logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀರ್ಘಕಾಲದ ಹೊಸ ಮನೆಯ ಕನಸು ನನಸು; ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ ದಿನೇಶ್-ದೀಪಿಕಾ ದಂಪತಿ

ದೀರ್ಘಕಾಲದ ಹೊಸ ಮನೆಯ ಕನಸು ನನಸು; ಹಾಲುಕ್ಕಿಸಿ ಗೃಹಪ್ರವೇಶ ಮಾಡಿದ ದಿನೇಶ್-ದೀಪಿಕಾ ದಂಪತಿ

Jan 29, 2024 02:48 PM IST

Dinesh Karthik: ಭಾರತ ಕ್ರಿಕೆಟ್​ ತಂಡದ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ದಂಪತಿ ತಮ್ಮ ನೂತನ ನಿವಾಸದ ಗೃಹ ಪ್ರವೇಶವನ್ನು ಸರಳವಾಗಿ ಆಚರಿಸಿದ್ದಾರೆ.

  • Dinesh Karthik: ಭಾರತ ಕ್ರಿಕೆಟ್​ ತಂಡದ ಆಟಗಾರ ದಿನೇಶ್ ಕಾರ್ತಿಕ್ ಮತ್ತು ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ದಂಪತಿ ತಮ್ಮ ನೂತನ ನಿವಾಸದ ಗೃಹ ಪ್ರವೇಶವನ್ನು ಸರಳವಾಗಿ ಆಚರಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್​​ನಿಂದ ದೂರ ಉಳಿದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಕೆಟ್ ಕೀಪರ್​ ಬ್ಯಾಟ್ಸ್​ಮನ್​ದಿನೇಶ್​ ಕಾರ್ತಿಕ್ ಅವರ ಬಹುದಿನ ಕಸನು ನನಸಾಗಿದೆ.
(1 / 5)

ದಿನೇಶ್ ಕಾರ್ತಿಕ್ ಮತ್ತು ಪತ್ನಿ ದೀಪಿಕಾ ಪಳ್ಳಿಕಲ್ ತಮ್ಮ ಹೊಸ ಮನೆಯ ನೋಟವನ್ನು ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​ ಜೊತೆಗೆ ಇಲ್ಲಿಂದ ಹೊಸ ಆರಂಭ ಎಂದು ಕ್ಯಾಪ್ಶನ್ ಬರೆದಿದ್ದಾರೆ.
(2 / 5)

ತಮ್ಮ ನೂತನ ಐಷರಾಮಿ ನಿವಾಸ ಗೃಹ ಪ್ರವೇಶವನ್ನು ಸರಳವಾಗಿ, ಸಾಂಪ್ರದಾಯಿಕವಾಗಿ ನೆರವೇರಿಸಿದ್ದಾರೆ. ದಂಪತಿಯ ಅವಳಿ ಮಕ್ಕಳಾದ ಕಬೀರ್ ಮತ್ತು ಜಿಯಾನ್ ಕೂಡ ಪೂಜೆಯಲ್ಲಿ ಪಾಲ್ಗೊಂಡಿದ್ದರು. ತಮಿಳುನಾಡಿನಲ್ಲಿ ಈ ನಿರ್ಮಿಸಲಾಗಿದೆ. ಆದರೆ ಎಷ್ಟು ವೆಚ್ಚವಾಗಿದೆ ಎಂಬುದರ ಬಗ್ಗೆ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ.
(3 / 5)

38 ವರ್ಷದ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಮತ್ತು ಏಷ್ಯನ್ ಗೇಮ್ಸ್‌ನಲ್ಲಿ ಸ್ಕ್ವಾಷ್‌ನಲ್ಲಿ ಚಿನ್ನದ ಪದಕ ವಿಜೇತೆ ದೀಪಿಕಾ ಪಳ್ಳಿಕಲ್ ಹಾಲುಕ್ಕಿಸುವ ಮೂಲಕ ತಮ್ಮ ಹೊಸ ಮನೆ ಪ್ರವೇಶಿಸಿದ ಸಂತೋಷವನ್ನು ಹಂಚಿಕೊಂಡಿದ್ದಾರೆ.
(4 / 5)

ಸದ್ಯ ಕ್ರಿಕೆಟ್​ನಿಂದ ದೂರ ಉಳಿದ ದಿನೇಶ್ ಕಾರ್ತಿಕ್, ಐಪಿಎಲ್​ನಲ್ಲಿ ಮಾತ್ರ ಸಕ್ರಿಯರಾಗಿದ್ದಾರೆ. ಅಲ್ಲದೆ, ಕಾಮೆಂಟೇಟರ್​​ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಕಾರ್ತಿಕ್ ನವೆಂಬರ್ 2013ರಲ್ಲಿ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು.
(5 / 5)

    ಹಂಚಿಕೊಳ್ಳಲು ಲೇಖನಗಳು