logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Aamir Khan: ಡಿವೋರ್ಸ್‌ ಆಗಿದ್ರೇನಂತೆ, ನಾವೀಗ ಫ್ರೆಂಡ್ಸ್‌; ಮಾಜಿ ಪತ್ನಿ ಜೊತೆ ಅಮ್ಮನ ಹುಟ್ಟುಹಬ್ಬ ಆಚರಿಸಿದ ಬಾಲಿವುಡ್‌ ನಟ ಆಮೀರ್‌ ಖಾನ್

Aamir Khan: ಡಿವೋರ್ಸ್‌ ಆಗಿದ್ರೇನಂತೆ, ನಾವೀಗ ಫ್ರೆಂಡ್ಸ್‌; ಮಾಜಿ ಪತ್ನಿ ಜೊತೆ ಅಮ್ಮನ ಹುಟ್ಟುಹಬ್ಬ ಆಚರಿಸಿದ ಬಾಲಿವುಡ್‌ ನಟ ಆಮೀರ್‌ ಖಾನ್

Jun 15, 2023 08:56 PM IST

ಬಾಲಿವುಡ್ ನಟ ಆಮೀರ್‌ ಖಾನ್‌ ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಮಾಜಿ ಪತ್ನಿಯನ್ನು ಭೇಟಿ ಮಾಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. 

ಆಮೀರ್‌ ಖಾನ್‌ ತಮ್ಮ ಎರಡನೇ ಪತ್ನಿ ಕಿರಣ್‌ ರಾವ್‌ ಅವರಿಗೆ 2 ವರ್ಷಗಳ ಹಿಂದೆ ಡಿವೋರ್ಸ್‌ ನೀಡಿತ್ತು ಗೊತ್ತೇ ಇದೆ. ವಿಚ್ಛೇದನ ಪಡೆದು ದೂರವಾದರೂ ಈ ಮಾಜಿ ದಂಪತಿ ಆಗ್ಗಾಗ್ಗೆ ಭೇಟಿ ಮಾಡುತ್ತಲೇ ಇದ್ದಾರೆ. 
(1 / 11)
ಆಮೀರ್‌ ಖಾನ್‌ ತಮ್ಮ ಎರಡನೇ ಪತ್ನಿ ಕಿರಣ್‌ ರಾವ್‌ ಅವರಿಗೆ 2 ವರ್ಷಗಳ ಹಿಂದೆ ಡಿವೋರ್ಸ್‌ ನೀಡಿತ್ತು ಗೊತ್ತೇ ಇದೆ. ವಿಚ್ಛೇದನ ಪಡೆದು ದೂರವಾದರೂ ಈ ಮಾಜಿ ದಂಪತಿ ಆಗ್ಗಾಗ್ಗೆ ಭೇಟಿ ಮಾಡುತ್ತಲೇ ಇದ್ದಾರೆ. (PC: Aamir Khan Fans page)
ಆಮೀರ್‌ ಖಾನ್‌ ಬುಧವಾರ ತಮ್ಮ ತಾಯಿ ಜೀನತ್‌ ಹುಸೇನ್‌ ಅವರ 89ನೇ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಬರ್ತ್‌ಡೇ ಪಾರ್ಟಿಗೆ ಆಮೀರ್‌ ತಮ್ಮ ಆತ್ಮೀಯರನ್ನು ಆಹ್ವಾನಿಸಿದ್ದರು. ಅವರಲ್ಲಿ ಕಿರಣ್‌ ರಾವ್‌ ಕೂಡಾ ಒಬ್ಬರು. 
(2 / 11)

ಆಮೀರ್‌ ಖಾನ್‌ ಹಾಗೂ ಕಿರಣ್‌ ರಾವ್‌ ಪ್ರೀತಿಸಿ ಮದುವೆ ಆದವರು. ಕಿರಣ್‌ ರಾವ್‌, ಆಮೀರ್‌ಗೆ ಎರಡನೇ ಪತ್ನಿ. ಆದರೆ 2021 ಜುಲೈನಲ್ಲಿ ಈ ಜೋಡಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಗುಡ್‌ ಬೈ ಹೇಳಿದ್ದರು. 
(3 / 11)

ಮೊದಲ ಪತ್ನಿ ರೀನಾ ದತ್ತಾ ಬಿಟ್ಟು, ತಮ್ಮ ಸಿನಿಮಾದಲ್ಲಿ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದ ಕಿರಣ್‌ ರಾವ್‌ ಅವರನ್ನು ಪ್ರೀತಿಸಿ ಮದುವೆ ಆಗಿದ್ದ ಆಮೀರ್‌ ಖಾನ್‌, ಆಕೆಗೂ ಡಿವೋರ್ಸ್‌ ನೀಡಿದ್ದು ಅಭಿಮಾನಿಗಳಿಗೆ, ಸಿನಿಪ್ರಿಯರಿಗೆ ಶಾಕ್‌ ಆಗಿತ್ತು. 
(4 / 11)

ಡಿವೋರ್ಸ್‌ ಆದ ನಂತರವೂ ಇಬ್ಬರೂ ಒಂದೇ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದು ಟ್ರೋಲ್‌ ಕೂಡಾ ಆಗಿತ್ತು. ಕಾನೂನಿನ ಪ್ರಕಾರ ವಿಚ್ಛೇದನ ನೀಡಿ ಈಗ ಫ್ರೆಂಡ್ಸ್‌ ಎಂದು ಹೇಳಿಕೊಂಡು ತಿರುಗುತ್ತಿದ್ದೀರಿ. ಅದರ ಬದಲಿಗೆ ಮನಸ್ತಾಪ ಬದಿಗಿಟ್ಟು ಒಟ್ಟಿಗೆ ಏಕೆ ಇರಬಾರದಿತ್ತು. ಡಿವೋರ್ಸ್‌ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಪ್ರಶ್ನಿಸಿದ್ದರು. 
(5 / 11)

ಇದೀಗ ತಾಯಿ ಬರ್ತ್‌ಡೇ ಪಾರ್ಟಿಗೆ ಆಮೀರ್‌ ಖಾನ್‌ ತಮ್ಮ ಮಾಜಿ ಪತ್ನಿಯನ್ನು ಕರೆದಿರುವುದು ಮತ್ತೆ ಗಮನ ಸೆಳೆದಿದೆ. ಡಿವೋರ್ಸ್‌ ಆಗಿರುವವರು ನಾನು ಉತ್ತರ ನೀನು ದಕ್ಷಿಣ ಎಂಬಂತೆ ಇರುತ್ತಾರೆ. ಈಗ ಇಬ್ಬರೂ ಒಟ್ಟಿಗೆ ಓಡಾಡುವುದು, ಭೇಟಿ ಮಾಡುವುದನ್ನು ನೋಡಿ ಜನರು ಈ ಬಾಲಿವುಡ್‌ ಜೋಡಿಯ ಕಾಲೆಳೆಯುತ್ತಿದ್ದಾರೆ. 
(6 / 11)

ಬರ್ತ್‌ಡೇ ಪಾರ್ಟಿಯಲ್ಲಿ ಆಮೀರ್‌ ಖಾನ್‌ ಸಹೊದರಿಯರು, ಅವರ ಮಕ್ಕಳು, ಆಮಿರ್‌ ಪುತ್ರಿ ಇರಾ ಹಾಗೂ ಇನ್ನಿತರರು ಹಾಜರಿದ್ದರು. 
(7 / 11)

ಬಾಲಿವುಡ್‌ ಗಾಯಕಿ ಪ್ರತಿಭಾ ಸಿಂಗ್‌ ಕೂಡಾ ಆಮೀರ್‌ ಖಾನ್‌ ತಾಯಿ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 
(8 / 11)

ಆಮೀರ್‌ ಖಾನ್‌ ಸದ್ಯಕ್ಕೆ ಸಿನಿಮಾಗಳಿಂದ ದೂರ ಉಳಿದಿದ್ದಾರೆ. 2022ರಲ್ಲಿ ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ನಂತರ ಆಮೀರ್‌ ಸಲಾಮ್‌ ವೆಂಕಿ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 
(9 / 11)

ಲಾಲ್‌ ಸಿಂಗ್‌ ಛಡ್ಡಾ ಸಿನಿಮಾ ಚಿತ್ರಮಂದಿರದಲ್ಲಿ ಯಶಸ್ಸು ಗಳಿಸಲಿಲ್ಲ. ಈ ಚಿತ್ರಕ್ಕೆ ಆಮೀರ್‌  ಹಾಗೂ ಮಾಜಿ ಪತ್ನಿ ಕಿರಣ್‌ ರಾವ್‌ ಕೂಡಾ ಬಂಡವಾಳ ಹೂಡಿದ್ದರು. 
(10 / 11)

ಭಾರತದ ಬಗ್ಗೆ ಆಮೀರ್‌ ಖಾನ್‌ ನೀಡಿದ್ದ ವಿವಾದಾತ್ಮಕ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಹಲವರು ಆತನ ಸಿನಿಮಾವನ್ನು ಬಹಿಷ್ಕಾರ ಮಾಡಿದ್ದರು. ಆಮೀರ್‌ ಮತ್ತೆ ನಟನೆಗೆ ವಾಪಸಾಗಲಿದ್ದಾರಾ ಅಥವಾ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲಿದ್ದಾರಾ ಕಾದು ನೋಡಬೇಕು. 
(11 / 11)

    ಹಂಚಿಕೊಳ್ಳಲು ಲೇಖನಗಳು