logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Umran Malik: ಭಾರತವು ಪಾಕಿಸ್ತಾನದಂತೆ ಯೋಚಿಸಬೇಕು; ಟೆಸ್ಟ್ ತಂಡಕ್ಕೆ ಉಮ್ರಾನ್ ಮಲಿಕ್ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗನ ಸಲಹೆ

Umran Malik: ಭಾರತವು ಪಾಕಿಸ್ತಾನದಂತೆ ಯೋಚಿಸಬೇಕು; ಟೆಸ್ಟ್ ತಂಡಕ್ಕೆ ಉಮ್ರಾನ್ ಮಲಿಕ್ ಆಯ್ಕೆ ಕುರಿತು ಮಾಜಿ ಕ್ರಿಕೆಟಿಗನ ಸಲಹೆ

Jul 13, 2023 07:00 AM IST

Sanjay Manjrekar: ಭಾರತದ ವೇಗದ ಬೌಲರ್‌ ಉಮ್ರಾನ್ ಮಲಿಕ್, ಟೀಮ್‌ ಇಂಡಿಯಾ ಭವಿಷ್ಯದ ವೇಗಿ. ಯುವ ವೇಗಿಯು ಕಡಿಮೆ ಅನುಭವದ ಹೊರತಾಗಿಯೂ ವೇಗದ ಬೌಲಿಂಗ್‌ ಮೂಲಕ ಗಮನಸೆಳೆದಿದ್ದಾರೆ. ಈಗಾಗಲೇ ವೈಟ್‌ ಬಾಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಉಮ್ರಾನ್‌, ಟೆಸ್ಟ್‌ ತಂಡದಲ್ಲಿ ಇನ್ನೂ ಸ್ಥಾನ ಪಡೆದಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗರೊಬ್ಬರು ಧ್ವನಿ ಎತ್ತಿದ್ದಾರೆ.

  • Sanjay Manjrekar: ಭಾರತದ ವೇಗದ ಬೌಲರ್‌ ಉಮ್ರಾನ್ ಮಲಿಕ್, ಟೀಮ್‌ ಇಂಡಿಯಾ ಭವಿಷ್ಯದ ವೇಗಿ. ಯುವ ವೇಗಿಯು ಕಡಿಮೆ ಅನುಭವದ ಹೊರತಾಗಿಯೂ ವೇಗದ ಬೌಲಿಂಗ್‌ ಮೂಲಕ ಗಮನಸೆಳೆದಿದ್ದಾರೆ. ಈಗಾಗಲೇ ವೈಟ್‌ ಬಾಲ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಉಮ್ರಾನ್‌, ಟೆಸ್ಟ್‌ ತಂಡದಲ್ಲಿ ಇನ್ನೂ ಸ್ಥಾನ ಪಡೆದಿಲ್ಲ. ಈ ಬಗ್ಗೆ ಮಾಜಿ ಕ್ರಿಕೆಟಿಗರೊಬ್ಬರು ಧ್ವನಿ ಎತ್ತಿದ್ದಾರೆ.
ಭಾರತದ ಮಾಜಿ ಆರಂಭಿಕ ಆಟಗಾರ ಸಂಜಯ್ ಮಂಜ್ರೇಕರ್ ಅವರು ಮಲಿಕ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಸಬೇಕು ಎಂದು ಆಯ್ಕೆದಾರರಿಗೆ ಸಲಹೆ ನೀಡಿದ್ದಾರೆ.
(1 / 8)
ಭಾರತದ ಮಾಜಿ ಆರಂಭಿಕ ಆಟಗಾರ ಸಂಜಯ್ ಮಂಜ್ರೇಕರ್ ಅವರು ಮಲಿಕ್ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಸಬೇಕು ಎಂದು ಆಯ್ಕೆದಾರರಿಗೆ ಸಲಹೆ ನೀಡಿದ್ದಾರೆ.
ಈ ಕುರಿತು ನ್ಯೂಸ್ 24ನಲ್ಲಿ ಮಾತನಾಡಿದ ಮಂಜ್ರೇಕರ್, ಉಮ್ರಾನ್ ಅವರನ್ನು ಆಯ್ಕೆ ಮಾಡುವುದಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ನೀಡಿ ಎಂದು ಸಲಹೆ ನೀಡಿದ್ದಾರೆ. ಆಶಸ್ ಟೆಸ್ಟ್ ಪಂದ್ಯದಲ್ಲಿ ಮಾರ್ಕ್ ವುಡ್ ಬೀರಿದ ಪರಿಣಮವನ್ನೇ ಉಮ್ರಾನ್‌ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಂಜ್ರೇಕರ್‌ ತಿಳಿಸಿದ್ದಾರೆ.
(2 / 8)
ಈ ಕುರಿತು ನ್ಯೂಸ್ 24ನಲ್ಲಿ ಮಾತನಾಡಿದ ಮಂಜ್ರೇಕರ್, ಉಮ್ರಾನ್ ಅವರನ್ನು ಆಯ್ಕೆ ಮಾಡುವುದಾದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ನೀಡಿ ಎಂದು ಸಲಹೆ ನೀಡಿದ್ದಾರೆ. ಆಶಸ್ ಟೆಸ್ಟ್ ಪಂದ್ಯದಲ್ಲಿ ಮಾರ್ಕ್ ವುಡ್ ಬೀರಿದ ಪರಿಣಮವನ್ನೇ ಉಮ್ರಾನ್‌ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಮಂಜ್ರೇಕರ್‌ ತಿಳಿಸಿದ್ದಾರೆ.(instagram, umran malik)
ಉಮ್ರಾನ್ ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ 8 ಪಂದ್ಯಗಳಲ್ಲಿ 10.85ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿದ್ದರು. ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಡ್ರಾಪ್‌ ಮಾಡಲಾಗಿತ್ತು. ಆದರೂ, ವೇಗದ ಬೌಲಿಂಗ್‌ ಸಾಮರ್ಥ್ಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ ಬಾಲ್‌ ಸರಣಿಗೆ ಆಯ್ಕೆಯಾದರು.
(3 / 8)
ಉಮ್ರಾನ್ ಪ್ರಸಕ್ತ ವರ್ಷದ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಪರ ಆಡಿದ 8 ಪಂದ್ಯಗಳಲ್ಲಿ 10.85ರ ಎಕಾನಮಿಯಲ್ಲಿ ಬೌಲಿಂಗ್‌ ಮಾಡಿದ್ದರು. ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಅವರನ್ನು ತಂಡದಿಂದ ಡ್ರಾಪ್‌ ಮಾಡಲಾಗಿತ್ತು. ಆದರೂ, ವೇಗದ ಬೌಲಿಂಗ್‌ ಸಾಮರ್ಥ್ಯದಿಂದಾಗಿ ವೆಸ್ಟ್ ಇಂಡೀಸ್ ವಿರುದ್ಧದ ವೈಟ್‌ ಬಾಲ್‌ ಸರಣಿಗೆ ಆಯ್ಕೆಯಾದರು.(instagram, umran malik)
ಟೆಸ್ಟ್ ಕ್ರಿಕೆಟ್ ಕಾಶ್ಮೀರ ವೇಗಿ ಪಾಲಿಗೆ ಉತ್ತಮ ಕ್ರಿಕೆಟ್ ಭವಿಷ್ಯವನ್ನು ನೀಡಬಹುದು ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.
(4 / 8)
ಟೆಸ್ಟ್ ಕ್ರಿಕೆಟ್ ಕಾಶ್ಮೀರ ವೇಗಿ ಪಾಲಿಗೆ ಉತ್ತಮ ಕ್ರಿಕೆಟ್ ಭವಿಷ್ಯವನ್ನು ನೀಡಬಹುದು ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.(instagram, umran malik)
ಮಲಿಕ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿಯೂ ದುಬಾರಿ ಬೌಲರ್ ಆಗಿದ್ದಾರೆ. ಆಡಿದ 8 ಟಿ20 ಪಂದ್ಯಗಳಲ್ಲಿ 10ರ ಎಕಾನಮಿ ಇದ್ದರೆ, 8 ಏಕದಿನ ಪಂದ್ಯಗಳಲ್ಲಿ ಎಸೆತಕ್ಕೊಂದರಂತೆ ರನ್‌ ಬಿಟ್ಟುಕೊಂಡಿದ್ದಾರೆ. 
(5 / 8)
ಮಲಿಕ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿಯೂ ದುಬಾರಿ ಬೌಲರ್ ಆಗಿದ್ದಾರೆ. ಆಡಿದ 8 ಟಿ20 ಪಂದ್ಯಗಳಲ್ಲಿ 10ರ ಎಕಾನಮಿ ಇದ್ದರೆ, 8 ಏಕದಿನ ಪಂದ್ಯಗಳಲ್ಲಿ ಎಸೆತಕ್ಕೊಂದರಂತೆ ರನ್‌ ಬಿಟ್ಟುಕೊಂಡಿದ್ದಾರೆ. (instagram, umran malik)
ಪಾಕಿಸ್ತಾನ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗಿ ಮಲಿಕ್‌ ಅವರನ್ನು ಆಡಿಸಿದ ಕುರಿತು ಮಂಜ್ರೇಕರ್ ಮಾತನಾಡಿದ್ದಾರೆ. "ಪಾಕಿಸ್ತಾನವು, ಗಂಟೆಗೆ 90 ಮೈಲುಗಳಷ್ಟು ವೇಗದಲ್ಲಿಬೌಲಿಂಗ್ ಮಾಡುವ ಯುವ ಬೌಲರ್‌ಗಳನ್ನು ಹೊಂದಿದ್ದಾಗ, ತಕ್ಷಣವೇ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಸಿತು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅಲ್ಲ" ಎಂದು ಮಾಜಿ ಆರಂಭಿಕ ಆಟಗಾರ ನೆನಪಿಸಿಕೊಂಡಿದ್ದಾರೆ.
(6 / 8)
ಪಾಕಿಸ್ತಾನ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗಿ ಮಲಿಕ್‌ ಅವರನ್ನು ಆಡಿಸಿದ ಕುರಿತು ಮಂಜ್ರೇಕರ್ ಮಾತನಾಡಿದ್ದಾರೆ. "ಪಾಕಿಸ್ತಾನವು, ಗಂಟೆಗೆ 90 ಮೈಲುಗಳಷ್ಟು ವೇಗದಲ್ಲಿಬೌಲಿಂಗ್ ಮಾಡುವ ಯುವ ಬೌಲರ್‌ಗಳನ್ನು ಹೊಂದಿದ್ದಾಗ, ತಕ್ಷಣವೇ ಅವರನ್ನು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡಿಸಿತು. ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅಲ್ಲ" ಎಂದು ಮಾಜಿ ಆರಂಭಿಕ ಆಟಗಾರ ನೆನಪಿಸಿಕೊಂಡಿದ್ದಾರೆ.
ಸದ್ಯ ಉಮ್ರಾನ್‌ ಮಲಿಕ್ ಕೆರಿಬಿಯನ್‌ ನಾಡಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಆ ಬಳಿಕ ನಡೆಯಲಿರುವ 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. 
(7 / 8)
ಸದ್ಯ ಉಮ್ರಾನ್‌ ಮಲಿಕ್ ಕೆರಿಬಿಯನ್‌ ನಾಡಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿಲ್ಲ. ಆ ಬಳಿಕ ನಡೆಯಲಿರುವ 3 ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಆಯ್ಕೆಯಾಗಿದ್ದಾರೆ. (instagram, umran malik)
ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬೇಕಾದರೆ, ಉಮ್ರಾನ್‌ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಪ್ರದರ್ಶಿಸಬೇಕಿದೆ.
(8 / 8)
ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಬೇಕಾದರೆ, ಉಮ್ರಾನ್‌ ತಮ್ಮ ಪ್ರದರ್ಶನದಲ್ಲಿ ಸ್ಥಿರತೆ ಪ್ರದರ್ಶಿಸಬೇಕಿದೆ.(Twitter, BCCI)

    ಹಂಚಿಕೊಳ್ಳಲು ಲೇಖನಗಳು