logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Pilikula: ರಜೆ ಮುಗಿಯುವ ಮುನ್ನ ಮಂಗಳೂರಿನ ಪಿಲಿಕುಳಕ್ಕೆ ಭೇಟಿ ನೀಡಿ; ಕಾಂತಾರದ ಅರಮನೆ, ಪಾರ್ಕ್, ಪ್ಲೆನೆಟೋರಿಯಂ ನೋಡಬನ್ನಿ Photos

Pilikula: ರಜೆ ಮುಗಿಯುವ ಮುನ್ನ ಮಂಗಳೂರಿನ ಪಿಲಿಕುಳಕ್ಕೆ ಭೇಟಿ ನೀಡಿ; ಕಾಂತಾರದ ಅರಮನೆ, ಪಾರ್ಕ್, ಪ್ಲೆನೆಟೋರಿಯಂ ನೋಡಬನ್ನಿ PHOTOS

May 27, 2023 02:21 PM IST

Pilikula Nisargadhama: ಮಂಗಳೂರು ಕಡಲ ಕಿನಾರೆಗೆ ಎಷ್ಟು ಫೇಮಸ್ಸೋ ಅಷ್ಟೇ ಸುಂದರವಾದ ಜಾಗಗಳೂ ಭೇಟಿ ನೀಡುವಂಥದ್ದಿದೆ. ಅವುಗಳ ಪೈಕಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವೂ ಒಂದು. ರಜೆದಿನವಾದ ಕಾರಣ ನಾಡಿದ್ದು ಸೋಮವಾರವೂ ( ಮೇ 29) ತೆರೆದಿರುತ್ತೆ. ‘ಕಾಂತಾರ’ ಸಿನಿಮಾದ ಅರಮನೆಯನ್ನೂ ನೋಡಬಹುದು. ಇಲ್ಲಿದೆ ಟೂರ್ ಗೈಡ್.

  • Pilikula Nisargadhama: ಮಂಗಳೂರು ಕಡಲ ಕಿನಾರೆಗೆ ಎಷ್ಟು ಫೇಮಸ್ಸೋ ಅಷ್ಟೇ ಸುಂದರವಾದ ಜಾಗಗಳೂ ಭೇಟಿ ನೀಡುವಂಥದ್ದಿದೆ. ಅವುಗಳ ಪೈಕಿ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವೂ ಒಂದು. ರಜೆದಿನವಾದ ಕಾರಣ ನಾಡಿದ್ದು ಸೋಮವಾರವೂ ( ಮೇ 29) ತೆರೆದಿರುತ್ತೆ. ‘ಕಾಂತಾರ’ ಸಿನಿಮಾದ ಅರಮನೆಯನ್ನೂ ನೋಡಬಹುದು. ಇಲ್ಲಿದೆ ಟೂರ್ ಗೈಡ್.
‘ಕಾಂತಾರ’ ಸಿನಿಮಾದಲ್ಲಿ ಮಹಾರಾಜನ ಸಾಂಪ್ರದಾಯಿಕ ಶೈಲಿಯ ಅರಮನೆಯನ್ನು ನೋಡದವರೇ ಇಲ್ಲ. ಎಷ್ಟು ಅದ್ಭುತವಾಗಿದೆ ಎಂದು ನೀವೇನಾದರೂ ಅಂದುಕೊಂಡಿದ್ದರೆ, ಅದನ್ನು ಪ್ರತ್ಯಕ್ಷವಾಗಿ ನೋಡುವ ಅವಕಾಶವೂ ಇದೆ. ಇದು ಮಂಗಳೂರಿನ ಹೊರವಲಯದ ಪಿಲಿಕುಳ ನಿಸರ್ಗಧಾಮದಲ್ಲಿ ನಿರ್ಮಾಣವಾಗಿರುವ ಗುತ್ತಿನ ಮನೆ. ಇಂಥ ಹಲವು ವಿಸ್ಮಯಗಳು ಪಿಲಿಕುಳ ನಿಸರ್ಗಧಾಮದಲ್ಲಿವೆ. ಬನ್ನಿ ಒಂದು ರೌಂಡ್ ಹಾಕೋಣ. ಅಂದ ಹಾಗೆ ತುಳುವಿನ ಪಿಲಿ ಕನ್ನಡದ ಹುಲಿ. ಕುಲ ಎಂದರೆ ಕೊಳ. ಹೀಗಾಗಿ ಹುಲಿಗಳು ಆಟವಾಡುತ್ತಿದ್ದ ಕೊಳವಿದು.
(1 / 6)

ಹೇಗೆ ಹೋಗುವುದು?: ಮಂಗಳೂರು ನಗರದಿಂದ ನಂತೂರು ಮಾರ್ಗವಾಗಿ ಮೂಡುಶೆಡ್ಡೆ ಜಂಕ್ಷನ್ ತಲುಪಬೇಕು. ಅಲ್ಲಿಂದ ಎಡಕ್ಕೆ ತಿರುಗಿದರೆ ಪಿಲಿಕುಳ ನಿಸರ್ಗಧಾಮ ಸಿಗುತ್ತದೆ. ಖಾಸಗಿ ವಾಹನದಲ್ಲಿ ನೇರವಾಗಿ ತಲುಪಬಹುದು. ಸಿಟಿ ಬಸ್ ಸೌಲಭ್ಯವೂ ಇದೆ. ವಿಶಾಲವಾದ ಪಾರ್ಕಿಂಗ್ ಸೌಕರ್ಯವೂ ಇಲ್ಲಿದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಮಾಡಿದ ಈ ಪಾರ್ಕ್ ನಿರ್ವಹಣೆಯನ್ನು ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ನಡೆಸುತ್ತಿದೆ. ಇಲ್ಲಿ ಮನರಂಜನೆ ಇದೆ, ವಿಜ್ಞಾನವಿದೆ, ಪರಂಪರೆ, ಸಂಸ್ಕೃತಿಯ ಪ್ರತೀಕಗಳಿವೆ, ಮ್ಯೂಸಿಯಂ, ತಾರಾಲಯ, ಪ್ರಾಣಿ ಸಂಗ್ರಹಾಲಯ, ಬೋಟಿಂಗ್.. ಹೀಗೆ ಸಮಗ್ರ ಕಡಲೂರಿನ ನೋಟವೇ ಇದೆ.
(2 / 6)

ಪ್ರವೇಶ ಹೇಗೆ? ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ತಲುಪಿದ ಕೂಡಲೇ ನಿಮಗೆ ಯಾವುದನ್ನು ನೋಡಬೇಕು ಎಂಬ ಸಮಗ್ರ ಪಟ್ಟಿ ನೀಡುವ ಕೌಂಟರ್ ಅಲ್ಲಿ ಸಿಗುತ್ತದೆ. ಅಲ್ಲಿಯೇ ನಿಮಗೆ ಬೇಕಾದ ಆಯ್ಕೆಯನ್ನು ಮಾಡಿ ಟಿಕೆಟ್ ಪಡೆದು ಒಳಗೆ ಪ್ರವೇಶಿಸಬೇಕು. ಓಡಾಡಲು ಅಸಾಧ್ಯವಾಗುವವರಿಗೆ ವಾಹನ ವ್ಯವಸ್ಥೆಯೂ ಇದೆ. 
(3 / 6)

ಏನೇನಿದೆ? : ಮೈಸೂರು ಝೂ ವನ್ನೇ ನೆನಪಿಸುವ ಪ್ರಾಣಿ ಸಂಗ್ರಹಾಲಯ, ಮೈಸೂರು ಸಸ್ಯ,ಉದ್ಯಾನವನ ನೆನಪಿಸುವ ಬೊಟಾನಿಕಲ್ ಗಾರ್ಡನ್ 80 ಎಕರೆ ವಿಸ್ತಾರವಿದೆ. 235 ವಿವಿಧ ತಳಿಯ ಗಿಡ, ಮರಗಳು ಇಲ್ಲಿವೆ. ಔಷಧೀಯ ಸಸ್ಯೋದ್ಯಾನ ಹತ್ತು ಎಕರೆ ವಿಸ್ತಾರವಾಗಿದ್ದು, ನೂರಾರು ಔಷಧೀಯ ಸಸ್ಯಗಳನ್ನು ಹೊಂದಿದೆ. ಹಾಗೆಯೇ ನಶಿಸಿ ಹೋಗುವ ಸಸ್ಯಗಳನ್ನು ಸಂರಕ್ಷಿಸುವ ವ್ಯವಸ್ಥೆಯೂ ಇಲ್ಲಿದೆ.
(4 / 6)

ಇಲ್ಲಿನ ಸಂಸ್ಕೃತಿ ಗ್ರಾಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪರಿಕ ವಿಚಾರಗಳಿವೆ. ಕುಂಬಾರಿಕೆ, ಬೆತ್ತದ ಕಸುಬುಗಾರಿಕೆ, ಗಾಣದಿಂದ ಎಣ್ಣೆತೆಗೆಯುವುದು, ಮರಗೆಲಸ, ಶಿಲ್ಪಕಲೆ, ಕೈಮಗ್ಗದ ಕುರಿತ ಮಾಹಿತಿ ಇದೆ. ಪರಂಪರಾ ಎಂಬ ಮಾರ್ಕೆಟಿಂಗ್ ಔಟ್ ಲೆಟ್ ನಲ್ಲಿ ಬೇಕಾದದ್ದನ್ನು ಖರೀದಿಸಲೂಬಹುದು. ಹೆರಿಟೇಜ್ ವಿಲೇಜ್ ನಲ್ಲಿ ನೀವು ಗುತ್ತು ಹೌಸ್ ಅನ್ನು ಗಮನಿಸಬಹುದು. ಗುತ್ತಿನ ಮನೆ ಎಂದರೆ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪರಿಕ ಮನೆ. ನಾಗಬನ, ಕಂಬಳ, ಅಡಿಕೆ, ಭತ್ತದ ಬೆಳೆಯ ಸಣ್ಣ ರೂಪವನ್ನೂ ಇಲ್ಲಿ ಕಾಣಬಹುದು. ಕರಾವಳಿಯ ಕೃಷಿ ಪರಂಪರೆಯನ್ನು ಇಲ್ಲಿ ಗಮನಿಸಬಹುದು. ಕಾಂತಾರ ಸಿನಿಮಾ ಶೂಟಿಂಗ್ ಆದ ಜಾಗ ಈ ಗುತ್ತಿನಮನೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಮ್ಯೂಸಿಯಂ, ತಾರಾಲಯ, ಜೀವವೈವಿಧ್ಯತೆ, ಮುಂಚೂಣಿ ತಂತ್ರಜ್ಞಾನ, ಮನೋರಂಜನೆಗಾಗಿ ವಿಜ್ಞಾನ ಹೀಗೆ ಬಹಳಷ್ಟು ವೈವಿಧ್ಯಗಳಿವೆ. ರಾಜ್ಯದಲ್ಲೇ ವಿಶಿಷ್ಠ ಪ್ರವಾಸಿ ತಾಣವಾಗಿರುವ ಪಿಲಿಕುಳದಲ್ಲಿ ಹೈಟೆಕ್ ತಾರಾಲಯ ಯುವವಿಜ್ಞಾನಿ, ಬಾಲವಿಜ್ಞಾನಿಗಳಿಗೆ ಹೊಸ ಅನುಭವ ನೀಡುತ್ತದೆ. ಹಾಗೆಯೇ ಕೆರೆಯಲ್ಲಿ ಬೋಟಿಂಗ್,  ಮತ್ತು ಪಕ್ಕದಲ್ಲೇ ಮಕ್ಕಳ ಆಟದ ಪಾರ್ಕ್ ಇದೆ. 
(5 / 6)

ಯಾವಾಗ ಹೋಗಬೇಕು? ಹಾಗೆ ಹೋಗಿ, ಹೀಗೆ ಬಂದೆ ಎಂಬಂತೆ ಪಿಲಿಕುಳಕ್ಕೆ ಹೋಗುವುದಿದ್ದರೆ, ಎಲ್ಲವನ್ನೂ ನೋಡುವ ಬದಲು ನಮ್ಮ ಆಯ್ಕೆಯ ಯಾವುದಾದರೂ ಒಂದು ವಿಷಯವನ್ನು ವೀಕ್ಷಿಸಬಹುದು. ಆದರೆ ಇಲ್ಲಿ ಬಯೋಲಜಿಕಲ್ ಪಾರ್ಕ್, ಲೇಕ್ ಗಾರ್ಡನ್, ಹೆರಿಟೇಜ್ ವಿಲೇಜ್, ವಿಜ್ಞಾನ ಕೇಂದ್ರ, 3ಡಿ ಥಿಯೇಟರ್, ಬೊಟಾನಿಕಲ್ ಗಾರ್ಡನ್ ಮತ್ತು ಮ್ಯೂಸಿಯಂ, ಎಲ್ಲವನ್ನೂ ನೋಡಬೇಕಿದ್ದರೆ, ಬೆಳಗ್ಗೆ 9.30ಕ್ಕೆ ಹಾಜರಾಗಬೇಕು. ಇಡೀ ದಿನ ನೋಡುವಂಥ ಪ್ಯಾಕೇಜುಗಳು ಇಲ್ಲಿವೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
(6 / 6)

    ಹಂಚಿಕೊಳ್ಳಲು ಲೇಖನಗಳು