logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Skoda Enyaq Iv Ev: ಫೆ 27ಕ್ಕೆ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ವೈಶಿಷ್ಟ್ಯ ತಿಳಿಯಿರಿ

Skoda Enyaq iV EV: ಫೆ 27ಕ್ಕೆ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿ ಭಾರತದಲ್ಲಿ ಬಿಡುಗಡೆ; ಕಾರಿನ ಬೆಲೆ, ವೈಶಿಷ್ಟ್ಯ ತಿಳಿಯಿರಿ

Feb 26, 2024 04:14 PM IST

ನವದೆಹಲಿಯಲ್ಲಿ ನಡೆದ 2024 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪ್ರದರ್ಶಿಸಲಾಗಿತ್ತು. ನಾಳೆ (ಫೆ 27) ಭಾರತದ ಮಾರುಕಟ್ಟೆಯಲ್ಲಿ ಈ ಕಾರನ್ನ ಬಿಡುಗಡೆ ಮಾಡಲಾಗುತ್ತಿದೆ.

  • ನವದೆಹಲಿಯಲ್ಲಿ ನಡೆದ 2024 ರ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಸ್ಕೋಡಾ ಎನ್ಯಾಕ್ 4 ಎಲೆಕ್ಟ್ರಿಕ್ ಎಸ್‌ಯುವಿಯನ್ನು ಪ್ರದರ್ಶಿಸಲಾಗಿತ್ತು. ನಾಳೆ (ಫೆ 27) ಭಾರತದ ಮಾರುಕಟ್ಟೆಯಲ್ಲಿ ಈ ಕಾರನ್ನ ಬಿಡುಗಡೆ ಮಾಡಲಾಗುತ್ತಿದೆ.
ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಎನ್ಯಾಕ್ 4 ಇವಿ 4,648 ಎಂಎಂ ಉದ್ದ, 1,877 ಎಂಎಂ ಅಗಲ ಹಾಗೂ 1,618 ಎಂಎಂ ಎತ್ತರವನ್ನು ಹೊಂದಿದೆ. ಇದು 77 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಎಂಜಿನ್ 282 ಬಿ ಹೆಚ್ ಪಿ ಪವರ್ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.
(1 / 5)
ಭಾರತ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಎನ್ಯಾಕ್ 4 ಇವಿ 4,648 ಎಂಎಂ ಉದ್ದ, 1,877 ಎಂಎಂ ಅಗಲ ಹಾಗೂ 1,618 ಎಂಎಂ ಎತ್ತರವನ್ನು ಹೊಂದಿದೆ. ಇದು 77 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, ಎಂಜಿನ್ 282 ಬಿ ಹೆಚ್ ಪಿ ಪವರ್ ಮತ್ತು 310 ಎನ್ ಎಂ ಟಾರ್ಕ್ ಉತ್ಪಾದಿಸುತ್ತದೆ.(SKODA)
ಸ್ಕೋಡಾ ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ ದೂರವನ್ನು ಓಡುವ ಸಾಮರ್ಥ್ಯವನ್ನು ನಿರೀಕ್ಷಿಸಲಾಗಿದೆ. ಕೇವಲ 6.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುತ್ತದೆ.
(2 / 5)
ಸ್ಕೋಡಾ ಕಂಪನಿಯ ಈ ಹೊಸ ಎಲೆಕ್ಟ್ರಿಕ್ ಎಸ್‌ಯುವಿ ಒಂದು ಬಾರಿ ಚಾರ್ಜ್ ಮಾಡಿದರೆ 500 ಕಿ.ಮೀ ದೂರವನ್ನು ಓಡುವ ಸಾಮರ್ಥ್ಯವನ್ನು ನಿರೀಕ್ಷಿಸಲಾಗಿದೆ. ಕೇವಲ 6.7 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ತಲುಪುತ್ತದೆ.(SKODA)
ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ,  ಇನ್‌ಸ್ಟ್ರುಮೆಂಟ್ ಕನ್ಸೋಲ್, ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಡ್ಯುಯಲ್ ಸ್ಕ್ರೀನ್‌ ಮತ್ತು ಲೆದರ್ ಅಪ್‌ಹೋಲಿಸ್ಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
(3 / 5)
ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಕಾರಿನಲ್ಲಿ 360 ಡಿಗ್ರಿ ಕ್ಯಾಮೆರಾ,  ಇನ್‌ಸ್ಟ್ರುಮೆಂಟ್ ಕನ್ಸೋಲ್, ಇನ್ಫೋಟೈನ್ಮೆಂಟ್ ಸಿಸ್ಟಮ್‌ಗಾಗಿ ಡ್ಯುಯಲ್ ಸ್ಕ್ರೀನ್‌ ಮತ್ತು ಲೆದರ್ ಅಪ್‌ಹೋಲಿಸ್ಟ್ರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ.(SKODA)
ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಭಾರತದ ಮಾರುಕಟ್ಟೆಗೆ ನಾಳೆ (ಫೆಬ್ರವರಿ 27, ಮಂಗಳವಾರ) ಬರಲಿದೆ. ಸುರಕ್ಷತೆಗಾಗಿ ಅನೆಕ್ ಅಡಾಸ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.
(4 / 5)
ಆಲ್-ವೀಲ್ ಡ್ರೈವ್ ಕಾನ್ಫಿಗರೇಶನ್‌ನೊಂದಿಗೆ ಭಾರತದ ಮಾರುಕಟ್ಟೆಗೆ ನಾಳೆ (ಫೆಬ್ರವರಿ 27, ಮಂಗಳವಾರ) ಬರಲಿದೆ. ಸುರಕ್ಷತೆಗಾಗಿ ಅನೆಕ್ ಅಡಾಸ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.(SKODA)
ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 50 ರಿಂದ  55 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಇರಲಿದೆ ಎಂದು ಮಾರುಕಟ್ಟೆಯ ಮೂಲಗಳು ನಿರೀಕ್ಷಿಸಿವೆ.
(5 / 5)
ಸ್ಕೋಡಾ ಎನ್ಯಾಕ್ ಐವಿ ಎಲೆಕ್ಟ್ರಿಕ್ ಎಸ್‌ಯುವಿ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ 50 ರಿಂದ  55 ಲಕ್ಷ ರೂಪಾಯಿಗಳ ಆಸುಪಾಸಿನಲ್ಲಿ ಇರಲಿದೆ ಎಂದು ಮಾರುಕಟ್ಟೆಯ ಮೂಲಗಳು ನಿರೀಕ್ಷಿಸಿವೆ.(SKODA)

    ಹಂಚಿಕೊಳ್ಳಲು ಲೇಖನಗಳು