logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಂದ್ಯಾವಳಿ ಪೂರ್ತಿ ದೃಷ್ಟಿ ಮಸುಕಾಗಿತ್ತು; ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ವಿವರಿಸಿದ ಶಕೀಬ್

ಪಂದ್ಯಾವಳಿ ಪೂರ್ತಿ ದೃಷ್ಟಿ ಮಸುಕಾಗಿತ್ತು; ವಿಶ್ವಕಪ್‌ನಲ್ಲಿ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣ ವಿವರಿಸಿದ ಶಕೀಬ್

Dec 26, 2023 03:24 PM IST

ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್‌ ಹಸನ್‌, ಗಾಯದಿಂದಾಗಿ 2023ರ ವಿಶ್ವಕಪ್‌ನಲ್ಲಿ 2 ಪಂದ್ಯಗಳಲ್ಲಿ ಆಡಿರಲಿಲ್ಲ. ಉಳಿದ ಏಳು ಪಂದ್ಯಗಳಲ್ಲಿ ಅವರು 186 ರನ್ ಗಳಿಸಲಷ್ಟೇ ಶಕ್ತರಾದರು. ಕಳಪೆ ಪ್ರದರ್ಶನದಿಂದಾಗಿ ಶಕೀಬ್ ತೀವ್ರ ಟೀಕೆ ಎದುರಿಸಬೇಕಾಯಿತು. ಈಗ ತನ್ನ ವೈಫಲ್ಯಕ್ಕೆ ಕ್ಷಮಿಸಿ ಎನ್ನುವುರ ಜೊತೆಗೆ ಶಕೀಬ್‌ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.

  • ಬಾಂಗ್ಲಾದೇಶ ತಂಡದ ನಾಯಕ ಶಕೀಬ್ ಅಲ್‌ ಹಸನ್‌, ಗಾಯದಿಂದಾಗಿ 2023ರ ವಿಶ್ವಕಪ್‌ನಲ್ಲಿ 2 ಪಂದ್ಯಗಳಲ್ಲಿ ಆಡಿರಲಿಲ್ಲ. ಉಳಿದ ಏಳು ಪಂದ್ಯಗಳಲ್ಲಿ ಅವರು 186 ರನ್ ಗಳಿಸಲಷ್ಟೇ ಶಕ್ತರಾದರು. ಕಳಪೆ ಪ್ರದರ್ಶನದಿಂದಾಗಿ ಶಕೀಬ್ ತೀವ್ರ ಟೀಕೆ ಎದುರಿಸಬೇಕಾಯಿತು. ಈಗ ತನ್ನ ವೈಫಲ್ಯಕ್ಕೆ ಕ್ಷಮಿಸಿ ಎನ್ನುವುರ ಜೊತೆಗೆ ಶಕೀಬ್‌ ಅಚ್ಚರಿಯ ಮಾಹಿತಿ ಬಹಿರಂಗಪಡಿಸಿದ್ದಾರೆ.
ಕ್ರಿಕ್‌ಬಜ್‌ ಜೊತೆಗೆ ಮಾತನಾಡಿರುವ ಹಿರಿಯ ಸ್ಟಾರ್ ಆಲ್‌ರೌಂಡರ್, ಒತ್ತಡದಿಂದಾಗಿ ವಿಶ್ವಕಪ್‌ನಾದ್ಯಂತ ದೃಷ್ಟಿ ಮಸುಕಾಗಿತ್ತು ಎಂದು ಹೇಳಿಕೊಂಡಿದ್ದಾರೆ.‌ ಸ್ಪಷ್ಟವಾಗಿ ನೋಡಲು ಸಾಧ್ಯವಾಗುತ್ತಿರಲಿಲ್ಲ. ಅದು ತನ್ನ ಪ್ರದರ್ಶನದ ಮೇಲೆ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.
(1 / 6)

ಏಳು ಪಂದ್ಯಗಳಲ್ಲಿ ಆಡಿರುವ ಶಕೀಬ್ 26.57ರ ಸರಾಸರಿಯಲ್ಲಿ 186 ರನ್ ಗಳಿಸಲು ಸಾಧ್ಯವಾಯಿತು. ಈ ಕಳಪೆ ಪ್ರದರ್ಶನಕ್ಕೆ ದೃಷ್ಟಿ ಮಂದವಾಗಿದ್ದು ಕೂಡಾ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.
(2 / 6)

ಕ್ರಿಕ್‌ಬಜ್ ಪ್ರಕಾರ, ಶಕೀಬ್‌ ಅವರ ಎಡಗಣ್ಣಿನ ಒಂದು ಬದಿಯಲ್ಲಿನ ದೃಷ್ಟಿಯು ಒತ್ತಡದಿಂದಾಗಿ ಮಸುಕಾಗಿತ್ತು. ಇದು ಅವರ ಬ್ಯಾಟಿಂಗ್ ಮೇಲೆ ಭಾರಿ ಪರಿಣಾಮ ಬೀರಿದೆ. "ನನಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಂಡಿದ್ದು ವಿಶ್ವಕಪ್‌ನ ಒಂದು ಅಥವಾ ಎರಡು ಪಂದ್ಯಗಳಲ್ಲಿ ಮಾತ್ರ ಅಲ್ಲ. ಸಂಪೂರ್ಣ ಪಂದ್ಯಾವಳಿಯಲ್ಲಿ" ಎಂದು ಹೇಳಿದ್ದಾರೆ.
(3 / 6)

ನಿಜ ಹೇಳಬೇಕೆಂದರೆ ವಿಶ್ವಕಪ್‌ನಾದ್ಯಂತ ಒಂದೇ ಕಣ್ಣಿನಲ್ಲಿ ಆಡಿದ್ದೇನೆ ಎಂದು ಅವರು ಹೇಳಿದ್ದಾರೆ. ಚೆಂಡು ಒಂದು ನಿರ್ದಿಷ್ಟ ರೀತಿಯಲ್ಲಿ ಬರುತ್ತಿದೆ ಎಂದು ಊಹಿಸಿ ಬ್ಯಾಟ್‌ ಬೀಸಿದೆ. ಚೆಂಡನ್ನು ಎದುರಿಸುವುದು ತುಂಬಾ ಕಷ್ಟವಾಯ್ತು ಎಂದು ಅವರು ಹೇಳಿದರು.
(4 / 6)

ವೈದ್ಯರ ಪ್ರಕಾರ, ಕಣ್ಣು ಮತ್ತು ಮೆದುಳಿನ ನಡುವೆ ಸಂಬಂಧವಿದೆ. ಒತ್ತಡವು ಮೆದುಳಿನ ಮೇಲೆ ಪರಿಣಾಮ ಬೀರಿದಾಗ ಅದು ಕಣ್ಣಿನ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದ ಹಾರ್ಮೋನುಗಳು ಬಿಡುಗಡೆಯಾದಾಗ, ಅವು ನೇರವಾಗಿ ದೃಷ್ಟಿ ಮೇಲೆ ಪರಿಣಾಮ ಬೀರುತ್ತವೆ.
(5 / 6)

ನಾಯಕತ್ವದ ಒತ್ತಡದಿಂದ ಹೀಗಾಯ್ತು ಎಂದು ಶಕೀಬ್‌ ಹೇಳಿಕೊಂಡಿದ್ದಾರೆ. ಅದಕ್ಕೂ ಹಿಂದೆಯೇ ನಾಯಕತ್ವದ ಜವಾಬ್ದಾರಿ ಸಿಕ್ಕಿದ್ದರೆ ನಿಭಾಯಿಸಲು ಸುಲಭವಾಗುತ್ತಿತ್ತು. ಹೆಚ್ಚು ಸಮಯವಿದ್ದರೆ ಎಲ್ಲವನ್ನೂ ಸಿದ್ಧಪಡಿಸಿಕೊಂಡು ವಿಶ್ವಕಪ್ ಆಡಲು ಭಾರತಕ್ಕೆ ಹೋಗುತ್ತಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.
(6 / 6)

    ಹಂಚಿಕೊಳ್ಳಲು ಲೇಖನಗಳು