logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು

ಚಾಣಕ್ಯ ನೀತಿಯ 7 ನುಡಿಮುತ್ತುಗಳು; ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು

Apr 01, 2024 05:42 AM IST

ದಿನನಿತ್ಯವೂ ಒಂದಿಲ್ಲೊಂದು ಸಂಕಷ್ಟ, ಸಂಕಟ. ಇಂತಹ ಜಂಜಡದ ನಿತ್ಯ ಬದುಕಿನ ನಿರ್ವಹಣೆಗೆ ಜೀವನ ಪಾಠದ ಪ್ರೇರಣಾ ನುಡಿಗಳು ಅಗತ್ಯ. ಕಟುವಾಸ್ತವಗಳನ್ನು ಅರಿಯಬೇಕಾದ್ದು ಅವಶ್ಯ. ಆದ್ದರಿಂದ ನೆನಪಿನಲ್ಲಿರಿಸಿಕೊಳ್ಳಬೇಕಾದ್ದು ಚಾಣಕ್ಯ ನೀತಿಯ 7 ನುಡಿಮುತ್ತುಗಳು. 

ದುರಾಸೆ ಮನುಷ್ಯ ಬದುಕಿನ ದೊಡ್ಡ ಶತ್ರು. ದುರಾಸೆ ಇರುವ ವ್ಯಕ್ತಿ ಬದುಕಿನಲ್ಲಿ ಎಂದಿಗೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. - ಚಾಣಕ್ಯ
(1 / 8)

ಹೂವುಗಳ ಸುಗಂಧ ಗಾಳಿ ಬೀಸುವ ದಿಕ್ಕಿನಲ್ಲಷ್ಟೆ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನ ಎಲ್ಲ ದಿಕ್ಕುಗಳಿಗೂ ಪಸರಿಸುತ್ತದೆ. - ಚಾಣಕ್ಯ
(2 / 8)

ವಿಗ್ರಹಗಳಲ್ಲಿ ದೇವರು ಇರಲ್ಲ. ನಿಮ್ಮ ಭಾವನೆಗಳೇ ನಿಮ್ಮ ಪರಮಾತ್ಮ. ಆತ್ಮವೇ ನಿಮ್ಮ ದೇವಾಲಯ. - ಚಾಣಕ್ಯ 
(3 / 8)

ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. 
(4 / 8)
ಹಿಂದೂಸ್ತಾನ್ ಟೈಮ್ಸ್ ಕನ್ನಡದಲ್ಲಿ ಸುದ್ದಿ ಫಟಾಫಟ್ ಅಪ್‌ಡೇಟ್ ಆಗುತ್ತೆ. ಖುಷಿಪಟ್ಟು ಓದುವಂಥ ಎಷ್ಟೋ ವಿಷಯಗಳು ಸದಾ ಇರುತ್ವೆ. ಇದನ್ನು ನೀವಷ್ಟೆ ಓದಿ ಸುಮ್ಮನಾಗಲ್ಲ. ನಿಮ್ಮವರಿಗೂ ಶೇರ್ ಮಾಡ್ತೀರಿ. (HT Kannnada)
ಪ್ರತಿಯೊಂದು ಗೆಳೆತನದ ಹಿಂದೆಯೂ ಸ್ವಲ್ಪವಾದರೂ ಸ್ವಹಿತಾಸಕ್ತಿ ಇದ್ದೇ ಇದೆ. ಅದಿಲ್ಲದ ಗೆಳೆತನವೇ ಇಲ್ಲ. ಇದು ಕಟುಸತ್ಯ. - ಚಾಣಕ್ಯ
(5 / 8)

ಸ್ಥಿತಿಯಲ್ಲಿ ನಿಮ್ಮಿಂದ ಮೇಲೆ ಅಥವಾ ಕೆಳಗಿರುವವರ ಜನರೊಂದಿಗೆ ಎಂದಿಗೂ ಸ್ನೇಹ ಬೆಳೆಸಬೇಡಿ. ಅಂತಹ ಸ್ನೇಹವು ನಿಮಗೆ ಎಂದಿಗೂ ಸಂತೋಷವನ್ನುನೀಡುವುದಿಲ್ಲ. - ಚಾಣಕ್ಯ
(6 / 8)

ತುಂಬಾ ಪ್ರಾಮಾಣಿಕರಾಗಿರಬಾರದು. ನೇರವಾಗಿರುವ ಮರಗಳನ್ನು ಮೊದಲು ಕತ್ತರಿಸುತ್ತಾರೆ. ಅದೇ ರೀತಿ ಪ್ರಾಮಾಣಿಕರನ್ನು ಮೊದಲು ಕೆಡಿಸಲಾಗುತ್ತದೆ. - ಚಾಣಕ್ಯ
(7 / 8)

ಮನುಷ್ಯ ಒಂಟಿಯಾಗಿಯೇ ಹುಟ್ಟುತ್ತಾನೆ. ಒಂಟಿಯಾಗಿಯೇ ಸಾಯುತ್ತಾನೆ. ಈ ಎರಡರ ನಡುವೆ ತನ್ನ ಕರ್ಮದ ಒಳ್ಳೆಯ ಮತ್ತು ಕೆಟ್ಟ ಫಲವನ್ನು ಅನುಭವಿಸುತ್ತಾನೆ. ಸತ್ತ ಬಳಿಕ ಒಂಟಿಯಾಗಿಯೇ ನರಕಕ್ಕೋ, ಸ್ವರ್ಗಕ್ಕೋ ಹೋಗುತ್ತಾನೆ. - ಚಾಣಕ್ಯ
(8 / 8)

    ಹಂಚಿಕೊಳ್ಳಲು ಲೇಖನಗಳು