logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Nasa Astronomy Pictures: ನಾಸಾದ ಅತ್ಯುತ್ತಮ ಖಗೋಳ ಚಿತ್ರಗಳು, ಅಂತರಿಕ್ಷದಲ್ಲಿ ನಿಹಾರಿಕೆಗಳ ಮಾಯಾಲೋಕ, ನಕ್ಷತ್ರಗಳ ಚಿತ್ತಾರ

NASA Astronomy Pictures: ನಾಸಾದ ಅತ್ಯುತ್ತಮ ಖಗೋಳ ಚಿತ್ರಗಳು, ಅಂತರಿಕ್ಷದಲ್ಲಿ ನಿಹಾರಿಕೆಗಳ ಮಾಯಾಲೋಕ, ನಕ್ಷತ್ರಗಳ ಚಿತ್ತಾರ

Apr 28, 2023 10:49 PM IST

Best NASA Astronomy Pictures of the Week: ಜಗತ್ತಿನ ವಿವಿಧೆಡೆ ಇರುವ ಖಗೋಳ ಛಾಯಾಗ್ರಾಹಕರು ತೆಗೆದ ಫೋಟೊಗಳಲ್ಲಿ ಅತ್ಯುತ್ತಮ ಫೋಟೊವನ್ನು ನಾಸಾವು ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸುತ್ತದೆ. ಈ ವಾರ ನಾಸಾ ಪ್ರಕಟಿಸಿದ ಇಂತಹ ಅತ್ಯುತ್ತಮ ಫೋಟೊಗಳಲ್ಲಿ ಆಯ್ದ ಫೋಟೊಗಳನ್ನು ಇಲ್ಲಿ ನೀಡಲಾಗಿದೆ. ಕಣ್ತುಂಬಿಕೊಳ್ಳಿ.

Best NASA Astronomy Pictures of the Week: ಜಗತ್ತಿನ ವಿವಿಧೆಡೆ ಇರುವ ಖಗೋಳ ಛಾಯಾಗ್ರಾಹಕರು ತೆಗೆದ ಫೋಟೊಗಳಲ್ಲಿ ಅತ್ಯುತ್ತಮ ಫೋಟೊವನ್ನು ನಾಸಾವು ಪ್ರತಿದಿನ ಸೋಷಿಯಲ್‌ ಮೀಡಿಯಾದಲ್ಲಿ ಪ್ರಕಟಿಸುತ್ತದೆ. ಈ ವಾರ ನಾಸಾ ಪ್ರಕಟಿಸಿದ ಇಂತಹ ಅತ್ಯುತ್ತಮ ಫೋಟೊಗಳಲ್ಲಿ ಆಯ್ದ ಫೋಟೊಗಳನ್ನು ಇಲ್ಲಿ ನೀಡಲಾಗಿದೆ. ಕಣ್ತುಂಬಿಕೊಳ್ಳಿ.
ಮೆಡುಲ್ಲಾ ನೀಹಾರಿಕೆ ಸೂಪರ್ನೋವಾ ರೆಮಿನೆಂಟ್ (Medulla Nebula Supernova Remnant): ಇದಕ್ಕೆ ಸಿಟಿಬಿ 1 ಎಂದು ಹೆಸರು. ಇದನ್ನು ಮೆಡುಲ್ಲಾ ನೆಬ್ಯುಲಾ ಸೂಪರ್ನೋವಾ ರೆಮಿನೆಂಟ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಕಾಸ್ಮಿಕ್ ಗುಳ್ಳೆ.  ನಾಸಾದ ಪ್ರಕಾರ, ಇದು ಸುಮಾರು ಒಂದು ಲಕ್ಷ ವರ್ಷದ ಹಿಂದೆ ಸಂಭವಿಸಿದ ಸೂಪರ್ನೊವ ಸ್ಪೋಟದ ಅವಶೇಷ. ಇದು ಮಿದುಳಿನ ಆಕಾರ ಹೊಂದಿರುವ ಕಾರಣದಿಂದ ಈ ಹೆಸರು ನೀಡಲಾಗಿದೆ. ಇದು ಕ್ಯಾಸಿಯೋಪಿಯಾ ನಕ್ಷತ್ರಪುಂಜದಾಚೆಗಿದೆ. 
(1 / 5)
ಮೆಡುಲ್ಲಾ ನೀಹಾರಿಕೆ ಸೂಪರ್ನೋವಾ ರೆಮಿನೆಂಟ್ (Medulla Nebula Supernova Remnant): ಇದಕ್ಕೆ ಸಿಟಿಬಿ 1 ಎಂದು ಹೆಸರು. ಇದನ್ನು ಮೆಡುಲ್ಲಾ ನೆಬ್ಯುಲಾ ಸೂಪರ್ನೋವಾ ರೆಮಿನೆಂಟ್ ಎಂದೂ ಕರೆಯುತ್ತಾರೆ. ಇದು ಅಪರೂಪದ ಕಾಸ್ಮಿಕ್ ಗುಳ್ಳೆ.  ನಾಸಾದ ಪ್ರಕಾರ, ಇದು ಸುಮಾರು ಒಂದು ಲಕ್ಷ ವರ್ಷದ ಹಿಂದೆ ಸಂಭವಿಸಿದ ಸೂಪರ್ನೊವ ಸ್ಪೋಟದ ಅವಶೇಷ. ಇದು ಮಿದುಳಿನ ಆಕಾರ ಹೊಂದಿರುವ ಕಾರಣದಿಂದ ಈ ಹೆಸರು ನೀಡಲಾಗಿದೆ. ಇದು ಕ್ಯಾಸಿಯೋಪಿಯಾ ನಕ್ಷತ್ರಪುಂಜದಾಚೆಗಿದೆ. (NASA/Kimberly Sibbald)
ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್ ಸ್ಪಾರ್ಕ್ಸ್ ಅರೋರಾಸ್ (Geomagnetic Storm sparks Auroras): ಜಿಯೋಮ್ಯಾಗ್ನೆಟಿಕ್ ಚಂಡಮಾರುತದಿಂದ ಉಂಟಾದ ಬೆರಗುಗೊಳಿಸುವ ಅರೋರಾಗಳನ್ನು ಸ್ಪೇನ್‌ನ ಕ್ಯಾಸೆರೆಸ್‌ ಮೂಲಕ ಸೆರೆಹಿಡಿಯಲಾಗಿದೆ. ಅಮೆರಿಕದ ಹಲವು ಭಾಗಗಳಲ್ಲಿ, ನ್ಯೂಜಿಲೆಂಡ್‌ನಲ್ಲಿ, ಫ್ರಾನ್ಸ್‌ನ ದಕ್ಷಿಣದಲ್ಲಿ ಇಂತಹ ಬೆರಗುಗೊಳಿಸುವ ಬೆಳಕಿನ ಗೆರೆಗಳು ಆಕಾಶದಲ್ಲಿ ಕಾಣಿಸುತ್ತದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ. 
(2 / 5)
ಜಿಯೋಮ್ಯಾಗ್ನೆಟಿಕ್ ಸ್ಟಾರ್ಮ್ ಸ್ಪಾರ್ಕ್ಸ್ ಅರೋರಾಸ್ (Geomagnetic Storm sparks Auroras): ಜಿಯೋಮ್ಯಾಗ್ನೆಟಿಕ್ ಚಂಡಮಾರುತದಿಂದ ಉಂಟಾದ ಬೆರಗುಗೊಳಿಸುವ ಅರೋರಾಗಳನ್ನು ಸ್ಪೇನ್‌ನ ಕ್ಯಾಸೆರೆಸ್‌ ಮೂಲಕ ಸೆರೆಹಿಡಿಯಲಾಗಿದೆ. ಅಮೆರಿಕದ ಹಲವು ಭಾಗಗಳಲ್ಲಿ, ನ್ಯೂಜಿಲೆಂಡ್‌ನಲ್ಲಿ, ಫ್ರಾನ್ಸ್‌ನ ದಕ್ಷಿಣದಲ್ಲಿ ಇಂತಹ ಬೆರಗುಗೊಳಿಸುವ ಬೆಳಕಿನ ಗೆರೆಗಳು ಆಕಾಶದಲ್ಲಿ ಕಾಣಿಸುತ್ತದೆ ಎಂದು ಸ್ಪೇಸ್‌ವೆದರ್‌.ಕಾಂ ವರದಿ ಮಾಡಿದೆ. (NASA/Landon Moeller)
ಪೂರ್ಣ ಚಂದಿರ: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಆರ್ಕ್ ಡಿ ಟ್ರಯೋಂಫ್ ನಡುವೆ ಪೂರ್ಣ ಚಂದಿರ ಕಾಣಿಸುವಂತೆ ತೆಗೆದ ಫೋಟೊ ಇದಾಗಿದೆ. ಇದನ್ನು ಕೂಡ ನಾಸಾವು ಅತ್ಯುತ್ತಮ ಖಗೋಳ ಛಾಯಾಚಿತ್ರವೆಂದು ಪರಿಗಣಿಸಿದೆ.  
(3 / 5)
ಪೂರ್ಣ ಚಂದಿರ: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಆರ್ಕ್ ಡಿ ಟ್ರಯೋಂಫ್ ನಡುವೆ ಪೂರ್ಣ ಚಂದಿರ ಕಾಣಿಸುವಂತೆ ತೆಗೆದ ಫೋಟೊ ಇದಾಗಿದೆ. ಇದನ್ನು ಕೂಡ ನಾಸಾವು ಅತ್ಯುತ್ತಮ ಖಗೋಳ ಛಾಯಾಚಿತ್ರವೆಂದು ಪರಿಗಣಿಸಿದೆ.  (Stefano Zanarello/NASA)
ಆಕರ್ಷಕ ಟರಂಟುಲಾ ನೆಬ್ಯುಲಾ (Tarantula Nebula): ಇದಕ್ಕೆ 30 ಡೊರಾಡಸ್ ಎಂದು ಹೆಸರಿದೆ. ಡೊರಾಡೊ ನಕ್ಷತ್ರಪುಂಜದ ಕಡೆಗೆ ಸುಮಾರು 160,000 ಬೆಳಕಿನ ವರ್ಷಗಳ ದೂರದಲ್ಲಿದೆ. 30 ಡೊರಾಡಸ್ ಅನ್ನು ಟಾರಂಟುಲಾ ನೆಬ್ಯುಲಾ ಎಂದೂ ಕರೆಯುತ್ತಾರೆ. ಈ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಲ್ಲಿ  ನೋಡಬಹುದು ಎಂದು ನಾಸಾ ತಿಳಿಸಿದೆ.  
(4 / 5)
ಆಕರ್ಷಕ ಟರಂಟುಲಾ ನೆಬ್ಯುಲಾ (Tarantula Nebula): ಇದಕ್ಕೆ 30 ಡೊರಾಡಸ್ ಎಂದು ಹೆಸರಿದೆ. ಡೊರಾಡೊ ನಕ್ಷತ್ರಪುಂಜದ ಕಡೆಗೆ ಸುಮಾರು 160,000 ಬೆಳಕಿನ ವರ್ಷಗಳ ದೂರದಲ್ಲಿದೆ. 30 ಡೊರಾಡಸ್ ಅನ್ನು ಟಾರಂಟುಲಾ ನೆಬ್ಯುಲಾ ಎಂದೂ ಕರೆಯುತ್ತಾರೆ. ಈ ಖಗೋಳ ವಿದ್ಯಮಾನವನ್ನು ಬರಿಗಣ್ಣಿನಲ್ಲಿ  ನೋಡಬಹುದು ಎಂದು ನಾಸಾ ತಿಳಿಸಿದೆ.  (NASA/SuperBIT)
ಆಲ್ಫಾ ಕ್ಯಾಮೆಲೋಪರ್ಡಾಲಿಸ್ ನಕ್ಷತ್ರ ( Alpha Camelopardalis): ಆಲ್ಫಾ ಕ್ಯಾಮೆಲೋಪರ್ಡಾಲಿಸ್‌ ಎಂಬ ನಕ್ಷತ್ರದ ಚಿತ್ರವಿದು. 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ  ನಕ್ಷತ್ರಪುಂಜವೊಂದರಲ್ಲಿ ಈ ನಕ್ಷತ್ರವಿದೆ.  ಈ ನಕ್ಷತ್ರವು ನಮ್ಮ ಸೂರ್ಯನ ಗಾತ್ರಕ್ಕಿಂತ 25-30 ಪಟ್ಟು ಹೆಚ್ಚು ಗಾತ್ರ ಹೊಂದಿದೆ ಮತ್ತು ಸೂರ್ಯನಿಗಿಂತ 500,000  ಪಟ್ಟು ಪ್ರಕಾಶಮಾನವಾಗಿದೆ. ಸೂರ್ಯನಿಗಿಂತ ಐದು ಪಟ್ಟು ಹೆಚ್ಚು ಬಿಸಿ ನಕ್ಷತ್ರ ಇದಾಗಿದೆ ಎಂದು ನಾಸಾ ತಿಳಿಸಿದೆ. 
(5 / 5)
ಆಲ್ಫಾ ಕ್ಯಾಮೆಲೋಪರ್ಡಾಲಿಸ್ ನಕ್ಷತ್ರ ( Alpha Camelopardalis): ಆಲ್ಫಾ ಕ್ಯಾಮೆಲೋಪರ್ಡಾಲಿಸ್‌ ಎಂಬ ನಕ್ಷತ್ರದ ಚಿತ್ರವಿದು. 4,000 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ  ನಕ್ಷತ್ರಪುಂಜವೊಂದರಲ್ಲಿ ಈ ನಕ್ಷತ್ರವಿದೆ.  ಈ ನಕ್ಷತ್ರವು ನಮ್ಮ ಸೂರ್ಯನ ಗಾತ್ರಕ್ಕಿಂತ 25-30 ಪಟ್ಟು ಹೆಚ್ಚು ಗಾತ್ರ ಹೊಂದಿದೆ ಮತ್ತು ಸೂರ್ಯನಿಗಿಂತ 500,000  ಪಟ್ಟು ಪ್ರಕಾಶಮಾನವಾಗಿದೆ. ಸೂರ್ಯನಿಗಿಂತ ಐದು ಪಟ್ಟು ಹೆಚ್ಚು ಬಿಸಿ ನಕ್ಷತ್ರ ಇದಾಗಿದೆ ಎಂದು ನಾಸಾ ತಿಳಿಸಿದೆ. (NASA/Andre Vilhena)

    ಹಂಚಿಕೊಳ್ಳಲು ಲೇಖನಗಳು