logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  10 ಐಸಿಸಿ ಪ್ರಶಸ್ತಿ, 5 ಬಿಸಿಸಿಐ ಪ್ರಶಸ್ತಿ; ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೆ ಒಲಿದ ಪ್ರಶಸ್ತಿಗಳು ಒಂದೆರಡಲ್ಲ

10 ಐಸಿಸಿ ಪ್ರಶಸ್ತಿ, 5 ಬಿಸಿಸಿಐ ಪ್ರಶಸ್ತಿ; ದಾಖಲೆಗಳ ಸರದಾರ ವಿರಾಟ್ ಕೊಹ್ಲಿಗೆ ಒಲಿದ ಪ್ರಶಸ್ತಿಗಳು ಒಂದೆರಡಲ್ಲ

Jan 28, 2024 06:10 AM IST

Virat Kohli ICC Awards: ಆಧುನಿಕ ಕ್ರಿಕೆಟ್‌ ಲೋಕದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ 2023ರ ವರ್ಷದ ಏಕದಿನ ಕ್ರಿಕೆಟಿಕ ಪ್ರಶಸ್ತಿಗೆ ಭಾಜನರಾದರು. ತಮ್ಮ ಕ್ರಿಕೆಟ್‌ ವೃತ್ತಿಜೀವನದಲ್ಲಿ ಇದು ವಿರಾಟ್‌ಗೆ ದೊರೆತ ಮೊದಲ ಪ್ರಶಸ್ತಿ ಅಲ್ಲ. ಈ ಹಿಂದೆಯೂ ಹಲವು ಐಸಿಸಿ ಪ್ರಶಸ್ತಿಗಳು ಕಿಂಗ್‌ ಕೊಹ್ಲಿಗೆ ಒಲಿದಿವೆ.

  • Virat Kohli ICC Awards: ಆಧುನಿಕ ಕ್ರಿಕೆಟ್‌ ಲೋಕದ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ 2023ರ ವರ್ಷದ ಏಕದಿನ ಕ್ರಿಕೆಟಿಕ ಪ್ರಶಸ್ತಿಗೆ ಭಾಜನರಾದರು. ತಮ್ಮ ಕ್ರಿಕೆಟ್‌ ವೃತ್ತಿಜೀವನದಲ್ಲಿ ಇದು ವಿರಾಟ್‌ಗೆ ದೊರೆತ ಮೊದಲ ಪ್ರಶಸ್ತಿ ಅಲ್ಲ. ಈ ಹಿಂದೆಯೂ ಹಲವು ಐಸಿಸಿ ಪ್ರಶಸ್ತಿಗಳು ಕಿಂಗ್‌ ಕೊಹ್ಲಿಗೆ ಒಲಿದಿವೆ.
ವಿರಾಟ್ ಕೊಹ್ಲಿ ಈವರೆಗೆ ಬರೋಬ್ಬರಿ 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರೊಂದಿಗೆ 5 ಬಿಸಿಸಿಐ ಪ್ರಶಸ್ತಿಗಳು ಹಾಗೂ 3 ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌. ಇದರೊಂದಿಗೆ 12 ಐಸಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ, ಪ್ರಶಸ್ತಿಗಳ ಸರದಾರನಾಗಿದ್ದಾರೆ.
(1 / 8)
ವಿರಾಟ್ ಕೊಹ್ಲಿ ಈವರೆಗೆ ಬರೋಬ್ಬರಿ 10 ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇದರೊಂದಿಗೆ 5 ಬಿಸಿಸಿಐ ಪ್ರಶಸ್ತಿಗಳು ಹಾಗೂ 3 ಐಸಿಸಿ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ‌. ಇದರೊಂದಿಗೆ 12 ಐಸಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗಳನ್ನು ಪಡೆಯುವ ಮೂಲಕ, ಪ್ರಶಸ್ತಿಗಳ ಸರದಾರನಾಗಿದ್ದಾರೆ.(Jay Shah Twitter)
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಪರಾಕ್ರಮ ಅಮೋಘ. ಕೊಹ್ಲಿ ಒಟ್ಟು  ನಾಲ್ಕು ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ. 2012, 2017, 2018 ಮತ್ತು ಈ ಬಾರಿ 2023ರಲ್ಲಿ ಕೊಹ್ಲಿಗೆ ಪ್ರಶಸ್ತಿ ಒಲಿದಿದೆ.
(2 / 8)
ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಪರಾಕ್ರಮ ಅಮೋಘ. ಕೊಹ್ಲಿ ಒಟ್ಟು  ನಾಲ್ಕು ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ಪಡೆದಿದ್ದಾರೆ. 2012, 2017, 2018 ಮತ್ತು ಈ ಬಾರಿ 2023ರಲ್ಲಿ ಕೊಹ್ಲಿಗೆ ಪ್ರಶಸ್ತಿ ಒಲಿದಿದೆ.(all photos- Virat Kohli instagram)
2017 ಮತ್ತು 2018 ಎರಡರಲ್ಲೂ ಐಸಿಸಿ ದಶಕದ ಏಕದಿನ ಕ್ರಿಕೆಟಿಗ, ದಶಕದ ಐಸಿಸಿ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ.
(3 / 8)
2017 ಮತ್ತು 2018 ಎರಡರಲ್ಲೂ ಐಸಿಸಿ ದಶಕದ ಏಕದಿನ ಕ್ರಿಕೆಟಿಗ, ದಶಕದ ಐಸಿಸಿ ಕ್ರಿಕೆಟಿಗ ಮತ್ತು ವರ್ಷದ ಐಸಿಸಿ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದಿದ್ದಾರೆ.(REUTERS)
ವಿರಾಟ್ ಕೊಹ್ಲಿ 2018ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.
(4 / 8)
ವಿರಾಟ್ ಕೊಹ್ಲಿ 2018ರಲ್ಲಿ ಐಸಿಸಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.(AFP)
ಕೊಹ್ಲಿ ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರ ಹೆಸರಲ್ಲಿ 50 ಏಕದಿನ ಶತಕಗಳಿವೆ.
(5 / 8)
ಕೊಹ್ಲಿ ಒಂದೇ ವಿಶ್ವಕಪ್‌ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಅವರ ಹೆಸರಲ್ಲಿ 50 ಏಕದಿನ ಶತಕಗಳಿವೆ.(PTI)
ಕುಮಾರ ಸಂಗಕ್ಕಾರ, ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್ ಮತ್ತು ಎಂಎಸ್ ಧೋನಿ ಅವರಂಥ ಸಾರ್ವಕಾಲಿಕ ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಿ, ವಿರಾಟ್ ಕೊಹ್ಲಿ 10 ಐಸಿಸಿ ಪ್ರಶಸ್ತಿಗಳೊಂದಿಗೆ ಎತ್ತರದಲ್ಲಿ ನಿಂತಿದ್ದಾರೆ.
(6 / 8)
ಕುಮಾರ ಸಂಗಕ್ಕಾರ, ಎಬಿ ಡಿವಿಲಿಯರ್ಸ್, ರಿಕಿ ಪಾಂಟಿಂಗ್ ಮತ್ತು ಎಂಎಸ್ ಧೋನಿ ಅವರಂಥ ಸಾರ್ವಕಾಲಿಕ ಕ್ರಿಕೆಟ್ ದಿಗ್ಗಜರನ್ನು ಹಿಂದಿಕ್ಕಿ, ವಿರಾಟ್ ಕೊಹ್ಲಿ 10 ಐಸಿಸಿ ಪ್ರಶಸ್ತಿಗಳೊಂದಿಗೆ ಎತ್ತರದಲ್ಲಿ ನಿಂತಿದ್ದಾರೆ.(Chennai Super Kings Twitter)
ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗಳಲ್ಲಿ ಕೊಹ್ಲಿ ಪ್ರಾಬಲ್ಯ ಮುಂದುವರೆದಿದೆ. 5 ಬಾರಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
(7 / 8)
ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗಳಲ್ಲಿ ಕೊಹ್ಲಿ ಪ್ರಾಬಲ್ಯ ಮುಂದುವರೆದಿದೆ. 5 ಬಾರಿ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.(REUTERS)
ಕೊಹ್ಲಿ ಹಿರಿಮೆಗೆ ಈ ಬಾರಿ ಹೊಸ ಗರಿಮೆ ಸೇರಿಕೊಂಡಿದ್ದು, ನಾಲ್ಕನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ ಐಸಿಸಿ ವರ್ಷದ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.
(8 / 8)
ಕೊಹ್ಲಿ ಹಿರಿಮೆಗೆ ಈ ಬಾರಿ ಹೊಸ ಗರಿಮೆ ಸೇರಿಕೊಂಡಿದ್ದು, ನಾಲ್ಕನೇ ಬಾರಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅಲ್ಲದೆ ಐಸಿಸಿ ವರ್ಷದ ಏಕದಿನ ತಂಡದಲ್ಲೂ ಸ್ಥಾನ ಪಡೆದಿದ್ದಾರೆ.(AP)

    ಹಂಚಿಕೊಳ್ಳಲು ಲೇಖನಗಳು