logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Forest News: ಕಾಡು ಕಾಯುವವರಿಗೂ ಕೂಲ್‌ ಕೂಲ್‌ ಕಟ್ಟಡಗಳು, ಹೀಗಿವೆ ಅರಣ್ಯ ಬೇಟೆ ತಡೆ ಶಿಬಿರಗಳು Photos

Forest News: ಕಾಡು ಕಾಯುವವರಿಗೂ ಕೂಲ್‌ ಕೂಲ್‌ ಕಟ್ಟಡಗಳು, ಹೀಗಿವೆ ಅರಣ್ಯ ಬೇಟೆ ತಡೆ ಶಿಬಿರಗಳು photos

Apr 24, 2024 04:02 PM IST

ಕಾಡು ಕಾಯುವುದು ಎಂದರೆ ಸಣ್ಣ ಕೆಲಸವಲ್ಲ. ಅಲ್ಲಿ ವನ್ಯಜೀವಿಗಳ ಭಯ, ಕಳ್ಳಬೇಟೆಗಾರರ ಉಪಟಳ. ಇದಕ್ಕಾಗಿಯೇ ಕಾಡಿನೊಳಗೆ ದಿನ ಕಳೆಯುವ ಸಿಬ್ಬಂದಿಗೆ ಕಳ್ಳಬೇಟೆ ತಡೆ ಶಿಬಿರಗಳನ್ನು (Anti poaching Camp) ವಿಭಿನ್ನ, ಪರಿಸರ ಸ್ನೇಹಿಯಾಗಿ ರೂಪಿಸಲಾಗುತ್ತಿದೆ. ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಶಿಬಿರಗಳ ನೋಟ ಇಲ್ಲಿದೆ. 

  • ಕಾಡು ಕಾಯುವುದು ಎಂದರೆ ಸಣ್ಣ ಕೆಲಸವಲ್ಲ. ಅಲ್ಲಿ ವನ್ಯಜೀವಿಗಳ ಭಯ, ಕಳ್ಳಬೇಟೆಗಾರರ ಉಪಟಳ. ಇದಕ್ಕಾಗಿಯೇ ಕಾಡಿನೊಳಗೆ ದಿನ ಕಳೆಯುವ ಸಿಬ್ಬಂದಿಗೆ ಕಳ್ಳಬೇಟೆ ತಡೆ ಶಿಬಿರಗಳನ್ನು (Anti poaching Camp) ವಿಭಿನ್ನ, ಪರಿಸರ ಸ್ನೇಹಿಯಾಗಿ ರೂಪಿಸಲಾಗುತ್ತಿದೆ. ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಶಿಬಿರಗಳ ನೋಟ ಇಲ್ಲಿದೆ. 
ಮಹಾರಾಷ್ಟ್ರದ ಮೇಲ್ಗಾಟ್ ಹುಲಿ ಸಂರಕ್ಷಿತ ಪ್ರದೇಶದ ಸಾಂಪ್ರದಾಯಿಕ ಶೈಲಿಯಲ್ಲಿ, ಬಿದಿರು ಹಾಗೂ‌ ಒಣಗಿ ಬಿದ್ದ ಮರಗಳನ್ನು ಬಳಸಿ ನಿರ್ಮಿಸಿರುವ ಸುಂದರ ಕಳ್ಳಬೇಟೆ ತಡೆ ಶಿಬಿರ(Anti poaching Camp).
(1 / 7)

ಬಿದಿರನ್ನೇ ಬಳಸಿ ಇದನ್ನು ರೂಪಿಸಲಾಗಿದೆ. ಕೆಳ ಮಹಡಿ ಹಾಗೂ ಮೇಲ್ಮಹಡಿಯೂ ಮರದಿಂದಲೇ ಮಾಡಿರುವುದು ವಿಶೇಷ. 
(2 / 7)

ಬೇಟೆಗಾರರು ಬಂದರೆ ಕಾಯಲು ಅನುಕೂಲವಾಗುವಂತೆ ಇದನ್ನು ರೂಪಿಸಲಾಗಿದ್ದು. ಸಿಬ್ಬಂದಿ ಮೇಲುಗಡೆ ಕಾಯುವ ಕೆಲಸ ಮಾಡಬಹುದು.
(3 / 7)

ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಯಲ್ಲಿ APC ಗಳು ಮಹತ್ವದ ಪಾತ್ರ ವಹಿಸುತ್ತವೆ. ದಟ್ಟಾರಣ್ಯದ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಿಸುವ ಈ ಶಿಬಿರಗಳಲ್ಲಿ ನಾಲ್ಕೈದು ಶಿಬ್ಬಂದಿಗಳು ತಂಗಿಕೊಂಡು ಅಲ್ಲಿಗೆ ಅಡುಗೆ, ಊಟ, ವಸತಿ ಮಾಡಿಕೊಂಡು 24×7 ಆ ಶಿಬಿರದ ಸುತ್ತಮುತ್ತಲಿನ ಅರಣ್ಯ ಹಾಗೂ ವನ್ಯಜೀವಿಗಳನ್ನು ಬೇಟೆಗಾರರು, ಮರಗಳ್ಳರು, ಕಾಡ್ಗಿಚ್ಚು ಮುಂತಾದವುಗಳ ಮೇಲೆ ಕಣ್ಗಾವಲು ಇಡುತ್ತಾರೆ.
(4 / 7)

ಮಹಾರಾಷ್ಟ್ರದ ಮೇಲ್ಗಾಟ್‌ನಲ್ಲಿ ಅಲ್ಲಿನ ಸ್ಥಳೀಯ ಬಿದಿರಿನ ಕಲೆಯಾದ ಕೊರ್ಮು ಕಲೆಯನ್ನು ಈ ಅರಣ್ಯ ಕಾವಲು ಶಿಬಿರವನ್ನು ನಿರ್ಮಿಸಲು ಸಹ ಬಳಸಿಕೊಂಡಿದ್ದು, ಸಹಜವಾಗಿ‌ ಒಣಗಿ ಬಿದ್ದ ಮರಗಳು ಹಾಗೂ ಬಿದರನ್ನು ಬಳಸಿ  ಸುಂದರ ಶಿಬಿರಗಳನ್ನು ನಿರ್ಮಾಣ ಮಾಡಿದ್ದಾರೆ.
(5 / 7)

ಒಂದು ಅಂತಸ್ತಿನ ಈ ಶಿಬಿರಗಳಲ್ಲಿ ಹೊಂದಿಕೊಂಡ ಶೌಚಾಲಯ, ಅಡುಗೆ ಮನೆ, ಸ್ಟಾಕ್ ರೂಮ್, ಕಾವಲಿಗೆ ಅನುಕೂಲವಾಗುವ ಬಾಲ್ಕನಿಯ ಸಿಟೌಟ್ ಸ್ಥಳ ಎಲ್ಲವೂ ಇದೆ.
(6 / 7)

ವಿಶೇಷವಾಗಿ ರೂಪಿಸಿರುವ ಈ ಕಳ್ಳಬೇಟೆ ತಡೆ ಶಿಬಿರಗಳನ್ನು ಅಧಿಕಾರಿಗಳು ಉದ್ಘಾಟಿಸಿ ಬಳಕೆಗೆ ಸಮರ್ಪಿಸಿದರು.
(7 / 7)

    ಹಂಚಿಕೊಳ್ಳಲು ಲೇಖನಗಳು