logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Modi Diwali With Soldiers: ಮೋದಿ ದೀಪಾವಳಿ, ಹಿಮಾಚಲದ ಕಣಿವೆ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಜತೆ ಪ್ರಧಾನಿ ಸಂಭ್ರಮ

Modi Diwali with soldiers: ಮೋದಿ ದೀಪಾವಳಿ, ಹಿಮಾಚಲದ ಕಣಿವೆ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಜತೆ ಪ್ರಧಾನಿ ಸಂಭ್ರಮ

Nov 12, 2023 03:06 PM IST

ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ದೀಪಾವಳಿಯನ್ನು ಸೇನಾ ಸಿಬ್ಬಂದಿಯೊಂದಿಗೆ ಆಚರಿಸುತ್ತಾರೆ. ದೂರದಲ್ಲೆಲ್ಲೋ ದೇಶ ಸೇವೆ ಮಾಡುತ್ತಿರುವ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸಿ ಅವರೊಂದಿಗೆ ಕೆಲ ಹೊತ್ತು ಕಳೆದ ದೀಪಾವಳಿ ಹಬ್ಬದ ಬೆಳಕನ್ನು ಅವರಲ್ಲೂ ಹರಿಸುತ್ತಾರೆ. ಈ ಬಾರಿ ಅವರು ಆಯ್ಕೆ ಮಾಡಿಕೊಂಡ ಸ್ಥಳ ಹಿಮಾಚಲ ಪ್ರದೇಶದ ಲೆಪ್ಚಾ. ಹೀಗಿತ್ತು ಅಲ್ಲಿನ ಸಂತಸದ ಕ್ಷಣಗಳು.

  • ಪ್ರಧಾನಿ ನರೇಂದ್ರ ಮೋದಿ ಪ್ರತಿ ವರ್ಷ ದೀಪಾವಳಿಯನ್ನು ಸೇನಾ ಸಿಬ್ಬಂದಿಯೊಂದಿಗೆ ಆಚರಿಸುತ್ತಾರೆ. ದೂರದಲ್ಲೆಲ್ಲೋ ದೇಶ ಸೇವೆ ಮಾಡುತ್ತಿರುವ ಸೇನಾ ಸಿಬ್ಬಂದಿಗೆ ಸಿಹಿ ತಿನ್ನಿಸಿ ಅವರೊಂದಿಗೆ ಕೆಲ ಹೊತ್ತು ಕಳೆದ ದೀಪಾವಳಿ ಹಬ್ಬದ ಬೆಳಕನ್ನು ಅವರಲ್ಲೂ ಹರಿಸುತ್ತಾರೆ. ಈ ಬಾರಿ ಅವರು ಆಯ್ಕೆ ಮಾಡಿಕೊಂಡ ಸ್ಥಳ ಹಿಮಾಚಲ ಪ್ರದೇಶದ ಲೆಪ್ಚಾ. ಹೀಗಿತ್ತು ಅಲ್ಲಿನ ಸಂತಸದ ಕ್ಷಣಗಳು.
ಸಿಯಾಚಿನ್‌ನಲ್ಲಿ ಹತ್ತು ವರ್ಷದ ಹಿಂದೇ ಸೇನಾ ಸಿಬ್ಬಂದಿ ಜತೆಗೆ ದೀಪಾವಳಿ ಆಚರಿಸುವ ಪರಿಪಾಠ ಬೆಳೆಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಖುಷಿಯಿಂದಲೇ ಹಿಮಾಚಲ ಪ್ರದೇಶದ ಲೆಪ್ಷಾ ಶಿಬಿರದಲ್ಲಿ ಕಳೆದರು. ಜಗತ್ತಿನ ಹಲವು ದೇಶಗಳ ನಿರೀಕ್ಷೆ ಭಾರತದ ಮೇಲೆ ಇರುವಾಗ ನಮ್ಮ ಗಡಿಯನ್ನು ಭದ್ರಪಡಿಸಿಕೊಳ್ಳುವುದು ನಮ್ಮ ಕರ್ತವ್ಯ, ಗಡಿ ಕಾಯುವ ಸಿಬ್ಬಂದಿಗೆ ಉತ್ತೇಜನ ನೀಡುವುದು ಅವರೊಂದಿಗೆ ದೀಪಾವಳಿ ಆಚರಣೆ ಉದ್ದೇಶ ಎಂದರು ಮೋದಿ.
(1 / 6)

ಪ್ರಧಾನಿಯಾಗಿ ಸತತ ಹತ್ತನೇ ಬಾರಿಗೆ ದೇಶ ಕಾಯುವ ಸೇನಾ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸುತ್ತಿರುವ ನರೇಂದ್ರ ಮೋದಿ ಅವರು ಈ ಬಾರಿ ಹಿಮಾಚಲ ಪ್ರದೇಶದ ಲೆಪ್ಚಾ ಸೇನಾ ಶಿಬಿರಕ್ಕೆ ಬಂದಾಗ ಭಾರತದ ಬಾವುಟ ಹಿಡಿದು ಸಿಬ್ಬಂದಿ ಹುರುದುಂಬಿಸಿದರು.
(2 / 6)

ಹಿಮಾಚಲ ಪ್ರದೇಶದಿಂದ ಒಂಬತ್ತು ಗಂಟೆಗೂ ಹೆಚ್ಚು ಕಾಲ ಪ್ರಯಾಣಿಸಬೇಕಾದ ಲೆಪ್ಚಾ ಸೇನಾ ಶಿಬಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಕೆಲ ಹೊತ್ತು ಕಳೆದರು. ಪ್ರತಿ ವರ್ಷ ಸೇನಾ ಶಿಬಿರದಲ್ಲಿ ದೀಪಾವಳಿ ಆಚರಿಸುವುದನ್ನು ರೂಢಿಸಿಕೊಂಡು ಬಂದಿದ್ದೇನೆ, ಇದು ಹೆಮ್ಮೆಯ ಕ್ಷಣವೂ ಹೌದು ಎಂದು ಮೋದಿ ಹೇಳಿದರು.
(3 / 6)

ಹಿಮಾಚಲಯದ ರಾಜಧಾನಿ ಶಿಮ್ಮಾದಿಂದ ಸುಮಾರು 360 ಕಿ.ಮಿ. ದೂರದಲ್ಲಿರುವ ಲೆಪ್ಚಾ ಸೇನಾ ಶಿಬಿರಕ್ಕೆ ಬಂದ ಮೋದಿ ಅವರು ಶಿಬಿರದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತಲೇ ಹೆಜ್ಜೆ ಹಾಕಿದರು,
(4 / 6)

ಚೀನಾಕ್ಕೆ ಹೊಂದಿಕೊಂಡಂತೆ ಇರುವ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಒಂದಾಗ ಲೆಪ್ಚಾ ಶಿಬಿರದಲ್ಲಿ ಕೆಲ ಹೊತ್ತು ಸೇನಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಸಿಹಿಯನ್ನು ತಿನ್ನಿಸಿದರು.
(5 / 6)

ಹಿಮಾಚಲ ಪ್ರದೇಶದ ಲೆಪ್ಚಾ ಸೇನಾ ಶಿಬಿರದಲ್ಲಿ ಕಳೆದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೊಂದಿಗೆ ಗ್ರೂಪ್‌ ಫೋಟೋ ತೆಗೆಯಿಸಿಕೊಂಡರು.
(6 / 6)

    ಹಂಚಿಕೊಳ್ಳಲು ಲೇಖನಗಳು