logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೇಜಸ್‌ ಯುದ್ಧ ವಿಮಾನದಲ್ಲಿ ಕಂಗನಾ ರಣಾವತ್‌ ಸಾಹಸ; ವಾಯುಪಡೆಯ ಪೈಲೆಟ್‌ ತೇಜಸ್‌ ಗಿಲ್‌ ಕಥನ, ಗಾಂಧಿ ಜಯಂತಿಯಂದು ಸರ್‌ಪ್ರೈಸ್‌

ತೇಜಸ್‌ ಯುದ್ಧ ವಿಮಾನದಲ್ಲಿ ಕಂಗನಾ ರಣಾವತ್‌ ಸಾಹಸ; ವಾಯುಪಡೆಯ ಪೈಲೆಟ್‌ ತೇಜಸ್‌ ಗಿಲ್‌ ಕಥನ, ಗಾಂಧಿ ಜಯಂತಿಯಂದು ಸರ್‌ಪ್ರೈಸ್‌

Sep 30, 2023 11:22 AM IST

Kangana Ranaut Tejas Movie: ವಿವಿಧ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಹೆಸರುವಾಸಿಯಾಗಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮತ್ತೊಂದು ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜಸ್‌ ಟೀಸರ್‌ ಅಕ್ಟೋಬರ್‌ 2 ಗಾಂಧಿ ಜಯಂತಿಯಂದು, ಸಿನಿಮಾವು ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ.

  • Kangana Ranaut Tejas Movie: ವಿವಿಧ ವಿಭಿನ್ನ ಪಾತ್ರಗಳ ಮೂಲಕ ಸಿನಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಹೆಸರುವಾಸಿಯಾಗಿರುವ ಬಾಲಿವುಡ್‌ ನಟಿ ಕಂಗನಾ ರಣಾವತ್‌ ಇದೀಗ ಮತ್ತೊಂದು ಸಾಹಸಮಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತೇಜಸ್‌ ಟೀಸರ್‌ ಅಕ್ಟೋಬರ್‌ 2 ಗಾಂಧಿ ಜಯಂತಿಯಂದು, ಸಿನಿಮಾವು ಅಕ್ಟೋಬರ್‌ 20ರಂದು ಬಿಡುಗಡೆಯಾಗಲಿದೆ.
ಚಂದ್ರಮುಖಿ 2 ಚಿತ್ರದ ಬಳಿಕ ಕಂಗನಾ ರಣಾವತ್‌ ಅವರ ತೇಜಸ್‌ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ. ಇದೇ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ತೇಜಸ್‌ ಸಿನಿಮಾದ ಟೀಸರ್‌ ಬಿಡುಗಡೆಯಾಗಲಿದೆ. 
(1 / 8)

ಅಕ್ಟೋಬರ್‌ 20ರಂದು ಚಿತ್ರಮಂದಿರಗಳಲ್ಲಿ ತೇಜಸ್‌ ತೆರೆ ಕಾಣಲಿದ್ದು, ಕಂಗನಾ ರಣಾವತ್‌ ಅವರು ತೇಜಸ್‌ ಯುದ್ಧ ವಿಮಾನದಲ್ಲಿ ಏರ್‌ ಫೋರ್ಸ್‌ ಪೈಲೆಟ್‌ ಆಗಿ ಮೋಡಿ ಮಾಡುವ ನಿರೀಕ್ಷೆಯಿದೆ.
(2 / 8)

ತೇಜಸ್‌ ಸಿನಿಮಾದ ಕುರಿತು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿರುವುದರಿಂದ ತೇಜಸ್‌ ಸಿನಿಮಾ ಟೀಮ್‌ ಅಭಿಮಾನಿಗಳಿಗೆ ಗಾಂಧಿ ಜಯಂತಿಯಂದು ವಿಶೇಷ ಟ್ರೀಟ್‌ ನೀಡಲು ಸಿದ್ಧವಾಗಿದೆ.
(3 / 8)

ಇಟಿ ಟೈಮ್ಸ್‌ ವರದಿ ಪ್ರಕಾರ ತೇಜಸ್‌ ಚಿತ್ರದ ಟೀಸರ್‌ ಬಿಡುಗಡೆಯಾಗಲಿದಂತೆಯಂತೆ. ಮಹಾತ್ಮ ಗಾಂಧಿ ಜನ್ಮ ದಿನದಂದು ತೇಜಸ್‌ ಟೀಸರ್‌ ಕಣ್ತುಂಬಿಕೊಳ್ಳಬಹುದು.
(4 / 8)

ತೇಜಸ್‌ ಚಿತ್ರಕ್ಕೆ ಸರ್ವೇಶ್ ಮೇವಾರಾ ನಿರ್ದೇಶಿನವಿದೆ.  ಅನ್ಶುಲ್ ಚೌಹಾಣ್, ವರುಣ್ ಮಿತ್ರ, ವೀಣಾ ನಾಯರ್, ಮಿರ್ಕೊ ಕ್ವೈನಿ, ರೋಹೆದ್ ಖಾನ್ ಮತ್ತು ಅನುಜ್ ಖುರಾನಾ ಸೇರಿದಂತೆ ಪ್ರಮುಖ ತಾರಾಗಣವಿದೆ.  
(5 / 8)

ಇದು ತೇಜಸ್ ಗಿಲ್ ಅವರ ಸ್ಪೂರ್ತಿದಾಯಕ ಬದುಕಿನ ಕಥೆಯನ್ನು ಹೊಂದಿದೆ.  ತೇಜಸ್ ಗಿಲ್ ಅವರು ವಾಯುಪಡೆಯ ಪೈಲಟ್ ಆಗಿದ್ದಾರೆ. ಇದೀಗ ಕಂಗನಾ ಈ ಚಿತ್ರದಲ್ಲಿ ತೇಜಸ್‌ ಯುದ್ಧ ವಿಮಾನದ ಸಾಹಸ ಪ್ರಯಾಣವನ್ನು ವೀಕ್ಷಕರಿಗೆ ತೋರಿಸಲಿದ್ದಾರೆ.
(6 / 8)

ತೇಜಸ್‌ ಯುದ್ಧ ವಿಮಾನವು ಭಾರತದ ವಾಯುಪಡೆಯ ಪ್ರಮುಖ ಯುದ್ಧವಿಮಾನವಾಗಿದೆ. ಭಾರತದ ಸುಕೋಯ್‌ ಯುದ್ಧ ವಿಮಾನಗಳಿಗೆ ಹೋಲಿಸಿದರೆ ತೇಜಸ್‌ ಸಾಕಷ್ಟು ಹಗುರವಾಗಿದೆ 
(7 / 8)
ತೇಜಸ್‌ ಯುದ್ಧ ವಿಮಾನವು ಭಾರತದ ವಾಯುಪಡೆಯ ಪ್ರಮುಖ ಯುದ್ಧವಿಮಾನವಾಗಿದೆ. ಭಾರತದ ಸುಕೋಯ್‌ ಯುದ್ಧ ವಿಮಾನಗಳಿಗೆ ಹೋಲಿಸಿದರೆ ತೇಜಸ್‌ ಸಾಕಷ್ಟು ಹಗುರವಾಗಿದೆ (ANI Pic Service)
ಎಂಟರಿಂದ ಒಂಬತ್ತು ಟನ್‌ ತೂಕ ಕೊಂಡೊಯ್ಯವು ಸಾಮಥ್ಯ ತೇಜಸ್‌ಗಗೆ ಇದೆ. ಸುಖೋಯ್‌ನಂತೆಯೇ ಎಷ್ಟು ಪೇಲೋಡ್‌ಗಳನ್ನು, ವೆಪನ್‌ಗಳನ್ನು ಇದು ಕೊಂಡೊಯ್ಯಬಲ್ಲದು ತೇಜಸ್‌ ಯುದ್ಧ ವಿಮಾನದ ಇನ್ನೊಂದು ಅನುಕೂಲ ಅದರ ವೇಗ. ಇದರ ವೇಗಕ್ಕೆ ಯಾವುದೇ ಸಾಟಿಯಿಲ್ಲ. ಈ ಯುದ್ಧ ವಿಮಾನವು ಶಬ್ದದ ವೇಗದಲ್ಲಿ ಸಾಗಬಹುದು ಮತ್ತು ಭೂಮಿಯಿಂದ 52 ಸಾವಿರ ಅಡಿ ಎತ್ತರದವರೆಗೂ ನಿರಾಂತಕವಾಗಿ ಹಾರಬಲ್ಲದು.
(8 / 8)

    ಹಂಚಿಕೊಳ್ಳಲು ಲೇಖನಗಳು