logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತಾವು ಓದಿದ ಶಾಲೆ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಖುಷಿ ಕ್ಷಣ, ತಮ್ಮೂರ ಶಾಲೆಗೆ ಭಾರೀ ಕೊಡುಗೆ ಕೊಟ್ಟರು Photos

ತಾವು ಓದಿದ ಶಾಲೆ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಖುಷಿ ಕ್ಷಣ, ತಮ್ಮೂರ ಶಾಲೆಗೆ ಭಾರೀ ಕೊಡುಗೆ ಕೊಟ್ಟರು photos

Mar 05, 2024 07:54 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ಓದಿದ ಮೈಸೂರು ತಾಲೂಕಿನ ಕುಪ್ಪೇಗಾಲ ಶಾಲೆ ಬಗ್ಗೆ ವಿಶೇಷ ಅಭಿಮಾನ. ಶಿಕ್ಷಣ ಇಲಾಖೆ ರೂಪಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಚಾಲನೆ ನೀಡುವಾಗ ತಮ್ಮೂರ ಶಾಲೆ ಮಕ್ಕಳನ್ನು ಕರೆಯಿಸಿದ್ದರು. ಅವರೊಂದಿಗೆ ಕೆಲ ಹೊತ್ತು ಕಳೆದು ಖುಷಿಪಟ್ಟರು. ಆನಂತರ ಶಾಲೆ ಅಭಿವೃದ್ದಿಗೆ ಚೆಕ್‌ ಕೂಡ ನೀಡಿದರು. ಹೀಗಿತ್ತು ಆ ಕ್ಷಣಗಳು

  • ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾವು ಓದಿದ ಮೈಸೂರು ತಾಲೂಕಿನ ಕುಪ್ಪೇಗಾಲ ಶಾಲೆ ಬಗ್ಗೆ ವಿಶೇಷ ಅಭಿಮಾನ. ಶಿಕ್ಷಣ ಇಲಾಖೆ ರೂಪಿಸಿರುವ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಗೆ ಚಾಲನೆ ನೀಡುವಾಗ ತಮ್ಮೂರ ಶಾಲೆ ಮಕ್ಕಳನ್ನು ಕರೆಯಿಸಿದ್ದರು. ಅವರೊಂದಿಗೆ ಕೆಲ ಹೊತ್ತು ಕಳೆದು ಖುಷಿಪಟ್ಟರು. ಆನಂತರ ಶಾಲೆ ಅಭಿವೃದ್ದಿಗೆ ಚೆಕ್‌ ಕೂಡ ನೀಡಿದರು. ಹೀಗಿತ್ತು ಆ ಕ್ಷಣಗಳು
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಕನಸಿನ ಕ್ರಾಂತಿಕಾರಕ ಯೋಜನೆಯಾದ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ  ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ  ಚಾಲನೆ ನೀಡಿದರು. ಈ ವೇಳೆ ತಾವು ಓದಿದ ಕುಪ್ಪೇಗಾಲ ಶಾಲೆ ಮಕ್ಕಳೊಂದಿಗೆ ಸಿದ್ದರಾಮಯ್ಯ ಕೆಲ ಕ್ಷಣ ಕಳೆದರು
(1 / 7)

ಬೆಂಗಳೂರಿನಲ್ಲಿ ನಮ್ಮ ಶಾಲೆ ನಮ್ಮ ಜವಾಬ್ದಾರಿ- ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಬಲವರ್ಧನೆ  ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದಾಗ ಕುಪ್ಪೇಗಾಲ ಶಾಲೆ ಮಗುವೇ ಅವರನ್ನು ಸ್ವಾಗತಿಸಿತು.
(2 / 7)

ಕುಪ್ಪೇಗಾಲ ಶಾಲೆಯ ಮಕ್ಕಳು ವಿಶೇಷವಾಗಿ ರೂಪಿಸಿಕೊಂಡು ಬಂದಿದ್ದ ಉಡುಗೊರೆಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ನೀಡಿದಾಗ ಖುಷಿಗೊಂಡರು.
(3 / 7)

ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ್ದ ಕುಪ್ಪೇಗಾಲ ಗ್ರಾಮದ ಮಕ್ಕಳೊಂದಿಗೆ ಸಿಎಂ ಸಿದ್ದರಾಮಯ್ಯ ಕೆಲ ಹೊತ್ತು ಕಳೆದ ತಮ್ಮ ಶಾಲಾ ದಿನ ನೆನಪಿಸಿಕೊಂಡರು.
(4 / 7)

 ಮುಖ್ಯಮಂತ್ರಿಗಳು ಓದಿದ ಉನ್ನತೀಕರಿಸಿದ  ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆ , ಕುಪ್ಪೇಗಾಲ ಮತ್ತು ಕೆ.ಪಿ.ಎಸ್. ಸಿದ್ದರಾಮನಹುಂಡಿ  ಇಲ್ಲಿಗೆ 10 ಲಕ್ಷ ರೂ. ಗಳ ದೇಣಿಗೆ ನೀಡುವ ಮೂಲಕ ನಮ್ಮ ಶಾಲೆ ನಮ್ಮ ಜವಾಬ್ದಾರಿ ಯೋಜನೆಯನ್ನು ಉದ್ಘಾಟಿಸಲಾಯಿತು. 
(5 / 7)

ಕುಪ್ಪೇಗಾಲ ಶಾಲೆಯ ಮಕ್ಕಳಿಗೆಂದೇ ರೂಪಿಸಿರುವ ವಿಶೇಷ ಡೆಸ್ಕ್‌ ಹಾಗೂ ಕಂಪ್ಯೂಟರ್‌ಗಳನ್ನು ಸಿಎಂ ಸಿದ್ದರಾಮಯ್ಯ ಅವರು ಹಸ್ತಾಂತರಿಸಿ ವೀಕ್ಷಿಸಿದರು.
(6 / 7)

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ್ದ ಮೈಸೂರು ತಾಲ್ಲೂಕು ಸಿದ್ದರಾಮನಹುಂಡಿ ಸಮೀಪದ ಕುಪ್ಪೇಗಾಲ ಸರ್ಕಾರಿ ಶಾಲೆ.
(7 / 7)

    ಹಂಚಿಕೊಳ್ಳಲು ಲೇಖನಗಳು