logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Karnataka Rajyotsava: ರಜನಿಕಾಂತ್‌ರಿಂದ ಕಮಲಹಾಸನ್‌ವರೆಗೆ: ತುಂಬಾ ಚೆನ್ನಾಗಿ ಕನ್ನಡ ಮಾತಾಡೋ ಈ 7 ಬಹುಭಾಷಾ ನಟಿ ನಟರಿಗೆ ಧನ್ಯವಾದ ಹೇಳೋಣರೀ

Oct 31, 2023 02:37 PM IST

Karnataka Rajyotsava: ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.

  • Karnataka Rajyotsava: ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.
ನವೆಂಬರ್‌ 1 ಕರ್ನಾಟಕ ರಾಜ್ಯೋತ್ಸವ (ಕನ್ನಡ ರಾಜ್ಯೋತ್ಸವವೂ ಹೌದು). ಈ ಸಂದರ್ಭದಲ್ಲಿ ಕನ್ನಡದಲ್ಲಿ ಮಾತನಾಡುವ ಕೆಲವು ಪರಭಾಷಾ ನಟರ ಬಗ್ಗೆ ತಿಳಿದುಕೊಳ್ಳೋಣ. ರಜನಿಕಾಂತ್‌, ಕಮಲಾಹಾಸನ್‌, ದೀಪಿಕಾ ಪಡುಕೋಣೆ ಸೇರಿದಂತೆ ಹಲವು ನಟಿ ನಟರು ಕನ್ನಡದಲ್ಲಿ ಸೊಗಸಾಗಿ ಮಾತನಾಡುತ್ತಾರೆ.
(1 / 9)

ಸೂಪರ್‌ಸ್ಟಾರ್‌ ರಜನಿಕಾಂತ್‌: ತಮಿಳು ನಟ ರಜನಿಕಾಂತ್‌ ಹುಟ್ಟಿದ್ದು, ಬೆಳೆದದ್ದು, ಬಿಎಂಟಿಸಿ ಕಂಡೆಕ್ಟರ್‌ ಆಗಿ ಕೆಲಸ ಮಾಡಿದ್ದು ಬೆಂಗಳೂರಿನಲ್ಲೇ. ಅವರು ಸೊಗಸಾಗಿ ಕನ್ನಡ ಮಾತನಾಡುತ್ತಾರೆ. ಕನ್ನಡಿಗರ ಬಳಿ ಕನ್ನಡದಲ್ಲಿಯೇ ಮಾತನಾಡೋದು ಇವರ ವಿಶೇಷ.
(2 / 9)

ಕಮಲ ಹಾಸನ್‌:  ಕರ್ನಾಟಕದ ಮೂಲದವರು ಕನ್ನಡ ಮಾತನಾಡಿದರೆ ಅಚ್ಚರಿಯಿಲ್ಲ.  ಆದರೆ, ಕಮಲ ಹಾಸನ್‌ ಹಾಗಲ್ಲ. ಅವರು ಕರ್ನಾಟಕಕ್ಕೆ ಬಂದರೆ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತಾರೆ. ತಮಿಳುನಾಡು ಮೂಲದ ಈ ಪ್ರತಿಭಾನ್ವಿತ ಕಲಾವಿದ ನಟಿಸಿ ರಾಮಾ ಭಾಮಾ ಶಾಮಾ ನೆನಪಾದರೆ ಈಗಲೂ ನಿಮ್ಮ ಮುಖದಲ್ಲಿ ನಗು ಮೂಡಬಹುದು. ಕೋಕಿಲಾ ಮುಂತಾದ ಕೆಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.  
(3 / 9)

ದೀಪಿಕಾ ಪಡುಕೋಣೆ: ಕುಡ್ಲದ ಪೊನ್ನು ದೀಪಿಕಾ ಪಡುಕೋಣೆಗೂ ಕನ್ನಡ ಗೊತ್ತು. ಇವರು ಸ್ಯಾಂಡಲ್‌ವುಡ್‌ನಿಂದಲೇ ಬಾಲಿವುಡ್‌, ಹಾಲಿವುಡ್‌ಗೆ ನೆಗೆದ ಕರುನಾಡಿನ ಪ್ರತಿಭಾನ್ವಿತೆ. ಬ್ಯಾಂಡ್ಮಿಟನ್‌ ಆಟಗಾರ ಪರಕಾಶ್‌ ಪಡುಕೋಣೆಯ ಮುದ್ದಿನ ಮಗಳು ದೀಪಿಕಾ ಪಡುಕೋಣೆ ಕನ್ನಡದಲ್ಲಿ ಮಾತನಾಡುತ್ತಾರೆ. ಇವರಿಗೆ ತುಳು ಭಾಷೆಯೂ ಗೊತ್ತು. ಉಪೇಂದ್ರರ ಐಶ್ವರ್ಯ ಸಿನಿಮಾದ ಮೂಲಕ ಸಿನಿಪ್ರವೇಶ ಮಾಡಿರುವ ಇವರಿಗೆ ಕನ್ನಡ ಗೊತ್ತಿದೆ ಎನ್ನುವುದರಲ್ಲಿ ಆಶ್ವರ್ಯವಿಲ್ಲ. ಆದರೆ, ಈಗಲೂ ಕರ್ನಾಟಕಕ್ಕೆ ಬಂದರೆ ಕನ್ನಡ ಮಾತನಾಡುತ್ತಾರೆ ಎನ್ನುವುದಕ್ಕೆ ಖುಷಿ ಪಡೋಣ.
(4 / 9)

ಅನುಷ್ಕಾ ಶೆಟ್ಟಿ: ಟಾಲಿವುಡ್‌ನ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿಯೂ ಕರಾವಳಿ ಬೆಡಗಿ. ಟಾಲಿವುಡ್‌ಗೆ ಪ್ರವೇಶಿಸುವ ಮೊದಲು ಇವರು ಬೆಂಗಳೂರಿನಲ್ಲಿ ಯೋಗ ಶಿಕ್ಷಕಿಯಾಗಿದ್ದರು. ತುಳು ಕುಟುಂಬದಲ್ಲಿ ಜನಿಸಿದ ಇವರು ಬೆಂಗಳೂರಿನಲ್ಲಿ ಶಿಕ್ಷಣ ಪಡೆದಿದ್ದಾರೆ. ಕರ್ನಾಟಕ ಮೂಲದವರಿರುವುದರಿಂದ ಇವರು ಕೂಡ ಕನ್ನಡದಲ್ಲಿ ಮಾತನಾಡುವುದು ಅಚ್ಚರಿಯಲ್ಲ. ಹೀಗಿದ್ದರೂ, ಇಷ್ಟೊಂದು ಜನಪ್ರಿಯತೆ ಪಡೆದ ಮೇಲೂ ಕನ್ನಡದ ಮೇಲಿನ ಪ್ರೀತಿ ಕಡಿಮೆಯಾಗದೆ ಇರುವ ಇವರ ಗುಣಕ್ಕೆ ಧನ್ಯವಾದ ಹೇಳೋಣ.
(5 / 9)

ಕೃತಿ ಕರಬಂಧ: ದೆಹಲಿಯಲ್ಲಿ ಜನಿಸಿದ ಕೃತಿ ಕರಬಂಧ ಬೆಳೆದದ್ದು ಬೆಂಗಳೂರಿನಲ್ಲಿ. ಉಪೇಂದ್ರರ ಸೂಪರ್‌ ರಂಗ, ಶಿವರಾಜ್‌ಕುಮಾರ್‌ ನಟನೆಯ ಬೆಳ್ಳಿ, ದಿಗಂತ್‌ ನಟನೆಯ ಮಿಂಚಾಗಿ ನೀ ಬರಲು, ದುನಿಯಾ ವಿಜಯ್‌ ನಟನೆಯ ಮಾಸ್ತಿ ಗುಡಿ, ಚಿರಂಜೀವಿ ಸರ್ಜಾರ ಚಿರು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಇವರು ಈಗ ಟಾಲಿವುಡ್‌ ಮತ್ತು ಬಾಲಿವುಡ್‌ನಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇವರಿಗೂ ಕನ್ನಡ ಚೆನ್ನಾಗಿ ಗೊತ್ತು. 
(6 / 9)

ಪ್ರಕಾಶ್‌ ರಾಜ್‌: ಮೂಲತಃ ಕನ್ನಡಿಗರಾದ ಪ್ರಕಾಶ್‌ ರಾಜ್‌ ಕನ್ನಡ ಮಾತನಾಡಿದರೆ ಅಚ್ಚರಿಯಿಲ್ಲ. ಆದರೆ, ಟಾಲಿವುಡ್‌, ಬಾಲಿವುಡ್‌, ಕಾಲಿವುಡ್‌ ಸೇರಿದಂತೆ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಸಾಧನೆ ಮಾಡಿರುವ ಇವರು  ಈಗಲೂ ಕನ್ನಡ ಮಾತನಾಡುತ್ತಾರೆ. ಕರ್ನಾಟಕದ ವಿಚಾರಗಳಿಗೆ ಕನ್ನಡದಲ್ಲಿಯೇ ಟ್ವೀಟ್‌ ಮಾಡುತ್ತಾರೆ. 
(7 / 9)

ತೆಲುಗು ನಟ ಜೂನಿಯರ್‌ ಎನ್‌ಟಿಆರ್‌ ಕೂಡ ಕನ್ನಡ ಸೊಗಸಾಗಿ ಮಾತನಾಡುತ್ತಾರೆ. ಕಳೆದ ವರ್ಷ ಕನ್ನಡ ರಾಜ್ಯೋತ್ಸವದಂದು ಇವರು ಕನ್ನಡದಲ್ಲಿ ಮಾತನಾಡಿದ್ದರು. ಪುನೀತ್‌ ರಾಜ್‌ಕುಮಾರ್‌ ಅಂತಿಮ ದರ್ಶನ ಸಮಯದಲ್ಲೂ ಇವರು ಕನ್ನಡದಲ್ಲಿ ದುಃಖತಪ್ತರಾಗಿ ಮಾತನಾಡಿದ್ದರು. 
(8 / 9)

ಇವು ಉದಾಹರಣೆಯಷ್ಟೇ. ‌ಕನ್ನಡ ಬಲ್ಲ ಇನ್ನಷ್ಟು ಪರಭಾಷಾ ನಟನಟಿಯರಿದ್ದಾರೆ. ಸಾಕಷ್ಟು ಪರಭಾಷಾ ನಟರು ತಮಗೆ ಸಾಧ್ಯವಿರುವಷ್ಟು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಈ ರೀತಿ ಕನ್ನಡ ಪ್ರೇಮ ತೋರುವ ಪರಭಾಷಾ ನಟಿ ಮತ್ತು ನಟರಿಗೆ ಹಿಂದೂಸ್ತಾನ್‌ ಟೈಮ್‌ ಕನ್ನಡದ ಕಡೆಯಿಂದ ಧನ್ಯವಾದ.  
(9 / 9)

    ಹಂಚಿಕೊಳ್ಳಲು ಲೇಖನಗಳು