logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂಲ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದ ಸೆಲಬ್ರಿಟಿಗಳು.. ನಖತ್ ಖಾನ್, ಡಯಾನಾ ಜೊತೆಗೆ ಯಾರೆಲ್ಲಾ ಇದ್ದಾರೆ ನೋಡಿ..?

ಮೂಲ ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾದ ಸೆಲಬ್ರಿಟಿಗಳು.. ನಖತ್ ಖಾನ್, ಡಯಾನಾ ಜೊತೆಗೆ ಯಾರೆಲ್ಲಾ ಇದ್ದಾರೆ ನೋಡಿ..?

Aug 01, 2022 10:39 PM IST

ನಮಗೆ ತಿಳಿದಿರುವಂತೆ ಭಾರತದಲ್ಲಿ ವಿವಿಧ ಧರ್ಮದ, ವಿವಿದ ಸಂಸ್ಕೃತಿ, ಆಚಾರ, ವಿಚಾರ ಪಾಲಿಸುವ ಜನರಿದ್ದಾರೆ. ಹಾಗೇ ಎಷ್ಟೋ ಮಂದಿ ತಮ್ಮ ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದವರೂ ಇದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ಕೆಲವು ಸೆಲಬ್ರಿಟಿಗಳು ಕೂಡಾ ತಮ್ಮ ಮೂಲಕ ಧರ್ಮದಿಂದ ಇತರ ಧರ್ಮಕ್ಕೆ ಮತಾಂತರವಾಗಿದ್ದಾರೆ.

  • ನಮಗೆ ತಿಳಿದಿರುವಂತೆ ಭಾರತದಲ್ಲಿ ವಿವಿಧ ಧರ್ಮದ, ವಿವಿದ ಸಂಸ್ಕೃತಿ, ಆಚಾರ, ವಿಚಾರ ಪಾಲಿಸುವ ಜನರಿದ್ದಾರೆ. ಹಾಗೇ ಎಷ್ಟೋ ಮಂದಿ ತಮ್ಮ ಮೂಲ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾದವರೂ ಇದ್ದಾರೆ. ಜನಸಾಮಾನ್ಯರು ಮಾತ್ರವಲ್ಲ ಕೆಲವು ಸೆಲಬ್ರಿಟಿಗಳು ಕೂಡಾ ತಮ್ಮ ಮೂಲಕ ಧರ್ಮದಿಂದ ಇತರ ಧರ್ಮಕ್ಕೆ ಮತಾಂತರವಾಗಿದ್ದಾರೆ.
ಕಲಾವಿದರಿಗೆ ಭಾಷೆ, ಧರ್ಮದ ಹಂಗಿಲ್ಲ. ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳಲ್ಲಿ ನಟಿಸುವ ಬಹುತೇಕ ಕಲಾವಿದರು ನಾನಾ ಕಾರಣಗಳಿಂದ ಬೇರೆ ಧರ್ಮಕ್ಕೆ ಮತಾಂತರವಾಗಿದ್ದಾರೆ.
(1 / 10)

ನಗ್ಮಾ ಶಿವಣ್ಣ ಜೊತೆ ಕುರುಬನ ರಾಣಿ ಚಿತ್ರದಲ್ಲಿ ನಟಿಸಿರುವ ನಗ್ಮಾ ಕನ್ನಡ ಸಿನಿಪ್ರಿಯರಿಗೆ ಪರಿಚಿತ, ನಗ್ಮಾ ರವಿಚಂದ್ರನ್ ಜೊತೆ ರವಿಮಾಮ ಹಾಗೂ ಡಾ. ವಿಷ್ಣುವರ್ಧನ್ ಜೊತೆ ಹೃದಯವಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರ ತಾಯಿ ಮುಸ್ಲಿಂ ಹಾಗೂ ತಂದೆ ಹಿಂದೂ ಧರ್ಮಕ್ಕೆ ಸೇರಿದವರು. ಇವರ ಮೊದಲ ಹೆಸರು ನಂದಿತಾ ಅರವಿಂದ್ ಮುರಾರ್ಜಿ. 2011 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
(2 / 10)

ಜ್ಯೋತಿಕಾ ನಗ್ಮಾ ಸಹೋದರಿ ಜ್ಯೋತಿಕಾ, ತಮಿಳು ನಟ ಸೂರ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಜ್ಯೋತಿಕಾ ತಮಿಳು, ತೆಲುಗು, ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
(3 / 10)

ಖುಷ್ಪೂ ರಣಧೀರ, ಅಂಜದ ಗಂಡು ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಪರಿಚಿತರಾದ ಖುಷ್ಪೂ ಮೊದಲ ಹೆಸರು ನಖತ್ ಖಾನ್. ತಮಿಳು ನಟ ಸುಂದರ್ ಅವರನ್ನು ಮದುವೆಯಾದ ನಂತರ ಇವರು ಹಿಂದೂ ಧರ್ಮಕ್ಕೆ ಮತಾಂತರವಾದರು.
(4 / 10)

ಎ.ಆರ್. ರೆಹಮಾನ್ ಮ್ಯೂಸಿಕ್ ಮಾಂತ್ರಿಕ ಎ.ಆರ್​​.ರೆಹಮಾನ್ ಎಲ್ಲಾ ಸಂಗೀತ ಪ್ರೇಮಿಗಳಿಗೆ ಚಿರಪರಿಚಿತ. ದಿಲೀಪ್ ಕುಮಾರ್ ಆಗಿದ್ದ ಇವರು ತಂದೆ ನಿಧನರಾದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರವಾದರು. ರೆಹಮಾನ್ ಮಾತ್ರವಲ್ಲದೆ ಅವರ ಇಡೀ ಕುಟುಂಬ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
(5 / 10)

ಡಾ. ಜಯಸುಧಾ ಕಪೂರ್​​ ಜಯಸುಧಾ ಜನಿಸಿದ್ದು ಹಿಂದೂ ಕುಟುಂಬದಲ್ಲಿ. ಬಾಲ್ಯದಲ್ಲಿದ್ದಾಗಲೇ ಕ್ರೈಸ್ತ ಧರ್ಮದ ಬಗ್ಗೆ ಒಲವಿದ್ದ ಇವರು 2001 ರಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡರು. ಯೇಸು ಬಗ್ಗೆ ಇವರು ಹಾಡಿರುವ ಅನೇಕ ಗೀತೆಗಳು ಆಂಧ್ರ ಹಾಗೂ ತೆಲಂಗಾಣದಲ್ಲಿ ಬಹಳ ಫೇಮಸ್.
(6 / 10)

ನಯನತಾರಾ ನಯನತಾರಾ ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರಾಗಿರುವ ಇವರು ಕ್ರೈಸ್ತ ಕುಟುಂಬದಲ್ಲಿ ಜನಿಸಿದರು. ಇವರ ಮೊದಲ ಹೆಸರು ಡಯಾನಾ ಮರಿಯಮ್ ಕುರಿಯನ್. ಈಕೆ 2011 ರಂದು ಚೆನ್ನೈನ ಆರ್ಯ ಸಮಾಜದಲ್ಲಿ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ.
(7 / 10)

ಮೋನಿಕಾ ದೇವರು ಕೊಟ್ಟ ತಂಗಿ, ಹೃದಯದಲಿ ಇದೇನಿದು, ಕಳ್ಳ ಮಳ್ಳ ಸುಳ್ಳ ಸಿನಿಮಾ ನೋಡಿದವರಿಗೆ ಈ ನಟಿ ಪರಿಚಯವಿರುತ್ತಾರೆ. ಇವರು ತಮಿಳು, ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಇವರ ತಾಯಿ ಕ್ರೈಸ್ತ ಹಾಗೂ ತಂದೆ ಹಿಂದೂ ಆಗಿದ್ದರು. ನಂತರ ಇವರು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ರಹೀಮಾ ಎಂದು ಬದಲಿಸಿಕೊಂಡರು.
(8 / 10)

ಸಂಜನಾ ಗಲ್ರಾನಿ'ಗಂಡ ಹೆಂಡತಿ' ಸಿನಿಮಾ ಖ್ಯಾತಿಯ ಸಂಜನಾ ಹಿಂದೂ ಧರ್ಮಕ್ಕೆ ಸೇರಿದವರು. ಅಜೀಜ್ ಪಾಷಾ ಅವರನ್ನು ಮದುವೆಯಾಗಿರುವ ಸಂಜನಾ, ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. 
(9 / 10)

ಮಹಾಲಕ್ಷ್ಮಿ ದುರ್ಗಾಷ್ಟಮಿ, ಮನೇಲಿ ಇಲಿ ಬೀದೀಲಿ ಹುಲಿ, ಸ್ವಾಭಿಮಾನ, ಜಯಸಿಂಹ ಸಿನಿಮಾಗಳ ನಟಿ ಮಹಾಲಕ್ಷ್ಮಿ ಹಿಂದೂ ಧರ್ಮಕ್ಕೆ ಸೇರಿದವರು. ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಚಿತ್ರರಂಗದಿಂದ ದೂರಾದ ಇವರು ಹಲವು ವರ್ಷಗಳ ನಂತರ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬಂದಿದ್ದರು. ಆಗ ಅವರು ತಾವು ಕ್ರೈಸ್ತ ಧರ್ಮಕ್ಕೆ ಮತಾಂತರವಾದ ವಿಚಾರ ಹೇಳಿಕೊಂಡಿದ್ದರು.
(10 / 10)

    ಹಂಚಿಕೊಳ್ಳಲು ಲೇಖನಗಳು