logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಟೇರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ ಬಂದ್‌ ಮಾಡಿದ ಅಧಿಕಾರಿಗಳು, ಇಲ್ಲಿದೆ ಫೋಟೋಸ್‌

ಕಾಟೇರ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ ಬಂದ್‌ ಮಾಡಿದ ಅಧಿಕಾರಿಗಳು, ಇಲ್ಲಿದೆ ಫೋಟೋಸ್‌

Feb 14, 2024 07:49 PM IST

ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಬೃಹತ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಾಕ್‌ಲೈನ್‌ ಮಾಲ್‌ಗೆ ದಾಳಿ ನಡೆಸಿದ ಸಂದರ್ಭದ ಸಚಿತ್ರ ವರದಿ ಇಲ್ಲಿದೆ.

  • ಕನ್ನಡ ಚಿತ್ರರಂಗದ ಜನಪ್ರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಬೃಹತ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ. ಬಿಬಿಎಂಪಿ ಅಧಿಕಾರಿಗಳು ರಾಕ್‌ಲೈನ್‌ ಮಾಲ್‌ಗೆ ದಾಳಿ ನಡೆಸಿದ ಸಂದರ್ಭದ ಸಚಿತ್ರ ವರದಿ ಇಲ್ಲಿದೆ.
ರಾಕ್‌ಲೈನ್‌ ವೆಂಕಟೇಶ್‌ ಒಡೆತನದ ರಾಕ್‌ಲೈನ್‌ ಮಾಲ್‌ಗೆ ಬೃಹತ್‌ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಧಿಕಾರಿಗಳು ಬುಧವಾರ ಬೀಗ ಜಡಿದಿದ್ದಾರೆ.  ರಾಕ್‌ಲೈನ್ ಮಾಲ್ 2011 ರಿಂದ ಆಸ್ತಿ ತೆರಿಗೆ ಪಾವತಿಸಿಲ್ಲ ಮತ್ತು 11.50 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಒಂದು ತಿಂಗಳಿನಿಂದ ಬಿಬಿಎಂಪಿ ಬಾಕಿದಾರರಿಂದ ಬಾಕಿ ವಸೂಲಿ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಬಿಎಂಪಿ ತಿಳಿಸಿದೆ. 
(1 / 9)

ರಾಕ್‌ಲೈನ್ ಮಾಲ್‌ ವಿರುದ್ದ ಕೋಟ್ಯಂತರ ರೂಪಾಯಿ ಆಸ್ತಿ ತೆರಿಗೆ ವಂಚನೆ ಆರೋಪ ಕೇಳಿಬಂದಿತ್ತು. ತೆರಿಗೆ ಪಾವತಿಸುವಂತೆ ಬಿಬಿಎಂಪಿ ಅಧಿಕಾರಿಗಳು ಹಲವು ಬಾರಿ ನೋಟಿಸ್ ನೀಡಿದ್ದರೂ ರಾಕ್‌ಲೈನ್ ಮಾಲ್‌ ತೆರಿಗೆ ಪಾವತಿಸಿರಲಿಲ್ಲ ಎಂದು ಅಧಿಕಾರಿಗಳು ಮಾಹಿತಿ  ನೀಡಿದ್ದಾರೆ.
(2 / 9)

2021ರಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಮತ್ತು ಪದ್ಮಕುಮಾರಿ ಅವರು ಬಿಬಿಎಂಪಿಗೆ ರೂಪಾಯಿ 11.51 ಕೋಟಿ ಮೊತ್ತದ ತೆರಿಗೆ ವಂಚಿಸಿದ್ದಾರೆ ಎಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದ ಮಾಜಿ ಪಾಲಿಕೆ ಸದಸ್ಯ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದರು.
(3 / 9)

ಬಿಬಿಎಂಪಿಯ ದಾಸರಹಳ್ಳಿ ವಲಯದ ವ್ಯಾಪ್ತಿಯಲ್ಲಿ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ. ಆದರೂ  ಕೇವಲ 48,500 ಚದರ ಅಡಿ ವಿಸ್ತೀರ್ಣದಲ್ಲಿ ಮಾಲ್  ನಿರ್ಮಾಣ ಮಾಡಲಾಗಿದೆ ಎಂದು ಬಿಬಿಎಂಪಿಗೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದರೆ, ಆರು ಮಹಡಿ ಸೇರಿದಂತೆ 1,22,743 ಚದರ ಅಡಿ ವಿಸ್ತಾರದಲ್ಲಿ ಈ ಮಾಲ್ ನಿರ್ಮಾಣಗೊಂಡಿದೆ ಎಂದು  ರಮೇಶ್ ಆಪಾದಿಸಿದ್ದರು.
(4 / 9)

ಮಹಾಲೆಕ್ಕ ಪರಿಶೋಧಕರ ಕಚೇರಿಯ ಅಧಿಕಾರಿಗಳು ಮತ್ತು ದಾಸರಹಳ್ಳಿ ಉಪವಿಭಾಗದ ಸಹಾಯಕ ಕಂದಾಯ ಅಧಿಕಾರಿಗಳು ನಡೆಸಿದ ಜಂಟಿ ಸಮೀಕ್ಷೆ ನಡೆಸಿದ್ದರು. ಈ ಸಮೀಕ್ಷೆ ಕಾರ್ಯದಲ್ಲಿ ಪಾಲಿಕೆಗೆ ಬೃಹತ್‌ ಮೊತ್ತದ ತೆರಿಗೆ ವಂಚಿಸಿರುವುದು ಪತ್ತೆಯಾಗಿತ್ತು. 
(5 / 9)

ರಾಕ್‌ಲೈನ್‌ ಮಾಲ್‌ನವರು 2012ರ ಅ.25ರಂದು ರೂಪಾಯಿ 3.78 ಲಕ್ಷ ಮಾತ್ರ ತೆರಿಗೆ ಪಾವತಿಸಿದ್ದಾರೆ. ಬಡ್ಡಿ ಸೇರಿದಂತೆ ರೂ. 2.63 ಕೋಟಿ ಪಾವತಿಸುವಂತೆ 2015ರಲ್ಲಿಯೇ ಬಿಬಿಎಂಪಿಯು ರಾಕ್‌ಲೈನ್‌ ವೆಂಕಟೇಶ್‌ ಅವರಿಗೆ ನೋಟಿಸ್ ನೀಡಿತ್ತು. ಆದರೆ ಅವರು  ಪಾಲಿಕೆ ನೀಡಿದ್ದ ನೋಟಿಸ್‌ಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಇದೀಗ ನ್ಯಾಯಾಲಯ ಈ ಅರ್ಜಿಯನ್ನು ವಜಾಗೊಳಿಸಿದೆ ಎಂದು ತಿಳಿದು ಬಂದಿದೆ.
(6 / 9)

2011–12ರಿಂದ 2020–21ರವರೆಗಿನ ಅವಧಿಯವರೆಗೆ ಒಟ್ಟು ರೂ. 3.8 ಕೋಟಿ ಆಸ್ತಿ ತೆರಿಗೆ, ವಾರ್ಷಿಕ ಬಡ್ಡಿದರ, ದಂಡ ಸೇರಿ, ರೂ. 8.51 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
(7 / 9)

ರಾಕ್‌ಲೈನ್‌ ವೆಂಕಟೇಶ್‌ ಅವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಪ್ರೊಡ್ಯುಸರ್‌. ಹಿಂದಿಯಲ್ಲಿ ಭಜರಂಗಿ ಭಾಯ್‌ಜಾನ್‌ ಸಿನಿಮಾ ನಿರ್ಮಾಣ ಮಾಡಿದ್ದರು. ಕನ್ನಡದಲ್ಲಿ ರಾಕ್‌ಲೈನ್‌ ನಿರ್ಮಾಣದ ಇತ್ತೀಚೆಗೆ ಬಿಡುಗಡೆಯಾದ ಕಾಟೇರ  ಬ್ಲಾಕ್‌ಬಸ್ಟರ್‌ ಸಿನಿಮಾವಾಗಿದೆ.
(8 / 9)

ಕನ್ನಡ ಸಿನಿಮಾ, ಒಟಿಟಿ, ಕಿರುತೆರೆ ಸುದ್ದಿಗಳು, ಲೇಖನಗಳನ್ನು ಓದಲು ಪ್ರತಿನಿತ್ಯ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದ ಮನರಂಜನೆ ವಿಭಾಗಕ್ಕೆ ಭೇಟಿ ನೀಡಿ.
(9 / 9)

    ಹಂಚಿಕೊಳ್ಳಲು ಲೇಖನಗಳು