logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Cricketers Married Relatives: ಸೆಹ್ವಾಗ್, ಅಫ್ರಿದಿಯಿಂದ ಮುಸ್ತಾಫಿಜುರ್​​ವರೆಗೆ; ಸೋದರ ಸಂಬಂಧಿಗಳನ್ನೇ ಮದುವೆಯಾದ ಕ್ರಿಕೆಟಿಗರು ಇವರು

Cricketers Married Relatives: ಸೆಹ್ವಾಗ್, ಅಫ್ರಿದಿಯಿಂದ ಮುಸ್ತಾಫಿಜುರ್​​ವರೆಗೆ; ಸೋದರ ಸಂಬಂಧಿಗಳನ್ನೇ ಮದುವೆಯಾದ ಕ್ರಿಕೆಟಿಗರು ಇವರು

Jul 31, 2023 06:15 AM IST

Cricketers Married Relatives: ಸೋದರ ಸಂಬಂಧಿ ಆದ ಹುಡುಗಿಯನ್ನ ಮದುವೆಯಾದ ಕೆಲ ಕ್ರಿಕೆಟಿಗರು ಯಾರು ಎಂಬುದನ್ನು ಈ ಮುಂದೆ ನೋಡೋಣ.

  • Cricketers Married Relatives: ಸೋದರ ಸಂಬಂಧಿ ಆದ ಹುಡುಗಿಯನ್ನ ಮದುವೆಯಾದ ಕೆಲ ಕ್ರಿಕೆಟಿಗರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಕ್ರಿಕೆಟಿಗರಿಗೆ ಅಪಾರ ಅಭಿಮಾನಿಗಳ ದಂಡೇ ಇರುತ್ತದೆ. ಯಾವುದೇ ಆಟಗಾರನೇ ಆಗಿರಲಿ, ಆತನ ವೈಯಕ್ತಿಕ ಜೀವನದ ವಿವರಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಕ್ರಿಕೆಟಿಗರು ಆಡುವಾಗ ಖಂಡಿತವಾಗಿಯೂ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ.
(1 / 7)

ವಿಶ್ವದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟ್ ತಾರೆಯರ ಬಗ್ಗೆ, ಅದರಲ್ಲೂ ವಿಶೇಷವಾಗಿ ಅವರ ಕುಟುಂಬಗಳು ಮತ್ತು ಪ್ರೇಮ ಕಥೆಗಳು ಸೇರಿದಂತೆ ಕಡಿಮೆ ತಿಳಿದಿರುವ ಕುರಿತು ವಿವರ ಹುಡುಕುತ್ತಾರೆ. ಇಂದು ನಾವು ಸಂಬಂಧಿಕರೊಂದಿಗೆ ಮದುವೆಯಾದ ಕೆಲವು ಕ್ರಿಕೆಟಿಗರ ಕುರಿತು ತಿಳಿಯಲಿದ್ದೇವೆ.
(2 / 7)

ಬಾಂಗ್ಲಾದೇಶದ ಸ್ಟಾರ್ ವೇಗಿ ಮುಸ್ತಾಫಿಜುರ್ ರೆಹಮಾನ್, 2019ರ ವಿಶ್ವಕಪ್ ನಂತರ ತನ್ನ ತಾಯಿಯ ಸೋದರ ಸಂಬಂಧಿ ಸಮಿಯಾ ಪರ್ವಿನ್ ಅವರನ್ನು ವಿವಾಹವಾದರು. ಆಕೆ ಢಾಕಾ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿದ್ಯಾರ್ಥಿನಿ.
(3 / 7)

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ, 2000ರ ಅಕ್ಟೋಬರ್ 22ರಂದು ತಮ್ಮ ತಾಯಿಯ ಚಿಕ್ಕಪ್ಪನ ಮಗಳು ನಾದಿಯಾ ಅವರನ್ನು (ಮುಸ್ಲಿಂ ಸಂಪ್ರದಾಯದ ಪ್ರಕಾರ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳನ್ನು ಮದುವೆಯಾಗುವುದು) ವಿವಾಹವಾದರು. ದಂಪತಿಗಳು ಐದು ಹೆಣ್ಣು ಮಕ್ಕಳನ್ನು ಹೊಂದಿದ್ದಾರೆ.
(4 / 7)

ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ 2004ರಲ್ಲಿ ಆರತಿ ಅಹ್ಲಾವತ್ ಅವರನ್ನು ವಿವಾಹವಾದರು. ಆದರೆ ಆರತಿ, ಸೆಹ್ವಾಗ್ ಅವರ ಸಂಬಂಧಿಕರೊಬ್ಬರ ಮಗಳು ಎಂಬುದು ಅನೇಕರಿಗೆ ತಿಳಿದಿಲ್ಲ. ಸೆಹ್ವಾಗ್ ಮತ್ತು ಆರತಿ ಮೂರು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
(5 / 7)

ಬಾಂಗ್ಲಾದೇಶದ ಕ್ರಿಕೆಟಿಗ ಮೊಸದಿಕ್ ಹೊಸೈನ್ ಕೇವಲ 16 ವರ್ಷದವರಾಗಿದ್ದಾಗ 2012ರಲ್ಲಿ ತಮ್ಮ ಸೋದರ ಸಂಬಂಧಿ ಶರ್ಮಿನ್ ಸಮೀರಾ ಉಷಾ ಅವರನ್ನು ವಿವಾಹವಾದರು.
(6 / 7)

ಪಾಕಿಸ್ತಾನದ ಮಾಜಿ ಆರಂಭಿಕ ಆಟಗಾರ ಸಯೀದ್ ಅನ್ವರ್, 1996ರಲ್ಲಿ ತಮ್ಮ ಸೋದರ ಸಂಬಂಧಿ ಸಹೋದರಿ ಲುಬ್ನಾ ಅವರನ್ನು ಮದುವೆಯಾದರು. ಎಡಗೈ ಬ್ಯಾಟ್ಸ್‌ಮನ್ 2003ರ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ನಿವೃತ್ತಿ ಪಡೆದರು.
(7 / 7)

    ಹಂಚಿಕೊಳ್ಳಲು ಲೇಖನಗಳು