logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರೋಗ್ಯ ಕಾಪಾಡುವ ಬೇವು; ಒಗ್ಗರಣೆ ಬಿಟ್ಟು ಬೇವಿನೆಲೆ ಸೇವಿಸುವ 4 ವಿಧಾನಗಳಿವು

ಆರೋಗ್ಯ ಕಾಪಾಡುವ ಬೇವು; ಒಗ್ಗರಣೆ ಬಿಟ್ಟು ಬೇವಿನೆಲೆ ಸೇವಿಸುವ 4 ವಿಧಾನಗಳಿವು

Dec 28, 2023 04:43 PM IST

ಭಾರತೀಯ ಮನೆಗಳಲ್ಲಿ ಅಡುಗೆ ಮಾಡಲು ಬೇವು ಬೇಕೇ ಬೇಕು. ಇದು ಅಡುಗೆಯ ರುಚಿ ಮಾತ್ರ ಹೆಚ್ಚಿಸುವುದಿಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಕೂಡ. ಕೂದಲು, ಚರ್ಮ, ಬಾಯಿ ಆರೋಗ್ಯ ಕಾಪಾಡುತ್ತದೆ. ಮಧುಮೇಹ ನಿಯಂತ್ರಿಸುತ್ತದೆ. ಒಗ್ಗರಣೆಗೆ ಬಿಟ್ಟು ಬೇವಿನೆಲೆಯನ್ನು ಯಾವೆಲ್ಲಾ ರೂಪದಲ್ಲಿ ಸೇವಿಸಬಹುದು ಎಂದು ನೋಡೋಣ.

  • ಭಾರತೀಯ ಮನೆಗಳಲ್ಲಿ ಅಡುಗೆ ಮಾಡಲು ಬೇವು ಬೇಕೇ ಬೇಕು. ಇದು ಅಡುಗೆಯ ರುಚಿ ಮಾತ್ರ ಹೆಚ್ಚಿಸುವುದಿಲ್ಲ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆಮದ್ದು ಕೂಡ. ಕೂದಲು, ಚರ್ಮ, ಬಾಯಿ ಆರೋಗ್ಯ ಕಾಪಾಡುತ್ತದೆ. ಮಧುಮೇಹ ನಿಯಂತ್ರಿಸುತ್ತದೆ. ಒಗ್ಗರಣೆಗೆ ಬಿಟ್ಟು ಬೇವಿನೆಲೆಯನ್ನು ಯಾವೆಲ್ಲಾ ರೂಪದಲ್ಲಿ ಸೇವಿಸಬಹುದು ಎಂದು ನೋಡೋಣ.
ಬೇವು ಮತ್ತು ಶುಂಠಿ ಚಹಾ: ಒಂದು ಕಪ್ ನೀರಿನಲ್ಲಿ 4 ಬೇವಿನ ಎಲೆ ಮತ್ತು ಚಿಕ್ಕದಾಗಿ ಕತ್ತರಿಸಿದ ಅಥವಾ ಜಜ್ಜಿದ ಶುಂಠಿಯನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ ಕುಡಿಯಿರಿ. ಇದರ ಕಹಿ ರುಚಿ ಹೋಗಲಾಡಿಸಲು ಈ ಚಹಾಗೆ  ಒಂದು ಟೀ ಚಮಚ ಜೇನುತುಪ್ಪ ಮತ್ತು ಅರ್ಧ ಟೀ ಚಮಚ ನಿಂಬೆ ರಸವನ್ನು ಸೇರಿಸಬಹುದು. 
(1 / 5)

ಬೇವಿನ ಎಲೆಯ ಪುಡಿ: ಬೇವಿನ ಎಲೆಗಳನ್ನು ತೊಳೆದು, ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಿ. ಈ ಪುಡಿಯನ್ನು ಸಾಂಬಾರು, ಗ್ರೇವಿ, ಚಟ್ನಿಗೆ ಬಳಸಬಹುದು.  
(2 / 5)

ಬೇವಿನ ಎಲೆ ಜ್ಯೂಸ್​: ಬೇವಿನ ಎಲೆಯನ್ನು ರುಬ್ಬಿ ಅದಕ್ಕೆ ಚಿಟಿಕೆ ಉಪ್ಪು, ತುರಿದ ಶುಂಠಿ, ಒಂದು ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಒಂದು ಚಮಚ ನಿಂಬೆ ರಸವನ್ನು ಸೇರಿಸಿ ಕುಡಿಯಬಹುದು. 
(3 / 5)

ಬೇವಿನ ಹೂವು-ಎಲೆ ಕಟ್ಲೆಟ್‌:  ಬೇವಿನ ಮರದಲ್ಲಿ ಹೂವುಗಳಿರುತ್ತವೆ. ಅದನ್ನು ಕಟ್ಲೆಟ್ ಮಾಡಲು ಬಳಸಬಹುದು. ಬೇಯಿಸಿ ಸಿಪ್ಪೆ ಸುಲಿದ ಆಲೂಗಡ್ಡೆಗಳೊಂದಿಗೆ, ಬೇವಿನ ಹೂವು, ಬೇವಿನ ಎಲೆ, ಕಡ್ಲೆಹಿಟ್ಟು, ಹಸಿ ಮೆಣಸಿನಕಾಯಿ, ಐದು ಅಕ್ಕಿ ಹಿಟ್ಟು, ಉಪ್ಪು ಮತ್ತು ಬೆಳ್ಳುಳ್ಳಿ ಬಳಸಿ ಕಟ್ಲೆಟ್‌ ಮಾಡಬಹುದು..  
(4 / 5)

ಗಮನಿಸಿ: ಬೇವಿನ ಎಲೆಯನ್ನು ಅತಿಯಾಗಿ ಸೇವಿಸುವುದು ಕೂಡ ಒಳ್ಳೆಯದಲ್ಲ. ಗರ್ಭಿಣಿಯರು, ಬಾಣಂತಿಯರು, ಕಾಯಿಲೆಗಳಿಂದ ಬಳಲುತ್ತಿರುವವರು ತಜ್ಞರ ಸಲಹೆ ಮೇರೆಗೆ ಬಳಸಬೇಕು. 
(5 / 5)

    ಹಂಚಿಕೊಳ್ಳಲು ಲೇಖನಗಳು