logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ಇಂಡಿಯನ್ಸ್​ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದು ರೋಹಿತ್ ಅಲ್ಲ; ಹಾಗಿದ್ದರೆ ಮತ್ಯಾರು?

ಮುಂಬೈ ಇಂಡಿಯನ್ಸ್​ಗೆ ಮೊದಲ ಪ್ರಶಸ್ತಿ ಗೆದ್ದುಕೊಟ್ಟಿದ್ದು ರೋಹಿತ್ ಅಲ್ಲ; ಹಾಗಿದ್ದರೆ ಮತ್ಯಾರು?

Dec 17, 2023 07:00 AM IST

Rohit Sharma: ರೋಹಿತ್ ಶರ್ಮಾ ಬರುವುದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ನಾಯಕ ಯಾರು? ಅಲ್ಲದೆ, 2008ರ ಲೀಗ್​ನಲ್ಲಿ ತಂಡದ ಚೊಚ್ಚಲ ನಾಯಕ ಯಾರು? ಇಲ್ಲಿದೆ ವಿವರ.

  • Rohit Sharma: ರೋಹಿತ್ ಶರ್ಮಾ ಬರುವುದಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ತಂಡಕ್ಕೆ ಚೊಚ್ಚಲ ಟ್ರೋಫಿ ಗೆದ್ದುಕೊಟ್ಟ ನಾಯಕ ಯಾರು? ಅಲ್ಲದೆ, 2008ರ ಲೀಗ್​ನಲ್ಲಿ ತಂಡದ ಚೊಚ್ಚಲ ನಾಯಕ ಯಾರು? ಇಲ್ಲಿದೆ ವಿವರ.
ಐಪಿಎಲ್ ಮಿನಿ ಹರಾಜಿಗೂ ಮುನ್ನ 2024ರ ಆವೃತ್ತಿಗೆ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ನೇಮಕಗೊಂಡಿದ್ದಾರೆ. ಈ ಬಗ್ಗೆ ಮುಂಬೈ ಇಂಡಿಯನ್ಸ್ ಪ್ರಕಟಣೆ ಹೊರಡಿಸಿದೆ. ರೋಹಿತ್ ಇನ್ನು ಮುಂದೆ ಕೇವಲ ಆಟಗಾರ ಎಂದು ತಿಳಿಸಿದೆ. 
(1 / 10)

2013ರಿಂದ 10 ವರ್ಷಗಳ ರೋಹಿತ್​ ನಾಯಕತ್ವ ಯುಗಾಂತ್ಯ ಕಂಡಿದೆ. 2013ರಲ್ಲಿ ರಿಕಿ ಪಾಂಟಿಂಗ್‌ ಅವರಿಂದ ಟೂರ್ನಿಯ ಮಧ್ಯೆದಲ್ಲೇ ತಂಡದ ಜವಾಬ್ದಾರಿ ವಹಿಸಿಕೊಂಡ ನಂತರ ರೋಹಿತ್, ಮುಂಬೈಗೆ ಒಟ್ಟು 5 ಐಪಿಎಲ್​ ಟ್ರೋಫಿಗಳನ್ನು ಗೆದ್ದುಕೊಟ್ಟರು. 
(2 / 10)

ರೋಹಿತ್ ಕ್ಯಾಪ್ಟನ್ಸಿಯಲ್ಲಿ ಬ್ಲೂ ಅಂಡ್ ಗೋಲ್ಡ್ ತಂಡವು 2013, 2015, 2017, 2019 ಮತ್ತು 2020ರ ಐಪಿಎಲ್‌ ಆವೃತ್ತಿಗಳಲ್ಲಿ ಟ್ರೋಫಿ ಗೆದ್ದಿದೆ. ಜೊತೆಗೆ 2013ರಲ್ಲಿ ನಡೆದ ಟಿ20 ಚಾಂಪಿಯನ್ಸ್ ಲೀಗ್ ಟ್ರೋಫಿಯನ್ನೂ ಗೆದ್ದುಕೊಟ್ಟಿದ್ದಾರೆ.
(3 / 10)

ಆದರೆ 2011ರಲ್ಲೇ ಮುಂಬೈ ಒಂದು ಟ್ರೋಫಿ ಗೆದ್ದಿತ್ತು. ಆಗಿನ್ನೂ ರೋಹಿತ್​ ಶರ್ಮಾ ತಂಡಕ್ಕೆ ಆಯ್ಕೆಯಾಗಿರಲಿಲ್ಲ. ಹಾಗಾದರೆ ಮುಂಬೈಗೆ ಮೊದಲ ಟ್ರೋಫಿ ಗೆದ್ದುಕೊಟ್ಟ ನಾಯಕ ಯಾರು? ಅಲ್ಲದೆ, ತಂಡದ ಚೊಚ್ಚಲ ನಾಯಕ ಯಾರು?
(4 / 10)

2013ರಿಂದ ರೋಹಿತ್ ಮುಂಬೈ ತಂಡವನ್ನು ಮುನ್ನಡೆಸಿದ್ದಾರೆ. ಅದಕ್ಕೂ ಮೊದಲು ಡೆಕ್ಕನ್ ಚಾರ್ಜರ್ಸ್ ತಂಡದ ಆಡುತ್ತಿದ್ದರು. ಹಾಗಾದರೆ 2008ರ ಚೊಚ್ಚಲ ಲೀಗ್​ನಲ್ಲಿ ಮುಂಬೈ ತಂಡದ ನಾಯಕ ಯಾರು? ರೋಹಿತ್​ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. 
(5 / 10)

ಆದರೆ ಕೆಲವರು ಸಚಿನ್ ತೆಂಡೂಲ್ಕರ್​ ಅವರು ಎಂದು ಊಹಿಸಿದ್ದಾರೆ. ಆದರೆ ಇದು ತಪ್ಪು ಉತ್ತರ. ಭಾರತದ ದಿಗ್ಗಜ ಸ್ಪಿನ್ನರ್ ಹರ್ಭಜನ್ ಸಿಂಗ್ ಮುಂಬೈ ತಂಡದ ಚೊಚ್ಚಲ ಕ್ಯಾಪ್ಟನ್ ಹಾಗೂ ಮುಂಬೈಗೆ ಚೊಚ್ಚಲ ಟ್ರೋಫಿ ತಂದುಕೊಟ್ಟ ನಾಯಕ ಕೂಡ ಅವರೇ!
(6 / 10)

ಚೊಚ್ಚಲ ಲೀಗ್​ನಲ್ಲಿ ಸಚಿನ್​ ಕ್ಯಾಪ್ಟನ್ ಆಗಬೇಕಿತ್ತು. ಆದರೆ, ಲೀಗ್ ಪ್ರಾರಂಭಕ್ಕೂ ಮುನ್ನ ಸಚಿನ್ ಇಂಜುರಿಯಾದರು. ಹಾಗಾಗಿ ತಂಡ ಮುನ್ನಡೆಸುವ ಅವಕಾಶ ಭಜ್ಜಿಗೆ ಸಿಕ್ಕಿತ್ತು. ತನ್ನ ನಾಯಕತ್ವದಲ್ಲಿ ಮುಂಬೈಗೆ ಚೊಚ್ಚಲ ಟ್ರೋಫಿ ಗೆದ್ದುಕೊಡುವಲ್ಲಿ ಯಶಸ್ಸು ಕಂಡರು.
(7 / 10)

ಆದರೆ ಆ ಟ್ರೋಫಿ ಗೆದ್ದಿದ್ದು ಐಪಿಎಲ್​ನಲ್ಲಲ್ಲ. 2011ರಲ್ಲಿ ನಡೆದ ಟಿ20 ಚಾಂಪಿಯನ್ಸ್​ ಲೀಗ್​​ನಲ್ಲಿ ಮುಂಬೈ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದರೊಂದಿಗೆ ಮುಂಬೈಗೆ ಪ್ರಥಮ ಕ್ಯಾಪ್ಟನ್ ಮತ್ತು ಪ್ರಥಮ ಟ್ರೋಫಿ ವಿಜೇತ ನಾಯಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
(8 / 10)

ಮುಂಬೈ ಒಟ್ಟು 7 ಟ್ರೋಫಿ ಗೆದ್ದಿದೆ. ಈ ಪೈಕಿ 6 ಟ್ರೋಫಿಗಳು ರೋಹಿತ್ ನಾಯಕತ್ವದಲ್ಲಿ ಬಂದಿವೆ. ಒಂದು ಪ್ರಶಸ್ತಿ ಹರ್ಭಜನ್ ನಾಯಕತ್ವದಲ್ಲಿ ಒಲಿದಿದೆ. ಫ್ರಾಂಚೈಸಿ ಮೊದಲ ಕೆಲವು ಪಂದ್ಯಗಳಿಗೆ ಆಟಗಾರರಿಗೆ ವಿಶಿಷ್ಟ ಭತ್ಯೆಯನ್ನೂ ನೀಡುತ್ತಿತ್ತು.
(9 / 10)

ಚೆನ್ನೈನ ಚೆಪಾಕ್​​ ಸ್ಟೇಡಿಯಂನಲ್ಲಿ ನಡೆದ ಫೈನಲ್​ನಲ್ಲಿ ಹರ್ಭಜನ್ ನೇತೃತ್ವದ ತಂಡ ಆರ್​ಸಿಬಿಯನ್ನು ಸೋಲಿಸಿ ವಿಜಯಿಯಾಗಿತ್ತು. ಆ ನಂತರ ಭಜ್ಜಿಯಿಂದ ರಿಕಿ ಪಾಂಟಿಂಗ್​ಗೆ ಜವಾಬ್ದಾರಿ ನೀಡಲಾಯಿತು. 2013ರ ಟೂರ್ನಿಯ ಮಧ್ಯದಲ್ಲೇ ರೋಹಿತ್ ಕ್ಯಾಪ್ಟನ್ ಆದರು.
(10 / 10)

    ಹಂಚಿಕೊಳ್ಳಲು ಲೇಖನಗಳು