logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗ್ರಿಷ್ಣೇಶ್ವರ ಜ್ಯೋತಿರ್ಲಿಂಗದಲ್ಲಿ ಸಾರಾ ಅಲಿ ಖಾನ್ ಭಕ್ತಿಪರವಶ; ಟೀಕೆಗಳಿಗೆ ಅಂಜದೆ ಜೈ ಭೋಲೆನಾಥ್‌ ಎಂದ ಬಾಲಿವುಡ್‌ ನಟಿ

ಗ್ರಿಷ್ಣೇಶ್ವರ ಜ್ಯೋತಿರ್ಲಿಂಗದಲ್ಲಿ ಸಾರಾ ಅಲಿ ಖಾನ್ ಭಕ್ತಿಪರವಶ; ಟೀಕೆಗಳಿಗೆ ಅಂಜದೆ ಜೈ ಭೋಲೆನಾಥ್‌ ಎಂದ ಬಾಲಿವುಡ್‌ ನಟಿ

Jan 24, 2024 04:05 PM IST

ಬಾಲಿವುಡ್‌ ನಟಿ ಸಾರಾ ಅಲಿ ಖಾನ್‌ ಅವರು ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗಕ್ಕೆ ಭೇಟಿ ನೀಡಿದರು. ಇದು ಭಾರತದಲ್ಲಿರುವ ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಅಪಾರ ದೈವಭಕ್ತಿಗೆ ಹೆಸರುವಾಸಿಯಾದ ಸಾರಾ ಅಲಿ ಖಾನ್‌ ಅವರು ಜ್ಯೋತಿರ್ಲಿಂಗ ದರ್ಶನದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಸಾರಾ ಆಲಿ ಖಾನ್‌  ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಗ್ರಿಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯಕ್ಕೆ ಭೇಟಿ ನೀಡಿದರು.  ಔರಂಗಾಬಾದ್ ನಗರದಿಂದ ಕೇವಲ 20 ಕಿಲೋಮೀಟರ್ ದೂರದಲ್ಲಿರುವ ವೆರುಲ್ ಗ್ರಾಮದಲ್ಲಿ ಈ ಜ್ಯೋತಿರ್ಲಿಂಗ ದೇಗುಲವಿದೆ. ಈ ಫೋಟೋಗಳನ್ನು ಸಾರಾ ಅಲಿ ಖಾನ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. (Photo: @saraalikhan95/IG)
(1 / 7)

ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಾಗ ಹಿಂದೂ ದೇವಾಲಯಗಳಿಗೆ ಭೇಟಿ ನೀಡುತ್ತ ಇರುತ್ತಾರೆ. ಈಗ ಹಂಚಿಕೊಂಡಿರುವ ಫೋಟೋಗಳಲ್ಲಿ ಸಾರಾ ಶಿವಭಕ್ತೆಯಾಗಿರುವುದನ್ನು ಗಮನಿಸಬಹುದು. (ಫೋಟೋ: @saraalikhan95/IG)
(2 / 7)

ಇನ್‌ಸ್ಟಾಗ್ರಾಂನಲ್ಲಿ ಇವರು ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಆಧ್ಯಾತ್ಮಿಕ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(3 / 7)

ಜೈ ಭೋಲೆನಾಥ್‌ ಎಂದು ಇವರು ತನ್ನ ಫೋಟೋಗಳಿಗೆ ಕ್ಯಾಪ್ಷನ್‌ ನೀಡಿದ್ದಾರೆ. ಅಂದಹಾಗೆ, ಇವರು ಇಸ್ಲಾಂ ಧರ್ಮಿಯರಾಗಿದ್ದುಕೊಂಡು ಹಿಂದೂ ದೇವಾಲಯಗಳಿಗೆ ಹೋಗುವ ಕಾರಣ ಆಗಾಗ ನೆಟ್ಟಿಗರಿಂದ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. (Photo: @saraalikhan95/IG)
(4 / 7)

ಜನರು ಏನೇ ಹೇಳಿದರೂ ಇವರು ತಮ್ಮ ಧಾರ್ಮಿಕ ನಂಬಿಕೆಯನ್ನು ಮುಂದುವರೆಸುತ್ತಾರೆ. "ಯಾರು ಇಷ್ಟಪಡಲಿ, ಇಷ್ಟಪಡದೆ ಇರಲಿ, ನಾನು ದೇಗುಲಕ್ಕೆ ಭೇಟಿ ನೀಡುವುದನ್ನು ಮುಂದುವರೆಸುವೆ" ಎಂದು ಅವರು ಈ ಹಿಂದೆ ಹೇಳಿದ್ದರು.  (Photo: @saraalikhan95/IG)
(5 / 7)

ಸಾರಾ ಆಲಿ ಖಾನ್‌ ಅವರ ತಾಯಿ ಅಮೃತ ಸಿಂಗ್‌ ಹಿಂದೂ. ತಂದೆ, ಸೈಫ್‌ ಆಲಿ ಖಾನ್‌ ಅವರು ಮುಸ್ಲಿಂ. "ಜನರಿಗೆ ಟೀಕಿಸುವುದೇ ಕೆಲಸ, ನಾನು ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ" ಎಂದು ಹಿಂದೂಸ್ತಾನ್‌ ಟೈಮ್ಸ್‌ಗೆ ಈ ಹಿಂದೆ ನೀಡಿದ ಸಂದರ್ಶನದಲ್ಲಿ ಸಾರಾ ಹೇಳಿದ್ದರು.
(6 / 7)

ಸಾರಾ ಆಲಿ ಖಾನ್‌ 
(7 / 7)
ಸಾರಾ ಆಲಿ ಖಾನ್‌ 

    ಹಂಚಿಕೊಳ್ಳಲು ಲೇಖನಗಳು