈವರ್‌ ಏಡ್‌ ಸಿಸ್ಟಮ್‌ ಹೊಂದಿದೆ. ಇದರಲ್ಲಿ ಮೂರು ರಾಡರ್‌ಗಳು ಮತ್ತು ಒಂದು ಕ್ಯಾಮೆರಾ ಇದ್ದು, ಎಡಿಎಎಸ್‌ಗೆ ಬೆಂಬಲ ನೀಡುತ್ತವೆ. ಫ್ರಂಟ್‌ ಕಲಿಷನ್‌ ವಾರ್ನಿಂಗ್‌, ಡ್ರೈವರ್‌ ಅಟೆನ್ಷನ್‌ ವಾರ್ನಿಂಗ್‌, ಬ್ಲೈಂಡ್‌ ಸ್ಪಾಟ್‌ ಕಲಿಷನ್‌, ಸ್ಮಾರ್ಟ್‌ ಕ್ರೂಸ್‌ ಕಂಟ್ರೋಲ್‌, ಲೇನ್‌ ಕೀಪ್‌ ಅಸಿಸ್ಟ್‌ ಇತ್ಯಾದಿ ಹಲವು ಫೀಚರ್‌ಗಳಿವೆ. 
(4 / 11)

ನೂತನ ಸೆಲ್ಟೊಸ್‌ 17 ಇಂಚಿನ ಅಲಾಯ್‌ ವೀಲ್‌ಗಳನ್ನು ಹೊಂದಿದೆ. ಇದರಲ್ಲಿ ಈ ಸೆಗ್ಮೆಂಟ್‌ನಲ್ಲಿಯೇ ಮೊದಲ ಬಾರಿಗೆ 18 ಇಂಚಿನ ಕ್ರಿಸ್ಟಲ್‌ ಕಟ್‌ ಗ್ಲೋಸಿ ಬ್ಲಾಕ್‌ ಅಲಾಯ್‌ವೀಲ್‌ ಇದೆ. 
(5 / 11)

ಹೊಸ ಕಿಯಾ ಸೆಲ್ಟೊಸ್‌ನಲ್ಲಿ 15 ಸುರಕ್ಷತಾ ಫೀಚರ್‌ಗಳಿವೆ. ಆರು ಏರ್‌ಬ್ಯಾಗ್‌ಗಳು, 3 ಪಾಯಿಂಟ್‌ ಸೀಟ್‌ ಬೆಲ್ಟ್‌ಗಳು, ಎಬಿಎಸ್‌, ಬ್ರೇಕ್‌ ಅಸಿಸ್ಟ್‌, ಆಲ್‌ ವೀಲ್‌ ಡಿಸ್ಕ್‌ ಬ್ರೇಕ್‌ಗಳು, ಎಲೆಕ್ಟ್ರಾನಿಕ್‌ ಸ್ಟೆಬಲಿಟಿ ಕಂಟ್ರೋಲ್‌, ವೆಹಿಕಲ್‌ ಸ್ಟೆಬಿಲಿಟಿ ಮ್ಯಾನೇಜ್‌ಮೆಂಟ್‌ ಇತ್ಯಾದಿಗಳು ಇವೆ.  
(6 / 11)

ಕಾರಿನ ಹಿಂಬದಿಯಲ್ಲಿ ಹೊಸ ಎಲ್‌ಇಟಿ ಟೇಲ್‌ ಲ್ಯಾಂಪ್‌ಗಳು ಇವೆ. ಇದರ ಜತೆಗೆ ಲೈಟ್‌ಬಾರ್‌ ಕೂಡ ಇವೆ. ಬಂಪರ್‌ಗೂ ಫಾಕ್ಸ್‌ ಸ್ಕಿಡ್‌ ಪ್ಲೇಟ್‌ ಅಳವಡಿಸಲಾಗಿದೆ.  
(7 / 11)

ಪವ್‌ಟೆರ್‌ ಅಲಿವ್‌ ಮಾತ್ರವಲ್ಲದೆ ಇಂಪಿರಿಯಲ್‌ ಬ್ಲೂ, ಇಂಟೆನ್ಸ್‌ ರೆಡ್‌, ಅರೋರಾ ಬ್ಲಾಕ್‌ ಪರ್ಲ್‌, ಕ್ಲಿಯರ್‌ ವೈಟ್‌, ಸ್ಪಾರ್ಕಿಂಗ್‌ ಸಿಲ್ವರ್‌, ಗ್ಲೇಸಿಯರ್‌ ವೈಟ್‌ ಪರ್ಲ್‌, ಗ್ರೇವಿಟಿ ಗ್ರೇ, ಎಕ್ಸ್‌ಕ್ಲೂಸಿವ್‌ ಮೇಟ್‌ ಗ್ರಾಫೈಟ್‌, ಗ್ಲೇಸಿಯರ್‌ ವೈಟ್‌ ಪರ್ಲ್‌ ಇತ್ಯಾದಿ ಹಲವು ಬಣ್ಣಗಳಲ್ಲಿ ಲಭ್ಯವಿದೆ.  
(8 / 11)

ಒಂದು ಡೀಸೆಲ್‌ ಎಂಜಿನ್‌ ಆಯ್ಕೆಯಲ್ಲಿಯೂ ನೂತನ ಸೆಲ್ಟೊಸ್‌ ಲಭ್ಯವಿದೆ. ಇನ್ನೊಂದು ಸಾಮಾನ್ಯ ಪೆಟ್ರೋಲ್‌ ಎಂಜಿನ್‌ ಆಯ್ಕೆಯಲ್ಲಿ ಲಭ್ಯವಿದೆ. ಒಟ್ಟು ಮೂರು ಎಂಜಿನ್‌ ಆಯ್ಕೆಗಳಲ್ಲಿ, 18 ಆವೃತ್ತಿಗಳಲ್ಲಿ, ಐದು ಟ್ರಾನ್ಸ್‌ಮಿಷನ್‌ ಆಯ್ಕೆಗಳಲ್ಲಿ ಲಭ್ಯವಿದೆ.  
(9 / 11)

ಇದರ ಕ್ಯಾಬಿನ್‌ ಟ್ವಿನ್‌ ಸ್ಕ್ರೀನ್‌ ಲೇಔಟ್‌ ವಿನ್ಯಾಸದಲ್ಲಿ ದೊರಕುತ್ತದೆ. ಚಾಲಕನಿಗೆ ಸಂಪೂರ್ಣವಾಗಿ ಡಿಜಿಟಲ್‌ ಡಿಸ್‌ಪ್ಲೇ ಇದೆ. ಎರಡೂ ಸ್ಕ್ರೀನ್‌ 10.25 ಇಂಚು ಗಾತ್ರವಿದೆ
(10 / 11)

ಕಾರಿನ ಹಿಂಬದಿ ಕುಳಿತುಕೊಳ್ಳುವವರಿಗೂ ಕೈ ಇಡಲು ಆರ್ಮ್‌ ರೆಸ್ಟ್‌ ಇದೆ. ಹಿಂಬದಿಯಲ್ಲಿ ಏಸಿ ವೆಂಟ್‌, ಸೀಟ್‌ಬ್ಯಾಕ್‌ ಪಾಕೆಟ್‌, ಕಪ್‌ ಹೋಲ್ಡರ್ಡ್‌, ಯುಎಸ್‌ಬಿ ಪೋರ್ಟ್‌ ಇತ್ಯಾದಿಗಳು ಇವೆ. 
(11 / 11)

    ಹಂಚಿಕೊಳ್ಳಲು ಲೇಖನಗಳು