logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಎಳೆ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ಯಾ; ಅಕಾಲಿಕ ಬಾಲನೆರೆಗೆ ಈ 6 ಅಂಶಗಳೇ ಪ್ರಮುಖ ಕಾರಣ

ಎಳೆ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ಯಾ; ಅಕಾಲಿಕ ಬಾಲನೆರೆಗೆ ಈ 6 ಅಂಶಗಳೇ ಪ್ರಮುಖ ಕಾರಣ

Mar 18, 2024 12:27 PM IST

ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಹದಿ ವಯಸ್ಸಿನ ಮಕ್ಕಳಿಗೂ ಕೂದಲು ಬೆಳ್ಳಗಾಗುತ್ತಿದೆ. ಅನುವಂಶೀಯತೆ, ಒತ್ತಡ, ಪೋಷಕಾಂಶದ ಕೊರತೆ ಜೊತೆಗೆ ಈ ಅಂಶಗಳು ಕೂಡ ಕೂದಲು ಬೆಳ್ಳಗಾಗಲು ಪ್ರಮುಖ ಕಾರಣ.

  • ವಯಸ್ಸಾದ ಮೇಲೆ ಕೂದಲು ಬೆಳ್ಳಗಾಗುವುದು ಸಹಜ. ಆದರೆ ಇತ್ತೀಚಿನ ದಿನಗಳಲ್ಲಿ ಹದಿ ವಯಸ್ಸಿನ ಮಕ್ಕಳಿಗೂ ಕೂದಲು ಬೆಳ್ಳಗಾಗುತ್ತಿದೆ. ಅನುವಂಶೀಯತೆ, ಒತ್ತಡ, ಪೋಷಕಾಂಶದ ಕೊರತೆ ಜೊತೆಗೆ ಈ ಅಂಶಗಳು ಕೂಡ ಕೂದಲು ಬೆಳ್ಳಗಾಗಲು ಪ್ರಮುಖ ಕಾರಣ.
ಇತ್ತೀಚಿನ ದಿನಗಳಲ್ಲಿ ಹಲವರು ಎದುರಿಸುತ್ತಿರುವ ಕೂದಲಿನ ಸಮಸ್ಯೆಗಳಲ್ಲಿ ಅಕಾಲಿಕ ಬಾಲನೆರೆ ಅಥವಾ ಚಿಕ್ಕ ವಯಸ್ಸಿಗೆ ಕೂದಲು ಬೆಳ್ಳಗಾಗುವುದು ಕೂಡ ಒಂದು. ಎಳೆವಯಸ್ಸಿನಲ್ಲೇ ಕೂದಲು ಬೆಳ್ಳಗಾಗಲು ಈ ಕೆಳಗಿನ ಅಂಶಗಳು ಪ್ರಮುಖ ಕಾರಣ. 
(1 / 8)

ಒತ್ತಡ: ಇತ್ತೀಚಿನ ದಿನಗಳಲ್ಲಿ ಪ್ರೌಢಾವಸ್ಥೆಯಲ್ಲಿರುವ ಮಕ್ಕಳನ್ನು ಕಾಡುವ ಸಾಮಾನ್ಯ ತೊಂದರೆಯಲ್ಲಿ ಒತ್ತಡ ಕೂಡ ಒಂದು. ಆದರೆ ದೀರ್ಘಾವಧಿಯವರೆಗೆ ಕಾಡುವ ಒತ್ತಡವು ಇನ್‌ಸೋಮ್ನಿಯಾ (ನಿದ್ದೆಯ ಕೊರತೆ), ಆತಂಕ, ಹಸಿವಾಗಿದೇ ಇರುವುದು ಅಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇದರಿಂದ ಕೂದಲಿನ ಸಮಸ್ಯೆಗಳೂ ಎದುರಾಗುತ್ತವೆ. ಈ ಎಲ್ಲಾ ಕಾರಣಗಳು ಅಕಾಲಿಕ ಬಾಲ ನೆರೆಗೂ ಕಾರಣವಾಗುತ್ತವೆ. 
(2 / 8)

ಕೂದಲಿಗೆ ಎಣ್ಣೆ ಹಚ್ಚದೇ ಇರುವುದು: ಕೂದಲಿಗೆ ಎಣ್ಣೆ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ. ಇದು ಮೇದೋಗ್ರಂಥಿಗಳ ಸ್ರಾವ ಉತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೆತ್ತಿ ಒಣಗುವುದು, ತುರಿಕೆ ಉಂಟಾಗುವುದನ್ನು ತಡೆಯಲು ಇದು ಸಹಕಾರಿ. ನೆತ್ತಿಯ ಮೇಲೆ ಎಣ್ಣೆ ಹಾಕಿ ಮಸಾಜ್‌ ಮಾಡುವುದರಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ. ನಿಯಮಿತವಾಗಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಅಕಾಲಿಕ ಬಾಲನೆರೆಯನ್ನು ತಪ್ಪಿಸಬಹುದು. 
(3 / 8)

ಬಿಸಿಲಿನಲ್ಲಿ ಹೆಚ್ಚು ಓಡಾಡುವುದು: ಎಳೆ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗಲು ಒಂದು ಪ್ರಮುಖ ಕಾರಣ ಎಂದರೆ ಅತಿಯಾಗಿ ಸೂರ್ಯನ ಬಿಸಿಲಿನಲ್ಲಿ ಓಡಾಡುವುದು. ಸೂರ್ಯನ ಕಿರಣಗಳಿಂದ ಬಿಡುಗಡೆಯಾಗುವ ಯುವಿ ಕಿರಣಗಳು ಚರ್ಮಕ್ಕೆ ಮಾತ್ರವಲ್ಲ, ಕೂದಲಿಗೂ ಹಾನಿ ಉಂಟು ಮಾಡುತ್ತವೆ. ಇದರಿಂದ ನೆತ್ತಿಯ ಭಾಗ ಒಣಗುವುದು ಮಾತ್ರವಲ್ಲ, ಅಕಾಲಿಕ ಬಾಲನೆರೆ ಸಮಸ್ಯೆಯೂ ಉಂಟಾಗುತ್ತದೆ. 
(4 / 8)

ಧೂಮಪಾನ: ಅಕಾಲಿಕ ಬಾಲನೆರೆ ಸಮಸ್ಯೆ ಉಂಟಾಗಲು ಧೂಮಪಾನ ಮಾಡುವುದು ಕೂಡ ಒಂದು ಕಾರಣ. ಸಿಗರೇಟ್‌ನಲ್ಲಿರುವ ವಿಷಕಾರಿ ಅಂಶವು ಕೂದಲಿನ ಫಾಲಿಕಲ್ಸ್‌ಗಳಿಗೆ ಹಾನಿ ಮಾಡಿ, ಕೂದಲು ಬೆಳ್ಳಗಾಗುವಂತೆ ಮಾಡುತ್ತದೆ.
(5 / 8)

ರಾಸಾಯನಿಕ ಉತ್ಪನ್ನಗಳು: ರಾಸಾಯನಿಕ ಬಣ್ಣಗಳಂತಹ ಉತ್ಪನ್ನಗಳು ಆ ಕಾರಣಕ್ಕೆ ನಿಮ್ಮ ಕೂದಲನ್ನು ಅಂದಗೊಳಿಸಿದರೂ ಇದು ಕೂದಲಿನ ಮೇಲೆ ದೀರ್ಘಕಾಲದ ಪರಿಣಾಮ ಉಂಟು ಮಾಡುವುದರಲ್ಲಿ ಅನುಮಾನವಿಲ್ಲ. ಕೊನೆಗೆ ಇದು ಪರೋಕ್ಷವಾಗಿ ಕೂದಲು ಬಿಳಿಯಾಗಲು ಕಾರಣವಾಗುತ್ತದೆ. 
(6 / 8)

ಅಸರ್ಮಪಕ ಡಯೆಟ್‌ ಪಾಲನೆ: ನಾವು ಸೇವಿಸುವ ಆಹಾರವು ನಮ್ಮ ದೇಹದ ಮೇಲೆ ನೇರ ಪರಿಣಾಮ ಬೀರುತ್ತದೆ. ನಮ್ಮ ಆಹಾರದಲ್ಲಿ ಅಗತ್ಯ ಜೀವಸತ್ವಗಳು ಹಾಗೂ ಪೋಷಕಾಂಶಗಳ ಕೊರತೆಯು ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಲೂ ಬಾಲನೆರೆಯ ಸಮಸ್ಯೆ ಎದುರಾಗುತ್ತದೆ. 
(7 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ
(8 / 8)

    ಹಂಚಿಕೊಳ್ಳಲು ಲೇಖನಗಳು