logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜಡೇಜಾ ಬಳಿಕ ಅಪರೂಪದ ದಾಖಲೆ ಮಾಡಿದ ಅಕ್ಷರ್ ಪಟೇಲ್; ಟಿ20 ವಿಶ್ವಕಪ್‌ ಸ್ಥಾನಕ್ಕೆ ಭಾರಿ ಪೈಪೋಟಿ

ಜಡೇಜಾ ಬಳಿಕ ಅಪರೂಪದ ದಾಖಲೆ ಮಾಡಿದ ಅಕ್ಷರ್ ಪಟೇಲ್; ಟಿ20 ವಿಶ್ವಕಪ್‌ ಸ್ಥಾನಕ್ಕೆ ಭಾರಿ ಪೈಪೋಟಿ

Jan 16, 2024 09:13 AM IST

Axar Patel: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ವಿಶೇಷ ಮೈಲಿಗಲ್ಲು ತಲುಪಿದರು. ಗುಲ್ಬದಿನ್ ನೈಬ್ ವಿಕೆಟ್ ಪಡೆದ ಅಕ್ಷರ್, ರವೀಂದ್ರ ಜಡೇಜಾ ನಂತರ 2000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಎಂಬ ದಾಖಲೆ ಬರೆದರು. 

  • Axar Patel: ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ವಿಶೇಷ ಮೈಲಿಗಲ್ಲು ತಲುಪಿದರು. ಗುಲ್ಬದಿನ್ ನೈಬ್ ವಿಕೆಟ್ ಪಡೆದ ಅಕ್ಷರ್, ರವೀಂದ್ರ ಜಡೇಜಾ ನಂತರ 2000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಎಂಬ ದಾಖಲೆ ಬರೆದರು. 
ಆಲ್‌ರೌಂಡರ್ ಅಕ್ಷರ್ ಪಟೇಲ್ ಟಿ20 ಮಾದರಿಯಲ್ಲಿ 200 ವಿಕೆಟ್‌ಗಳೊಂದಿಗೆ ರವೀಂದ್ರ ಜಡೇಜಾ ಮಾಡಿದ ದಾಖಲೆಯ ವಿಶೇಷ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ಭಾನುವಾರ ಇಂದೋರ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.
(1 / 6)
ಆಲ್‌ರೌಂಡರ್ ಅಕ್ಷರ್ ಪಟೇಲ್ ಟಿ20 ಮಾದರಿಯಲ್ಲಿ 200 ವಿಕೆಟ್‌ಗಳೊಂದಿಗೆ ರವೀಂದ್ರ ಜಡೇಜಾ ಮಾಡಿದ ದಾಖಲೆಯ ವಿಶೇಷ ಪಟ್ಟಿಯನ್ನು ಸೇರಿಕೊಂಡಿದ್ದಾರೆ. ಭಾನುವಾರ ಇಂದೋರ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು.(AFP)
ಪಂದ್ಯದಲ್ಲಿ ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಗುಲ್ಬದಿನ್ ನೈಬ್ ವಿಕೆಟ್‌ ಪಡೆದ ಅಕ್ಷರ್ ವಿಶೇಷ ಸಾಧನೆ ಮಾಡಿದರು. ಅದಕ್ಕೂ ಮುನ್ನ ಅಫ್ಘಾನ್ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.
(2 / 6)
ಪಂದ್ಯದಲ್ಲಿ ನಾಲ್ಕು ಓವರ್‌ ಬೌಲ್‌ ಮಾಡಿದ ಅವರು ಕೇವಲ 17 ರನ್ ನೀಡಿ 2 ವಿಕೆಟ್ ಪಡೆದರು. ಅರ್ಧಶತಕ ಸಿಡಿಸಿ ಉತ್ತಮ ಫಾರ್ಮ್‌ನಲ್ಲಿದ್ದ ಗುಲ್ಬದಿನ್ ನೈಬ್ ವಿಕೆಟ್‌ ಪಡೆದ ಅಕ್ಷರ್ ವಿಶೇಷ ಸಾಧನೆ ಮಾಡಿದರು. ಅದಕ್ಕೂ ಮುನ್ನ ಅಫ್ಘಾನ್ ನಾಯಕ ಇಬ್ರಾಹಿಂ ಜದ್ರಾನ್ ಅವರ ವಿಕೆಟ್ ಪಡೆದರು.(AFP)
ಗುಲ್ಬದಿನ್ ನೈಬ್ ವಿಕೆಟ್ ಪಡೆಯುವ ಮೂಲಕ, ರವೀಂದ್ರ ಜಡೇಜಾ ನಂತರ 2000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಎನಿಸಿಕೊಂಡರು. ಅಕ್ಷರ್ ಈವರೆಗೆ 234 ಟಿ20 ಪಂದ್ಯಗಳಲ್ಲಿ 2545 ರನ್ ಮತ್ತು 200 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಒಟ್ಟಾರೆ 27ನೇ ಆಟಗಾರ ಎನಿಸಿಕೊಂಡಿದ್ದಾರೆ.
(3 / 6)
ಗುಲ್ಬದಿನ್ ನೈಬ್ ವಿಕೆಟ್ ಪಡೆಯುವ ಮೂಲಕ, ರವೀಂದ್ರ ಜಡೇಜಾ ನಂತರ 2000 ರನ್ ಮತ್ತು 200 ವಿಕೆಟ್‌ಗಳ ಮೈಲಿಗಲ್ಲನ್ನು ತಲುಪಿದ ಎರಡನೇ ಭಾರತೀಯ ಎನಿಸಿಕೊಂಡರು. ಅಕ್ಷರ್ ಈವರೆಗೆ 234 ಟಿ20 ಪಂದ್ಯಗಳಲ್ಲಿ 2545 ರನ್ ಮತ್ತು 200 ವಿಕೆಟ್ ಪಡೆದಿದ್ದಾರೆ. ಈ ಸಾಧನೆ ಮಾಡಿದ ಒಟ್ಟಾರೆ 27ನೇ ಆಟಗಾರ ಎನಿಸಿಕೊಂಡಿದ್ದಾರೆ.(ANI)
ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡದ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (564 ಪಂದ್ಯಗಳಲ್ಲಿ 619 ವಿಕೆಟ್). ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದರೆ ಸ್ಪಿನ್ನರ್ ಯುಜ್ವೇಂದ್ರ ಚಹಾಲ್. ಅವರು 290 ಪಂದ್ಯಗಳಲ್ಲಿ 336 ವಿಕೆಟ್ ಕಬಳಿಸಿದ್ದಾರೆ.
(4 / 6)
ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡದ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ (564 ಪಂದ್ಯಗಳಲ್ಲಿ 619 ವಿಕೆಟ್). ಭಾರತದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂದರೆ ಸ್ಪಿನ್ನರ್ ಯುಜ್ವೇಂದ್ರ ಚಹಾಲ್. ಅವರು 290 ಪಂದ್ಯಗಳಲ್ಲಿ 336 ವಿಕೆಟ್ ಕಬಳಿಸಿದ್ದಾರೆ.(AO)
ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಗುಲ್ಬದಿನ್ ನೈಬ್ ಅವರ 57 ರನ್ ನೆರವಿನಿಂದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರು. ರವಿ ಬಿಷ್ಣೋಯ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
(5 / 6)
ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ ಅಫ್ಘಾನಿಸ್ತಾನವನ್ನು ಬ್ಯಾಟಿಂಗ್‌ಗೆ ಇಳಿಸಿದರು. ಗುಲ್ಬದಿನ್ ನೈಬ್ ಅವರ 57 ರನ್ ನೆರವಿನಿಂದ ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆದರು. ರವಿ ಬಿಷ್ಣೋಯ್ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಭಾರತವು ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಯಶಸ್ವಿ ಜೈಸ್ವಾಲ್ 34 ಎಸೆತಗಳಲ್ಲಿ 68 ರನ್ ಚಚ್ಚಿದರು. ಶಿವಂ ದುಬೆ 32 ಎಸೆತಗಳಲ್ಲಿ 63 ರನ್ ಸಿಡಿಸಿದರು. ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 29 ರನ್ ಗಳಿಸಿ ಟಿ20 ಸ್ವರೂಪಕ್ಕೆ ಬಲಿಷ್ಠವಾಗಿ ಮರಳಿದರು. ಟಿ20ಯಲ್ಲಿ ತಮ್ಮ ಅಮೋಘ ಬೌಲಿಂಗ್‌ಗಾಗಿ ಅಕ್ಷರ್ ಪಟೇಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
(6 / 6)
ಭಾರತವು ಕೇವಲ 15.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಯಶಸ್ವಿ ಜೈಸ್ವಾಲ್ 34 ಎಸೆತಗಳಲ್ಲಿ 68 ರನ್ ಚಚ್ಚಿದರು. ಶಿವಂ ದುಬೆ 32 ಎಸೆತಗಳಲ್ಲಿ 63 ರನ್ ಸಿಡಿಸಿದರು. ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 29 ರನ್ ಗಳಿಸಿ ಟಿ20 ಸ್ವರೂಪಕ್ಕೆ ಬಲಿಷ್ಠವಾಗಿ ಮರಳಿದರು. ಟಿ20ಯಲ್ಲಿ ತಮ್ಮ ಅಮೋಘ ಬೌಲಿಂಗ್‌ಗಾಗಿ ಅಕ್ಷರ್ ಪಟೇಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.(PTI)

    ಹಂಚಿಕೊಳ್ಳಲು ಲೇಖನಗಳು