logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Barkha Madan: ಒಂದು ಕಾಲದಲ್ಲಿ ಬಾಲಿವುಡ್‌ ಖ್ಯಾತ ನಟಿ ಈಗ ಬೌದ್ಧ ಸನ್ಯಾಸಿನಿ;ಭೂತ್‌ ಚಿತ್ರದ ನಟಿ ಬರ್ಖಾ ಮದನ್‌ ಈ ನಿರ್ಧಾರಕ್ಕೆ ಬಂದಿದ್ದೇಕೆ

Barkha Madan: ಒಂದು ಕಾಲದಲ್ಲಿ ಬಾಲಿವುಡ್‌ ಖ್ಯಾತ ನಟಿ ಈಗ ಬೌದ್ಧ ಸನ್ಯಾಸಿನಿ;ಭೂತ್‌ ಚಿತ್ರದ ನಟಿ ಬರ್ಖಾ ಮದನ್‌ ಈ ನಿರ್ಧಾರಕ್ಕೆ ಬಂದಿದ್ದೇಕೆ

May 13, 2023 12:23 PM IST

ಜೀವನದಲ್ಲಿ ಹುಟ್ಟು-ಸಾವು ಸಹಜ. ಆದರೆ ಆ ಎರಡೂ ಘಟ್ಟಗಳು ನಡುವೆ ನಾವು ಹೇಗೆ ಬಾಳುತ್ತೇವೆ ಎನ್ನುವುದು ಬಹಳ ಮುಖ್ಯ. ದಾನ ಧರ್ಮ ಮಾಡುತ್ತಾ, ಯಾರಿಗೂ ನೋವು ಕೊಡದೆ, ಇನ್ನೊಬ್ಬರ ಬಗ್ಗೆ ಅಸೂಯೆ ಪಡದೆ ಸಕಲ ಮೋಹಗಳನ್ನೂ ತ್ಯಜಿಸಿ ಸುಖ ಸಂತೋಷದಿಂದ ಬದುಕುವವರು ಬಹಳ ಅಪರೂಪ. 

ಜೀವನದಲ್ಲಿ ಕಷ್ಟ ಸುಖ ನೋವು ನಲಿವುಗಳನ್ನು ನೋಡಿದ ಅನೇಕರು ನಂತರ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಅನೇಕ ಉದಾಹರಣೆಗಳಿವೆ. ಬಣ್ಣದ ಲೋಕದಲ್ಲಿ ಹೆಸರು ಮಾಡಿ ಕೊನೆಗೆ ಎಲ್ಲವನ್ನೂ ತ್ಯಜಿಸಿ ಬೌದ್ಧ ಸನ್ಯಾಸಿನಿ ಆದ ಬರ್ಖಾ ಮದನ್‌ ಎಂಬ ಯುವತಿಯ ಕಥೆ ಇಲ್ಲಿದೆ. 
(1 / 12)
ಜೀವನದಲ್ಲಿ ಕಷ್ಟ ಸುಖ ನೋವು ನಲಿವುಗಳನ್ನು ನೋಡಿದ ಅನೇಕರು ನಂತರ ಎಲ್ಲವನ್ನೂ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ ಅನೇಕ ಉದಾಹರಣೆಗಳಿವೆ. ಬಣ್ಣದ ಲೋಕದಲ್ಲಿ ಹೆಸರು ಮಾಡಿ ಕೊನೆಗೆ ಎಲ್ಲವನ್ನೂ ತ್ಯಜಿಸಿ ಬೌದ್ಧ ಸನ್ಯಾಸಿನಿ ಆದ ಬರ್ಖಾ ಮದನ್‌ ಎಂಬ ಯುವತಿಯ ಕಥೆ ಇಲ್ಲಿದೆ. (PC: Barkha Madan Twitter. Facebook)
ಬರ್ಖಾ ಮದನ್‌ ಬಾಲಿವುಡ್‌ ನಟಿಯಾಗಿ, ಮಾಡೆಲ್‌ ಆಗಿ ಗುರುತಿಸಿಕೊಂಡಿದ್ದರು. ಸಿನಿಮಾಗೆ ಬರುವ ಮುನ್ನ ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದರು. 
(2 / 12)

ಜನಿಸಿದ್ದು 1970ರಲ್ಲಿ. ಬರ್ಖಾ 20 ವರ್ಷದವರಿರುವಾಗ ಐಶ್ವರ್ಯ ರೈ, ಸುಷ್ಮಿತಾ ಸೇನ್‌ ಭಾಗವಹಿಸಿದ್ದ ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಫೈನಲ್‌ ಸ್ಪರ್ಧಿಯಾಗಿ ಭಾಗವಹಿಸಿದ್ದರು. 
(3 / 12)

ಖಿಲಾಡಿಯೋ ಕಾ ಖಿಲಾಡಿ, ಭೂತ್‌, ಸೋಚ್‌ ಲೋ ಸೇರಿ ಅನೇಕ ಹಿಂದಿ ಸಿನಿಮಾ, ಕಿರುತೆರೆ ಹಾಗೂ ಪಂಜಾಂಬಿ ಸಿನಿಮಾಗಳಲ್ಲಿ ಬರ್ಖಾ ನಟಿಸಿದ್ದರು. ನಿರ್ಮಾಪಕಿಯಾಗಿ ಕೂಡಾ ಬರ್ಖಾ ಗುರುತಿಸಿಕೊಂಡಿದ್ದರು. ಭೂತ್‌ ಸಿನಿಮಾದಲ್ಲಿ ಬರ್ಖಾ, ಭೂತದ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ಅವರಿಗೆ ಒಳ್ಳೆ ಅವಕಾಶಗಳು ಒದಗಿ ಬಂತು. 
(4 / 12)

ಚಿತ್ರರಂಗದಲ್ಲಿ ಇಷ್ಟೆಲ್ಲಾ ಹೆಸರು ಮಾಡಿದ್ದ ಬರ್ಖಾ ಮದನ್‌, ಇದ್ದಕ್ಕಿದ್ದಂತೆ ಬಣ್ಣದ ಬದುಕು, ಪಾಶ್‌ ಜೀವನವನ್ನು ತ್ಯಾಗ ಮಾಡಿ 2012ರಲ್ಲಿ ಟಿಬೆಟ್‌ ಸೆರಾಜೆನ್‌ ಮಠದಲ್ಲಿ ಸನ್ಯಾಸತ್ವ ಸ್ವೀಕರಿಸಿದರು. 
(5 / 12)

ಬೌದ್ಧಗುರು ದಲೈಲಾಮ ಅವರ ಜೀವನದಿಂದ ಪ್ರೇರಿತರಾದ ಬರ್ಖಾ ಮದನ್‌ ಲಾಮಾ ಚೋಂಪಾ ರಿಂಪೋಜಿ ಮಾರ್ಗದರ್ಶನದಲ್ಲಿ ದೀಕ್ಷೆ ಪಡೆದು ತಮ್ಮ ಹೆಸರನ್ನು ಕೂಡಾ ಬದಲಿಸಿಕೊಂಡರು. 
(6 / 12)

ಸನ್ಯಾಸತ್ವ ಸ್ವೀಕರಿಸಿದ ನಂತರ ಬರ್ಖಾ ಅನೇಕ ಬಡಜನರಿಗೆ ಸಹಾಯ ಮಾಡುತ್ತಾ ಬಂದಿದ್ದಾರೆ. ಲಾಕ್‌ಡೌನ್‌ ಸಮಯದಲ್ಲಿ ಕೂಡಾ ಇವರು ಅನೇಕರಿಗೆ ಸಹಾಯಹಸ್ತ ಚಾಚಿದ್ದಾರೆ. 
(7 / 12)

ತಾವು ಸನ್ಯಾಸ ದೀಕ್ಷೆ ಸ್ವೀಕರಿಸಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದು ಬರ್ಖಾ ಮದನ್‌ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 
(8 / 12)

ಮನುಷ್ಯನ ಆಸೆಗಳಿಗೆ ಮಿತಿ ಎಂಬುದಿಲ್ಲ. ಜೀವನದಲ್ಲಿ ಎಷ್ಟು ಪಡೆದರೂ ಇನ್ನೂ ಬೇಕು ಎನ್ನುತ್ತಾನೆ. ಬಯಸಿದ್ದನ್ನು ಪಡೆಯಲು ಕೆಲವರು ಅಪರಾಧ ಕೃತ್ಯಗಳಲ್ಲಿ ತೊಡಗುತ್ತಾರೆ. 
(9 / 12)

ನಾನು ಬೌದ್ಧ ಧರ್ಮದ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಅದನ್ನು ಓದಿದ ನಂತರವಷ್ಟೇ ಜೀವನದಲ್ಲಿ ನಿಜವಾದ ಶಾಂತಿ, ಸ್ವಾತಂತ್ರ್ಯ ಎಂದರೇನು ಎಂಬ ಸತ್ಯ ಗೊತ್ತಾಯ್ತು. 
(10 / 12)

ಸಂಸಾರ ಎಂಬ ಬಂಧನದಲ್ಲಿ ಸಿಲುಕುವುದು ನನಗೆ ಇಷ್ಟವಿಲ್ಲ. ಆದ್ದರಿಂದ ನಾನು ಸನ್ಯಾಸತ್ವ ಸೀಕ್ವರಿಸಿದೆ ಎಂದು ಬರ್ಖಾ ಮದನ್‌ ಹೇಳಿಕೊಂಡಿದ್ದಾರೆ. 
(11 / 12)

ಬರ್ಖಾ ಮದನ್‌ ಈಗ ವಿಶ್ವದ ಅನೇಕ ರಾಷ್ಟ್ರಗಳಿಗೆ ಸಂಚರಿಸುತ್ತಾ ಅಲ್ಲಿ ಬಡಜನರಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. 
(12 / 12)

    ಹಂಚಿಕೊಳ್ಳಲು ಲೇಖನಗಳು