logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Afcat Exam: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವಿರಾ, ಈ ಆಪ್‌ಗಳ ನೆರವು ಪಡೆದು ವಾಯುಪಡೆಯಲ್ಲಿ ಉದ್ಯೋಗ ಪಡೆಯಿರಿ

AFCAT exam: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವಿರಾ, ಈ ಆಪ್‌ಗಳ ನೆರವು ಪಡೆದು ವಾಯುಪಡೆಯಲ್ಲಿ ಉದ್ಯೋಗ ಪಡೆಯಿರಿ

Jul 08, 2023 08:00 AM IST

Apps to prepare for AFCAT exam: ಭಾರತೀಯ ವಾಯುಪಡೆಯು ವರ್ಷಕ್ಕೆ ಎರಡು ಬಾರಿ ಏರ್‌ ಫೋರ್ಸ್‌ ಕಾಮನ್‌ ಅಡ್ಮಿಷನ್‌ ಟೆಸ್ಟ್‌ (ಆಫ್‌ಕ್ಯಾಟ್‌) ನಡೆಸುತ್ತಿದೆ. ಸಾಮಾನ್ಯವಾಗಿ ಈ ಪರೀಕ್ಷೆ ಫೆಬ್ರವರಿ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯುತ್ತಿದೆ. ಈ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮೊಬೈಲ್‌ ಆಪ್‌ಗಳ ನೆರವು ಪಡೆಯಬಹುದು.

Apps to prepare for AFCAT exam: ಭಾರತೀಯ ವಾಯುಪಡೆಯು ವರ್ಷಕ್ಕೆ ಎರಡು ಬಾರಿ ಏರ್‌ ಫೋರ್ಸ್‌ ಕಾಮನ್‌ ಅಡ್ಮಿಷನ್‌ ಟೆಸ್ಟ್‌ (ಆಫ್‌ಕ್ಯಾಟ್‌) ನಡೆಸುತ್ತಿದೆ. ಸಾಮಾನ್ಯವಾಗಿ ಈ ಪರೀಕ್ಷೆ ಫೆಬ್ರವರಿ ಮತ್ತು ಸೆಪ್ಟೆಂಬರ್‌ನಲ್ಲಿ ನಡೆಯುತ್ತಿದೆ. ಈ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮೊಬೈಲ್‌ ಆಪ್‌ಗಳ ನೆರವು ಪಡೆಯಬಹುದು.
ವಾಯುಪಡೆಯ ವಿವಿಧ ಬ್ರಾಂಚ್‌ಗಳಿಗೆ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಈ ಪರೀಕ್ಷೆ ನಡೆಸಲಾಗುತ್ತದೆ. ಅಂದರೆ, ಫ್ಲೈಯಿಂಗ್‌ ಬ್ರಾಂಚ್‌ (ಶಾರ್ಟ್‌ ಸರ್ವೀಸ್‌ ಕಮಿಷನ್‌) ಮತ್ತು ಟೆಕ್ನಿಕಲ್‌ ಬ್ರಾಂಚ್‌ (ಶಾರ್ಟ್‌ ಸರ್ವೀಸ್‌ ಕಮಿಷನ್‌ ಮತ್ತು ಪರ್ಮನೆಂಟ್‌ ಕಮಿಷನ್‌)ಗೆ ಅಧಿಕಾರಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.  
(1 / 7)
ವಾಯುಪಡೆಯ ವಿವಿಧ ಬ್ರಾಂಚ್‌ಗಳಿಗೆ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ ಈ ಪರೀಕ್ಷೆ ನಡೆಸಲಾಗುತ್ತದೆ. ಅಂದರೆ, ಫ್ಲೈಯಿಂಗ್‌ ಬ್ರಾಂಚ್‌ (ಶಾರ್ಟ್‌ ಸರ್ವೀಸ್‌ ಕಮಿಷನ್‌) ಮತ್ತು ಟೆಕ್ನಿಕಲ್‌ ಬ್ರಾಂಚ್‌ (ಶಾರ್ಟ್‌ ಸರ್ವೀಸ್‌ ಕಮಿಷನ್‌ ಮತ್ತು ಪರ್ಮನೆಂಟ್‌ ಕಮಿಷನ್‌)ಗೆ ಅಧಿಕಾರಿಗಳನ್ನು ಈ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.  (IAF Twitter)
ವಾಯುಪಡೆಯಲ್ಲಿ ಉದ್ಯೋಗ ಪಡೆಯಲು ನೆರವಾಗುವ ಈ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸೂಕ್ತ ಯೋಜನೆ ಮತ್ತು ಮಾರ್ಗದರ್ಶನ ಬೇಕು. ಈ ಮುಂದಿನ ಆಪ್‌ಗಳು ಆಪ್‌ಕ್ಯಾಟ್‌ ಪರೀಕ್ಷೆ ಬರೆಯಲು ನಿಮಗೆ ನೆರವಾಗಬಹುದು.
(2 / 7)
ವಾಯುಪಡೆಯಲ್ಲಿ ಉದ್ಯೋಗ ಪಡೆಯಲು ನೆರವಾಗುವ ಈ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಸೂಕ್ತ ಯೋಜನೆ ಮತ್ತು ಮಾರ್ಗದರ್ಶನ ಬೇಕು. ಈ ಮುಂದಿನ ಆಪ್‌ಗಳು ಆಪ್‌ಕ್ಯಾಟ್‌ ಪರೀಕ್ಷೆ ಬರೆಯಲು ನಿಮಗೆ ನೆರವಾಗಬಹುದು.(S Jaishankar Twitter)
Gradeup app: ಆಪ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸಲು ಬಹುತೇಕರು ಈ ಆಪ್‌ ಬಳಸುತ್ತಾರೆ. ಅಧ್ಯಯನ ಸಾಮಾಗ್ರಿಗಳು, ಮಾಕ್‌ ಟೆಸ್ಟ್‌ಗಳು, ಕ್ವಿಜ್‌ಗಳು, ಲೈವ್‌ ಕ್ಲಾಸ್‌ಗಳು, ಸಂಶಯ ನಿವಾರಣಾ ಸೆಸನ್‌ಗಳು ಮತ್ತು ಪರೀಕ್ಷೆ ನೋಟಿಫಿಕೇಷನ್‌ ಇದರಲ್ಲಿ ದೊರಕುತ್ತದೆ. 
(3 / 7)
Gradeup app: ಆಪ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸಲು ಬಹುತೇಕರು ಈ ಆಪ್‌ ಬಳಸುತ್ತಾರೆ. ಅಧ್ಯಯನ ಸಾಮಾಗ್ರಿಗಳು, ಮಾಕ್‌ ಟೆಸ್ಟ್‌ಗಳು, ಕ್ವಿಜ್‌ಗಳು, ಲೈವ್‌ ಕ್ಲಾಸ್‌ಗಳು, ಸಂಶಯ ನಿವಾರಣಾ ಸೆಸನ್‌ಗಳು ಮತ್ತು ಪರೀಕ್ಷೆ ನೋಟಿಫಿಕೇಷನ್‌ ಇದರಲ್ಲಿ ದೊರಕುತ್ತದೆ. (Pexels)
Edurev app: ಆಪ್‌ಕ್ಯಾಟ್‌ ಮಾತ್ರವವಲ್ಲದೆ ವಿವಿಧ ಬಗೆಯ ಪರೀಕ್ಷೆಗೆ ಸಿದ್ಧತೆ ನಡೆಸುವವರು ಈ ಆಪ್‌ ಅನ್ನು ವ್ಯಾಪಕವಾಗಿ ಬಳಸುತ್ತಾರೆ. ಆಪ್‌ಕ್ಯಾಟ್‌ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ವಿಡಿಯೋ ಲೆಕ್ಚರ್‌ಗಳು, ಅಧ್ಯಯನ ಸಾಮಾಗ್ರಿಗಳು, ಪ್ರಶ್ನೆ ಪತ್ರಿಕಗಳು ಇತ್ಯಾದಿಗಳು ದೊರಕುತ್ತವೆ. 
(4 / 7)
Edurev app: ಆಪ್‌ಕ್ಯಾಟ್‌ ಮಾತ್ರವವಲ್ಲದೆ ವಿವಿಧ ಬಗೆಯ ಪರೀಕ್ಷೆಗೆ ಸಿದ್ಧತೆ ನಡೆಸುವವರು ಈ ಆಪ್‌ ಅನ್ನು ವ್ಯಾಪಕವಾಗಿ ಬಳಸುತ್ತಾರೆ. ಆಪ್‌ಕ್ಯಾಟ್‌ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ವಿಡಿಯೋ ಲೆಕ್ಚರ್‌ಗಳು, ಅಧ್ಯಯನ ಸಾಮಾಗ್ರಿಗಳು, ಪ್ರಶ್ನೆ ಪತ್ರಿಕಗಳು ಇತ್ಯಾದಿಗಳು ದೊರಕುತ್ತವೆ. (Pexels)
Centurion Digital App: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ನೆರವು ನೀಡುವ ಸಲುವಾಗಿಯೇ ಈ ಆಪ್‌ ಅಭಿವೃದ್ಧಿಪಡಿಸಲಾಗಿದೆ. ಸೆಂಟ್ಯುರೇಷನ್‌ ಡಿಜಿಟಲ್‌ ಆಪ್‌ನಲ್ಲಿ ಉಚಿತ ಸ್ಟಡಿ ಮೆಟಿರಿಯಲ್‌ ಮತ್ತು ವಾರಕ್ಕೊಮ್ಮೆ ಅಣಕು ಪರೀಕ್ಷೆ ಇರುತ್ತದೆ.  
(5 / 7)
Centurion Digital App: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗೆ ನೆರವು ನೀಡುವ ಸಲುವಾಗಿಯೇ ಈ ಆಪ್‌ ಅಭಿವೃದ್ಧಿಪಡಿಸಲಾಗಿದೆ. ಸೆಂಟ್ಯುರೇಷನ್‌ ಡಿಜಿಟಲ್‌ ಆಪ್‌ನಲ್ಲಿ ಉಚಿತ ಸ್ಟಡಿ ಮೆಟಿರಿಯಲ್‌ ಮತ್ತು ವಾರಕ್ಕೊಮ್ಮೆ ಅಣಕು ಪರೀಕ್ಷೆ ಇರುತ್ತದೆ.  (Pexels)
Jagran Josh app: ಜಾಗರಣಾ ಜೋಶ್‌ ಆಪ್‌ ಅನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಬಳಸುತ್ತಾರೆ. ಸಾಮಾನ್ಯ ಜ್ಞಾನ, ಹಳೆ ಪ್ರಶ್ನೆ ಪತ್ರಿಕೆ ಇತ್ಯಾದಿ ಹಲವು ವಿಷಯಗಳು ಇಲ್ಲಿ ದೊರಕುತ್ತದೆ.  
(6 / 7)
Jagran Josh app: ಜಾಗರಣಾ ಜೋಶ್‌ ಆಪ್‌ ಅನ್ನು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಬಳಸುತ್ತಾರೆ. ಸಾಮಾನ್ಯ ಜ್ಞಾನ, ಹಳೆ ಪ್ರಶ್ನೆ ಪತ್ರಿಕೆ ಇತ್ಯಾದಿ ಹಲವು ವಿಷಯಗಳು ಇಲ್ಲಿ ದೊರಕುತ್ತದೆ.  (Pexels)
estBook app: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ಸಮಗ್ರ ಪರೀಕ್ಷಾ ಸರಣಿಗಳನ್ನು ಇದು ನಡೆಸುತ್ತದೆ. ಇಲ್ಲಿ ಸಾಕಷ್ಟು ಅಧ್ಯಯನ ಸಾಮಾಗ್ರಿಗಳೂ ದೊರಕುತ್ತವೆ. ಸಾಮಾನ್ಯ ಜ್ಞಾನ, ವರ್ಬಲ್‌ ಎಬಿಲಿಟಿ, ನ್ಯೂಮರಿಕಲ್‌ ಎಬಿಲಿಟಿ, ರೀಸನಿಂಗ್‌ ಇತ್ಯಾದಿ ವಿಷಯಗಳಿಗೆ ಇಲ್ಲಿ ಸಿದ್ಧತೆ ನಡೆಸಬಹುದು.  
(7 / 7)
estBook app: ಆಫ್‌ಕ್ಯಾಟ್‌ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ಸಮಗ್ರ ಪರೀಕ್ಷಾ ಸರಣಿಗಳನ್ನು ಇದು ನಡೆಸುತ್ತದೆ. ಇಲ್ಲಿ ಸಾಕಷ್ಟು ಅಧ್ಯಯನ ಸಾಮಾಗ್ರಿಗಳೂ ದೊರಕುತ್ತವೆ. ಸಾಮಾನ್ಯ ಜ್ಞಾನ, ವರ್ಬಲ್‌ ಎಬಿಲಿಟಿ, ನ್ಯೂಮರಿಕಲ್‌ ಎಬಿಲಿಟಿ, ರೀಸನಿಂಗ್‌ ಇತ್ಯಾದಿ ವಿಷಯಗಳಿಗೆ ಇಲ್ಲಿ ಸಿದ್ಧತೆ ನಡೆಸಬಹುದು.  (Pexels)

    ಹಂಚಿಕೊಳ್ಳಲು ಲೇಖನಗಳು