logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್‌ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು

Apr 18, 2024 11:25 AM IST

ಬೇಸಿಗೆಯಲ್ಲಿ ಧೂಳು, ಬೆವರಿನ ಕಾರಣದಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಕಾಡುವುದು ಸಹಜ. ಬೆವರುಸಾಲೆ, ಬೆವರು ಗುಳ್ಳೆಗಳು, ರಿಂಗ್‌ವರ್ಮ್‌ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊಳ್ಳುವುದಕ್ಕಿಂತ ಮನೆಮದ್ದನ್ನು ಅನುಸರಿಸುವುದು ಉತ್ತಮ. ರಿಂಗ್‌ವರ್ಮ್‌ನಂತಹ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು.

  • ಬೇಸಿಗೆಯಲ್ಲಿ ಧೂಳು, ಬೆವರಿನ ಕಾರಣದಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಕಾಡುವುದು ಸಹಜ. ಬೆವರುಸಾಲೆ, ಬೆವರು ಗುಳ್ಳೆಗಳು, ರಿಂಗ್‌ವರ್ಮ್‌ ಸೇರಿದಂತೆ ಹಲವು ರೀತಿಯ ಸಮಸ್ಯೆಗಳು ಎದುರಾಗಬಹುದು. ಇದಕ್ಕೆ ವೈದ್ಯಕೀಯ ಪರಿಹಾರ ಕಂಡುಕೊಳ್ಳುವುದಕ್ಕಿಂತ ಮನೆಮದ್ದನ್ನು ಅನುಸರಿಸುವುದು ಉತ್ತಮ. ರಿಂಗ್‌ವರ್ಮ್‌ನಂತಹ ಸಮಸ್ಯೆಗಳ ನಿವಾರಣೆಗೆ ಇಲ್ಲಿದೆ ಸರಳ ಮನೆಮದ್ದು.
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚುವ ಕಾರಣ ಅತಿಯಾಗಿ ಬೆವರುತ್ತೇವೆ. ಇದರೊಂದಿಗೆ ಧೂಳು, ಕೊಳೆ, ಮಾಲಿನ್ಯದಂತಹ ನಾನಾ ಕಾರಣಗಳಿಂದ ಒಂದಿಲ್ಲೊಂದು ಚರ್ಮದ ಸಮಸ್ಯೆಗಳು ಎದುರಾಗುತ್ತವೆ. ಅತಿಯಾಗಿ ಬೆವರುವುದು ಹಾಗೂ ದೇಹದಲ್ಲಿ ಧೂಳಿನಾಂಶ ಕೂರುವುದು ಶಿಲೀಂಧ್ರ ಸೋಂಕಿಗೆ ಕಾರಣವಾಗುತ್ತದೆ. ಚರ್ಮದ ಮೇಲೆ ದುಂಡಗಿನ ಆಕಾರದಲ್ಲಿ ಕಜ್ಜಿಯಾಗಿ ತುರಿಕೆ ಸಂಭವಿಸಬಹುದು. ಇದನ್ನು ರಿಂಗ್‌ವರ್ಮ್‌ ಎಂದು ಕರೆಯುತ್ತಾರೆ. ಇದು ಬೇರೆ ಸಮಯದಲ್ಲಿ ಕೂಡ ಆಗಬಹುದು. ಆದರೆ ಬೇಸಿಗೆಯಲ್ಲಿ ಇದು ಹೆಚ್ಚು ಕಾಡುತ್ತದೆ. ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ರಿಂಗ್‌ವರ್ಮ್‌ ಆಗುತ್ತದೆ. 
(1 / 10)

ರಿಂಗ್‌ವರ್ಮ್‌ ದೇಹದ ಒಂದು ಭಾಗದಲ್ಲಿ ಆದರೆ ಸಾಕು ಇತರ ಭಾಗಗಳಿಗೆ ಹರಡಲು ಆರಂಭಿಸುತ್ತದೆ. ತಲೆ, ಕೈ, ಕಾಲು, ಬೆನ್ನು, ಗುಪ್ತಾಂಗ ಹೀಗೆ ಯಾವುದೇ ಭಾಗದಲ್ಲೂ ರಿಂಗ್‌ವರ್ಮ್‌ ಕಾಣಿಸಬಹುದು. ತೊಡೆಸಂಧಿ, ಕುಂಕಳಂತಹ ಹೆಚ್ಚು ಬೆವರು ನಿಲ್ಲುವ ಜಾಗದಲ್ಲಿ ಇದು ಹೆಚ್ಚು ಉಂಟಾಗುತ್ತದೆ. ಚರ್ಮ ದುಂಡಗೆ ಕೆಂಪಾಗಿ ಸುತ್ತಲೂ ಚಿಕ್ಕ, ಚಿಕ್ಕ ಕಜ್ಜಿಗಳು ಉಂಟಾಗಬಹುದು. ನಂತರ ಆ ಭಾಗದಲ್ಲಿ ತುರಿಸಲು ಆರಂಭವಾಗುತ್ತದೆ. ಆರಂಭದಲ್ಲೇ ಇದನ್ನು ಗುಣಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತುರಿಕೆ ಹೆಚ್ಚಬಹುದು. 
(2 / 10)

ರಿಂಗ್‌ವರ್ಮ್‌ ನಿವಾರಣೆಗೆ ಸಾಕಷ್ಟು ಔಷಧಿಗಳಿಗೆ ನಿಜ. ಆದರೆ ಈ ಔಷಧಿಗಳು ಕೆಲವೊಮ್ಮೆ ಚರ್ಮದ ಮೇಲೆ ಅಡ್ಡಪರಿಣಾಮ ಉಂಟು ಮಾಡಬಹುದು. ಇದಕ್ಕಾಗಿ ಮನೆಮದ್ದುಗಳನ್ನು ಅನುಸರಿಸುವುದು ಉತ್ತಮ. ಇಲ್ಲಿದೆ ರಿಂಗ್‌ವರ್ಮ್‌ ನಿವಾರಿಸುವ ಸರಳ ಮನೆಮದ್ದುಗಳು. 
(3 / 10)

ರಿಂಗ್‌ವರ್ಮ್‌ ಉಂಟಾದ ಜಾಗವನ್ನು ಸ್ವಚ್ಛವಾಗಿಟ್ಟುವುದು ಮೊದಲ ಆದ್ಯತೆಯಾಗಿರಬೇಕು. ಇದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ಸೋಪ್‌ ನೀರು ರಿಂಗ್‌ವರ್ಮ್‌ ನಿವಾರಿಸಲು ಪರಿಣಾಮಕಾರಿ ಔಷಧಿ. ಪ್ರತಿದಿನ ಸೋಪ್‌ ನೀರಿನಿಂದ ರಿಂಗ್‌ವರ್ಮ್‌ ಆಗಿರುವ ಜಾಗವನ್ನು ಸ್ವಚ್ಛ ಮಾಡಿ. ನಂತರ ಆ ಜಾಗವನ್ನು ಚೆನ್ನಾಗಿ ಒರೆಸಿ. ಇದನ್ನು ನಿಯಮಿತವಾಗಿ ಮಾಡಬೇಕು. 
(4 / 10)

ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಇದು ಪರಿಣಾಮಕಾರಿ ಆಂಟಿಫಂಗಲ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಸೋಂಕಿನ ಬೆಳವಣಿಗೆಯನ್ನು ತಡೆಯಲು ಇದು ತುಂಬಾ ಸಹಾಯಕ. ಮೊದಲು ತಾಜಾ ಅರಿಶಿನ ಪುಡಿಯನ್ನು ತೆಗೆದುಕೊಂಡು ದಪ್ಪ ಪೇಸ್ಟ್ ಮಾಡಲು ಸ್ವಲ್ಪ ನೀರಿನಲ್ಲಿ ಮಿಶ್ರಣ ಮಾಡಿ. ನಂತರ ಅದನ್ನು ನೇರವಾಗಿ ಸೋಂಕಿತ ಪ್ರದೇಶಕ್ಕೆ ಹಚ್ಚಿ, ಒಣಗಲು ಬಿಡಿ. 
(5 / 10)

ತೆಂಗಿನೆಣ್ಣೆಯು ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ರಿಂಗ್‌ವರ್ಮ್‌ ನಿವಾರಿಸುವ ಇದು ತುಂಬಾ ಸಹಾಯಕ. ರಿಂಗ್‌ವರ್ಮ್‌ ಹೊರತುಪಡಿಸಿ, ಇತರ ಶಿಲೀಂಧ್ರ ಸೋಂಕುಗಳ ನಿವಾರಣೆಗೂ ಇದು ಪರಿಣಾಮಕಾರಿ. ಮೊದಲು ಒಂದು ಪಾತ್ರೆಯಲ್ಲಿ ತೆಂಗಿನೆಣ್ಣೆಯನ್ನು ತೆಗೆದುಕೊಂಡು ಸ್ವಲ್ಪ ಬಿಸಿ ಮಾಡಿ. ನಂತರ ಬೆಚ್ಚಗಿನ ಎಣ್ಣೆಯನ್ನು ನೇರವಾಗಿ ರಿಂಗ್‌ವರ್ಮ್‌ ಆಗಿರುವ ಜಾಗಕ್ಕೆ ಹಚ್ಚಿ. ಇದನ್ನು ದಿನಕ್ಕೆ ಮೂರು ಬಾರಿ ಮಾಡಿ.
(6 / 10)

ರಿಂಗ್‌ವರ್ಮ್‌ ಸೋಂಕು ತಡೆಗಟ್ಟಲು ಅಲೋವೆರಾ ತುಂಬಾ ಪರಿಣಾಮಕಾರಿ. ಅಲೋವೆರಾ ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಇದು ರಿಂಗ್‌ವರ್ಮ್‌ನಿಂದ ಉಂಟಾಗುವ ತುರಿಕೆ, ಅಸ್ವಸ್ಥತೆ ಮತ್ತು ಉರಿಯೂತದ ಲಕ್ಷಣಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಅಲೋವೆರಾ ಜೆಲ್ ಅನ್ನು ನೇರವಾಗಿ ಸೋಂಕಿತ ಜಾಗಕ್ಕೆ ಹಚ್ಚಿ. ಉತ್ತಮ ಫಲಿತಾಂಶಕ್ಕಾಗಿ ದಿನಕ್ಕೆ ಮೂರು ಬಾರಿ ಇದನ್ನು ಮಾಡಿ.
(7 / 10)

ಟೀ-ಟ್ರೀ ಆಯಿಲ್ ಆಂಟಿಫಂಗಲ್ ಮತ್ತು ಆಂಟಿಬ್ಯಾಕ್ಟೀರಿಯಲ್ ಗುಣಗಳನ್ನು ಹೊಂದಿದೆ. ಮೊದಲಿಗೆ, ಟೀ ಟ್ರೀ ಎಣ್ಣೆಯ ಕೆಲವು ಹನಿಗಳನ್ನು ಶುದ್ಧ ಹತ್ತಿಯ ಮೇಲೆ ತೆಗೆದುಕೊಂಡು ಅದನ್ನು ನೇರವಾಗಿ ರಿಂಗ್‌ವರ್ಮ್‌ ಆಗಿರುವ ಜಾಗಕ್ಕೆ ಹಚ್ಚಿ. ತೆಂಗಿನೆಣ್ಣೆಯೊಂದಿಗೆ ಟೀ ಟ್ರಿ ಎಣ್ಣೆಯನ್ನು ಬೆರೆಸಿ ಕೂಡ ಬಳಸಬಹುದು. ಇದನ್ನು ದಿನಕ್ಕೆ ಎರಡು ಮೂರು ಬಾರಿ ಹಚ್ಚಿ. 
(8 / 10)

ಆಪಲ್ ಸೀಡರ್‌ ವಿನೆಗರ್ ಕೂಡ ಬಲವಾದ ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಇದು ಕೂಡ ರಿಂಗ್‌ವರ್ಮ್‌ ನಿವಾರಣೆಗೆ ಉತ್ತಮ ಮನೆಮದ್ದು. ಮೊದಲು, ಆಪಲ್ ಸೈಡರ್ ವಿನೆಗರ್‌ ಕ್ಲೀನ್ ಹತ್ತಿ ಉಂಡೆಯನ್ನು ನೆನೆಸಿ. ನಂತರ ಆ ಹತ್ತಿ ಉಂಡೆಯನ್ನು ನಿಧಾನಕ್ಕೆ ರಿಂಗ್‌ವರ್‌ ಆಗಿರುವ ಜಾಗಕ್ಕೆ ಹಚ್ಚಿ. ದಿನದಲ್ಲಿ ಮೂರು ಬಾರಿ ಹೀಗೆ ಮಾಡುವುದರಿಂದ ರಿಂಗ್‌ವರ್ಮ್‌ ಬೇಗನೆ ಗುಣವಾಗುತ್ತದೆ. 
(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
(10 / 10)

    ಹಂಚಿಕೊಳ್ಳಲು ಲೇಖನಗಳು