logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Icc Test Rankings: 5 ತಿಂಗಳಿಂದ ಒಂದು ಪಂದ್ಯ ಆಡದಿದ್ದರೂ ವಿಲಿಯಮ್ಸನ್ ಈಗಲೂ ನಂ.1; ಅಗ್ರ-10ರಲ್ಲಿರುವ ಏಕೈಕ ಭಾರತೀಯ ಆಟಗಾರ ರೋಹಿತ್ ಶರ್ಮಾ

ICC Test Rankings: 5 ತಿಂಗಳಿಂದ ಒಂದು ಪಂದ್ಯ ಆಡದಿದ್ದರೂ ವಿಲಿಯಮ್ಸನ್ ಈಗಲೂ ನಂ.1; ಅಗ್ರ-10ರಲ್ಲಿರುವ ಏಕೈಕ ಭಾರತೀಯ ಆಟಗಾರ ರೋಹಿತ್ ಶರ್ಮಾ

Jul 20, 2023 08:04 AM IST

ICC Ranking: ಟೆಸ್ಟ್ ಬ್ಯಾಟರ್​ಗಳ ಹೊಸ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ. ಟಾಪ್-10ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.

  • ICC Ranking: ಟೆಸ್ಟ್ ಬ್ಯಾಟರ್​ಗಳ ಹೊಸ ರ‍್ಯಾಂಕಿಂಗ್ ಪಟ್ಟಿ ಈ ಕೆಳಗಿನಂತಿದೆ. ಟಾಪ್-10ನಲ್ಲಿ ಕಾಣಿಸಿಕೊಂಡ ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
ಟೆಸ್ಟ್​ ಬ್ಯಾಟ್ಸ್​ಮನ್​ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಕೇನ್​ ವಿಲಿಯಮ್ಸನ್​ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್​ 17ರಂದು ಕೊನೆಯದಾಗಿ ಟೆಸ್ಟ್​ ಪಂದ್ಯವಾಡಿದ್ದರೂ, ಈಗಲೂ ಅವರೇ ನಂಬರ್​ 1 ಆಗಿ ಮುಂದುವರೆದಿದ್ದಾರೆ.
(1 / 13)
ಟೆಸ್ಟ್​ ಬ್ಯಾಟ್ಸ್​ಮನ್​ಗಳ ನೂತನ ರ್ಯಾಂಕಿಂಗ್ ಪಟ್ಟಿಯನ್ನು ಐಸಿಸಿ ಪ್ರಕಟಿಸಿದೆ. ಕೇನ್​ ವಿಲಿಯಮ್ಸನ್​ ಅಗ್ರಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮಾರ್ಚ್​ 17ರಂದು ಕೊನೆಯದಾಗಿ ಟೆಸ್ಟ್​ ಪಂದ್ಯವಾಡಿದ್ದರೂ, ಈಗಲೂ ಅವರೇ ನಂಬರ್​ 1 ಆಗಿ ಮುಂದುವರೆದಿದ್ದಾರೆ.(ICC)
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 2ನೇ ಸ್ಥಾನ ಪಡೆದಿದ್ದಾರೆ. ಸ್ಟೀವ್ ಸ್ಮಿತ್ 4ನೇ ಸ್ಥಾನದಲ್ಲಿದ್ದಾರೆ. ಆಸಿಸ್​ನ ಒಟ್ಟು ನಾಲ್ವರು ಆಟಗಾರರು ಅಗ್ರ-10ರಲ್ಲಿ ಕಾಣಿಸಿಕೊಂಡಿದ್ದಾರೆ.
(2 / 13)
ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 2ನೇ ಸ್ಥಾನ ಪಡೆದಿದ್ದಾರೆ. ಸ್ಟೀವ್ ಸ್ಮಿತ್ 4ನೇ ಸ್ಥಾನದಲ್ಲಿದ್ದಾರೆ. ಆಸಿಸ್​ನ ಒಟ್ಟು ನಾಲ್ವರು ಆಟಗಾರರು ಅಗ್ರ-10ರಲ್ಲಿ ಕಾಣಿಸಿಕೊಂಡಿದ್ದಾರೆ.(ICC)
ವಿಂಡೀಸ್ ವಿರುದ್ಧ ಶತಕ ಸಿಡಿಸಿದ ಭಾರತ ಕ್ಯಾಪ್ಟನ್ ರೋಹಿತ್​ ಶರ್ಮಾ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಗ್ರ-10ರಲ್ಲಿ ರೋಹಿತ್​ ಬಿಟ್ಟರೆ ಬೇರೆ ಭಾರತದವರು ಯಾರೂ ಇಲ್ಲ. ಪಂತ್ 11ರಲ್ಲಿ ಕೊಹ್ಲಿ 14ರಲ್ಲಿ, ಯಶಸ್ವಿ ಜೈಸ್ವಾಲ್ 73ನೇ ಸ್ಥಾನದಲ್ಲಿದ್ದಾರೆ.
(3 / 13)
ವಿಂಡೀಸ್ ವಿರುದ್ಧ ಶತಕ ಸಿಡಿಸಿದ ಭಾರತ ಕ್ಯಾಪ್ಟನ್ ರೋಹಿತ್​ ಶರ್ಮಾ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅಗ್ರ-10ರಲ್ಲಿ ರೋಹಿತ್​ ಬಿಟ್ಟರೆ ಬೇರೆ ಭಾರತದವರು ಯಾರೂ ಇಲ್ಲ. ಪಂತ್ 11ರಲ್ಲಿ ಕೊಹ್ಲಿ 14ರಲ್ಲಿ, ಯಶಸ್ವಿ ಜೈಸ್ವಾಲ್ 73ನೇ ಸ್ಥಾನದಲ್ಲಿದ್ದಾರೆ.(ICC )
1. ನ್ಯೂಜಿಲೆಂಡ್​ ತಂಡದ ಬ್ಯಾಟ್ಸ್​ಮನ್​ ಕೇನ್ ವಿಲಿಯಮ್ಸನ್, 883 ಪಾಯಿಂಟ್ಸ್​ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
(4 / 13)
1. ನ್ಯೂಜಿಲೆಂಡ್​ ತಂಡದ ಬ್ಯಾಟ್ಸ್​ಮನ್​ ಕೇನ್ ವಿಲಿಯಮ್ಸನ್, 883 ಪಾಯಿಂಟ್ಸ್​ ಪಡೆದು ಅಗ್ರಸ್ಥಾನದಲ್ಲಿದ್ದಾರೆ.(ICC )
2. ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್​​ಮನ್​ ಟ್ರಾವಿಸ್ ಹೆಡ್, 874 ಅಂಕ ಕಲೆ ಹಾಕಿ 2ನೇ ಸ್ಥಾನದಲ್ಲಿದ್ದಾರೆ.
(5 / 13)
2. ಆಸ್ಟ್ರೇಲಿಯಾದ ಎಡಗೈ ಬ್ಯಾಟ್ಸ್​​ಮನ್​ ಟ್ರಾವಿಸ್ ಹೆಡ್, 874 ಅಂಕ ಕಲೆ ಹಾಕಿ 2ನೇ ಸ್ಥಾನದಲ್ಲಿದ್ದಾರೆ.(ICC )
3. ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಂ 862 ಪಾಯಿಂಟ್ಸ್​ ಪಡೆದು 3ನೇ ಸ್ಥಾನದಲ್ಲಿದ್ದಾರೆ.
(6 / 13)
3. ಪಾಕಿಸ್ತಾನ ತಂಡದ ಕ್ಯಾಪ್ಟನ್ ಬಾಬರ್ ಅಜಂ 862 ಪಾಯಿಂಟ್ಸ್​ ಪಡೆದು 3ನೇ ಸ್ಥಾನದಲ್ಲಿದ್ದಾರೆ.(ICC )
4. ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ 855 ಅಂಕ ಪಡೆದಿದ್ದು, 4ನೇ ಶ್ರೇಯಾಂಕದಲ್ಲಿದ್ದಾರೆ.
(7 / 13)
4. ಆಸ್ಟ್ರೇಲಿಯಾದ ಬ್ಯಾಟ್ಸ್​ಮನ್​ ಸ್ಟೀವ್ ಸ್ಮಿತ್ 855 ಅಂಕ ಪಡೆದಿದ್ದು, 4ನೇ ಶ್ರೇಯಾಂಕದಲ್ಲಿದ್ದಾರೆ.(ICC)
5. ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಮಾರ್ನಸ್ ಲಬುಶೇನ್ 5ನೇ ರ್ಯಾಂಕಿಂಗ್​​ನಲ್ಲಿದ್ದು, 849 ಅಂಕ ಕಲೆ ಹಾಕಿದ್ದಾರೆ.
(8 / 13)
5. ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ ಮಾರ್ನಸ್ ಲಬುಶೇನ್ 5ನೇ ರ್ಯಾಂಕಿಂಗ್​​ನಲ್ಲಿದ್ದು, 849 ಅಂಕ ಕಲೆ ಹಾಕಿದ್ದಾರೆ.(ICC )
6. ಇಂಗ್ಲೆಂಡ್​ ತಂಡದ ಟೆಸ್ಟ್​ ಸ್ಪೆಷಲಿಸ್ಟ್​ ಜೋ ರೂಟ್, 842 ಅಂಕ ಪಡೆದು 6ನೇ ಶ್ರೇಯಾಂಕದಲ್ಲಿದ್ದಾರೆ.
(9 / 13)
6. ಇಂಗ್ಲೆಂಡ್​ ತಂಡದ ಟೆಸ್ಟ್​ ಸ್ಪೆಷಲಿಸ್ಟ್​ ಜೋ ರೂಟ್, 842 ಅಂಕ ಪಡೆದು 6ನೇ ಶ್ರೇಯಾಂಕದಲ್ಲಿದ್ದಾರೆ.(ICC)
7. ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಉಸ್ಮಾನ್ ಖವಾಜ 824 ಪಾಯಿಂಟ್ಸ್​ಗಳೊಂದಿಗೆ 7ನೇ ರ್ಯಾಂಕಿಂಗ್​​ನಲ್ಲಿದ್ದಾರೆ.
(10 / 13)
7. ಆಸ್ಟ್ರೇಲಿಯಾದ ಎಡಗೈ ಆರಂಭಿಕ ಆಟಗಾರ ಉಸ್ಮಾನ್ ಖವಾಜ 824 ಪಾಯಿಂಟ್ಸ್​ಗಳೊಂದಿಗೆ 7ನೇ ರ್ಯಾಂಕಿಂಗ್​​ನಲ್ಲಿದ್ದಾರೆ.(ICC )
8. ನ್ಯೂಜಿಲೆಂಡ್ ತಂಡದ ಆಟಗಾರ ಡ್ಯಾ ರಿಲ್ ಮಿಚೆಲ್ 792 ಪಾಯಿಂಟ್ಸ್​ ಪಡೆದು 8ನೇ ಸ್ಥಾನದಲ್ಲಿದ್ದಾರೆ.
(11 / 13)
8. ನ್ಯೂಜಿಲೆಂಡ್ ತಂಡದ ಆಟಗಾರ ಡ್ಯಾ ರಿಲ್ ಮಿಚೆಲ್ 792 ಪಾಯಿಂಟ್ಸ್​ ಪಡೆದು 8ನೇ ಸ್ಥಾನದಲ್ಲಿದ್ದಾರೆ.
9. ಶ್ರೀಲಂಕಾದ ದಿಮುತ್ ಕರುಣರತ್ನೆ 780 ಅಂಕ ಪಡೆದಿದ್ದಾರೆ. ಇದರೊಂದಿಗೆ 9ನೇ ರ್ಯಾಂಕಿಂಗ್​ನಲ್ಲಿದ್ದಾರೆ.
(12 / 13)
9. ಶ್ರೀಲಂಕಾದ ದಿಮುತ್ ಕರುಣರತ್ನೆ 780 ಅಂಕ ಪಡೆದಿದ್ದಾರೆ. ಇದರೊಂದಿಗೆ 9ನೇ ರ್ಯಾಂಕಿಂಗ್​ನಲ್ಲಿದ್ದಾರೆ.(ICC)
10. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 751 ಅಂಕ ಪಡೆದಿದ್ದು, ಟಾಪ್​-10ರಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಅಗ್ರ 10ರಲ್ಲಿ ಕಾಣಿಸಿಕೊಂಡ ಭಾರತದ ಏಕಮಾತ್ರ ಆಟಗಾರ ರೋಹಿತ್. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ 73 ಸ್ಥಾನ ಪಡೆದಿದ್ದಾರೆ.
(13 / 13)
10. ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ 751 ಅಂಕ ಪಡೆದಿದ್ದು, ಟಾಪ್​-10ರಲ್ಲಿ ಕೊನೆಯ ಸ್ಥಾನ ಪಡೆದಿದ್ದಾರೆ. ಅಗ್ರ 10ರಲ್ಲಿ ಕಾಣಿಸಿಕೊಂಡ ಭಾರತದ ಏಕಮಾತ್ರ ಆಟಗಾರ ರೋಹಿತ್. ಚೊಚ್ಚಲ ಪಂದ್ಯದಲ್ಲೇ ಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ 73 ಸ್ಥಾನ ಪಡೆದಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು