logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ

Summer Tips: ಬೇಸಿಗೆಯಲ್ಲಿ ಈ 10 ಹಣ್ಣುಗಳ ಅತಿಯಾದ ಸೇವನೆ ಆರೋಗ್ಯ ಸಮಸ್ಯೆಯನ್ನ ಹೆಚ್ಚಿಸುತ್ತೆ

Apr 30, 2024 06:39 PM IST

ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಯಿಂದ ಪಾರಾಗಲು ಹಣ್ಣಿನ ಜ್ಯೂಸ್‌ಗಳ ಮೊರೆಹೋಗುತ್ತಾರೆ. ಆದರೆ ಕೆಲ ಹಣ್ಣುಗಳ ಅತಿಯಾದ ಸೇವೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲ ಹಣ್ಣುಗಳು ಆರೋಗ್ಯ ಸಮಸ್ಯೆ ಹೆಚ್ಚಿಸುತ್ತವೆ ಅನ್ನೋದನ್ನ ತಿಳಿಯಿರಿ.

  • ಬೇಸಿಗೆಯಲ್ಲಿ ಸಾಮಾನ್ಯವಾಗಿ ಬಿಸಿಯಿಂದ ಪಾರಾಗಲು ಹಣ್ಣಿನ ಜ್ಯೂಸ್‌ಗಳ ಮೊರೆಹೋಗುತ್ತಾರೆ. ಆದರೆ ಕೆಲ ಹಣ್ಣುಗಳ ಅತಿಯಾದ ಸೇವೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವೆಲ್ಲ ಹಣ್ಣುಗಳು ಆರೋಗ್ಯ ಸಮಸ್ಯೆ ಹೆಚ್ಚಿಸುತ್ತವೆ ಅನ್ನೋದನ್ನ ತಿಳಿಯಿರಿ.
ಹಣ್ಣುಗಳ ಸೇವೆ ಮನುಷ್ಯನಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಬೇಸಿಗೆಯಲ್ಲಿ ಅತಿಯಾದ ಸೇವನೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
(1 / 11)
ಹಣ್ಣುಗಳ ಸೇವೆ ಮನುಷ್ಯನಿಗೆ ಹಲವು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಆದರೆ ಬೇಸಿಗೆಯಲ್ಲಿ ಅತಿಯಾದ ಸೇವನೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕಲ್ಲಂಗಡಿ - ಬೇಸಿಗೆಯ ದಾಹವನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮವಾದ ಹಣ್ಣಾಗಿದೆ. ಇದರಲ್ಲಿ ನೀರು ಹಾಗೂ ಫೈಬರ್ ಅಂಶಗಳು ಹೆಚ್ಚಾಗಿರುವುದರಿಂದ ಹಲವುು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಕಲ್ಲಂಗಡಿ ಹಣ್ಣನನ್ನು ಅತಿಯಾಗಿ ಸೇವಿಸುವುದರಿಂದ ಸೂಕ್ಷ್ಮ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.
(2 / 11)
ಕಲ್ಲಂಗಡಿ - ಬೇಸಿಗೆಯ ದಾಹವನ್ನು ತಣಿಸಲು ಕಲ್ಲಂಗಡಿ ಅತ್ಯುತ್ತಮವಾದ ಹಣ್ಣಾಗಿದೆ. ಇದರಲ್ಲಿ ನೀರು ಹಾಗೂ ಫೈಬರ್ ಅಂಶಗಳು ಹೆಚ್ಚಾಗಿರುವುದರಿಂದ ಹಲವುು ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಕಲ್ಲಂಗಡಿ ಹಣ್ಣನನ್ನು ಅತಿಯಾಗಿ ಸೇವಿಸುವುದರಿಂದ ಸೂಕ್ಷ್ಮ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ.(Pexel)
ಮಾವಿನ ಹಣ್ಣು - ನೈಸರ್ಗಿಕ ಸಕ್ಕರೆ ಹಾಗೂ ನಾರಿನಾಂಶ ಇರುವ ಮಾವು ಬೇಸಿಗೆಯಲ್ಲಿ ಮಾರುಕಟ್ಟೆಗೆ ಬಂದು ಜನರ ದಾಹವನ್ನು ತಣಿಸುತ್ತದೆ. ಆದರೆ ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಜಠರದ ಸಮಸ್ಯೆಗೆ ಕಾರಣವಾಗಬಹುದು ಎಂದು ಮುಂಬೈ ಮೂಲದ ಆಹಾರ ತಜ್ಞ ಹರ್ಷಿಲ್ ಶರ್ಮಾ ಹೇಳಿದ್ದಾರೆ.
(3 / 11)
ಮಾವಿನ ಹಣ್ಣು - ನೈಸರ್ಗಿಕ ಸಕ್ಕರೆ ಹಾಗೂ ನಾರಿನಾಂಶ ಇರುವ ಮಾವು ಬೇಸಿಗೆಯಲ್ಲಿ ಮಾರುಕಟ್ಟೆಗೆ ಬಂದು ಜನರ ದಾಹವನ್ನು ತಣಿಸುತ್ತದೆ. ಆದರೆ ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಜಠರದ ಸಮಸ್ಯೆಗೆ ಕಾರಣವಾಗಬಹುದು ಎಂದು ಮುಂಬೈ ಮೂಲದ ಆಹಾರ ತಜ್ಞ ಹರ್ಷಿಲ್ ಶರ್ಮಾ ಹೇಳಿದ್ದಾರೆ.(Pexel)
ಅನಾನಸ್ - ಅನಾನಸ್‌ನಲ್ಲಿ ಬ್ರೊಮೆಲೈನ್ ಅಂಶವನ್ನು ಹೊಂದಿರುತ್ತದೆ. ಅನಾನಸ್‌ ಅನ್ನು ಅನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗದಲ್ಲಿ ಕಿರಿಕಿರಿ ಅಥವಾ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
(4 / 11)
ಅನಾನಸ್ - ಅನಾನಸ್‌ನಲ್ಲಿ ಬ್ರೊಮೆಲೈನ್ ಅಂಶವನ್ನು ಹೊಂದಿರುತ್ತದೆ. ಅನಾನಸ್‌ ಅನ್ನು ಅನಿಯಮಿತವಾಗಿ ಸೇವಿಸಿದರೆ ಜೀರ್ಣಾಂಗದಲ್ಲಿ ಕಿರಿಕಿರಿ ಅಥವಾ ಇತರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.(Pexel)
ಪ್ಲಾಮ್ ಹಣ್ಣು - ಈ ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್‌ ಅಂಶಗಳು ಸಮೃದ್ಧವಾಗಿವೆ. ಪ್ಲಮ್ ಹಣ್ಣಿನ ಅತಿಯಾದ ಸೇವೆ ಅದರಲ್ಲಿರುವ ಫೈಬರ್ ಹಾಗೂ ಸೋರ್ಬಿಟೋಲ್ ಅಂಶವು ಜೀರ್ಣಕ್ರಿಯೆಗೆ ಸವಾಲುಗಳನ್ನು ಉಂಟುಮಾಡಬಹುದು.
(5 / 11)
ಪ್ಲಾಮ್ ಹಣ್ಣು - ಈ ಹಣ್ಣಿನಲ್ಲಿ ಆರೋಗ್ಯ ಸಮತೋಲನಕ್ಕೆ ಅಶ್ಯಕವಾಗಿರುವ ಆ್ಯಂಟಿಯಾಕ್ಸಿಡಂಟ್‌ ಅಂಶಗಳು ಸಮೃದ್ಧವಾಗಿವೆ. ಪ್ಲಮ್ ಹಣ್ಣಿನ ಅತಿಯಾದ ಸೇವೆ ಅದರಲ್ಲಿರುವ ಫೈಬರ್ ಹಾಗೂ ಸೋರ್ಬಿಟೋಲ್ ಅಂಶವು ಜೀರ್ಣಕ್ರಿಯೆಗೆ ಸವಾಲುಗಳನ್ನು ಉಂಟುಮಾಡಬಹುದು.(Pexel)
ಚೆರ್ರಿ ಹಣ್ಣುಗಳು - ಬೇಸಿಗೆಯ ಆನಂದವನ್ನು ಹೆಚ್ಚಿಸುವ ಹಣ್ಣುಗಳ ಪೈಕಿ ಚೆರ್ರಿ ಹಣ್ಣು ಕೂಡ ಒಂದು. ಆದರೆ ಇದನ್ನು ಅನಿಯಮಿತವಾಗಿ ಸೇವಿಸಿದರೆ ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ.
(6 / 11)
ಚೆರ್ರಿ ಹಣ್ಣುಗಳು - ಬೇಸಿಗೆಯ ಆನಂದವನ್ನು ಹೆಚ್ಚಿಸುವ ಹಣ್ಣುಗಳ ಪೈಕಿ ಚೆರ್ರಿ ಹಣ್ಣು ಕೂಡ ಒಂದು. ಆದರೆ ಇದನ್ನು ಅನಿಯಮಿತವಾಗಿ ಸೇವಿಸಿದರೆ ಜಠರಗರುಳಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಸ್ವಸ್ಥತೆಗೆ ಕಾರಣವಾಗುತ್ತದೆ ಎಂದು ಆಹಾರ ತಜ್ಞರು ತಿಳಿಸಿದ್ದಾರೆ.(Pexel)
ಆ್ಯಪಲ್ - ವರ್ಷಪೂರ್ತಿ ಸಿಗುವ ಆ್ಯಪಲ್ ಹಣ್ಣಿನಲ್ಲಿ ಫೈಬರ್ ಮತ್ತು ಫ್ರಕ್ಟೋಸ್‌ ಸಮೃದ್ಧವಾಗಿದೆ. ಸೇಬು ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಅತಿಯಾದ ಸೇವನೆಯಿಂದ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದು ಜಠರಗರುಳಿ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಹರ್ಷಲ್ ಶರ್ಮಾ ಹೇಳಿದ್ದಾರೆ.
(7 / 11)
ಆ್ಯಪಲ್ - ವರ್ಷಪೂರ್ತಿ ಸಿಗುವ ಆ್ಯಪಲ್ ಹಣ್ಣಿನಲ್ಲಿ ಫೈಬರ್ ಮತ್ತು ಫ್ರಕ್ಟೋಸ್‌ ಸಮೃದ್ಧವಾಗಿದೆ. ಸೇಬು ಸೇವನೆಯಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಅತಿಯಾದ ಸೇವನೆಯಿಂದ ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದು ಜಠರಗರುಳಿ ಸಮಸ್ಯೆಗೂ ಕಾರಣವಾಗುತ್ತದೆ ಎಂದು ಹರ್ಷಲ್ ಶರ್ಮಾ ಹೇಳಿದ್ದಾರೆ.(Pexel)
ಪೇರಳೆ - ಆ್ಯಪಲ್‌ನಂತೆ ಪೇರಳೆಯಲ್ಲೂ ಫೈಬರ್ ಹಾಗೂ ಫ್ರಕ್ಟೋಸ್ ಹೆಚ್ಚಾಗಿದೆ. ಪೌಷ್ಟಿಕಾಂಶ ಹೆಚ್ಚಿಸುವ ಈ ಹಣ್ಣು ಬೇಸಿಗೆಗೆ ಉತ್ತಮ ಆಯ್ಕೆಯಾಗಿದೆ. ಆದರೆ ಇದನ್ನು ಅನಿಯಮಿತವಾಗಿ ತಿಂದರೆ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುತ್ತೆ. ಅಸ್ವಸ್ಥೆತೆಯೂ ಉಂಟಾಗುತ್ತದೆ.
(8 / 11)
ಪೇರಳೆ - ಆ್ಯಪಲ್‌ನಂತೆ ಪೇರಳೆಯಲ್ಲೂ ಫೈಬರ್ ಹಾಗೂ ಫ್ರಕ್ಟೋಸ್ ಹೆಚ್ಚಾಗಿದೆ. ಪೌಷ್ಟಿಕಾಂಶ ಹೆಚ್ಚಿಸುವ ಈ ಹಣ್ಣು ಬೇಸಿಗೆಗೆ ಉತ್ತಮ ಆಯ್ಕೆಯಾಗಿದೆ. ಆದರೆ ಇದನ್ನು ಅನಿಯಮಿತವಾಗಿ ತಿಂದರೆ ಜೀರ್ಣಾಂಗ ಸಮಸ್ಯೆಗೆ ಕಾರಣವಾಗುತ್ತೆ. ಅಸ್ವಸ್ಥೆತೆಯೂ ಉಂಟಾಗುತ್ತದೆ.(Pexel)
ಅಂಜೂರದ ಹಣ್ಣು - ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಅಂಜೂರ ಕೂಡ ಒಂದಾಗಿದೆ. ಇದರಲ್ಲಿ ಫೈಬರ್ ಅಂಶಗಳು ಹೆಚ್ಚಿವೆ. ಅತಿಯಾದ ಇದನ್ನ ಅತಿಯಾಗಿ ಸೇವಿಸಿದರೆ ಜೀರ್ಣಕಾರಿ ಅಸ್ವಸ್ಥೆತೆಗೆ ಕಾರಣವಾಗಬಹುದು.
(9 / 11)
ಅಂಜೂರದ ಹಣ್ಣು - ಹಲವು ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣುಗಳಲ್ಲಿ ಅಂಜೂರ ಕೂಡ ಒಂದಾಗಿದೆ. ಇದರಲ್ಲಿ ಫೈಬರ್ ಅಂಶಗಳು ಹೆಚ್ಚಿವೆ. ಅತಿಯಾದ ಇದನ್ನ ಅತಿಯಾಗಿ ಸೇವಿಸಿದರೆ ಜೀರ್ಣಕಾರಿ ಅಸ್ವಸ್ಥೆತೆಗೆ ಕಾರಣವಾಗಬಹುದು.(Pexel)
ಕಿವಿ ಹಣ್ಣು - ಕಿವಿ ಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೂ ಕೂಡ ಅತಿಯಾಗಿ ತಿಂದರೆ ಇದರಲ್ಲಿರುವ ಫೈಬರ್ ಹಾಗೂ ಆಕ್ವಿನಿಡಿನ್ ಕೆಲವೊಮ್ಮೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.
(10 / 11)
ಕಿವಿ ಹಣ್ಣು - ಕಿವಿ ಹಣ್ಣು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಇದನ್ನೂ ಕೂಡ ಅತಿಯಾಗಿ ತಿಂದರೆ ಇದರಲ್ಲಿರುವ ಫೈಬರ್ ಹಾಗೂ ಆಕ್ವಿನಿಡಿನ್ ಕೆಲವೊಮ್ಮೆ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.(Pexel)
ಪಪ್ಪಾಯಿ - ಈ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಸಿಗೆ ಅಂತ ಹೆಚ್ಚು ತಿಂದರೆ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
(11 / 11)
ಪಪ್ಪಾಯಿ - ಈ ಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಬೇಸಿಗೆ ಅಂತ ಹೆಚ್ಚು ತಿಂದರೆ ಜೀರ್ಣಕಾರಿ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.(Pexel)

    ಹಂಚಿಕೊಳ್ಳಲು ಲೇಖನಗಳು