logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Skoda Enyaq Iv Ev: ಭಾರತದಲ್ಲಿ ಬಿಡುಗಡೆಗೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಸಿದ್ಧತೆ; ವೈಶಿಷ್ಟ್ಯಗಳು ಹೀಗಿವೆ

Skoda Enyaq iv EV: ಭಾರತದಲ್ಲಿ ಬಿಡುಗಡೆಗೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ ಸಿದ್ಧತೆ; ವೈಶಿಷ್ಟ್ಯಗಳು ಹೀಗಿವೆ

Feb 05, 2024 11:49 PM IST

Skoda Enyaq iv Electric SUV: ಭಾರತದ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಸ್ಕೋಡಾ ಚಿತ್ತ ಹರಿಸಿದೆ. ದೆಹಲಿಯಲ್ಲಿ ನಡೆದ 2024ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಎನ್ಯಾಕ್ ಐವಿ ಎಲೆಕ್ಟ್ರಿಕ್ ಎಸ್‌ಯುವಿಯನ್ನ ಪ್ರದರ್ಶಿಸಿದೆ.

ಸ್ಕೋಡಾ ಹೊಸ ಎಲೆಕ್ಟ್ರಿಕ್ ಎಸ್‌ಯುವಿ 77kWh ಬ್ಯಾಟರಿ ಇರಲಿದೆ. ಡ್ಯುಯಲ್ ಮೋಟಾರ್ ಸೆಟಪ್‌ಗೆ ಕನೆಕ್ಟ್ ಆಗಿದೆ. ಈ ಮೋಟಾರ್ 265 ಎಚ್‌ಪಿ ಪವರ್‌ ಉತ್ಪಾದಿಸುತ್ತದೆ. ಇದರಲ್ಲಿರುವ ಬ್ಯಾಟರಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 513 ಕಿಲೋ ಮೀಟರ್ ವರಗೆ ಓಡುತ್ತೆ ಎಂದು ಸಂಸ್ಥೆ ಹೇಳಿಕೊಂಡಿದೆ. 
(1 / 5)

 ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಕಾರಿ 125kW DC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತಿದೆ. ಶೇಕಡಾ 10 ರಿಂದ 80 ರಷ್ಟು ಚಾರ್ಜ್ ಮಾಡಲು ಕೇವಲ 28 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ
(2 / 5)

ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ ಅನೇಕ ಲೆವೆಲ್-2 ಸುಧಾರಿತ ಚಾಲಕ ಸಹಾಯಕ ಸಿಸ್ಟಮ್ಸ್ ಹೊಂದಿದೆ. ಇನ್‌ಸ್ಟ್ರುಮೆಂಟ್ ಕನ್ಸೋಲ್, ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಲೆದರ್ ಅಪ್ಹೋಲಿಸ್ಟ್ರಿ ಈ ಕಾರಿನಲ್ಲಿ ಬರುತ್ತಿದೆ.
(3 / 5)

ಈ ಕಾರು ಆಲ್ ವೀಲ್ ಡ್ರೈವ್ ಕಾನ್‌ಫಿಗರೇಶನ್‌ನಲ್ಲಿ ಭಾರತಕ್ಕೆ ಬರುವ ಸಾಧ್ಯತೆ ಇದೆ. ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಕಾರು ಕೇವಲ 6.7 ಸೆಕೆಂಡ್‌ಗಳಲ್ಲಿ 0-100 ಕಿಲೋ ಮೀಟರ್ ವೇಗವನ್ನು ತಲುಪುತ್ತದೆ.
(4 / 5)

ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಕಾರಿ ಬಿಡುಗಡೆಯಾದಾಗ ಬೆಲೆಯೂ ತಿಳಿಯಲಿದೆ. ಆದರೆ ಇದು ಖಂಡಿವಾಗಿಯೂ ಪ್ರೀಮಿಯಂ ಇವಿ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಎಕ್ಸ್‌ ಶೋ ರೂಂ ಬೆಲೆ 30 ರಿಂದ 40 ಲಕ್ಷ ರೂಪಾಯಿಗಿಂತ ಹೆಚ್ಚಿರಬಹುದು. ಕಂಪನಿ ಅಧಿಕೃತವಾಗಿ ಘೋಷಣೆ ಮಾಡಿದ ಬಳಿಕವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ
(5 / 5)

    ಹಂಚಿಕೊಳ್ಳಲು ಲೇಖನಗಳು