logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Photos: ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ರಿಚಾ-ಶ್ರೇಯಾಂಕ; ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರ ನಡೆ

Photos: ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತ ರಿಚಾ-ಶ್ರೇಯಾಂಕ; ಅಭಿಮಾನಿಗಳ ಮನಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರ ನಡೆ

Mar 11, 2024 12:33 PM IST

ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೇವಲ 1 ರನ್‌ನಿಂದ ಸೋತಿತು. ಕೊನೆಯ ಎಸೆತದಲ್ಲಿ ಬಂದ ಫಲಿತಾಂಶದಲ್ಲಿ ಮೆಗ್‌ ಲ್ಯಾನಿಂಗ್‌ ಪಡೆ ರೋಚಕ ಗೆಲುವು ಸಾಧಿಸಿತು. ಆದರೆ, ಡೆಲ್ಲಿ ಆಟಗಾರ್ತಿಯರ ಕ್ರೀಡಾಸ್ಫೂರ್ತಿ ಅಭಿಮಾನಿಗಳ ಮನಗೆದ್ದಿತು. ಗೆಲುವಿನ ಸಂಭ್ರಮದ ನಡುವೆಯೂ ಆರ್‌ಸಿಬಿ ಆಟಗಾರ್ತಿಯರನ್ನು ಸಂತೈಸಿದರು.

  • ಡಬ್ಲ್ಯೂಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಕೇವಲ 1 ರನ್‌ನಿಂದ ಸೋತಿತು. ಕೊನೆಯ ಎಸೆತದಲ್ಲಿ ಬಂದ ಫಲಿತಾಂಶದಲ್ಲಿ ಮೆಗ್‌ ಲ್ಯಾನಿಂಗ್‌ ಪಡೆ ರೋಚಕ ಗೆಲುವು ಸಾಧಿಸಿತು. ಆದರೆ, ಡೆಲ್ಲಿ ಆಟಗಾರ್ತಿಯರ ಕ್ರೀಡಾಸ್ಫೂರ್ತಿ ಅಭಿಮಾನಿಗಳ ಮನಗೆದ್ದಿತು. ಗೆಲುವಿನ ಸಂಭ್ರಮದ ನಡುವೆಯೂ ಆರ್‌ಸಿಬಿ ಆಟಗಾರ್ತಿಯರನ್ನು ಸಂತೈಸಿದರು.
ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಚಾ ಘೋಷ್‌, ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸುವ ಹಂತದಲ್ಲಿದ್ದರು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಕೇವಲ 2 ರನ್‌ಗಳ ಅಗತ್ಯವಿತ್ತು. ಆದರೆ, ಒಂದು ರನ್‌ ಓಡುವುದು ಕೂಡಾ ರಿಚಾ ಅವರಿಂದ ಸಾಧ್ಯವಾಗಲಿಲ್ಲ. ರನೌಟ್‌ ಆದ ರಿಚಾ ಮೈದಾನದಲ್ಲೇ ಕುಸಿದರು.
(1 / 11)
ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿದ ರಿಚಾ ಘೋಷ್‌, ಇನ್ನೇನು ತಂಡವನ್ನು ಗೆಲುವಿನ ದಡ ಸೇರಿಸುವ ಹಂತದಲ್ಲಿದ್ದರು. ಕೊನೆಯ ಎಸೆತದಲ್ಲಿ ಆರ್‌ಸಿಬಿ ಗೆಲುವಿಗೆ ಕೇವಲ 2 ರನ್‌ಗಳ ಅಗತ್ಯವಿತ್ತು. ಆದರೆ, ಒಂದು ರನ್‌ ಓಡುವುದು ಕೂಡಾ ರಿಚಾ ಅವರಿಂದ ಸಾಧ್ಯವಾಗಲಿಲ್ಲ. ರನೌಟ್‌ ಆದ ರಿಚಾ ಮೈದಾನದಲ್ಲೇ ಕುಸಿದರು.(PTI)
ಅತ್ತ ಮತ್ತೊಂದು ಬದಿಯಲ್ಲಿ ಓಡುತ್ತಿದ್ದ ಶ್ರೇಯಾಂಕ‌ ಕೂಡಾ, ಸೋಲಿನ ನೋವಿಂದ ಕುಸಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವೀರೋಚಿತ ಸೋಲನ್ನು ಅರಗಿಸಿಕೊಳ್ಳುವುದು ಯುವ ಆಟಗಾರ್ತಿಯರಿಂದ ಸಾಧ್ಯವಾಗಲಿಲ್ಲ.
(2 / 11)
ಅತ್ತ ಮತ್ತೊಂದು ಬದಿಯಲ್ಲಿ ಓಡುತ್ತಿದ್ದ ಶ್ರೇಯಾಂಕ‌ ಕೂಡಾ, ಸೋಲಿನ ನೋವಿಂದ ಕುಸಿದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ವೀರೋಚಿತ ಸೋಲನ್ನು ಅರಗಿಸಿಕೊಳ್ಳುವುದು ಯುವ ಆಟಗಾರ್ತಿಯರಿಂದ ಸಾಧ್ಯವಾಗಲಿಲ್ಲ.(PTI)
ರಿಚಾ ಮತ್ತು ಶ್ರೇಯಾಂಕ ಇಬ್ಬರ ಕಣ್ಣಿನಲ್ಲೂ ನೀರು ತುಂಬಿತ್ತು. ಇಬ್ಬರೂ ನೆಲಕ್ಕೆ ಮುಖ ಮಾಡಿ ಅತ್ತರು. ಅತ್ತ ಗೆಲವಿನ ಸಂಭ್ರಮದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರು ತಮ್ಮ ಸಂಭ್ರಮದ ನಡುವೆಯೂ ರಿಚಾ ಮತ್ತು ಶ್ರೇಯಾಂಕರನ್ನು ಸಂತೈಸಿದರು.
(3 / 11)
ರಿಚಾ ಮತ್ತು ಶ್ರೇಯಾಂಕ ಇಬ್ಬರ ಕಣ್ಣಿನಲ್ಲೂ ನೀರು ತುಂಬಿತ್ತು. ಇಬ್ಬರೂ ನೆಲಕ್ಕೆ ಮುಖ ಮಾಡಿ ಅತ್ತರು. ಅತ್ತ ಗೆಲವಿನ ಸಂಭ್ರಮದಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ಆಟಗಾರ್ತಿಯರು ತಮ್ಮ ಸಂಭ್ರಮದ ನಡುವೆಯೂ ರಿಚಾ ಮತ್ತು ಶ್ರೇಯಾಂಕರನ್ನು ಸಂತೈಸಿದರು.(PTI)
ಡೆಲ್ಲಿ ನಾಯಕಿ ಮೆಗ್‌ ಲ್ಯಾನಿಂಗ್, ಅಲಿಸ್‌ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್‌,  ಶಫಾಲಿ ವರ್ಮಾ ಸೇರಿದಂತೆ ಹಲವು ಆಟಗಾರ್ತಿಯರು ರಿಚಾರನ್ನು ಸಮಾಧಾನಪಡಿಸಿದರು. ಪಂದ್ಯವನ್ನು ರೋಚಕ ಹಂತದವರೆಗೆ ಕೊಂಡೊಯ್ದ ಅವರ ಪ್ರಯತ್ನವನನ್ನು ಶ್ಲಾಘಿಸಿದರು.
(4 / 11)
ಡೆಲ್ಲಿ ನಾಯಕಿ ಮೆಗ್‌ ಲ್ಯಾನಿಂಗ್, ಅಲಿಸ್‌ ಕ್ಯಾಪ್ಸೆ, ಜೆಮಿಮಾ ರೋಡ್ರಿಗಸ್‌,  ಶಫಾಲಿ ವರ್ಮಾ ಸೇರಿದಂತೆ ಹಲವು ಆಟಗಾರ್ತಿಯರು ರಿಚಾರನ್ನು ಸಮಾಧಾನಪಡಿಸಿದರು. ಪಂದ್ಯವನ್ನು ರೋಚಕ ಹಂತದವರೆಗೆ ಕೊಂಡೊಯ್ದ ಅವರ ಪ್ರಯತ್ನವನನ್ನು ಶ್ಲಾಘಿಸಿದರು.(PTI)
ಈ ನಡುವೆ ಪಂದ್ಯಶ್ರೇಷ್ಠ‌ ಪ್ರಶಸ್ತಿ ಗೆದ್ದ ಜೆಮಿಮಾ ರೋಡ್ರಿಗಸ್‌ ಮಾತುಗಳು ಮನಗೆದ್ದವು. ನನಗೆ ರಿಚಾ ಕುರಿತು ಬೇಸರವಾಗುತ್ತಿದೆ. ಆದರೂ ನಾವು ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇಂದಿನ ಪಂದ್ಯವು ಭವಿಷ್ಯದಲ್ಲಿ ಖಂಡಿತಾ ನೆರವಾಗುತ್ತದೆ ಎಂದು ನಾನು ರಿಚಾಳಿಗೆ ಹೇಳಿದೆ. ಬಹುಶಃ ಅವಳು ವಿಶ್ವಕಪ್ ಫೈನಲ್‌ನಲ್ಲಿ ಗೆಲುವಿನ ರನ್‌ ಬಾರಿಸಿ ಭಾರತವು ಟ್ರೋಫಿಯನ್ನು ಎತ್ತಿ ಹಿಡಿಯಲು ನಮಗೆ ಸಹಾಯ ಮಾಡಬಹುದು ಎಂದು ಜೆಮಿಮಾ ಹೇಳಿದರು. 
(5 / 11)
ಈ ನಡುವೆ ಪಂದ್ಯಶ್ರೇಷ್ಠ‌ ಪ್ರಶಸ್ತಿ ಗೆದ್ದ ಜೆಮಿಮಾ ರೋಡ್ರಿಗಸ್‌ ಮಾತುಗಳು ಮನಗೆದ್ದವು. ನನಗೆ ರಿಚಾ ಕುರಿತು ಬೇಸರವಾಗುತ್ತಿದೆ. ಆದರೂ ನಾವು ಗೆದ್ದಿರುವುದಕ್ಕೆ ಸಂತೋಷವಾಗಿದೆ. ಇಂದಿನ ಪಂದ್ಯವು ಭವಿಷ್ಯದಲ್ಲಿ ಖಂಡಿತಾ ನೆರವಾಗುತ್ತದೆ ಎಂದು ನಾನು ರಿಚಾಳಿಗೆ ಹೇಳಿದೆ. ಬಹುಶಃ ಅವಳು ವಿಶ್ವಕಪ್ ಫೈನಲ್‌ನಲ್ಲಿ ಗೆಲುವಿನ ರನ್‌ ಬಾರಿಸಿ ಭಾರತವು ಟ್ರೋಫಿಯನ್ನು ಎತ್ತಿ ಹಿಡಿಯಲು ನಮಗೆ ಸಹಾಯ ಮಾಡಬಹುದು ಎಂದು ಜೆಮಿಮಾ ಹೇಳಿದರು. (PTI)
ಪಂದ್ಯವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಗೆಲುವಿನ ಜೋಶ್‌ನಲ್ಲಿದ್ದ ಡೆಲ್ಲಿ ಆಟಗಾರ್ತಿಯರು, ಎದುರಾಳಿ ತಂಡದ ವೀರೋಚಿತ ಪ್ರಯತ್ನಕ್ಕೆ ಬೆನ್ನುತಟ್ಟಿದರು. ಈ ಕ್ರೀಡಾಸ್ಫೂರ್ತಿ ಅಭಿಮಾನಿಗಳ ಮನಗೆದ್ದಿತು. 
(6 / 11)
ಪಂದ್ಯವು ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು. ಗೆಲುವಿನ ಜೋಶ್‌ನಲ್ಲಿದ್ದ ಡೆಲ್ಲಿ ಆಟಗಾರ್ತಿಯರು, ಎದುರಾಳಿ ತಂಡದ ವೀರೋಚಿತ ಪ್ರಯತ್ನಕ್ಕೆ ಬೆನ್ನುತಟ್ಟಿದರು. ಈ ಕ್ರೀಡಾಸ್ಫೂರ್ತಿ ಅಭಿಮಾನಿಗಳ ಮನಗೆದ್ದಿತು. (PTI)
ಸೋಲಿನ ಬಳಿಕ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮುಖವೂ ಸಪ್ಪಗಾಗಿತ್ತು. ಕಣ್ಣೀರನ್ನು ಹತೋಟಿಯಲ್ಲಿ ಇಟ್ಟುಕೊಂಡು ಸನ್ನಿವೇಶವನ್ನು ನಿಭಾಯಿಸಿದರು.
(7 / 11)
ಸೋಲಿನ ಬಳಿಕ ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಮುಖವೂ ಸಪ್ಪಗಾಗಿತ್ತು. ಕಣ್ಣೀರನ್ನು ಹತೋಟಿಯಲ್ಲಿ ಇಟ್ಟುಕೊಂಡು ಸನ್ನಿವೇಶವನ್ನು ನಿಭಾಯಿಸಿದರು.(PTI)
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, 5 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 180 ರನ್‌ ಗಳಿಸಿ ಆಟ ಮುಗಿಸಿತು.
(8 / 11)
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್, 5 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿತು. ಗುರಿ ಬೆನ್ನಟ್ಟಿದ ಆರ್‌ಸಿಬಿ 180 ರನ್‌ ಗಳಿಸಿ ಆಟ ಮುಗಿಸಿತು.(PTI)
ಡೆಲ್ಲಿ ವಿರುದ್ಧ ಸತತ 4ನೇ ಸೋಲು ಕಂಡಿರುವ ಆರ್​ಸಿಬಿ ತಂಡದ ಪ್ಲೇ ಆಫ್ ಹಾದಿ ಇನ್ನಷ್ಟು ದುರ್ಗಮಗೊಂಡಿದೆ. ಬೆಂಗಳೂರು ಜೊತೆಗೆ ಯುಪಿ ವಾರಿಯರ್ಸ್​ ತಂಡಕ್ಕೂ ಪ್ಲೇ ಆಫ್​ ಪ್ರವೇಶಿಸುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿದೆ. 
(9 / 11)
ಡೆಲ್ಲಿ ವಿರುದ್ಧ ಸತತ 4ನೇ ಸೋಲು ಕಂಡಿರುವ ಆರ್​ಸಿಬಿ ತಂಡದ ಪ್ಲೇ ಆಫ್ ಹಾದಿ ಇನ್ನಷ್ಟು ದುರ್ಗಮಗೊಂಡಿದೆ. ಬೆಂಗಳೂರು ಜೊತೆಗೆ ಯುಪಿ ವಾರಿಯರ್ಸ್​ ತಂಡಕ್ಕೂ ಪ್ಲೇ ಆಫ್​ ಪ್ರವೇಶಿಸುವ ಅವಕಾಶವನ್ನು ಮತ್ತಷ್ಟು ಹೆಚ್ಚಿಸಿದೆ. (PTI)
ಆರ್‌ಸಿಬಿ ವಿರುದ್ಧ ಗೆಲುವಿನೊಂಡಿಗೆ ಮೆಗ್​ ಲ್ಯಾನಿಂಗ್​ ಪಡೆ 2ನೇ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಮುಂಬೈ ಇಂಡಿಯನ್ಸ್ ಈಗಗಾಲೇ ಪ್ಲೇ ಆಫ್‌ ಪ್ರವೇಶಿಸಿದೆ.
(10 / 11)
ಆರ್‌ಸಿಬಿ ವಿರುದ್ಧ ಗೆಲುವಿನೊಂಡಿಗೆ ಮೆಗ್​ ಲ್ಯಾನಿಂಗ್​ ಪಡೆ 2ನೇ ತಂಡವಾಗಿ ಪ್ಲೇ ಆಫ್​ಗೆ ಎಂಟ್ರಿಕೊಟ್ಟಿದೆ. ಮುಂಬೈ ಇಂಡಿಯನ್ಸ್ ಈಗಗಾಲೇ ಪ್ಲೇ ಆಫ್‌ ಪ್ರವೇಶಿಸಿದೆ.(PTI)
ಸದ್ಯ ಆರ್​ಸಿಬಿ ಒಂದು ಪಂದ್ಯ ಮಾತ್ರ ಬಾಕಿ ಇದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.
(11 / 11)
ಸದ್ಯ ಆರ್​ಸಿಬಿ ಒಂದು ಪಂದ್ಯ ಮಾತ್ರ ಬಾಕಿ ಇದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ.(PTI)

    ಹಂಚಿಕೊಳ್ಳಲು ಲೇಖನಗಳು