logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಟಿ20 ವಿಶ್ವಕಪ್​ಗೆ ಆಯ್ಕೆಯಾದ ಭಾರತದ 15 ಆಟಗಾರರ ಐಪಿಎಲ್​ ಪ್ರದರ್ಶನ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

ಟಿ20 ವಿಶ್ವಕಪ್​ಗೆ ಆಯ್ಕೆಯಾದ ಭಾರತದ 15 ಆಟಗಾರರ ಐಪಿಎಲ್​ ಪ್ರದರ್ಶನ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ

May 01, 2024 07:42 PM IST

Team India: 2024ರ ಟಿ20 ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ 15 ಆಟಗಾರರು ಐಪಿಎಲ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡೋಣ.

  • Team India: 2024ರ ಟಿ20 ವಿಶ್ವಕಪ್ ಟೂರ್ನಿಗೆ ರೋಹಿತ್ ಶರ್ಮಾ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಈ 15 ಆಟಗಾರರು ಐಪಿಎಲ್​ನಲ್ಲಿ ಯಾವ ರೀತಿಯ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನೋಡೋಣ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಏಪ್ರಿಲ್ 30ರಂದು 15 ಸದಸ್ಯರ ತಂಡವನ್ನು ಬಿಸಿಸಿಐ ಘೋಷಿಸಿದೆ. ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರು ಪ್ರಸಕ್ತ ಐಪಿಎಲ್​ನಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಂತಿದೆ.
(1 / 16)
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತನ್ನ ಬಲಿಷ್ಠ ತಂಡವನ್ನೇ ಪ್ರಕಟಿಸಿದೆ. ಏಪ್ರಿಲ್ 30ರಂದು 15 ಸದಸ್ಯರ ತಂಡವನ್ನು ಬಿಸಿಸಿಐ ಘೋಷಿಸಿದೆ. ಭಾರತ ತಂಡಕ್ಕೆ ಆಯ್ಕೆಯಾದ ಆಟಗಾರರು ಪ್ರಸಕ್ತ ಐಪಿಎಲ್​ನಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ. ಅದರ ಸಂಪೂರ್ಣ ವಿವರ ಇಂತಿದೆ.
ದಾಖಲೆಯ 9ನೇ ಟಿ20 ವಿಶ್ವಕಪ್ ಆಡಲು ಸಿದ್ಧವಾಗಿರುವ ನಾಯಕ ರೋಹಿತ್​​ ಶರ್ಮಾ, ಪ್ರಸ್ತುತ ಐಪಿಎಲ್​ನಲ್ಲಿ 10 ಪಂದ್ಯಗಳಲ್ಲಿ 315 ರನ್ ಗಳಿಸಿದ್ದಾರೆ. 35ರ ಬ್ಯಾಟಿಂಗ್ ಸರಾಸರಿ, 158.29 ಸ್ಟ್ರೈಕ್​ರೇಟ್ ಹೊಂದಿದ್ದಾರೆ. 1 ಶತಕ ಸಿಡಿಸಿದ್ದಾರೆ.
(2 / 16)
ದಾಖಲೆಯ 9ನೇ ಟಿ20 ವಿಶ್ವಕಪ್ ಆಡಲು ಸಿದ್ಧವಾಗಿರುವ ನಾಯಕ ರೋಹಿತ್​​ ಶರ್ಮಾ, ಪ್ರಸ್ತುತ ಐಪಿಎಲ್​ನಲ್ಲಿ 10 ಪಂದ್ಯಗಳಲ್ಲಿ 315 ರನ್ ಗಳಿಸಿದ್ದಾರೆ. 35ರ ಬ್ಯಾಟಿಂಗ್ ಸರಾಸರಿ, 158.29 ಸ್ಟ್ರೈಕ್​ರೇಟ್ ಹೊಂದಿದ್ದಾರೆ. 1 ಶತಕ ಸಿಡಿಸಿದ್ದಾರೆ.
22 ವರ್ಷದ ಯಶಸ್ವಿ ಜೈಸ್ವಾಲ್​ಗೆ ಇದು ಚೊಚ್ಚಲ ಐಸಿಸಿ ಟೂರ್ನಿ. 17ನೇ ಆವೃತ್ತಿಯ ಐಪಿಎಲ್​ನಲ್ಲಿ 9 ಪಂದ್ಯಗಳನ್ನಾಡಿದ್ದು, 31ರ ಸರಾಸರಿಯಲ್ಲಿ 1 ಶತಕ ಸಹಿತ 249 ರನ್ ಗಳಿಸಿದ್ದಾರೆ. 1 ಶತಕ ಸಿಡಿಸಿದ್ದಾರೆ. 154 ಸ್ಟ್ರೈಕ್​ರೇಟ್.
(3 / 16)
22 ವರ್ಷದ ಯಶಸ್ವಿ ಜೈಸ್ವಾಲ್​ಗೆ ಇದು ಚೊಚ್ಚಲ ಐಸಿಸಿ ಟೂರ್ನಿ. 17ನೇ ಆವೃತ್ತಿಯ ಐಪಿಎಲ್​ನಲ್ಲಿ 9 ಪಂದ್ಯಗಳನ್ನಾಡಿದ್ದು, 31ರ ಸರಾಸರಿಯಲ್ಲಿ 1 ಶತಕ ಸಹಿತ 249 ರನ್ ಗಳಿಸಿದ್ದಾರೆ. 1 ಶತಕ ಸಿಡಿಸಿದ್ದಾರೆ. 154 ಸ್ಟ್ರೈಕ್​ರೇಟ್.(BCCI)
2012ರಲ್ಲಿ ಮೊದಲ ಬಾರಿಗೆ ಆಡಿದ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಆರನೇ ಬಾರಿಗೆ ಟಿ 20 ವಿಶ್ವಕಪ್ ಆಡಲಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. 10 ಪಂದ್ಯಗಳಲ್ಲಿ 500 ರನ್ ಸಿಡಿಸಿದ್ದು, 4 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 147.49.
(4 / 16)
2012ರಲ್ಲಿ ಮೊದಲ ಬಾರಿಗೆ ಆಡಿದ ಟಿ20 ವಿಶ್ವಕಪ್ ನಂತರ ವಿರಾಟ್ ಕೊಹ್ಲಿ ಆರನೇ ಬಾರಿಗೆ ಟಿ 20 ವಿಶ್ವಕಪ್ ಆಡಲಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. 10 ಪಂದ್ಯಗಳಲ್ಲಿ 500 ರನ್ ಸಿಡಿಸಿದ್ದು, 4 ಅರ್ಧಶತಕ, 1 ಶತಕ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 147.49.(Getty Images)
ಗಾಯದಿಂದ ಚೇತರಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್​ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 176 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 170.87. ಎರಡು ಬಾರಿ ಡಕೌಟ್ ಕೂಡ ಆಗಿದ್ದಾರೆ. 
(5 / 16)
ಗಾಯದಿಂದ ಚೇತರಿಸಿಕೊಂಡ ನಂತರ ಸೂರ್ಯಕುಮಾರ್ ಯಾದವ್ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್​ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 2 ಅರ್ಧಶತಕ ಸಹಿತ 176 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 170.87. ಎರಡು ಬಾರಿ ಡಕೌಟ್ ಕೂಡ ಆಗಿದ್ದಾರೆ. (AP)
2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ತುತ್ತಾಗಿದ್ದ ರಿಷಭ್ ಪಂತ್, ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಲು ಸಜ್ಜಾಗಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. 11 ಪಂದ್ಯಗಳಲ್ಲಿ ಪಂತ್ 398 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 44.22. ಸ್ಟ್ರೈಕ್​ರೇಟ್ 158.56. ಮೂರು ಅರ್ಧಶತಕ ಬಾರಿಸಿದ್ದಾರೆ.
(6 / 16)
2022ರ ಡಿಸೆಂಬರ್ 30ರಂದು ಭೀಕರ ಅಪಘಾತಕ್ಕೆ ತುತ್ತಾಗಿದ್ದ ರಿಷಭ್ ಪಂತ್, ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮರಳಲು ಸಜ್ಜಾಗಿದ್ದಾರೆ. ಪ್ರಸ್ತುತ ಐಪಿಎಲ್​ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. 11 ಪಂದ್ಯಗಳಲ್ಲಿ ಪಂತ್ 398 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 44.22. ಸ್ಟ್ರೈಕ್​ರೇಟ್ 158.56. ಮೂರು ಅರ್ಧಶತಕ ಬಾರಿಸಿದ್ದಾರೆ.(AP)
ಸಂಜು ಸ್ಯಾಮ್ಸನ್​​ಗೆ ಇದು ಮೊದಲ ಟಿ20 ವಿಶ್ವಕಪ್ ಆಗಿದೆ. ಐಪಿಎಲ್​ನಲ್ಲಿ ಅತ್ಯಂತ ಪ್ರಭಾವಶಾಲಿ ಆಟದ ಮೂಲಕ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 385 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 77.00. ಸ್ಟ್ರೈಕ್​ರೇಟ್ 161.08.
(7 / 16)
ಸಂಜು ಸ್ಯಾಮ್ಸನ್​​ಗೆ ಇದು ಮೊದಲ ಟಿ20 ವಿಶ್ವಕಪ್ ಆಗಿದೆ. ಐಪಿಎಲ್​ನಲ್ಲಿ ಅತ್ಯಂತ ಪ್ರಭಾವಶಾಲಿ ಆಟದ ಮೂಲಕ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ಆಡಿರುವ 9 ಪಂದ್ಯಗಳಲ್ಲಿ 4 ಅರ್ಧಶತಕ ಸಹಿತ 385 ರನ್ ಸಿಡಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 77.00. ಸ್ಟ್ರೈಕ್​ರೇಟ್ 161.08.(PTI)
2024ರ ಐಪಿಎಲ್​​​ನಲ್ಲಿ ಕಳಪೆ ಫಾರ್ಮ್ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ, ಆಡಿದ 10 ಪಂದ್ಯಗಳಲ್ಲಿ 21.88ರ ಸರಾಸರಿಯಲ್ಲಿ 197 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 150.38. ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಬೌಲಿಂಗ್​ನಲ್ಲಿ 6 ವಿಕೆಟ್ ಪಡೆದಿದ್ದಾರೆ.
(8 / 16)
2024ರ ಐಪಿಎಲ್​​​ನಲ್ಲಿ ಕಳಪೆ ಫಾರ್ಮ್ ಹೊರತಾಗಿಯೂ ತಂಡದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್ ಪಾಂಡ್ಯ, ಆಡಿದ 10 ಪಂದ್ಯಗಳಲ್ಲಿ 21.88ರ ಸರಾಸರಿಯಲ್ಲಿ 197 ರನ್ ಸಿಡಿಸಿದ್ದಾರೆ. ಸ್ಟ್ರೈಕ್​ರೇಟ್ 150.38. ಒಂದೇ ಒಂದು ಅರ್ಧಶತಕ ಸಿಡಿಸಿಲ್ಲ. ಬೌಲಿಂಗ್​ನಲ್ಲಿ 6 ವಿಕೆಟ್ ಪಡೆದಿದ್ದಾರೆ.(AP)
ಸಿಎಸ್​ಕೆ ಮಿಂಚಿನ ಬ್ಯಾಟಿಂಗ್ ನಡೆಸುತ್ತಿರುವ ಶಿವಂ ದುಬೆ ಅವರು ಮೊದಲ ಟಿ20 ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ. ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ದುಬೆ, 9 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 350 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 58.33. ಸ್ಟ್ರೈಕ್​ರೇಟ್ 172.41. ಟೂರ್ನಿಯುದ್ದಕ್ಕೂ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದಾರೆ.
(9 / 16)
ಸಿಎಸ್​ಕೆ ಮಿಂಚಿನ ಬ್ಯಾಟಿಂಗ್ ನಡೆಸುತ್ತಿರುವ ಶಿವಂ ದುಬೆ ಅವರು ಮೊದಲ ಟಿ20 ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ. ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ದುಬೆ, 9 ಪಂದ್ಯಗಳಲ್ಲಿ 3 ಅರ್ಧಶತಕ ಸಹಿತ 350 ರನ್ ಬಾರಿಸಿದ್ದಾರೆ. ಬ್ಯಾಟಿಂಗ್ ಸರಾಸರಿ 58.33. ಸ್ಟ್ರೈಕ್​ರೇಟ್ 172.41. ಟೂರ್ನಿಯುದ್ದಕ್ಕೂ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದಾರೆ.(PTI)
ರವೀಂದ್ರ ಜಡೇಜಾ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. 7 ಪಂದ್ಯಗಳಲ್ಲಿ ಕೇವಲ 133 ರನ್ ಕಲೆ ಹಾಕಿದ್ದಾರೆ. ಸ್ಟ್ರೈಕ್​ರೇಟ್ 164.19     ರನ್. ಬೌಲಿಂಗ್​​ನಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. 
(10 / 16)
ರವೀಂದ್ರ ಜಡೇಜಾ ಐಪಿಎಲ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿಲ್ಲ. 7 ಪಂದ್ಯಗಳಲ್ಲಿ ಕೇವಲ 133 ರನ್ ಕಲೆ ಹಾಕಿದ್ದಾರೆ. ಸ್ಟ್ರೈಕ್​ರೇಟ್ 164.19     ರನ್. ಬೌಲಿಂಗ್​​ನಲ್ಲಿ ಕೇವಲ 5 ವಿಕೆಟ್ ಪಡೆದಿದ್ದಾರೆ. (AP)
2023ರ ವಿಶ್ವಕಪ್​ಗೂ ಮುನ್ನ ಗಾಯದ ಸಮಸ್ಯೆಯಿಂದ ಅಕ್ಷರ್ ಪಟೇಲ್​ಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದೀಗ ಟಿ20 ವಿಶ್ವಕಪ್​ ಆಡಲು ಸಜ್ಜಾಗಿರುವ ಪಟೇಲ್, 9 ಇನ್ನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 149 ರನ್ ಗಳಿಸಿದ್ದಾರೆ. 1ಅರ್ಧಶತಕ ಸೇರಿದೆ. ಸ್ಟ್ರೈಕ್​ರೇಟ್ 124.16.
(11 / 16)
2023ರ ವಿಶ್ವಕಪ್​ಗೂ ಮುನ್ನ ಗಾಯದ ಸಮಸ್ಯೆಯಿಂದ ಅಕ್ಷರ್ ಪಟೇಲ್​ಗೆ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಇದೀಗ ಟಿ20 ವಿಶ್ವಕಪ್​ ಆಡಲು ಸಜ್ಜಾಗಿರುವ ಪಟೇಲ್, 9 ಇನ್ನಿಂಗ್ಸ್​​ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 149 ರನ್ ಗಳಿಸಿದ್ದಾರೆ. 1ಅರ್ಧಶತಕ ಸೇರಿದೆ. ಸ್ಟ್ರೈಕ್​ರೇಟ್ 124.16.(BCCI)
ಪಂಜಾಬ್ ಕಿಂಗ್ಸ್ ಬೌಲರ್ ಅರ್ಷದೀಪ್ ಸಿಂಗ್, ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿದ್ದಾರೆ. 188 ಎಸೆತಗಳಲ್ಲಿ 302 ರನ್ ಬಿಟ್ಟುಕೊಟ್ಟಿದ್ದಾರೆ. ಎಕಾನಮಿ 9.64.
(12 / 16)
ಪಂಜಾಬ್ ಕಿಂಗ್ಸ್ ಬೌಲರ್ ಅರ್ಷದೀಪ್ ಸಿಂಗ್, ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 12 ವಿಕೆಟ್ ಉರುಳಿಸಿದ್ದಾರೆ. 188 ಎಸೆತಗಳಲ್ಲಿ 302 ರನ್ ಬಿಟ್ಟುಕೊಟ್ಟಿದ್ದಾರೆ. ಎಕಾನಮಿ 9.64.(BCCI)
ಈ ವರ್ಷದ ಐಪಿಎಲ್​ನ ದುಬಾರಿ ಬೌಲರ್​​ಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಪಡೆದಿದ್ದಾರೆ. ತಾನೆಸೆದ 204 ಎಸೆತಗಳಲ್ಲಿ 324 ರನ್ ನೀಡಿದ್ದಾರೆ. ಬೌಲಿಂಗ್ ಎಕಾನಮಿ 9.50.
(13 / 16)
ಈ ವರ್ಷದ ಐಪಿಎಲ್​ನ ದುಬಾರಿ ಬೌಲರ್​​ಗಳಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರು. 9 ಪಂದ್ಯಗಳಲ್ಲಿ ಕೇವಲ 6 ವಿಕೆಟ್ ಪಡೆದಿದ್ದಾರೆ. ತಾನೆಸೆದ 204 ಎಸೆತಗಳಲ್ಲಿ 324 ರನ್ ನೀಡಿದ್ದಾರೆ. ಬೌಲಿಂಗ್ ಎಕಾನಮಿ 9.50.(ICC)
ಮೊದಲ ಟಿ20 ವಿಶ್ವಕಪ್ ಆಡಲು ಸಿದ್ಧವಾದ ಕುಲ್ದೀಪ್ ಯಾದವ್, 8 ಪಂದ್ಯಗಳಲ್ಲಿ 12 ವಿಕೆಟ್ ಕಿತ್ತಿದ್ದಾರೆ. ತಾನು ಬೌಲಿಂಗ್ ಮಾಡಿದ 186 ಎಸೆತಗಳಲ್ಲಿ 264 ರನ್ ಬಿಟ್ಟುಕೊಟ್ಟಿದ್ದಾರೆ. ಬೌಲಿಂಗ್ ಎಕಾನಮಿ 8.52
(14 / 16)
ಮೊದಲ ಟಿ20 ವಿಶ್ವಕಪ್ ಆಡಲು ಸಿದ್ಧವಾದ ಕುಲ್ದೀಪ್ ಯಾದವ್, 8 ಪಂದ್ಯಗಳಲ್ಲಿ 12 ವಿಕೆಟ್ ಕಿತ್ತಿದ್ದಾರೆ. ತಾನು ಬೌಲಿಂಗ್ ಮಾಡಿದ 186 ಎಸೆತಗಳಲ್ಲಿ 264 ರನ್ ಬಿಟ್ಟುಕೊಟ್ಟಿದ್ದಾರೆ. ಬೌಲಿಂಗ್ ಎಕಾನಮಿ 8.52(REUTERS)
ಐಪಿಎಲ್​ನಲ್ಲಿ 200 ವಿಕೆಟ್​ಗಳ ಸಾಧನೆ ಮಾಡಿದ ಮೊದಲ ಬೌಲರ್​ ಆದ ಯುಜ್ವೇಂದ್ರ ಸ್ಪಿನ್ನರ್, ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 204 ಎಸೆತಗಳನ್ನು ಬೌಲ್ ಮಾಡಿದ್ದು, 306 ರನ್ ನೀಡಿದ್ದಾರೆ. ಒಟ್ಟು 13 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಎಕಾನಮಿ 9.00.
(15 / 16)
ಐಪಿಎಲ್​ನಲ್ಲಿ 200 ವಿಕೆಟ್​ಗಳ ಸಾಧನೆ ಮಾಡಿದ ಮೊದಲ ಬೌಲರ್​ ಆದ ಯುಜ್ವೇಂದ್ರ ಸ್ಪಿನ್ನರ್, ಈ ಬಾರಿಯೂ ಉತ್ತಮ ಪ್ರದರ್ಶನ ನೀಡಿದ್ದಾರೆ. 204 ಎಸೆತಗಳನ್ನು ಬೌಲ್ ಮಾಡಿದ್ದು, 306 ರನ್ ನೀಡಿದ್ದಾರೆ. ಒಟ್ಟು 13 ವಿಕೆಟ್ ಪಡೆದಿದ್ದಾರೆ. ಬೌಲಿಂಗ್ ಎಕಾನಮಿ 9.00.(BCCI)
ಪ್ರಸಕ್ತ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಹೊಂದಿರುವ ಜಸ್ಪ್ರೀತ್ ಬುಮ್ರಾ, 10 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಮುಂಬೈ ಕಳಪೆ ಪ್ರದರ್ಶನದ ಹೊರತಾಗಿಯೂ ಬುಮ್ರಾ ಆಟ ಗಮನ ಸೆಳೆದಿದೆ. 240 ಎಸೆತಗಳನ್ನು ಬೌಲ್ ಮಾಡಿದ್ದು, 256 ರನ್ ಮಾತ್ರ ನೀಡಿದ್ದಾರೆ. ಬೌಲಿಂಗ್ ಎಕಾನಮಿ 6.40.
(16 / 16)
ಪ್ರಸಕ್ತ ಐಪಿಎಲ್​ನಲ್ಲಿ ಪರ್ಪಲ್ ಕ್ಯಾಪ್ ಹೊಂದಿರುವ ಜಸ್ಪ್ರೀತ್ ಬುಮ್ರಾ, 10 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಮುಂಬೈ ಕಳಪೆ ಪ್ರದರ್ಶನದ ಹೊರತಾಗಿಯೂ ಬುಮ್ರಾ ಆಟ ಗಮನ ಸೆಳೆದಿದೆ. 240 ಎಸೆತಗಳನ್ನು ಬೌಲ್ ಮಾಡಿದ್ದು, 256 ರನ್ ಮಾತ್ರ ನೀಡಿದ್ದಾರೆ. ಬೌಲಿಂಗ್ ಎಕಾನಮಿ 6.40.(Getty Images)

    ಹಂಚಿಕೊಳ್ಳಲು ಲೇಖನಗಳು